ಪ್ರವಾಸಿಗರಿಗೆ ಸಿಹಿ ಸುದ್ದಿ: ವಿದೇಶದಲ್ಲಿ ಕೋವಿಡ್ ನಿರ್ಬಂಧ ಸಡಿಲ

ನವದೆಹಲಿ ಜೂನ್ 1: ವಿದೇಶಕ್ಕೆ ಪ್ರವಾಸ ಹೋಗಬೇಕೆಂದು ಯೋಜಿಸುತ್ತಿರುವ ಪ್ರವಾಸಿಗರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದ್ದೆ. ಜೂನ್ 1 ರಿಂದ ಹಲವು ದೇಶಗಳು ಕೋವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸಿವೆ.

ಕೊರೊನಾ ವೈರಸ್ ಪತ್ತೆಯಾದಾಗಿನಿಂದ ಅನೇಕ ದೇಶಗಳ ಪ್ರವಾಸೋದ್ಯಮ ನೆಲಕಚ್ಚಿದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಸಾವಿರಾರು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರವಾಸೋದ್ಯಮವೇ ಮುಖ್ಯ ಕ್ಷೇತ್ರವಾಗಿರುವ ಕೆಲವು ದೇಶಗಳ ಆರ್ಥಿಕ ಸ್ಥಿತಿ ಕುಸಿದಿದೆ. ಸದ್ಯ ಕೊರೊನಾ ಪ್ರಕರಣಗಳು ವಿಶ್ವದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಪುನಃ ಪ್ರವಾಸೋದ್ಯಮ ಗರಿಗೆದರಿದೆ.

ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಬರುವ ಪ್ರವಾಸಿಗರ ದೃಷ್ಟಿಯಿಂದ ಮಾಸ್ಕ್ ಕಡ್ಡಾಯ, ಪ್ರವೇಶ ನಿರ್ಬಂಧದಂತಹ ಹಲವು ನಿಯಮಗಳನ್ನು ಸಡಿಲಗೊಳಿಸುವ ನಿರ್ಧಾರವನ್ನು ಹಲವು ದೇಶಗಳು ತಾಳಿವೆ. ಜೂನ್ 1ರಿಂದಲೇ ನೂತನ ನಿಯಮಗಳು ಜಾರಿಯಾಗಲಿವೆ. ಈ ರೀತಿ ಕೋವಿಡ್-19 ನಿಯಮಗಳನ್ನು ಸಡಿಲಗೊಳಿಸಿರುವ ದೇಶಗಳ ಪಟ್ಟಿ ಈ ರೀತಿಯಿದೆ.

ಜರ್ಮನಿಗೆ ಪ್ರವಾಸಿಗರಿಗೆ ಮುಕ್ತ ಪ್ರವೇಶ

ಜರ್ಮನಿಗೆ ಪ್ರವಾಸಿಗರಿಗೆ ಮುಕ್ತ ಪ್ರವೇಶ

ಈ ಹಿಂದೆ ವಿಧಿಸಲಾಗಿದ್ದ ಪ್ರಯಾಣ ನಿರ್ಬಂಧಗಳನ್ನು ಜರ್ಮನಿ ಸರಕಾರ ಜೂನ್ 1 ರಿಂದ ಹಿಂಪಡೆದಿದೆ. "ದೇಶಕ್ಕೆ ಬರುವ ಪ್ರವಾಸಿಗರ ಹಿತದೃಷ್ಟಿಯಿಂದ ಆಗಸ್ಟ್ ಅಂತ್ಯದವರೆಗೆ 3ಜಿ ನಿಯಮಗಳನ್ನು ಹಿಂಪಡೆದಿದ್ದೇವೆ. 3ಜಿ ನಿಯಮ ಎಂದರೆ ಜರ್ಮನಿ ಒಳಗೆ ಪ್ರವೇಶಿಸುವ ಮೊದಲು ಪ್ರವಾಸಿಗ ಲಸಿಕೆ ಪಡೆದಿರುವ ಬಗ್ಗೆ ಸೂಕ್ತ ದಾಖಲೆ ಹಾಗೂ ಕೊರೊನಾ ಪರೀಕ್ಷೆ ಮಾಡಿಸಿಕೊಂಡ ಬಗ್ಗೆ ಸೂಕ್ತ ವಿವರಗಳನ್ನು ಸಲ್ಲಿಸಬೇಕಿತ್ತು. ಜರ್ಮನಿಯಲ್ಲಿ ಕೊರೊನಾ ಸೋಂಕಿತರ ಪರೀಕ್ಷೆ ಗಣನೀಯವಾಗಿ ಇಳಿಕೆಯಾಗಿದೆ. ಅಲ್ಲದೇ ಜೂನ್ 1 ರಿಂದ ಭಾರತದ ಕೋವ್ಯಾಕ್ಸಿನ್ ಲಸಿಕೆ ಮಾನ್ಯವಾಗಿದ್ದು, ನಾಗರಿಕರಿಗೆ ದೊರೆಯಲಿದೆ,'' ಎಂದು ಜರ್ಮನಿಯ ಆರೋಗ್ಯ ಸಚಿವ ಕಾರ್ಲ್ ಲಾಟರ್ಬಾಕ್ ತಿಳಿಸಿದ್ದಾರೆ.

ಇಟಲಿಯಲ್ಲಿ ಕೋವಿಡ್ ಪಾಸ್ ಸಲ್ಲಿಸುವ ಅಗತ್ಯವಿಲ್ಲ:

ಇಟಲಿಯಲ್ಲಿ ಕೋವಿಡ್ ಪಾಸ್ ಸಲ್ಲಿಸುವ ಅಗತ್ಯವಿಲ್ಲ:

ಜೂನ್ 1ರಿಂದ ಎಲ್ಲಾ ರೀತಿಯ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ ಎಂದು ಇಟಲಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. "ಈ ಹಿಂದೆ ಇಟಲಿಗೆ ಪ್ರವೇಶಿಸುವ ಮುನ್ನ ಕೋವಿಡ್ ಪಾಸ್ ಸಲ್ಲಿಸುವ ಅಗತ್ಯವಿತ್ತು. ಆದರೆ ಜೂನ್ 1 ರಿಂದ ಗ್ರೀನ್ ಸರ್ಟಿಫಿಕೇಷನ್ ಕೋವಿಡ್-19 ಪಾಸ್ ಸಲ್ಲಿಸುವ ಅಗತ್ಯವಿಲ್ಲ. ಈ ಗ್ರೀನ್ ಪಾಸ್ ಅನ್ನು ಇಟಲಿ ಆರೋಗ್ಯ ಸಚಿವಾಲಯದಿಂದ ವಿತರಿಸಲಾಗುತ್ತಿತ್ತು. ಎಲ್ಲಾ ದೇಶದ ಪ್ರವಾಸಿಗರನ್ನು ಯಾವುದೇ ಭೇದವಿಲ್ಲದೇ ಇಟಲಿಗೆ ಮುಕ್ತ ಪ್ರವೇಶವನ್ನು ಅನುಮತಿಸಲಾಗಿದೆ. ಅವರಿಗೆ ಲಸಿಕೆ ಪ್ರಮಾಣಪತ್ರ, ಕೊರೊನಾ ಪರೀಕ್ಷೆ ವರದಿಯ ದಾಖಲೆಗಳು ಅಗತ್ಯವಿಲ್ಲ,'' ಎಂದು ಇಟಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟರ್ಕಿಯಲ್ಲಿ ಪಿಸಿಆರ್ ಪರೀಕ್ಷೆಯ ಅಗತ್ಯವಿಲ್ಲ

ಟರ್ಕಿಯಲ್ಲಿ ಪಿಸಿಆರ್ ಪರೀಕ್ಷೆಯ ಅಗತ್ಯವಿಲ್ಲ

"ಸದ್ಯದ ಕೋವಿಡ್ ಪರಿಸ್ಥಿತಿಯನ್ನು ಪರಿಗಣಿಸಿ, ಯಾವುದೇ ವಿದೇಶಿ ವ್ಯಕ್ತಿ ಟರ್ಕಿ ಪ್ರವೇಶಿಸುವ ಮುನ್ನ ಪಿಸಿಆರ್ ಪರೀಕ್ಷೆಯ ನೆಗೆಟಿವ್ ರಿಪೋರ್ಟ್ ಸಲ್ಲಿಸುವ ಅಗತ್ಯವಿಲ್ಲ. ಟರ್ಕಿ ಗೆ ವಿದೇಶಿ ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ,'' ಎಂದು ಟರ್ಕಿ ಸರಕಾರದ ಪ್ರಕಟಣೆ ತಿಳಿಸಿದೆ.

ಗ್ರೀಸ್ ನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ

ಗ್ರೀಸ್ ನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ

"ಕೊರೊನಾ ಪ್ರಕರಣಗಳು ತಗ್ಗಿರುವ ಹಿನ್ನೆಯಲ್ಲಿ ಗ್ರೀಸ್ ದೇಶದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ. ಮಾಸ್ಕ್ ನಿಯಮಗಳನ್ನು ಸರಕಾರ ರದ್ದುಪಡಿಸಿದೆ. ಅಲ್ಲದೇ ಮಾರ್ಚ್‌ನಲ್ಲೇ ಲಸಿಕೆ ಪ್ರಮಾಣಪತ್ರ, ಕೊರೊನಾ ನೆಗೆಟಿವ್ ವರದಿ, ಕೋವಿಡ್‌ನಿಂದ ಗುಣಮುಖರಾದ ಕುರಿತು ದೇಶಕ್ಕೆ ಎಂಟ್ರಿ ನೀಡುವ ಮುನ್ನ ಪ್ರವಾಸಿಗರು ಸಲ್ಲಿಸಬೇಕಾದ ದಾಖಲೆಗಳ ನಿಯಮವನ್ನು ಸಡಿಲಗೊಳಿಸಲಾಗಿದೆ,'' ಎಂದು ಗ್ರೀಸ್ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಪಾನ್‌ನಲ್ಲಿ ಪ್ಯಾಕೇಜ್ ಟೂರ್ ಅವಕಾಶ

ಜಪಾನ್‌ನಲ್ಲಿ ಪ್ಯಾಕೇಜ್ ಟೂರ್ ಅವಕಾಶ

ಕಳೆದ ಎರಡು ವರ್ಷಗಳಿಂದ ಬಿಗಿಯಾದ ಕೋವಿಡ್ ನಿಯಮಗಳನ್ನು ವಿಧಿಸಿದ್ದ ಜಪಾನ್ ಸರಕಾರ, ವಿದೇಶಿ ಪ್ರವಾಸಿಗರಿಗಾಗಿ ಮುಕ್ತವಾಗಿ ಸ್ವಾಗತಿಸಿದೆ. ಆದರೆ ಪ್ಯಾಕೇಜ್ ಟೂರ್ ಗಳಿಗೆ ಮಾತ್ರ ಅನುಮತಿ ನೀಡಿದೆ. ಜೂನ್ 10 ರಿಂದ ನಿಗದಿತ ಸ್ಥಳಗಳಿಗೆ ತೆರಳಲು, ಗೈಡ್ ಗಳೊಂದಿಗೆ ಪ್ಯಾಕೇಜ್ ಟೂರ್ ನಲ್ಲಿ ಬರುವ ಪ್ರವಾಸಿಗರಿಗೆ ಜಪಾನ್ ಅನುಮತಿ ನೀಡಲಿದೆ ಎಂದು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ತಿಳಿಸಿದ್ದಾರೆ.

ಸಿಪ್ರಸ್ ನಲ್ಲಿ ಪ್ರವಾಸಿಗರಿಗೆ ಮುಕ್ತ ಅವಕಾಶ

ಸಿಪ್ರಸ್ ನಲ್ಲಿ ಪ್ರವಾಸಿಗರಿಗೆ ಮುಕ್ತ ಅವಕಾಶ

ಸಿಪ್ರಸ್ ದೇಶ ಕೂಡ ಲಸಿಕೆ ಪ್ರಮಾಣಪತ್ರ, ಕೊರೊನಾ ಪರೀಕ್ಷೆ ವರದಿಯ ದಾಖಲೆಗಳು ಸೇರಿದಂತೆ ವಿಧಿಸಿದ್ದ ಎಲ್ಲ ನಿಯಮಗಳನ್ನು ಸಡಿಲಗೊಳಿಸಿದೆ. ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ವಿದೇಶಿ ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ ಎಂದು ಸಿಪ್ರಸ್ ದೇಶದ ಆಡಳಿತ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+