Lok sabha election 2024: ಮೈಸೂರಿನಿಂದ ಈ ಮಾರ್ಗಗಳಿಗೆ ವಿಶೇಷ ರೈಲು-ಸಮಯ, ದಿನಾಂಕಗಳ ಮಾಹಿತಿ

ಮೈಸೂರು, ಮೇ, 04: ಈಗಾಗಲೇ ರಾಜ್ಯದಲ್ಲಿ ಏಪ್ರಿಲ್‌ 26ರಂದು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿದಿದ್ದು, ಇದೀಗ ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆ ತಮ್ಮ ಕ್ಷೇತ್ರಗಳಿಗೆ ಮತದಾನಕ್ಕೆ ತೆರಳುವ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೈಸೂರಿನಿಂದ ವಿಶೇಷ ರೈಲು ಸೇವೆ ಕಲ್ಪಿಸಲು ನೈಋತ್ಯ ರೈಲ್ವೆ ತಿಳಿಸಿದೆ. ಹಾಗಾದರೆ ಯಾವ್ಯಾವ ಮಾರ್ಗಗಳಿಗೆ ಹಾಗೂ ಸಮಯಗಳ ವಿವರವನ್ನು ಇಲ್ಲಿ ತಿಳಿಯಿರಿ.

ತಮ್ಮ ಕ್ಷೇತ್ರಗಳಿಗೆ ಮತದಾನಕ್ಕೆ ಹೋಗುವ ಜನರಿಗೆ ಅನುಕೂಲ ಆಗುವಂತೆ ನೈಋತ್ಯ ರೈಲ್ವೆ ಇಲಾಖೆ ಮೈಸೂರಿನಿಂದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲು ನಿಯೋಜನೆ ಮಾಡಿದೆ. ಈ ವಿಶೇಷ ರೈಲುಗಳು ಮೈಸೂರು-ತಾಳಗುಪ್ಪ, ಮೈಸೂರು-ಕಾರವಾರ, ಕಾರವಾರ-ಮೈಸೂರು ನಡುವೆ ಒಂದು ಟ್ರಿಪ್ ಸಂಚಾರ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Lok sabha election 2024 Special train service for these routes from Mysuru know details

07373 ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲು, ಮೇ 6ರಂದು ಸಂಚಾರ ಆರಂಭಿಸಲಿದೆ. ಮೈಸೂರಿನಿಂದ ರಾತ್ರಿ 11:30ಕ್ಕೆ ಹೊರಟು ಮರುದಿನ (ಮೇ 07) ಬೆಳಗ್ಗೆ 9 ಗಂಟೆಗೆ ಶಿವಮೊಗ್ಗದ ತಾಳಗುಪ್ಪಕ್ಕೆ ತಲುಪಲಿದೆ.

ಇನ್ನು ರೈಲು ಸಂಖ್ಯೆ 07374 ತಾಳಗುಪ್ಪದಿಂದ ಮೇ 7ರಂದು ಸಂಜೆ 6:30ಕ್ಕೆ ಹೊರಟು, ಮರುದಿನ (ಮೇ 08) ಬೆಳಗ್ಗೆ 4 ಗಂಟೆಗೆ ಮೈಸೂರು ತಲುಪಲಿದೆ. ಈ ರೈಲು ಕೆಎಸ್ಆರ್ ಬೆಂಗಳೂರು, ತುಮಕೂರು, ಬೀರೂರು, ಶಿವಮೊಗ್ಗ ನಗರದಲ್ಲಿ ನಿಲುಗಡೆ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಂದೇ ಮೆಟ್ರೋ ಸೇವೆ ಯಾವಾಗಿನಿಂದ ಆರಂಭ?: ಈಗಾಗಲೇ ಐ‍ಷಾರಾಮಿ ವಂದೇ ಭಾರತ್ ರೈಲುಗಳು ದೇಶಾದ್ಯಂತ ಸಂಚಾರಿಸುತ್ತಿವೆ. ಅಲ್ಲದೆ, ಜನಮನ್ನಣೆಯನ್ನು ಪಡೆಯುತ್ತಲೇ ಇವೆ. ಉತ್ತಮ ದರ್ಜೆಯ ಸೌಲಭ್ಯಗಳನ್ನು ಒಳಗೊಂಡಿರುವುದರಿಂದ ಈ ರೈಲಿನಲ್ಲಿ ಪ್ರಯಾಣ ಮಾಡಲು ಹೆಚ್ಚು ಜನರು ಇಷ್ಟಪಡುತ್ತಾರೆ. ಹಾಗೆಯೇ ಇದೀಗ ಇದೇ ಮಾದರಿಯಲ್ಲಿ ವಂದೇ ಮೆಟ್ರೋ ಕೂಡ ಇದೇ ಜುಲೈನಲ್ಲಿ ಸಂಚಾರ ಶುರು ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದು ಏನೆಲ್ಲ ಸೌಲಭ್ಯಗಳನ್ನು ಒಳಗೊಂಡಿರುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ದೇಶದ ಮೊಟ್ಟ ಮೊದಲ ವಂದೇ ಮೆಟ್ರೋ ರೈಲು ಜುಲೈನಲ್ಲಿ ಸಂಚಾರ ಶುರು ಮಾಡಲಿದೆ ಎಂದು ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ. ಇದು ಮೆಟ್ರೋ ಮಾದರಿಯ ಸೀಟುಗಳನ್ನು ಹೊಂದಿರುವ ರೈಲಾಗಿದ್ದು, 250 ಕಿಲೋ ಮೀಟರ್‌ ಅಂತರದಲ್ಲಿರುವ ನಗರಗಳಿಗೂ ಸಂಚಾರ ಮಾಡಲಿದೆ.

"ಈ ಮೆಟ್ರೋ ರೈಲು ಸಂಪೂರ್ಣವಾಗಿ ಹವಾನಿಯಂತ್ರಿತ ಆಗಿದ್ದು, ಗರಿಷ್ಠ 130 ಕಿಲೋ ಮೀಟರ್‌ ವೇಗದಲ್ಲಿ ಸಂಚಾರಚ ಮಾಡಲಿದೆ. ಬೆಂಚ್‌ ಮಾದರಿಯ ಸೀಟಿಂಗ್‌ ಹೊಂದಿರುವ ಇದು ಸ್ವಲ್ಪ ದೂರದ ನಗರಗಳ ನಡುವೆ ಸಂಚರಿಸಲು ತುಂಬಾ ಸಹಾಯಕವಾಗಲಿದೆ. ಮುಂದಿನ 2 ತಿಂಗಳ ಕಾಲ ವಂದೇ ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರ ನಡೆಯಲಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ ರೈಲಿನ ಬೋಗೊಗಳು ಪಂಜಾಬ್‌ನ ಕಪುರ್ತಲ ರೈಲ್ವೇ ಕೋಚ್‌ ಕಾರ್ಖಾನೆಯಲ್ಲಿ ನಿರ್ಮಾಣ ಆಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದರ ವಿಶೇಷತೆಗಳನ್ನು ನೋಡುವುದಾದರೆ, ಇದು ಹವಾನಿಯಂತ್ರಿತ ವ್ಯವಸ್ಥೆ ಹೊಂದಿರಲಿದ್ದು, ಪ್ರತೀ ಬೋಗಿಯಲ್ಲಿ ಬೆಂಕಿಯನ್ನು ಗುರುತಿಸುವ ಸೆನ್ಸರ್‌ಗಳಿವೆ. ಸ್ವಯಂಚಾಲಿತ ಬಾಗಿಲುಗಳು, ಗಾಲಿ ಕುರ್ಚಿ ವ್ಯವಸ್ಥೆ, ಪ್ರತೀ ರೈಲಿನಲ್ಲಿ ಕನಿಷ್ಠ 12 ಬೋಗಿಗಳು, ಗರಿಷ್ಠ 16 ಇರಲಿವೆ ಎಂದು ಎನ್ನುವ ಮಾಹಿತಿ ಲಭ್ಯವಾಗಿದೆ.

{documet1}

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+