Vande Bharat; ಮೈಸೂರು-ಚೆನ್ನೈ ವಿಶೇಷ ವಂದೇ ಭಾರತ್ ರೈಲು ವಿಸ್ತರಣೆ

ಮೈಸೂರು, ಫೆಬ್ರವರಿ 04: ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಪ್ರಯಾಣಿಕರ ದಟ್ಟಣೆ ತಪ್ಪಿಸಲು ವಿಶೇಷ ವಂದೇ ಭಾರತ್‌ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸುತ್ತಿದೆ.

ಮೈಸೂರು-ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ರೈಲು ಸಂಚಾರವನ್ನು ವಿಸ್ತರಣೆ ಮಾಡಿ ದಕ್ಷಿಣ ರೈಲ್ವೆ ಆದೇಶ ಹೊರಡಿಸಿದೆ. ಹೊಸ ಆದೇಶದ ಪ್ರಕಾರ ರೈಲು ಮಾರ್ಚ್ 27, 2024ರ ತನಕ ಸಂಚಾರ ನಡೆಸಲಿದೆ.

Mysuru Chennai Special Vande Bharat Express Train Service Extended

ವಂದೇ ಭಾರತ್‌ ವಿಶೇಷ ರೈಲು ಸೇವೆಯನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ ಟಿಕೆಟ್ ದರ, ಬೋಗಿಗಳ ಸಂಯೋಜನೆ, ನಿಲುಗಡೆಗಳು, ವೇಳಾಪಟ್ಟಿ ಮತ್ತು ವೇಳಾಪಟ್ಟಿಯೊಂದಿಗೆ ಮಾರ್ಚ್ 27ರ ವರೆಗೆ ವಿಸ್ತರಿಸಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರೈಲು ಸಂಚಾರದ ಮಾಹಿತಿ

* ರೈಲು ಸಂಖ್ಯೆ 06037 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಮೈಸೂರು ನಡುವಿನ ವಂದೇ ಭಾರತ್‌ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 7 ರಿಂದ ಮಾರ್ಚ್ 27, 2024ರ ತನಕ ಪ್ರತಿ ಬುಧವಾರ (8 ಟ್ರಿಪ್) ಸಂಚರಿಸಲಿದೆ. ಈ ಮೊದಲು ಜನವರಿ 31, 2024ರವರೆಗೆ ಸಂಚರಿಸಲು ಸೂಚಿಸಲಾಗಿತ್ತು.

* ರೈಲು ಸಂಖ್ಯೆ 06038 ಮೈಸೂರು-ಡಾಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ವಿಶೇಷ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 7ರಿಂದ ಮಾರ್ಚ್ 27, 2024ರ ತನಕ ಪ್ರತಿ ಬುಧವಾರ (8 ಟ್ರಿಪ್) ಸಂಚರಿಸಲಿದೆ. ಈ ಮೊದಲು ಜನವರಿ 31, 2024ರವರೆಗೆ ಸಂಚರಿಸಲು ಸೂಚಿಸಲಾಗಿತ್ತು.

ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ಪ್ರತಿದಿನ ಸಹ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತದೆ. ಈ ರೈಲಿಗೆ ನವೆಂಬರ್ 11, 2022ರಂದು ಪ್ರಧಾನಿ ನರೇಂದ್ರ ಮೋದಿ ಕೆ. ಎಸ್. ಆರ್. ಬೆಂಗಳೂರು ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದ್ದರು. ಇದರ ಹೊರತಾಗಿಯೂ ಪ್ರಯಾಣಿಕರ ದಟ್ಟಣೆ ತಪ್ಪಿಸಲು ಪ್ರತಿ ಬುಧವಾರ ವಿಶೇಷ ವಂದೇ ಭಾರತ್ ರೈಲು ಓಡಿಸಲಾಗುತ್ತಿದೆ.

ಸದ್ಯ ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ಸಂಚಾರ ನಡೆಸುತ್ತಿರುವ ಪ್ರತಿದಿನದ ವಂದೇ ಭಾರತ್ ರೈಲು ಬುಧವಾರ ಸಂಚಾರ ನಡೆಸುವುದಿಲ್ಲ. ಅಂದು ಉಂಟಾಗುವ ಪ್ರಯಾಣಿಕರ ದಟ್ಟಣೆ ತಪ್ಪಿಸಲು ವಿಶೇಷ ವಂದೇ ಭಾರತ್ ರೈಲುಗಳನ್ನು ಓಡಿಸಲಾಗುತ್ತಿದೆ.

ಈ ರೈಲು ಕೈಗಾರಿಕಾ ತಾಣ ಚೆನ್ನೈ ಮತ್ತು ಸಾಫ್ಟ್‌ವೇರ್ ಹಬ್ ಬೆಂಗಳೂರು ಹಾಗೂ ವಿಶ್ವದ ಪ್ರಮುಖ ಪ್ರವಾಸಿ ತಾಣವಾದ ಮೈಸೂರು ನಡುವೆ ಸಂಚರಿಸುವ ಜನರಿಗೆ ಅನುಕೂಲವಾಗಿದೆ. ವಿಮಾನ ಸಂಚಾರದಂತೆ ಆರಾಮದಾಯಕ ರೈಲು ಪ್ರಯಾಣದ ಅನುಭವವನ್ನು ವಂದೇ ಭಾರತ್ ರೈಲು ನೀಡುತ್ತದೆ.

ಎರಡು ನಗರಗಳನ್ನು ವೇಗವಾಗಿ ಸಂಪರ್ಕಿಸುವ ವಂದೇ ಭಾರತ್ ರೈಲಿಗೆ ದೇಶದಲ್ಲಿ ಭಾರೀ ಬೇಡಿಕೆ ಇದೆ. ವಿವಿಧ ಮಾರ್ಗದಲ್ಲಿ ರೈಲು ಓಡಿಸಬೇಕು ಎಂದು ರೈಲ್ವೆ ಇಲಾಖೆಯ ಮುಂದೆ ಬೇಡಿಕೆಯನ್ನು ಇಡಲಾಗುತ್ತಿದೆ. ಈ ರೈಲಿನಲ್ಲಿ ವಿಶ್ವ ದರ್ಜೆಯ ಆಧುನಿಕ ಸೌಲಭ್ಯಗಳಿದ್ದು, ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಅನುಭವವನ್ನು ನೀಡುತ್ತವೆ. ರೈಲು ಸಂಚಾರದ ಸಂದರ್ಭದಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಕವಚ (ರೈಲು ಅವಘಡ ತಪ್ಪಿಸುವ ವ್ಯವಸ್ಥೆ)ಯನ್ನು ಇದು ಹೊಂದಿದೆ.

ವಂದೇ ಭಾರತ್ ರೈಲು ಬೋಗಿಗಳು ಪ್ರಯಾಣಿಕರಿಗೆ ಸೈಡ್ ರೀಕ್ಲೈನರ್ ಆಸನ ಸೌಲಭ್ಯಹೊಂದಿದೆ. ಎಕ್ಸಿಕ್ಯೂಟಿವ್ ಕೋಚ್‌ಗಳಲ್ಲಿ ಆಸನಗಳು 180 ಡಿಗ್ರಿ ತಿರುಗುವ ವಿಶೇಷತೆಗಳನ್ನು ಹೊಂದಿವೆ.
ಜೈವಿಕವಾಗಿ ಸ್ವಚ್ಛವಾಗುವ ಟಚ್ ಫ್ರೀ ಸೌಲಭ್ಯವಿರುವ ಶೌಚಾಲಯಗಳು ಮತ್ತು ಬೇಡಿಕೆಗೆ ಅನುಗುಣವಾಗಿ ವೈ-ಫೈ ವ್ಯವಸ್ಥೆಯನ್ನು ಒಳಗೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+