Get Updates
Get notified of breaking news, exclusive insights, and must-see stories!

New year 2024: ಕ್ರಿಸ್ಮಸ್, ಹೊಸ ವರ್ಷಾಚರಣೆ: ಉತ್ತರ ಕನ್ನಡದ ಲ್ಲಿವೆ ಅದ್ಭುತವಾದ ಪ್ರವಾಸಿ ತಾಣಗಳು

ಕಾರವಾರ, ಡಿಸೆಂಬರ್‌ 22: ಎಲ್ಲೆಡೆ ಕ್ರಿಸ್ಮಸ್ ಹಾಗೂ ಹೊಸ ವರ್ಷ ಸಂಭ್ರಮಾಚರಣೆಗೆ ತಯಾರಿ ಜೋರಾಗಿದೆ.‌ ಹೊರ ಜಿಲ್ಲೆ ರಾಜ್ಯ ಹೀಗೆ ಬೇರೆಡೆ ತೆರಳಿ ಹೊಸ‌ವರ್ಷ ಸಂಭ್ರಮಾಚರಣೆಗೆ ಪ್ಲ್ಯಾನ್ ಮಾಡಿಕ್ಕೊಳ್ಳಲಾಗುತ್ತಿದೆ. ಆದರೆ ಹೀಗೆ ಪ್ಲ್ಯಾನ್ ಮಾಡಿಕ್ಕೊಳ್ಳುವವರಿಗೆ ಉತ್ತರ ಕನ್ನಡ ಜಿಲ್ಲೆಯ ರಮಣೀಯ ಪ್ರವಾಸಿ ತಾಣಗಳು, ಕಡಲತೀರಗಳು, ಹೋಂಸ್ಟೇ ಹೇಳಿ ಮಾಡಿಸಿದಂತಿದ್ದು ಪ್ಲ್ಯಾನ್ ಕೂಡ ಮಾಡಬಹುದಾಗಿದೆ.

ಹೌದು, ಪ್ರವಾಸಿಗರ ಪಾಲಿಗೆ ಸ್ವರ್ಗದಂತಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಸಾಲು ಸಾಲು ಪ್ರವಾಸಿ ತಾಣಗಳು ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿವೆ. ಅದರಲ್ಲಿಯೂ ಕರಾವಳಿಯಲ್ಲಿನ ಕಡಲತೀರಗಳು, ದೇವಾಲಯಗಳು, ಕೋಟೆಗಳು, ಜಲಸಾಹಸಿ ಕ್ರೀಡೆ, ರೆಸಾರ್ಟ್‌ಗಳು, ಟ್ರಕ್ಕಿಂಗ್ ಪಾಯಿಂಟಸ್ಸ್ ಹೀಗೆ ಎಲ್ಲವನ್ನು ಒಂದಾದಮೇಲೊಂದರಂತೆ ನೋಡುವ ಅದ್ಬುತ ಅವಕಾಶ ಜಿಲ್ಲೆಯಲ್ಲಿ ಲಭ್ಯವಾಗುತ್ತದೆ.

Must Visit Tourist Places In Coastal Regions Of Uttara Kannada During Christmas And New Year

ಒಮ್ಮೆ ಉತ್ತರ ಕನ್ನಡ ಜಿಲ್ಲೆಗೆ ಪ್ರವೇಶ ಕೊಟ್ಟರೇ ಹತ್ತಾರು ಪ್ರದೇಶಗಳನ್ನು ಸಾಲಾಗಿ ನೋಡುವ ಅವಕಾಶ ಜಿಲ್ಲೆಯಲ್ಲಿದೆ. ಅಲ್ಲದೇ ಈ ವರ್ಷದ ಕೊನೆಯಲ್ಲಿರುವ ಕಾರಣ ಹೊಸ ವರ್ಷದ ಸಂಭ್ರಮಾಚರಣೆಗೂ ಇಲ್ಲಿನ ರೆಸಾರ್ಟ್ ಹೋಂ ಸ್ಟೇಗಳು ಪ್ರವಾಸಿಗರಿಗೆ ಹೆಚ್ಚು ಅನುಕೂಲಕರವಾಗಿವೆ.

ಟ್ಯಾಗೋರ ಕಡಲತೀರದಲ್ಲಿ ಜಿಲ್ಲಾಡಳಿತದ ವಿವಿಧ ಕಾರ್ಯಕ್ರಮ

ಇನ್ನು ಹೊಸ ವರ್ಷದ ಸಂಭ್ರಮಾಚರಣೆ ಸಿದ್ದತೆ ಮಾಡಿಕ್ಕೊಳ್ಳಲು ಪ್ಲ್ಯಾನ್ ಮಾಡಿಕ್ಕೊಳ್ಳುತ್ತಿರುವವರಿಗೆ ಉತ್ತರಕನ್ನಡ ಜಿಲ್ಲಾಡಳಿತ ಕೂಡ ಆಫರ್ ನೀಡಲು ಮುಂದಾಗಿದೆ. ಈಗಾಗಲೇ ಕಡಲತೀರಗಳಲ್ಲಿ ಅಮ್ಯೂಸ್ಮೇಂಟ್ ಪಾರ್ಕ್‌ಗಳು ತೆರೆಯಲಾಗಿದ್ದು ಇದರ ಜೊತೆಗೆ ಜಿಲ್ಲಾಡಳಿತ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಆಯೋಜನೆ ಸಿದ್ದತೆ ಮಾಡಿದೆ. ಟ್ಯಾಗೋರ ಕಡಲತೀರದ ಪಕ್ಕದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ಫ್ಯಾಮಿಲಿ ಸ್ನೇಹಿತರ ಜೊತೆಗೂ ಇಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಮಾಡಹುದಾಗಿದೆ.

ಪ್ರವಾಸಿಗರ ಸ್ವರ್ಗ ಮುರುಡೇಶ್ವರ

ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮುರುಡೇಶ್ವರ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುವ ಪುಣ್ಯ ಕ್ಷೇತ್ರ. ಅತೀ ಎತ್ತರದ ಶಿವನ‌ಮೂರ್ತಿ ಹೊಂದಿರುವ ಹಾಗೂ ಆತ್ಮಲಿಂಗದ ಒಂದು ಭಾಗವಿರುವ ಶ್ರೀ ಕ್ಷೇತ್ರ ಧಾರ್ಮಿಕವಾಗಿ ಮಾತ್ರವಲ್ಲದೆ ಇಲ್ಲಿನ ಬೀಚ್, ಸ್ಕೂಬಾ ಡೈವಿಂಗ್, ಜಲಸಾಹಸಿ ಕ್ರೀಡೆಗಳು ಕೂಡ ಪ್ರವಾಸಿಗರನ್ನು ಹೆಚ್ಚು ಆಕರ್ಷಣೆ ಮಾಡುತ್ತವೆ.

Must Visit Tourist Places In Coastal Regions Of Uttara Kannada During Christmas And New Year

ದೇಶ ವಿದೇಶದಲ್ಲಿ ಎಲ್ಲಿಯೋ ನೋಡುತ್ತಿದ್ದ ಸ್ಕೂಬಾ ಡೈವಿಂಗ್ ಮಾಡಲು ಆಸಕ್ತಿ ಹೊಂದಿದವರಿಗೆ ನೇತ್ರಾಣಿ ಅಡ್ವೆಂಚರ್ ನವರು ಮುರುಡೇಶ್ವರದಿಂದ ಸುಮಾರು 18 ಕಿ.ಮೀ ದೂರದ ನೇತ್ರಾಣಿ ದ್ವೀಪಕ್ಕೆ ಬೋಟ್ ಮೂಲಕ ಕರೆದೊಯ್ದು ಸ್ಕೂಬಾ ಕೂಡ ಮಾಡಿಸುತ್ತಾರೆ. ಇಲ್ಲಿಗೆ ಭೇಟಿ ನೀಡುವವರಿಗೆ ಭಟ್ಕಳ, ಕುಮಟಾ, ಹೊನ್ನಾವರ ಹೀಗೆ ಎಲ್ಲ ಭಾಗಗಳಿಂದಲೂ ಸಾರಿಗೆ ವ್ಯವಸ್ಥೆ ಇದೆ.

ಅಲ್ಲದೆ ಬಂದಂತ ಪ್ರವಾಸಿಗರಿಗೆ ತಂಗುವುದಕ್ಕೂ ಸಾಕಷ್ಟು ಲಾಡ್ಜ್, ಹೊಟೇಲ್‌ಗಳು ಕೂಡ ಇವೆ. ಆದರೆ ವಾರಾಂತ್ಯ, ರಜಾ ದಿನ, ಹೊಸ ವರ್ಷದ ವೇಳೆ ಅತಿ ಹೆಚ್ಚು ಪ್ರವಾಸಿಗರು ಸೇರುತ್ತಾರೆ. ಇಲ್ಲಿ ಕೂಡ ಹೊಸ ವರ್ಷ ಮತ್ತು ಕ್ರಿಸ್ಮಸ್ ರಜೆ ಕಳೆಯಲು ಪ್ಲ್ಯಾನ್ ಮಾಡಿಕ್ಕೊಳ್ಳಬಹುದಾಗಿದೆ.

ಬ್ಲ್ಯೂ ಫ್ಲಾಗ್ ಮಾನ್ಯತೆಯ ಇಕೋ ಬೀಚ್

ಇನ್ನು ಹೊನ್ನಾವರ ತಾಲ್ಲೂಕಿನಲ್ಲಿ ಅಂತರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್ ಮನ್ನಣೆ ಪಡೆದಿರುವ ಇಕೋ ಬೀಚ್ ಕೂಡ ಪ್ರವಾಸಿಗರ ಆಕರ್ಷಣೆಯಾಗಿದೆ. ಹೊನ್ನಾವರದ ಕಾಸರಕೋಡು ಹೆದ್ದಾರಿಯಿಂದ ಸ್ವಲ್ಪ ದೂರದಲ್ಲಿರುವ ಬೀಚ್ ಪ್ರತಿನಿತ್ಯ ಸಾವಿರಾರು ಮಂದಿ ಸೇರಿತ್ತಾರೆ. ಅದರಲ್ಲಿಯೂ ರಜಾ ದಿನಗಳಲ್ಲಿ ಹಾಗೂ ನಿತ್ಯ ಸಂಜೆ ವೇಳೆಗೆ ಪ್ರವಾಸಿಗರ ದಂಡೇ ನೆರೆಯುತ್ತದೆ. ಅಲ್ಲದೆ ಇಲ್ಲಿ ಆಸನ ವ್ಯವಸ್ಥೆ, ವಾಚ್ ಟವರ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಪರಿಸರ ಸ್ನೇಹಿ ಸೌಲಭ್ಯಗಳ ವ್ಯವಸ್ಥೆ ಕೂಡ ಇದೆ. ಇದರೊಂದಿಗೆ ಮಕ್ಕಳ ಆಟಿಕೆಗಳನ್ನು ಸಹ ಅಳವಡಿಸಲಾಗಿದೆ. ಇದರ ಸಮೀಪದಲ್ಲಿಯೇ ಉದ್ಯಾನವನ ಕೂಡ ಇದೆ.

Must Visit Tourist Places In Coastal Regions Of Uttara Kannada During Christmas And New Year

ಇಲ್ಲಿಂದ ಸ್ವಲ್ಪ ದೂರದಲ್ಲಿ ಕಾಂಡ್ಲಾ ವಾಕಿಂಗ್ ಪಾತ್ ಕೂಡ ಇದ್ದು ಪ್ರವಾಸಿಗರಿಗೆ ಪೋಟೋ ಪ್ರೀಯರಿಗೆ ಹೇಳಿ ಮಾಡಿಸಿದ ಜಾಗದಂತಿದೆ. ಜೊತೆಗೆ ಇಲ್ಲಿಂದ ಸ್ವಲ್ಪ ದೂರದಲ್ಲಿ ಇಡಗುಂಜಿ ಮಹಾ ಗಣಪತಿ ದೇವಸ್ಥಾನ, ಕರಿಕಾನಮ್ಮ ದೇವಸ್ಥಾ ಕೂಡ ಇದ್ದು ಇಲ್ಲಿಯೂ ಕೂಡ ಭೇಟಿ ನೀಡಬಹುದಾಗಿದೆ. ಇಡಗುಂಜಿಗೆ ಹೊನ್ನಾವರದಿಂದ ಸಾರಿಗೆ ವ್ಯವಸ್ಥೆ ಇದೆ. ಇಕೋ ಬೀಚ್ ಕೂಡ ಹೆದ್ದಾರಿ ಪಕ್ಕದಲ್ಲಿಯೇ ಇದ್ದು ಸ್ವಂತ ವಾಹನ ವ್ಯವಸ್ಥೆ ಇದ್ದರೆ ಅನುಕೂಲವಾಗಲಿದೆ. ಇಲ್ಲಿ ವಾಸ್ತವ್ಯ ಹಾಗೂ ಊಟತಿಂಡಿಗೆ ಹೆದ್ದಾರಿಯಂಚಿನಲ್ಲಿ ಸಾಕಷ್ಟು ಹೊಟೇಲ್ ಇದ್ದು ಹೊನ್ನಾವರ ಪಟ್ಟಣಕ್ಕೂ ತೆರಳಬಹುದಾಗಿದೆ.

ಐತಿಹಾಸಿ ಮಿರ್ಜಾನ್ ಕೋಟೆ

ಇನ್ನು ಕುಮಟಾ ತಾಲೂಕಿನ ಮಿರ್ಜಾನ್ ಕೋಟೆ ಪ್ರಮುಖ ಪ್ರವಾಸಿ ಕೇಂದ್ರ. ಕುಮಟಾದಿಂದ 10 ಕಿ.ಮೀ ದೂರದಲ್ಲಿರುವ ಈ ಕೋಟೆ ಪುರಾತತ್ವ ಇಲಾಖೆ ಅಧೀನದಲ್ಲಿದೆ. ಸಾವಿರಾರು ವರ್ಷಗಳ ಹಳೆಯದಾದ ಕೋಟೆ ಇಂದಿಗೂ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಇದಲ್ಲದೆ ಯಾಣ, ಕುಮಟಾದ ವನ್ನಳ್ಳಿ ಬೀಚ್, ಬಾಡ ಬೀಚ್ ಕೂಡ ಪ್ರವಾಸಿಗರಿಗೆ ಅನುಕೂಲವಾಗಿದೆ. ಹೊಸ ವರ್ಷಾಚರಣೆ, ವಾರಾಂತ್ಯದ ಟ್ರಿಪ್ ಮಾಡುವವರಿಗೆ ಈ ಬೀಚ್ ಗಳು ಸೂಕ್ತವಾಗಿದೆ. ಇಲ್ಲಿನ ಸಾಕಷ್ಟು ರೆಸಾರ್ಟ್ ಹೋಂ‌ಸ್ಟೇಗಳಿದ್ದು ಪಕ್ಕದಲ್ಲಿಯೇ ಬೀಚ್ ಕೂಡ ಇದೆ.

ಗೋಕರ್ಣದಲ್ಲಿ ಹತ್ತು ಹಲವು ಪ್ರವಾಸಿ ತಾಣಗಳು

ಪರಶೀವನ ಆತ್ಮಲಿಂಗವಿರುವ ಗೋಕರ್ಣ ಧಾರ್ಮಿಕ ಕ್ಷೇತ್ರವಲ್ಲದೆ ಪ್ರವಾಸಿಗರ ನೆಚ್ಚನ ತಾಣ ಕೂಡ ಹೌದು. ಇಲ್ಲಿನ ಮುಖ್ಯ ಕಡಲತೀರ, ಓಂ ಬೀಚ್, ಕುಡ್ಲೆ ಬೀಚ್, ರೆಸಾರ್ಟ್, ಹೊಂ ಸ್ಟೇಗಳು, ಜಲಸಾಹಸಿ ಕ್ರೀಡೆಗಳು ಗಮನ ಸೆಳೆಯುತ್ತವೆ. ಅಲ್ಲದೆ ವಾರಾಂತ್ಯ ಹೊಸ ವರ್ಷಾಚರಣೆ, ಕುಟುಂಬ ಸಮೇತ ಬಂದು ತಂಗಲು ಇಲ್ಲಿ ಸಾಕಷ್ಟು ಹೊಂ ಸ್ಟೇ ರೆಸಾರ್ಟ್, ಲಾಡ್ಜ್ ಕೂಡ ಇದೆ.‌ ವಿದೇಶಿಗರು ಹೆಚ್ಚಾಗಿ ಭೇಟಿ ನೀಡುವ ಸ್ಥಳ ಇದಾಗಿದೆ. ಕುಮಟಾ ಅಂಕೋಲಾದಿಂದ ಹೆಚ್ಚು ಬಸ್ ವ್ಯವಸ್ಥೆ ಇದೆ.

Must Visit Tourist Places In Coastal Regions Of Uttara Kannada During Christmas And New Year

ಇನ್ನು ಕಾರವಾರ ಅಂಕೋಲಾದಲ್ಲಿಯೂ ಸಾಕಷ್ಟು ಪ್ರವಾಸಿ ತಾಣಗಳಿವೆ. ಅಂಕೋಲಾದ ಹನಿ ಬೀಚ್, ಕಾರವಾರದ ತಿಳಮಾತಿ, ದೇವಭಾಗ ಬೀಚ್ ಹಾಗೂ ರೆಸಾರ್ಟ್ ಮತ್ತು ಇಲ್ಲಿನ ಜಲಸಾಹಸಿ ಕ್ರೀಡೆಗಳು, ಕಾಳಿ ರಿವರ್ ಗಾರ್ಡನ್ ಹಾಗೂ ಜಲ ಸಾಹಸಿ ಕ್ರೀಡೆಗಳು, ಶೀಖರ ಬೋಟ್ ರೈಡಿಂಗ್, ರಾಕ್ ಗಾರ್ಡನ್, ವಾರ್ಸಿಪ್ ಮ್ಯೂಸಿಯಂ ಪ್ರಮುಖ ಆಕರ್ಷಣೀಯ ಕೇಂದ್ರಗಳಾಗಿವೆ. ಪ್ರತಿನಿತ್ಯ ದೇಶ ವಿದೇಶಿ ಪ್ರವಾಸಿಗರು ಬಂದು ಹೋಗುತ್ತಾರೆ‌.

ನಗರಕ್ಕೆ ಸಮೀಪದಲ್ಲಿಯೇ ಇರುವ ಕಾರಣ ಹೊಟೇಲ್ ಲಾಡ್ಜ್ ಎಲ್ಲವೂ ಸಿಗಲಿದ್ದು ಪ್ರವಾಸಿಗರಿಗೆ ಎಂಜಾಯ್ ಮಾಡಲು ಉತ್ತಮ ಸ್ಥಳವಾಗಿದೆ. ಇನ್ನು ಎಲ್ಲ ಪ್ರದೇಶವನ್ನು ಒಂದೇ ದಿನ ನೋಡಲು ಅಸಾಧ್ಯ. ಹೀಗಾಗಿ ಎಲ್ಲಾ ಸ್ಥಳಗಳಿಂದ ಕೆಲವೇ ಕಿಲೋಮೀಟರ್ ಅಂತರದಲ್ಲಿ ಕೆಲವು ಹೋಮ್ ಸ್ಟೇಗಳು ರೆಸಾರ್ಟ್‌ಗಳು ಲಭ್ಯವಿದೆ. ಅಲ್ಲದೇ ಇದೆಲ್ಲವನ್ನು ಇನ್ನೂ ಸುಲಭಗೊಳಿಸಲು ಇಲಾಖೆಯ 'ಉತ್ತರ ಕನ್ನಡ ಟೂರಿಸಂ' (https://uttarakannada.org/) ಎನ್ನುವ ವೆಬ್‌ಸೈಟ್ ಕೂಡಾ ಅಭಿವೃದ್ಧಿ ಪಡಿಸಿದೆ. ಜಿಲ್ಲೆಯ ಪ್ರವಾಸಕ್ಕೆ ಹೊರಡುವವರು ಈ ವೆಬ್‌ಸೈಟ್ ಕೂಡ ನೋಡಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+