ಹುಬ್ಬಳ್ಳಿ-ಗದಗ ನಡುವೆ ತಡೆರಹಿತ ಎಸಿ ಬಸ್‌; ದರ, ವೇಳಾಪಟ್ಟಿ

ಹುಬ್ಬಳ್ಳಿ, ಜುಲೈ 27; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಹುಬ್ಬಳ್ಳಿ-ಗದಗ ನಡುವೆ ತಡೆರಹಿತ ಹವಾನಿಯಂತ್ರಿತ ಬಸ್ ಸಂಚಾರವನ್ನು ಆರಂಭಿಸಿದೆ. ಉಭಯ ನಗರದ ಜನರ ಬೇಡಿಕೆಯಂತೆ ಬಸ್ ಸಂಚಾರ ಆರಂಭಿಸಲಾಗಿದ್ದು, ಜನರು ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಲಾಗಿದೆ.

ಹುಬ್ಬಳ್ಳಿ-ಗದಗ ನಡುವೆ ಪ್ರಯಾಣಿಸುವ ಜನರಿಗೆ ಆರಾಮದಾಯಕ ಸಾರಿಗೆ ಸೌಲಭ್ಯ ಕಲ್ಪಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವೋಲ್ವೋ ಎಸಿ ಬಸ್‌ಗಳ ಸಂಚಾರವನ್ನು ಉಭಯ ನಗರಗಳ ನಡುವೆ ಆರಂಭಸಿದೆ.

NWKRTC Hubballi Gadag Nonstop Volvo Ac Bus Service Fare And Schedule

ಈ ಬಸ್‌ಗಳು ಹುಬ್ಬಳ್ಳಿ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಹಾಗೂ ಗದಗ ಹಳೆ ಬಸ್ ನಿಲ್ದಾಣದಿಂದ ಹೊರಟು ಹೊಸ ಬಸ್ ನಿಲ್ದಾಣದ ಮೂಲಕ ಸಂಚರಿಸುತ್ತವೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಬಸ್‌ನ ಪ್ರಯಾಣ ದರ, ವೇಳಾಪಟ್ಟಿಯನ್ನು ಸಹ ತಿಳಿಸಲಾಗಿದೆ.

ಬಸ್‌ನ ವೇಳಾಪಟ್ಟಿ, ದರ; ಹುಬ್ಬಳ್ಳಿ-ಗದಗ ನಡುವೆ ಸಂಚಾರ ನಡೆಸುವ ಜನರು ವೊಲ್ವೋ ಮಲ್ಟಿ ಆಕ್ಸೆಲ್ ತಡೆರಹಿತ ಸಾರಿಗೆ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 7760991662, 7760991685 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಹುಬ್ಬಳ್ಳಿ-ಗದಗ ವೊಲ್ವೋ ಮಲ್ಟಿ ಆಕ್ಸೆಲ್ ತಡೆ ರಹಿತ ಸಾರಿಗೆ ಸೇವೆಯ ಪ್ರಯಾಣ ದರ 90 ರೂ. ಎಂದು ನಿಗದಿ ಮಾಡಲಾಗಿದೆ. ಪ್ರಸ್ತುತ ಹುಬ್ಬಳ್ಳಿ-ಗದಗ ನಡುವೆ ಸಂಚರಿಸುವ ತಡೆರಹಿತ ವೇಗದೂತ ಬಸ್‌ಗಳ ಪ್ರಯಾಣ ದರ ರೂ. 75 ಇದೆ.

ಹುಬ್ಬಳ್ಳಿ-ಗದಗ ನಡುವಿನ ಬಸ್ ಹುಬ್ಬಳ್ಳಿಯಿಂದ ಹೊರಡುವ ಸಮಯ ಬೆಳಗ್ಗೆ 8, 8.30, 11.15, 11.30. ಮಧ್ಯಾಹ್ನ 2.30, 3 ಮತ್ತು ಸಂಜೆ 5.30 ಹಾಗೂ 6 ಗಂಟೆ.

ಗದಗ-ಹುಬ್ಬಳ್ಳಿ ನಡುವಿನ ಬಸ್ ಗದಗದಿಂದ ಹೊರಡುವ ಸಮಯ ಬೆಳಗ್ಗೆ 9.30, 10. ಮಧ್ಯಾಹ್ನ 12.45, 1 ಗಂಟೆ. ಸಂಜೆ 4, 4.30, 7 ಹಾಗೂ 7.30 ಗಂಟೆ.

ವಿಶೇಷ ಬಸ್‌ಗಳ ಸಂಚಾರ; ಮಳೆಗಾಲದ ಸಂದರ್ಭದಲ್ಲಿ ಪ್ರವಾಸ ಹೋಗುವವರಿಗಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ಮತ್ತು ಅಂಬೋಲಿ ಫಾಲ್ಸ್‌ ನಡುವೆ ವಿಶೇಷ ಬಸ್ ಓಡಿಸುತ್ತಿದೆ. ಇದೇ ಮಾದರಿಯಲ್ಲಿ ಬೆಳಗಾವಿ-ಗೋಕಾಕ್‌ ಫಾಲ್ಸ್ ನಡುವೆ ಸಹ ಬಸ್ ವ್ಯವಸ್ಥೆ ಮಾಡಲಾಗಿದೆ.

ಪ್ರತಿ 2ನೇ ಮತ್ತು 4 ಶನಿವಾರ ಹಾಗೂ ಪ್ರತಿ ಭಾನುವಾರ ಈ ವಿಶೇಷ ಬಸ್ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ. ಈ ಬಸ್‌ಗಳು NWKRTCಯ ವಿಶೇಷ ಬಸ್‌ ಆಗಿರುವುದರಿಂದ ಈ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ 'ಶಕ್ತಿ' ಯೋಜನೆ ಅಡಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+