NWKRTC ಕರಾವಳಿ ಟೂರ್ ಪ್ಯಾಕೇಜ್; ದರ, ಮಾರ್ಗ

ಶಿರಸಿ, ನವೆಂಬರ್ 07; ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಭಾಗ ಕರಾವಳಿ ಪ್ರವಾಸಿ ತಾಣಗಳ ವೀಕ್ಷಣೆಗೆ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ.

ಸಾಲು-ಸಾಲು ರಜೆ ದಿನಗಳು, ಸಾಮಾನ್ಯ ದಿನಗಳಲ್ಲಿಯೂ ಈ ಪ್ಯಾಕೇಜ್ ಲಭ್ಯವಿರುತ್ತದೆ. ವಾ.ಕ.ರ.ಸಾ.ಸಂಸ್ಥೆ ಈ ಟೂರ್ ಪ್ಯಾಕೇಜ್ ಬಗ್ಗೆ ಮಾಹಿತಿ ನೀಡಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದೆ.

ಈ ಪ್ಯಾಕೇಜ್‌ನಲ್ಲಿ ಕರ್ನಾಟಕದ ಕರಾವಳಿ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಇದೊಂದು ವಿಶೇಷ ಟೂರ್ ಪ್ಯಾಕೇಜ್ ಆಗಿದೆ ಎಂದು ವಿವರಣೆ ನೀಡಲಾಗಿದೆ.

NWKRTC Announced Karavali Tour Package Route and Fare Details

ಪ್ಯಾಕೇಜ್ ವಿವಿರಗಳು; ಕರಾವಳಿ ಪ್ರವಾಸಿ ತಾಣಗಳ ವೀಕ್ಷಣೆಗೆ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಈ ಪ್ಯಾಕೇಜ್‌ನಲ್ಲಿ ವಯಸ್ಕರಿಗೆ ದರ 300 ರೂ.ಗಳು. ಮಕ್ಕಳಿಗೆ 250 ರೂ.ಗಳು ಎಂದು ವಾ.ಕ.ರ.ಸಾ.ಸಂಸ್ಥೆ ಮಾಹಿತಿ ನೀಡಿದೆ.

ಕರಾವಳಿ ಪ್ರವಾಸಿ ತಾಣಗಳ ಪ್ಯಾಕೇಜ್ ಕುಮುಟಾದಿಂದ ಆರಂಭವಾಗಲಿದೆ. ಗೋಕರ್ಣದಲ್ಲಿ ಅಂತ್ಯಗೊಳ್ಳಲಿದೆ. ಆನ್‌ಲೈನ್ ಮೂಲಕವೂ ಈ ಪ್ಯಾಕೇಜ್‌ಗೆ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಲಾಗಿದೆ.

ಕುಮಟಾದಿಂದ 7.30ಕ್ಕೆ ಹೊರಡುವ ಬಸ್ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು 8.15ಕ್ಕೆ ತಲುಪುತ್ತದೆ. 9.45ಕ್ಕೆ ಮಿರ್ಜಾನ ಕೋಟೆ, 11.15ಕ್ಕೆ ಅಪ್ಸರಕೊಂಡ ತಲುಪಲಿದೆ.

12.30ಕ್ಕೆ ಇಡಗುಂಜಿ ದೇವಾಲಯ, ಮಧ್ಯಾಹ್ನ 2 ಗಂಟೆಗೆ ಮುರುಡೇಶ್ವರ ದೇವಸ್ಥಾನ ಮತ್ತು ಬೀಚ್‌ಗೆ ತಲುಪಲಿದೆ. ಪ್ಯಾಕೇಜ್ ಅಂತಿಮ ಹಂತವಾಗಿ ಇಕೋ ಬೀಚ್ ಮತ್ತು ಶರಾವತಿ ಕಾಂಡ್ಲಾ ಮ್ಯಾಂಗ್ರೋವ ಬೋರ್ಡ್ ವಾಕ್ ಹೊನ್ನಾವರ 4 ಗಂಟೆಗೆ ತಲುಪಲಿದೆ. ಬಳಿಕ 7 ಗಂಟೆಗೆ ಬಸ್ ಗೋಕರ್ಣಕ್ಕೆ ಆಗಮಿಸಲಿದೆ.

ಟಿಕೆಟ್ ಬುಕ್ ಮಾಡುವುದು ಹೇಗೆ?; ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕರಾವಳಿ ವಿಶೇಷ ಟೂರ್ ಪ್ಯಾಕೇಜ್‌ಗೆ ಟಿಕಟ್ ಬುಕ್ ಮಾಡಲು www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು 7760991726/ 9482629870.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+