MSIL: ಎಂಎಸ್‌ಐಎಲ್ ಟೂರ್ ಪ್ಯಾಕೇಜ್, ಇಎಂಐ ಸೌಲಭ್ಯ, ವಿವರ
ಬೆಂಗಳೂರು, ಮೇ 30: ವಿವಿಧ ಉದ್ಯಮ ನಡೆಸುತ್ತಿರುವ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಪ್ರವಾಸೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದೆ. ದೇಶ, ವಿದೇಶ, ಧಾರ್ಮಿಕ ಕ್ಷೇತ್ರಗಳ ಪ್ರವಾಸಿ ಪ್ಯಾಕೇಜ್ ಘೋಷಣೆ ಮಾಡಲಿದೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿರುವ ಅವಕಾಶಗಳನ್ನು ಗುರುತಿಸಿ, ಜನರಿಗೆ ಕಡಿಮೆ ದರದಲ್ಲಿ ಸುಲಭವಾಗಿ ಲಭ್ಯವಾಗುವಂತೆ ಪ್ರವಾಸಿ ಪ್ಯಾಕೇಜ್‌ಗಳನ್ನು ಎಂಎಸ್‌ಐಎಲ್ ರೂಪಿಸುತ್ತಿದೆ. ಜನರನ್ನು ಮನೆಯಿಂದಲೇ ಪಿಕಪ್, ಡ್ರಾಪ್ ಮಾಡುವ ಪ್ಯಾಕೇಜ್ ಇವೆ.

ದೇಶ-ವಿದೇಶದ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕೆ ಜನರು ಎಂಎಸ್‌ಐಎಲ್‌ನ ಪ್ರವಾಸಿ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಬಹುದು. ಸರ್ಕಾರಿ ನೌಕರಿಗಾಗಿಯೇ ವಿಶೇಷ ಪ್ಯಾಕೇಜ್‌ಗಳಿವೆ.
ಇಎಂಐ ಸೌಲಭ್ಯವಿದೆ: ಎಂಎಸ್‌ಐಎಲ್ ಅಯೋಧ್ಯೆ, ಕಾಶಿ, ಕಾಶ್ಮೀರ-ಕನ್ಯಾಕುಮಾರಿ, ಯುರೋಪ್ ಸೇರಿದಂತೆ ಇತರ ದೇಶಗಳ ಪ್ರವಾಸಿ ಪ್ಯಾಕೇಜ್ ಸಿದ್ಧಗೊಳಿಸುತ್ತಿದೆ. ಹಿರಿಯ ನಾಗರಿಕರಿಗೆ ಅಗತ್ಯ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಮನೆಯಿಂದಲೇ ಪ್ರವಾಸಿಗರನ್ನು ಪಿಕ್ ಮಾಡಲಾಗುತ್ತದೆ. ಡ್ರಾಪ್ ಮಾಡುವ ವ್ಯವಸ್ಥೆ ಸಹ ಇದೆ.
ಪ್ರವಾಸಿ ಪ್ಯಾಕೇಜ್ ಆರ್ಥಿಕವಾಗಿ ಹೊರೆಯಾಗಬಾರದು ಎಂಬ ಕಾರಣಕ್ಕೆ ಇಎಂಐ ಸೌಲಭ್ಯವನ್ನು ಪರಿಚಯಿಸಲಾಗುತ್ತದೆ. ಪ್ರವಾಸದ ಕೆಲವು ತಿಂಗಳು ಮೊದಲು ಲಕ್ಕಿ ಡ್ರಾ ಎತ್ತಲಾಗುತ್ತದೆ. ವಿಜೇತರು ಉಳಿದ ಕಂತುಗಳನ್ನು ಕಟ್ಟುವ ಅಗತ್ಯವೂ ಇಲ್ಲ. ಸಂಸ್ಥೆಯಿಂದಲೇ ಅದನ್ನು ಭರಿಸಲಾಗುತ್ತದೆ.
ಎಂಎಸ್‌ಐಎಲ್ ಟೂರ್ಸ್ & ಟ್ರಾವೆಲ್ಸ್ ವ್ಯವಸ್ಥಾಪಕ ನಿರ್ದೇಶಕ ರವಿ ಕುಮಾರ್ ಮಾತನಾಡಿ, "ಪ್ರವಾಸೋದ್ಯಮ ಕ್ಷೇತ್ರದಲ್ಲಿರುವ ವಿಫುಲ ಅವಕಾಶಗಳನ್ನು ಬಳಸಿಕೊಂಡು ಉದ್ಯಮ ವಿಸ್ತರಣೆ ಮಾಡಲು ಯೋಜನೆ ರೂಪಿಸಿದ್ದೇವೆ. ಪ್ರವಾಸಿಗರ ಬೇಡಿಕೆಗೆ ತಕ್ಕಂತೆ ವಿವಿಧ ತಾಣಗಳಿಗೆ ಕರೆದೊಯ್ಯುವ ಪ್ಯಾಕೇಜ್ ರೂಪಿಸಲಾಗುತ್ತದೆ" ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಯೋಜನೆ ಘೋಷಣೆ ಮಾಡುವುದು ತಡವಾಗಿದೆ. ಜೂನ್ 2ನೇ ವಾರದಲ್ಲಿ ವಿವಿಧ ಪ್ಯಾಕೇಜ್‌ಗಳ ಬುಕ್ಕಿಂಗ್ ಆರಂಭಿಸಲಾಗುತ್ತದೆ.
ಪ್ರವಾಸದ ಸಂದರ್ಭದಲ್ಲಿ ಜನರು ಊಟ, ಉಪಹಾರದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುತ್ತಾರೆ. ಎಂಎಸ್ಐಎಲ್ ಮುದ್ದೆ, ಚಪಾತಿ, ರೊಟ್ಟಿ ಊಟ ಒದಗಿಸುವ ಕುರಿತು ಸಹ ಚಿಂತನೆ ನಡೆಸಿದೆ. ಹಿರಿಯ ನಾಗರಿಕರಿಗೆ ಒಬ್ಬ ಗೈಡ್, ಮನೆಯಿಂದಲೇ ಪಿಕಪ್ & ಡ್ರಾಪ್, ಇಎಂಇ ಸೌಲಭ್ಯ ಈ ಪ್ಯಾಕೇಜ್‌ಗಳ ವಿಶೇಷತೆಯಾಗಿದೆ.
ಎಂಎಸ್‌ಐಎಲ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸಿ ಪ್ಯಾಕೇಜ್ ಆರಂಭಿಸುವ ಕುರಿತು ಪೋಸ್ಟ್‌ಗಳನ್ನು ಹಾಕುವ ಮೂಲಕ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕಾಲಿಡುವ ಸೂಚನೆಯನ್ನು ನೀಡಿದೆ. ಈ ಕುರಿತು ಅಧಿಕೃತ ಘೋಷಣೆ, ಪ್ಯಾಕೇಜ್, ದರಗಳ ವಿವರಗಳು ಇನ್ನಷ್ಟೇ ಘೋಷಣೆಯಾಗಬೇಕಿದೆ.
ಎಂಎಸ್‌ಐಎಲ್ ಕುರಿತು: 1966ರಲ್ಲಿ ಸ್ಥಾಪನೆಯಾದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಎಂದು ಚಿರಪರಿಚಿತ. ವಿವಿಧ ಉತ್ಪನ್ನಗಳ ಮಾರಾಟ ಹಾಗೂ ಸೇವೆಯಲ್ಲಿ ತೊಡಗಿರುವ ಕರ್ನಾಟಕ ಸರ್ಕಾರದ ಪ್ರಮುಖ ಅಂಗ ಸಂಸ್ಥೆ ಇದು. ಬಹು ಉತ್ಪನ್ನಗಳ ಮಾರ್ಕೆಟಿಂಗ್ ಸಂಸ್ಥೆಯಾದ ಇದು, ದೇಶದ ಅತ್ಯುತ್ತಮ ಸರ್ಕಾರಿ ಸಂಸ್ಥೆಗಳಲ್ಲಿ ಒಂದು.
ಬದಲಾಗುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ವಿವಿಧ ಕ್ಷೇತ್ರಗಳಿಗೆ ಎಂಎಸ್ಐಎಲ್ ಪಾದಾರ್ಪಣೆ ಮಾಡಿದೆ. ಪರಿಣಾಮಕಾರಿ ನಿರ್ವಹಣೆ, ಗ್ರಾಹಕರ ವಿಶ್ವಾಸಗಳಿಸುತ್ತಾ ವೈವಿಧ್ಯಮಯ ಉತ್ಪನ್ನಗಳು ಮತ್ತು ಸೇವೆಗಳನ್ನು ನಿರ್ವಹಣೆ ಮಾಡುತ್ತಿದೆ.
ಮೈಸೂರು ಸ್ಯಾಂಡಲ್ ಸಾಬೂನುಗಳು, ಸಿಮೆಂಟ್, ಕರ್ನಾಟಕ ರಾಜ್ಯ ಲಾಟರಿ, ಏರ್ ಕಾರ್ಗೋ, ಗ್ರಾಹಕ ಉತ್ಪನ್ನಗಳು, ರೇಷ್ಮೇ ಸೀರೆಗಳು, ಸಗಟು ಮದ್ಯ ಮುಂತಾದ ಉತ್ಪನ್ನಗಳನ್ನು ಮಾರಾಟ ಮಾಡಿದೆ. ಮದ್ಯದ ಚಿಲ್ಲರೆ ವ್ಯಾಪಾರ, ಚಿಟ್‍ಫಂಡ್, ನೋಟ್‍ಬುಕ್‍ಗಳು, ಸೋಲಾರ್ ಉತ್ಪನ್ನಗಳು, ಟೂರ್ ಪ್ಯಾಕೇಜ್ ವ್ಯವಸ್ಥೆ, ವಿಮಾನಯಾನ ಟಿಕೆಟ್ ಕಾಯ್ದಿರಿಸುವಿಕೆ, ಕುಡಿಯುವ ನೀರು, ಜೆನೆರಿಕ್ ಔಷಧಿಗಳು ಹಾಗೂ ಮರಳು ಇತ್ಯಾದಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications