108 ರೈಲ್ವೆ ನಿಲ್ದಾಣಗಳಲ್ಲಿ ನಮ್ಮ ಮೆಟ್ರೋ ಮಾದರಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ: ಎಲ್ಲೆಲ್ಲಿ?-ಇಲ್ಲಿದೆ ಮಾಹಿತಿ
ಬೆಂಗಳೂರು, ಸೆಪ್ಟೆಂಬರ್, 02: ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರಿಗೆ ಟಿಕೆಟ್ ಖರೀದಿಗೆ ಸುಲಭ ಆಗಲೆಂದು ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಮಾಡಲಾಗಿದೆ. ಅದೇ ರೀತಿ ಇದೀಗ ರೈಲ್ವೆ ನಿಲ್ದಾಣಗಳಲ್ಲೀ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗಾದರೆ ಎಲ್ಲೆಲ್ಲಿ ಅಳವಡಿಕೆ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು ರೈಲ್ವೆ ವ್ಯಾಪ್ತಿಯ 108 ನಿಲ್ದಾಣಗಳಲ್ಲಿ ಮೆಟ್ರೋ ಮಾದರಿಯಂತೆ ಇನ್ಮುಂದೆ ಆನ್‌ಲೈನ್ ಪೇಮೆಂಟ್ ಮೂಲಕ ಹಣ ಪಾವತಿ ಮಾಡಿ ಟಿಕೆಟ್ ಖರೀದಿಸಿ ಪ್ರಯಾಣ ಮಾಡಬಹುದಾಗಿದೆ. ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ಸ್ಟೇಷನ್, ಎಸ್ಎಂವಿಟಿ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಸೇರಿದಂತೆ ಬೆಂಗಳೂರು ವ್ಯಾಪ್ತಿಯ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲೂ ಕ್ಯೂಆರ್ ಕೋಡ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಇದು ಪ್ರಯಾಣಿಕರಿಗೆ ತುಂಬಾ ಸಹಾಕಾರಿಯಾಗಲಿದೆ.

ರೈಲ್ವೆ ಪ್ರಯಾಣಿಕರು ಇಷ್ಟು ದಿನ ಟಿಕೆಟ್‌ಗಾಗಿ ಕ್ಯೂ ನಿಂತು ಹೈರಾಣಾಗಿ ಹೋಗುತ್ತಿದ್ದರು. ಇದೀಗ ಪ್ರಯಾಣಿಕರು ಇನ್ಮುಂದೆ ರೈಲು ಟಿಕೆಟ್‌ಗಾಗಿ ಗಂಟೆಗಟ್ಟಲ್ಲೇ ಕಾಯಬೇಕಾರ ಪರಿಸ್ಥಿನಿ ಇರುವುದಿಲ್ಲ. ಟಿಕೆಟ್ ಕೌಂಟರ್‌ಗಳಲ್ಲಿ ಚಿಲ್ಲರೆ ಸಮಸ್ಯೆಯೂ ಉಧ್ಬವ ಆಗುವದಿಲ್ಲ. ಈ ಎಲ್ಲದಕ್ಕೂ ಉತ್ತರವೇಂಬಂತೆ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಬೆಂಗಳೂರು ರೈಲ್ವೆ ವ್ಯಾಪ್ತಿಯಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ಬಂದಿದ್ದು, ಈ ವ್ಯವಸ್ಥೆಯಿಂದ ಪ್ರಯಾಣಿಕರು ಸಂತಸಗೊಂಡಿದ್ದಾರೆ.
ಕೋಡ್ ಸ್ಕ್ಯಾನ್ ವ್ಯವಸ್ಥೆ: 140 ಯುಟಿಎಸ್ ಕೌಂಟರ್‌ಗಳಲ್ಲಿ ಹೊಸ ವ್ಯವಸ್ಥೆಯನ್ನು ತರಲಾಗಿದ್ದು, ಸಾಮಾನ್ಯ ದರ್ಜೆಯ ಟಿಕೆಟ್ ಮೊತ್ತದ ಪಾವತಿಗೆ ಕ್ಯೂಆರ್ ಕೋಡ್ ಸ್ಕ್ಯಾನ್ ವ್ಯವಸ್ಥೆ ತರಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿ ತ್ರಿನೇತ್ರಾ ತಿಳಿಸಿದ್ದಾರೆ.
ಯಾವ್ಯಾವ ನಿಲ್ದಾಣಗಳಲ್ಲಿ ಎಷ್ಟು ಟಿಕೆಟ್ ಕೌಂಟರ್?
* ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ- 20 ಕೌಂಟರ್
* ಯಶವಂತಪುರ ರೈಲ್ವೆ ನಿಲ್ದಾಣ - 10 ಕೌಂಟರ್ ಸೇರಿದಂತೆ ಬೆಂಗಳೂರು ವ್ಯಾಪ್ತಿಯ 108 ರೈಲ್ವೇ ನಿಲ್ದಾಣಗಳಲ್ಲಿ 140 ಟಿಕೆಟ್ ಕೌಂಟರ್‌ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಪ್ರತಿದಿನ ಸಾವಿರಾರು ಪ್ರಯಾಣಿಕರು ಆನ್‌ಲೈನ್ ಪೇಮೆಂಟ್ ಮೂಲಕ ಟಿಕೆಟ್ ಖರೀದಿ ಮಾಡಿ ಪ್ರಯಾಣಿಸುತ್ತಿದ್ದಾರೆ.
ವಿಶೇಷ ರೈಲು ಸೇವೆ: ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ವಿಶೇಷ ರೈಲು ಸೇವೆಯನ್ನು ಅನಿರೀಕ್ಷಿತವಾಗಿ ಸ್ಥಗಿತಗೊಳಿಸಲಾಗಿದ್ದು, ಇದರಿಂದ ಈ ಭಾಗದ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದೀಗ ಇಂದಿನಿಂದ ಈ ಮಾರ್ಗದಲ್ಲಿ ವಿಷೇಶ ರೈಲುಗಳನ್ನು ಒಡಿಲಿಸಲು ಭಾರತೀಯ ರೈಲ್ವೆ ನಿರ್ಧಾರ ಮಾಡಿದೆ. ಮಾಹಿತಿ ಇಲ್ಲಿ ತಿಳಿಯಿರಿ.
ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಸ್ಥಗಿತಗೊಳಿಸಿದ ಬಳಿಕ ಈ ಭಾಗದ ಪ್ರಯಾಣಿಕರು ಸಮಸ್ಯೆಯನ್ನು ಎದುರಿಸಿದ್ದರು. ಇದೀಗ ಪ್ರಯಾಣಿಕರ ಪರದಾಟ ಗಮನಿಸಿದ ರೈಲ್ವೇಯು, ಸೆಪ್ಟೆಂಬರ್ 1ರಿಂದ ಸೆಪ್ಟೆಂಬರ್ 7ರ ವರೆಗೆ ಎರ್ನಾಕುಲಂ ಜಂಕ್ಷನ್-ಯಲಹಂಕ ಕಾರಿಡಾರ್‌ನಲ್ಲಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಸಮಯಗಳ ವಿವರ ಇಲ್ಲಿದೆ ಗಮನಿಸಿ.
ಎರ್ನಾಕುಲಂನಿಂದ ಭಾನುವಾರ (ಸೆಪ್ಟೆಂಬರ್ 1) 13 ಬೋಗಿಗಳ ಸೇವೆಗಳ ರೈಲು ಸೇವೆಯನ್ನು ಒದಗಿಸಲಾಗುತ್ತಿದ್ದು, ಇದು ಬುಧವಾರ ಮತ್ತು ಶುಕ್ರವಾರ ಮಧ್ಯಾಹ್ನ 12.40ಕ್ಕೆ ಹೊರಡಲಿದೆ. ಇನ್ನು ಯಲಹಂಕದಿಂದ ಹಿಂದಿರುಗುವ ರೈಲು ಸೋಮವಾರ, ಗುರುವಾರ ಮತ್ತು ಶನಿವಾರದಂದು ಬೆಳಗ್ಗೆ 5 ಗಂಟೆಗೆ ಪ್ರಯಾಣ ಪ್ರಾರಂಭಿಸಲಿದೆ ಎಂದು ತಿಳಿಸಿದೆ.












Click it and Unblock the Notifications