Lakshadweep Travel 2026: ಈ 2 ಹೊಸ ನಿಯಮಗಳಿಂದ ಈಗ ಲಕ್ಷದ್ವೀಪ ಪ್ರವಾಸ ಇನ್ನಷ್ಟು ಸುಲಭ

ಭಾರತದ ಅತ್ಯಂತ ಸುಂದರವಾದ ದ್ವೀಪದ ಸಮೂಹಗಳಲ್ಲಿ ಒಂದಾದ ಲಕ್ಷದ್ವೀಪಕ್ಕೆ ಈಗ ಪ್ರವಾಸ ಮಾಡುವುದು ಇನ್ನಷ್ಟು ಸುಲಭವಾಗಿದೆ. ಯಾಕೆಂದರೆ ಇತ್ತೀಚೆಗೆ ಕೇಂದ್ರಾಡಳಿತ ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ, ಪ್ರವಾಸಿಗರು ದ್ವೀಪಗಳಿಗೆ ಭೇಟಿ ನೀಡಲು ಇನ್ನು ಮುಂದೆ ಸ್ಥಳೀಯ ಸ್ಪಾನ್ಸರ್ ಅಥವಾ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ (PCC) ಅಗತ್ಯವಿಲ್ಲ. ಏಪ್ರಿಲ್ 29, 2026ರಿಂದ ಈ ನಿಯಮ ಜಾರಿಯಾಗಿದ್ದು ಮತ್ತು ಇನ್ನುಮುಂದೆ ಲಕ್ಷದ್ವೀಪಕ್ಕೆ ಪ್ರವಾಸ ಮಾಡುವ ಪ್ರಕ್ರಿಯೆ ಬಹಳ ಸುಲಭವಾಗಿದೆ.

ಈ ಮೊದಲು ಲಕ್ಷದ್ವೀಪಕ್ಕೆ ಬೇಟಿ ನೀಡಲು ಸ್ಥಳೀಯ ವ್ಯಕ್ತಿಯ ಅಥವಾ ಏಜೆನ್ಸಿಯ ಸ್ಪಾನ್ಸರ್ ಅಗತ್ಯವಿದ್ದು, ಜೊತೆಗೆ ತಮ್ಮ ರಾಜ್ಯದಿಂದ ಪೋಲಿಸ್ ಇಲಾಖೆಯಿಂದ PCC(Police Clearance Certificate) ಪಡೆಯುವುದು ಕಡ್ಡಾಯವಾಗಿತ್ತು. ಈಗ ಈ ಎರಡೂ ನಿಯಮಗಳನ್ನು ಸರ್ಕಾರ ರದ್ದುಗೊಳಿಸಿದೆ. ಇನ್ನು ಮುಂದೆ ಭದ್ರತಾ ಪರಿಶೀಲನೆಯನ್ನು ಲಕ್ಷದ್ವೀಪ ಆಡಳಿತವೇ ನೇರವಾಗಿ ನಡೆಸಲಿದೆ.

Lakshadweep Travel 2026

ಹೊಸ ನಿಯಮಗಳ ಅನ್ವಯ ಪ್ರವೇಶ ಪ್ರಕ್ರಿಯೆ ಸುಗಮಗೊಂಡಿದ್ದರೂ, ಲಕ್ಷದ್ವೀಪಕ್ಕೆ ಭೇಟಿ ನೀಡಲು ಇ-ಪರ್ಮಿಟ್ (e-Permit) ಪಡೆಯುವುದು ಇಂದಿಗೂ ಕಡ್ಡಾಯವಾಗಿದೆ. ಪ್ರವಾಸಿಗರು ಲಕ್ಷದ್ವೀಪ ಆಡಳಿತದ ಅಧಿಕೃತ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಕೈಲಾಸ ಮಾನಸ ಸರೋವರ ಯಾತ್ರೆ 2026: ನೋಂದಣಿ ಆರಂಭ, ಭಕ್ತರಿಗೆ ಸುವರ್ಣಾವಕಾಶ
ಕೈಲಾಸ ಮಾನಸ ಸರೋವರ ಯಾತ್ರೆ 2026: ನೋಂದಣಿ ಆರಂಭ, ಭಕ್ತರಿಗೆ ಸುವರ್ಣಾವಕಾಶ

ಲಕ್ಷದ್ವೀಪ ಪ್ರವಾಸಕ್ಕೆ ಇ-ಪರ್ಮಿಟ್ ಕಡ್ಡಾಯ:

ಹೊಸ ನಿಯಮಗಳ ಅನ್ವಯ ಪ್ರವೇಶ ಪ್ರಕ್ರಿಯೆ ಸುಗಮಗೊಂಡಿದ್ದರೂ, ಲಕ್ಷದ್ವೀಪಕ್ಕೆ ಭೇಟಿ ನೀಡಲು ಇ-ಪರ್ಮಿಟ್ ಪಡೆಯುವುದು ಇಂದಿಗೂ ಕಡ್ಡಾಯವಾಗಿಸದೆ. ಪ್ರವಾಸಿಗರು ಲಕ್ಷದ್ವೀಪ ಆಡಳಿತದ ಅಧಿಕೃತ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

ಮಾನ್ಯ ಗುರುತಿನ ಚೀಟಿ: ಆಧಾರ್ ಕಾರ್ಡ, ಮತದಾರರ ಗುರುತಿನ ಚೀಟಿ ಮತ್ತು ಪಾಸ್‌ಪೋರ್ಟ್
ಫೋಟೋ: ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಡಿಜಿಟಲ್ ಫೋಟೋ.
ಪ್ರವಾಸದ ವಿವರ: ಪ್ರಯಾಣದ ನಿಖರ ದಿನಾಂಕ ಮತ್ತು ನೀವು ಭೇಟಿ ನೀಡಲು ಇಚ್ಛಿಸುವ ದ್ವೀಪಗಳ ಪಟ್ಟಿ.
ಶುಲ್ಕ ಪಾವತಿ: ನಿಗದಿಪಡಿಸಿದ ಪರ್ಮಿಟ್ ಶುಲ್ಕ ಮತ್ತು 'ಗ್ರೀನ್ ಟ್ಯಾಕ್ಸ್' (ಪರಿಸರ ತೆರಿಗೆ) ಅನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.

Lakshadweep Travel 2026

ಅರ್ಜಿ ಸಲ್ಲಿಕೆ: ಅರ್ಜಿಯನ್ನು ಕನಿಷ್ಠ 14 ದಿನಗಳ ಮುಂಚಿತವಾಗಿ ಸಲ್ಲಿಸಬೇಕು.

ಪ್ರವಾಸಿಗರಿಗೆ ತೆರೆಯಲ್ಪಟ್ಟ ದ್ವೀಪಗಳು:

ಲಕ್ಷದ್ವೀಪದಲ್ಲಿ ಒಟ್ಟು 36 ದ್ವೀಪಗಳಿದ್ದರೂ, ಪರಿಸರ ಸಂರಕ್ಷಣೆ ಮತ್ತು ಭದ್ರತೆಯ ದೃಷ್ಟಿಯಿಂದ ಆಯ್ದ ದ್ವೀಪಗಳಿಗೆ ಮಾತ್ರ ಪ್ರವಾಸಿಗರಿಗೆ ಪ್ರವೇಶ ನೀಡಲಾಗಿದೆ. ಅವುಗಳಲ್ಲಿ ಪ್ರಮುಖವಾದವು ಈ ಕೆಳಗಿನಂತಿವೆ:

ಅಗತ್ತಿ ದ್ವೀಪ: ಇದು ಲಕ್ಷದ್ವೀಪದ ಏಕೈಕ ವಿಮಾನ ನಿಲ್ದಾಣವನ್ನು ಹೊಂದಿರುವ ದ್ವೀಪವಾಗಿದ್ದು, ಪ್ರವಾಸಿಗರ ಮುಖ್ಯ ಪ್ರವೇಶ ದ್ವಾರವಾಗಿದೆ.

ಕವಾರಟ್ಟಿ: ಲಕ್ಷದ್ವೀಪದ ಆಡಳಿತ ರಾಜಧಾನಿ, ಇಲ್ಲಿನ ಮಸೀದಿಗಳು, ಜಲಚರ ಪ್ರದರ್ಶನಾಲಯ, ಮತ್ತು ಜಲ ಕ್ರೀಡೆಗಳು ಬಹಳ ಪ್ರಸಿದ್ಧ.

ಬಂಗಾರಂ ದ್ವೀಪ: ಐಷಾರಾಮಿ ಪ್ರವಾಸಕ್ಕೆ ಪ್ರಸಿದ್ಧ ಮತ್ತು ಅಂತರಾಷ್ಟ್ರೀಯ ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ.

ಬೇಸಿಗೆಯಲ್ಲಿ ಕಡಿಮೆ ಖರ್ಚಿನಲ್ಲಿ ಪ್ರವಾಸ ಬೇಕಾ? ಈ ಗಿರಿಧಾಮಗಳನ್ನು ನೋಡಿ
ಬೇಸಿಗೆಯಲ್ಲಿ ಕಡಿಮೆ ಖರ್ಚಿನಲ್ಲಿ ಪ್ರವಾಸ ಬೇಕಾ? ಈ ಗಿರಿಧಾಮಗಳನ್ನು ನೋಡಿ

ಪ್ರವಾಸದ ನಿಯಮಗಳು

ಲಕ್ಷದ್ವೀಪ ಹೊಸ ಮಾರ್ಗಸೂಚಿಗಳ ಪ್ರಕಾರ, ಅಗತ್ತಿ ಮತ್ತು ಕವಾರಟ್ಟಿ ಮೂಲಕ ಮಾತ್ರ ಹೋಗಲು ಅನುಮತಿ ಇದೆ. ಗರಿಷ್ಠ 12 ಗಂಟೆಗಳವರೆಗೆ ಮಾತ್ರ ಟ್ರಾನ್ಸಿಟ್ ಅವಕಾಶ. ಪರ್ಮಿಟ್ ಪಡೆದ ನಂತರವೇ ವಿಮಾನ ಟಿಕೆಟ್ ಬುಕ್ ಮಾಡುವುದು ಉತ್ತಮ ಎಂದು ಸೂಚಿಸಲಾಗಿದೆ.

ಪ್ರವಾಸ ವೆಚ್ಚ ಮತ್ತು ಉತ್ತಮ ಸಮಯ

ಲಕ್ಷದ್ವೀಪಕ್ಕೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಉತ್ತಮ ಸಮಯ. ಈ ಅವಧಿಯಲ್ಲಿ ಅಲ್ಲಿನ ಹವಾಮಾನ ಅನುಕೂಲಕರವಾಗಿರುತ್ತದೆ.

ಅಂದಾಜು ವೆಚ್ಚ:

3ರಿಂದ 6 ದಿನಗಳ ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ ಸುಮಾರು 25,000 ರಿಂದ 60,000.

ಗಮನಿಸಬೇಕಾದ ವಿಷಯಗಳು:

ಮುಂಚಿತವಾಗಿ ಬುಕ್ಕಿಂಗ್ ಮಾಡುವುದು ಉತ್ತಮ
ದ್ವೀಪಗಳಲ್ಲಿ ಇಂಟರ್ನೆಟ್ ಸಂಪರ್ಕ ಕೊಡ ಮಿತಿಯಲ್ಲಿರಬಹುದು.
ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು

ಹೊಸ ನಿಯಮಗಳ ಜಾರಿಯಿಂದ ಲಕ್ಷದ್ವೀಪ ಪ್ರವಾಸವು ಈಗ ಇನ್ನಷ್ಟು ಸುಲಭವಾಗಿದ್ದು, ಕಡಿಮೆ ಕಷ್ಟದಲ್ಲಿ ಈ ಸ್ವರ್ಗಸಮಾನ ದ್ವೀಪಗಳ ಸೌಂದರ್ಯವನ್ನು ಅನುಭವಿಸಲು ಇದು ಉತ್ತಮ ಅವಕಾಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+