KSRTC Package Tour: ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ವಾರಾಂತ್ಯ ಪ್ಯಾಕೇಜ್ ಟೂರ್: ಇಲ್ಲಿದೆ ಸ್ಥಳ, ಪ್ರಯಾಣ ದರಗಳ ವಿವರ
KSRTC Package Tour: ರಾಜ್ಯದ ಜೀನವಾಡಿ ಸಾರಿಗೆ ಎನಿಸಿಕೊಂಡಿರುವ ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಮಹತ್ವದ ಯೋಜನೆಗಳನ್ನು ಘೋಷಣೆ ಮಾಡುತ್ತಲಿರುತ್ತದೆ. ಹಾಗೆಯೇ ವಾರಾಂತ್ಯದ ದಿನಗಳಲ್ಲಿ ಬೆಂಗಳೂರಿನಿಂದ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಪ್ಯಾಕೇಟ್ ಟೂರ್ ಅನ್ನು ಘೋಷಣೆ ಮಾಡಿದೆ. ಹಾಗಾದ್ರೆ, ಮಾರ್ಗಗಳು, ದರಪಟ್ಟಿ ಸೇರಿದಂತೆ ಇನ್ನಿತರೆ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ಯಾಕೇಜ್ ಟೂರ್ ಸೇವೆಗಳನ್ನು ವಾರಾಂತ್ಯದ ದಿನಗಳಲ್ಲಿ (ಶನಿವಾರ ಹಾಗೂ ಭಾನುವಾರ) ರಾಜಹಂಸ ಮತ್ತುಅಶ್ವಮೇಧ ಕ್ಲಾಸಿಕ್ ಸಾರಿಗೆಗಳೊಂದಿಗೆ ಕಾರ್ಯಾಚರಣೆ ಮಾಡಲಾಗುತ್ತಿದೆ. (ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನದ/ರಾತ್ರಿಊಟವನ್ನು ಹೊರತುಪಡಿಸಿ) ಸದರಿ ಪ್ಯಾಕೇಜ್ ಟೂರ್‌ಗೆ ಸಾರ್ವಜನಿಕ ಪ್ರಯಾಣಿಕರಿಂದ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಪ್ಯಾಕೇಜ್ ಟೂರ್‌ಗಳ ವಿವರ ಮತ್ತು ಪ್ರಯಾಣ ದರಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಕೆಎಸ್‌ಆರ್‌ಟಿಸಿ ರಾಜಹಂಸದಲ್ಲಿ ಬೆಂಗಳೂರು - ಗಗನಚುಕ್ಕಿ ಟೂರ್
* ವೀಕ್ಷಣೆ ಸ್ಥಳಗಳು: ಬೆಂಗಳೂರು - ಸೋಮನಾಥಪುರ - ತಲಕಾಡು - ಮಧ್ಯರಂಗ - ಭರಚುಕ್ಕಿ- ಗಗನಚುಕ್ಕಿ
* ದೂರ: 340 ಕಿಲೋ ಮೀಟರ್
* ಪ್ರಯಾಣ ದರ: ವಯಸ್ಕರಿಗೆ 750 ರೂಪಾಯಿ ಇದ್ದರೆ, ಮಕ್ಕಳಿಗೆ 600 ರೂಪಾಯಿ ಇದೆ.
* ಈ ಪ್ಯಾಕೇಜ್ ಟೂರ್ ಅನ್ನು 5-07-2025ರಿಂದ ಪರಿಚಯಿಸಲಾಗಿದೆ. ಈಗಲೂ ಕೂಡ ಮುಂದುವರೆದಿದ್ದು ಆಸಕ್ತರು ಇದನ್ನು ಸದುಪಯೋಗಪಡಿಸಿಕೊಳ್ಳಬಹುದು.
ಕೆಎಸ್‌ಆರ್‌ಟಿಸಿ ಅಶ್ವಮೇಧ ಕ್ಲಾಸಿಕ್‌ನಲ್ಲಿ ಬೆಂಗಳೂರು - ಗಗನಚುಕ್ಕಿ ಟೂರ್
* ವೀಕ್ಷಣೆ ಸ್ಥಳಗಳು: ಬೆಂಗಳೂರು - ಸೋಮನಾಥಪುರ - ತಲಕಾಡು - ಮಧ್ಯರಂಗ - ಭರಚುಕ್ಕಿ- ಗಗನಚುಕ್ಕಿ
* ದೂರ: 340 ಕಿಲೋ ಮೀಟರ್
* ಪ್ರಯಾಣ ದರ: ವಯಸ್ಕರಿಗೆ 600 ರೂಪಾಯಿ ಇದ್ದರೆ, ಮಕ್ಕಳಿಗೆ 450 ರೂಪಾಯಿ ಇದೆ.
* ಈ ಪ್ಯಾಕೇಜ್ ಟೂರ್ ಅನ್ನು 20-07-2024ರಿಂದ ಪರಿಚಯಿಸಲಾಗಿದೆ. ಈಗಲೂ ಕೂಡ ಮುಂದುವರೆದಿದೆ.
ಕೆಎಸ್‌ಆರ್‌ಟಿಸಿ ಅಶ್ವಮೇಧ ಕ್ಲಾಸಿಕ್‌ನಲ್ಲಿ ಬೆಂಗಳೂರು - ಚಿಕ್ಕತಿರುಪತಿ ಟೂರ್
* ವೀಕ್ಷಣೆ ಸ್ಥಳಗಳು: ಬೆಂಗಳೂರು - ಚಿಕ್ಕತಿರುಪತಿ - ಕೋಟಿಲಿಂಗೇಶ್ವರ - ಬಂಗಾರುತಿರುಪತಿ - ಆವಣಿ - ಮುಳಬಾಗಿಲು - ಕುರುಡುಮಲೆ - ಕೋಲಾರ
* ದೂರ: 270 ಕಿಲೋ ಮೀಟರ್
* ಪ್ರಯಾಣ ದರ: ವಯಸ್ಕರಿಗೆ 600 ರೂಪಾಯಿ ಇದ್ದರೆ, ಮಕ್ಕಳಿಗೆ 450 ರೂಪಾಯಿ ಇದೆ.
* ಈ ಪ್ಯಾಕೇಜ್ ಟೂರ್ ಅನ್ನು 28-06-2025ರಿಂದ ಪರಿಚಯಿಸಲಾಗಿದೆ. ಈಗಲೂ ಕೂಡ ಮುಂದುವರೆದಿದೆ.
ಕೆಎಸ್‌ಆರ್‌ಟಿಸಿ ಅಶ್ವಮೇಧ ಕ್ಲಾಸಿಕ್‌ನಲ್ಲಿ ಬೆಂಗಳೂರು - ಮೇಲುಕೋಟೆ ಟೂರ್
* ವೀಕ್ಷಣೆ ಸ್ಥಳಗಳು: ಬೆಂಗಳೂರು - ಶ್ರೀರಂಗಪಟ್ಟಣ - ಕಲ್ಲಹಳ್ಳಿ - ಮೇಲುಕೋಟೆ
* ದೂರ: 350 ಕಿಲೋ ಮೀಟರ್
* ಪ್ರಯಾಣ ದರ: ವಯಸ್ಕರಿಗೆ 670 ರೂಪಾಯಿ ಇದ್ದರೆ, ಮಕ್ಕಳಿಗೆ 500 ರೂಪಾಯಿ ಇದೆ. ಈ ಪ್ಯಾಕೇಜ್ ಟೂರ್ ಅನ್ನು 31-05-2025ರಿಂದ ಪರಿಚಯಿಸಲಾಗಿದೆ. ಈಗಲೂ ಕೂಡ ಮುಂದುವರೆದಿದ್ದು, ಆಸಕ್ತರು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಟಿಕೆಟ್ ಬುಕ್ ಮಾಡುವ ವಿಧಾನ: ಪ್ರಯಾಣಿಕರು ಪ್ಯಾಕೇಜ್ ಟೂರ್ ಸಾರಿಗೆ ಸೌಲಭ್ಯಕ್ಕಾಗಿ ಟಿಕೆಟ್ ಪಡೆಯಲು ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್ www.ksrtc.in&www.ksrtc.karnataka.gov.inಗೆ ಭೇಟಿ ನೀಡಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ 080-26252625/ 7760990100 /7760990560 /7760990287 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು ಎಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.












Click it and Unblock the Notifications