Sankranti Special Trains: ಮಕರ ಸಂಕ್ರಾಂತಿ ಪ್ರಯುಕ್ತ 150 ವಿಶೇಷ ರೈಲುಗಳ ಸಂಚಾರ: ಮಾರ್ಗಗಳ ವಿವರ ತಿಳಿಯಿರಿ
Sankranti 2026 Special Trains: ಕೆಲವೇ ದಿನಗಳಲ್ಲಿ ಮಕರ ಸಂಕ್ರಾಂತಿ ಹಬ್ಬ ಬರಲಿದೆ. ಈ ಹಿನ್ನೆಲೆ ನಗರ ಪ್ರದೇಶಗಳಿಂದ ತಮ್ಮ ಊರುಗಳ ಕಡೆಗೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ವೇಳೆ ಪ್ರಯಾಣಿಕರ ಡಟ್ಟಣೆ ನಿಯಂತ್ರಣ ಮಾಡಲು ದಕ್ಷಿಣ ಮಧ್ಯ ರೈಲ್ವೆ 150 ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಹಾಗಾದ್ರೆ, ಯಾವ ಮಾರ್ಗದಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮುಂಬರುವ ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ ಪ್ರಯಾಣಿಕರು ಮತ್ತು ವಾಹನಗಳ ಸಂಚಾರ ದಟ್ಟಣೆ ಸಾಮಾನ್ಯವಾಗಿ ಹೆಚ್ಚಳ ಆಗಲಿದೆ. ಈ ವೇಳೆ ದಕ್ಷಿಣ ಮಧ್ಯ ರೈಲ್ವೆ ಹಾಗೂ ತೆಲಂಗಾಣದ ರಸ್ತೆ ಮತ್ತು ಕಟ್ಟಡ ಇಲಾಖೆ ಇದನ್ನು ನಿಯಂತ್ರಣ ಮಾಡಲು ಸಕಲ ಸಿದ್ಧತೆ ನಡೆಸಿದೆ. ಪ್ರಮುಖ ನಗರಗಳನ್ನು ಸಂಪರ್ಕಿಸುವ ವಿಶೇಷ ರೈಲುಗಳು ಮತ್ತು ಹೆದ್ದಾರಿಗಳ ಸಂಚಾರ ಸುಗಮಗೊಳಿಸುವ ಮೂಲಕ ಹಬ್ಬದ ಆಚರಣೆಗೆ ತೆರಳುವ ಜನರಿಗೆ ಆರಾಮದಾಯಕ ಪ್ರಯಾಣ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಅಧಿಕಾರಿಗಳು ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.

150 ವಿಶೇಷ ರೈಲುಗಳ ಸಂಚಾರ: ಸಂಕ್ರಾಂತಿ ಹಬ್ಬದ ವೇಳೆ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಸುಮಾರು 150 ವಿಶೇಷ ರೈಲುಗಳು ಸಂಚಾರ ಮಾಡಲಿವೆ ಎಂದು ದಕ್ಷಿಣ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಶ್ರೀಧರ್ ಹೇಳಿದ್ದಾರೆ. ಈ ರೈಲುಗಳು ಮುಖ್ಯವಾಗಿ ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳ ಭಾಗಗಳಿಗೆ ಸಂಚಾರ ಮಾಡಲಿವೆ. ಅಲ್ಲದೆ, ಉತ್ತರ, ಪೂರ್ವ ಮತ್ತು ದಕ್ಷಿಣ ಭಾರತದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸಲಿವೆ.
ನಿರಂತರ ರೈಲುಗಳ ಸಂಚಾರ: ಹಬ್ಬದ ವೇಳೆ ತಿರುಪತಿ ಮತ್ತು ಶಿರಡಿ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಈ ಹಿನ್ನೆಲೆ ಈ ಭಾಗಗಳ ವಿಶೇಷ ರೈಲುಗಳನ್ನೂ ಒಳಗೊಂಡಂತೆ ಒಟ್ಟು 600ಕ್ಕೂ ಹೆಚ್ಚು ರೈಲುಗಳು ಹಬ್ಬದ ಅವಧಿಯಲ್ಲಿ ನಿರಂತರವಾಗಿ ಸಂಚಾರ ಮಾಡಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜೊತೆಗೆ ಈ ಭಾಗಗಳಲ್ಲಿ ಪ್ರಯಾಣಿಕರ ಸುಗಮ ಪ್ರಯಾಣಕ್ಕಾಗಿ ಇನ್ನೂ ಹಲವು ಯೋಜನೆಗಳನ್ನು ಸಹ ರೂಪಿಸಲಾಗಿದೆ ಎಂದು ವರದಿಯಾಗಿದೆ.
ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಬೃಹತ್ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇದರಿಂದ ಹಬ್ಬದ ಸಮಯದಲ್ಲಿ ಪ್ರಯಾಣಿಕರಿಗೆ ಅಡಚಣೆ ಉಂಟಾಗುವ ಸಾಧ್ಯತೆಯಿದೆ. ಈ ಉದ್ದೇಶದಿಂದ ದಕ್ಷಿಣ ಮಧ್ಯ ರೈಲ್ವೆ ಹಲವು ಪ್ರಮುಖ ರೈಲುಗಳನ್ನು ಶಾಶ್ವತವಾಗಿ ಚಾರ್ಲಪಳ್ಳಿ, ಕಾಚಿಗುಡ ಮತ್ತು ಲಿಂಗಂಪಳ್ಳಿ ನಿಲ್ದಾಣಗಳಿಗೆ ಸ್ಥಳಾಂತರ ಮಾಡಿದೆ. ಕೆಲವು ರೈಲುಗಳನ್ನು ತಾತ್ಕಾಲಿಕವಾಗಿ ಬೇರೆ ನಿಲ್ದಾಣಗಳಿಗೆ ವರ್ಗಾಯಿಸಲಾಗಿದೆ ಎಂದು ಶ್ರೀಧರ್ ತಿಳಿಸಿದ್ದಾರೆ.
ಇನ್ನೂ ಸಂಕ್ರಾಂತಿ ಹಬ್ಬಕ್ಕೆ ತೆರಳುವ ಪ್ರಯಾಣಿಕರಿಗೆ ಪ್ರಮುಖ ಮಾರ್ಗವಾಗಿರುವ ಹೈದರಾಬಾದ್ - ವಿಜಯವಾಡ ಹೆದ್ದಾರಿಯಲ್ಲಿ ದಿನಕ್ಕೆ ಸುಮಾರು ಒಂದು ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸುವ ಸಾಧ್ಯತೆಯಿದೆ ಎಂದು ತೆಲಂಗಾಣದ ರಸ್ತೆ ಮತ್ತು ಕಟ್ಟಡ ಸಚಿವ ಕೊಮಟಿರೆಡ್ಡಿ ವೆಂಕಟ್ ರೆಡ್ಡಿ ಹೇಳಿದ್ದಾರೆ. ಪ್ರಯಾಣಿಕರ ಅನುಕೂಲತೆಯ ದೃಷ್ಟಿಯಿಂದ ಅನುಕೂಲಕರ ಪ್ರಯಾಣ ಖಚಿತಪಡಿಸಿಕೊಳ್ಳುವಂತೆ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಸಹ ಸೂಚನೆ ನೀಡಿದ್ದಾರೆ. ಹೀಗೆ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಸುಗಮ ಪ್ರಯಾಣಕ್ಕೆ ಅನುಕೂಲ ಆಗುವಂತೆ ಸೂಕ್ತ ಕ್ರಮ ವಹಿಸಲಾಗಿದೆ ಎನ್ನಲಾಗುತ್ತಿದೆ.












Click it and Unblock the Notifications