KSRTC Electric bus: ಇಂದಿನಿಂದ ಶಿವಮೊಗ್ಗ-ಬೆಂಗಳೂರು ಮಾರ್ಗವಾಗಿ ಓಡಲಿವೆ 5 ಎಲೆಕ್ಟ್ರಿಕ್‌ ಬಸ್‌ಗಳು, ಮಾಹಿತಿ

ಶಿವಮೊಗ್ಗ, ಮೇ, 30: ಕೆಎಸ್‌ಆರ್‌ಟಿಸಿಯ ನೂತನ ಎಲೆಕ್ಟ್ರಿಕ್‌ ಇವಿ-ಪವರ್ ಪ್ಲಸ್ ಬಸ್‌ಗಳು ಈಗಾಗಲೇ ರಾಜ್ಯದ ಹಲವೆಡೆ ಸಂಚಾರ ಆರಂಭಿಸಿವೆ. ಇತ್ತೀಚೆಗಷ್ಟೇ ಕಾಫಿನಾಡು ಚಿಕ್ಕಮಗಳೂರು ಮಾರ್ಗವಾಗಿಯೂ ಸಹ ಈ ಬಸ್‌ ಅನ್ನು ಬಿಡಲಾಗಿದೆ. ಅದೇ ರೀತಿಯಾಗಿ ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಸಿದ್ಧಿ ಪಡೆದಿರುವ ಶಿವಮೊಗ್ಗಕ್ಕೆ ಸಹ ಇಂದಿನಿಂದ ಒಟ್ಟು 5 ಇವಿ-ಪವರ್ ಪ್ಲಸ್ ಬಸ್‌ ಸಂಚಾರ ಮಾಡಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಮೇ 27ರಂದು ಪ್ರಾಯೋಗಿಕವಾಗಿ ಶಿವಮೊಗ್ಗ-ಬೆಂಗಳೂರು ನಡುವೆ ಒಂದು ಇವಿ-ಪವರ್ ಪ್ಲಸ್ ಬಸ್ ಸಂಚಾರವನ್ನು ಆರಂಭಿಸಲಾಗಿತ್ತು. ಮತ್ತೇ ಇದೀಗ ಇದೇ ಮಾರ್ಗವಾಗಿ ಮೇ 30 ಮತ್ತು 31ರಿಂದ ಇನ್ನು 4 ಬಸ್‌ಗಳು ಸಂಚಾರ ಮಾಡಲಿವೆ ಎಂದು ಈ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಸಿಹಿಸುದ್ದಿಯನ್ನು ನೀಡಿದೆ. ಹಾಗಾದರೆ ಈ ಮಾರ್ಗದಲ್ಲಿ ಸಂಚಾರ ಪ್ರಾರಂಭಿಸಲು ಮೊಡಲು ದರ ಮತ್ತು ವೇಳಾಪಟ್ಟಿಯ ವಿವರವನ್ನು ಇಲ್ಲಿ ತಿಳಿಯಿರಿ.

5 KSRTC Electric buses Run between Shivamogga and Bengaluru from today

ಶಿವಮೊಗ್ಗ ವಿಭಾಗಕ್ಕೆ 10 ಇ-ಬಸ್ಸುಗಳ ಹಂಚಿಕೆ

ಈ ಬಗ್ಗೆ ಶಿವಮೊಗ್ಗ ವಿಭಾಗೀಯ ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿಗಳು ಮಾಹಿತಿ ನೀಡಿದ್ದು, ಕೆಎಸ್‌ಆರ್‌ಟಿಸಿಯಿಂದ ಸುಸರ್ಜಿತವಾದ ನೂತನ ಇವಿ-ಪವರ್ ಪ್ಲಸ್ ಹವಾ ನಿಯಂತ್ರಿತ 10 ಇ-ಬಸ್ಸುಗಳನ್ನು ಶಿವಮೊಗ್ಗ ವಿಭಾಗಕ್ಕೆ ಹಂಚಿಕೆ ಮಾಡಲಾಗಿದೆ. ಈಗಾಗಲೇ ಮೇ 27ರಂದು ಒಂದು ಬಸ್ ಅನ್ನು ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಸಂಚಾರವನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಇನ್ನು ಮೇ 30 ಮತ್ತು 31ರಂದು ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಇನ್ನು ನಾಲ್ಕು ಇವಿ ಪವರ್ ಪ್ಲಸ್ ಹವಾ ನಿಯಂತ್ರಿತ ಇ-ಬಸ್ಸುಗಳ ಸಂಚಾರ ಮಾಡಲಿವೆ. ಪ್ರಯಾಣಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇನ್ನು ಶಿವಮೊಗ್ಗ-ಬೆಂಗಳೂರು ನಡುವೆ ಪ್ರಯಾಣ ಮಾಡುವವರಿಗೆ 600 ರೂಪಾಯಿ ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಟಿಕೆಟ್‌ ಬಕ್‌ ಮಾಡುವುದು ಹೇಗೆ?

ಹಾಗೆಯೆ ಪ್ರಯಾಣಿಕರು ಇವಿ-ಪವರ್ ಪ್ಲಸ್ ಬಸ್‌ಗಳಲ್ಲಿ ಶಿವಮೊಗ್ಗ-ಬೆಂಗಳೂರು, ಬೆಂಗಳೂರು-ಶಿವಮೊಗ್ಗಕ್ಕೆ ಟಿಕೆಟ್‌ ಬುಕ್‌ ಮಾಡಬೇಕೆಂದರೆ http://awatar.ksrtc.in ಜಾಲತಾಣಕ್ಕೆ ಭೇಟಿ ನೀಡಬೇಕಾಗುತ್ತದೆ. ಇಲ್ಲಿ ನಿಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದೆ. ಅಥವಾ ಅಧಿಕೃತ ಕೆಎಸ್‌ಆರ್‌ಟಿಸಿ ಟಿಕೆಟ್‌ ಬುಕ್ಕಿಂಗ್ ಸೆಂಟರ್‌ಗೆ ಹೋಗಿ ಟಿಕೆಟ್ ಕಾಯ್ದಿರಿಸಲು ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.

ಬಸ್‌ಗಳ ಆಗಮನ, ನಿರ್ಗಮನ ಸಮಯದ ವಿವರ

1. 113ಬಿಎ- ನಂಬರ್‌ನ ಬಸ್‌ ಶಿವಮೊಗ್ಗದಿಂದ ಮಧ್ಯಾಹ್ನ 12 ಗಂಟೆಗೆ ಹೊರಟು, ಬೆಂಗಳೂರು ಸಂಜೆ 6 ಗಂಟೆಗೆ ತಲುಪಲಿದ್ದು, ಬೆಂಗಳೂರಿನಿಂದ ರಾತ್ರಿ 11 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 5ಕ್ಕೆ ಶಿವಮೊಗ್ಗ ತಲುಪಲಿದೆ.

2. 114ಬಿಎ- ನಂಬರ್‌ನ ಬಸ್‌ ನಾಳೆ ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗದಿಂದ ಹೊರಟು ಬೆಂಗಳೂರು ರಾತ್ರಿ 7ಕ್ಕೆ ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 11.40ಕ್ಕೆ ಹೊರಟು, ಶಿವಮೊಗ್ಗವನ್ನು ಮರುದಿನ ಬೆಳಿಗ್ಗೆ 5.40ಕ್ಕೆ ತಲುಪಲಿದೆ. 108ಬಿಎ - ಈ ಅನುಸೂಚಿತ ಸಂಖ್ಯೆಯ ಬಸ್ ರಾತ್ರಿ 10.30ಕ್ಕೆ ನಾಳೆ ಶಿವಮೊಗ್ಗದಿಂದ ಹೊರಟು, ಮರುದಿನ ಮುಂಜಾನೆ 4.30ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 12 ಗಂಟೆಗೆ ಹೊರತು, ಸಂಜೆ 6 ಗಂಟೆಗೆ ಶಿವಮೊಗ್ಗ ತಲುಪಲಿದೆ.

3. 104ಬಿಎ - ನಂಬರ್‌ನ ಬಸ್‌ ರಾತ್ರಿ 11:30ಕ್ಕೆ ಹೊರಟು, ಮರುರಿನ ಬೆಳಗ್ಗೆ 5:30ಕ್ಕೆ ಬೆಂಗಳೂರು ತಲುಪಲಿದೆ. ಇನ್ನು ಬೆಂಗಳೂರಿನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು, ಸಂಜೆ 7ಕ್ಕೆ ಶಿವಮೊಗ್ಗ ತಲುಪಲಿದೆ.

4. 95ಎಬಿ ನಂಬರ್‌ನ ಬಸ್‌ ಮೇ 31ರಂದು ಶಿವಮೊಗ್ಗದಿಂದ ಸಂಜೆ 4:45ಕ್ಕೆ ಹೊರಡಲಿದ್ದು, ರಾತ್ರಿ 10:45ಕ್ಕೆ ಬೆಂಗಳೂರು ತಲುಪಲಿದೆ. ಮತ್ತೇ ಬೆಂಗಳೂರಿನಿಂದ 2:45ಕ್ಕೆ ಹೊರಟು, ರಾತ್ರಿ 8:45ಕ್ಕೆ ಶಿವಮೊಗ್ಗ ತಲುಪಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಇವಿ-ಪವರ್ ಪ್ಲಸ್ ಎಲೆಕ್ಟ್ರಿಕ್‌ ಬಸ್‌ ದಿನದಿಂದ ದಿನಕ್ಕೆ ಹೆಚ್ಚು ಜನಮನ್ನಣೆಯನ್ನು ಪಡೆಯುತ್ತಲೇ ಬಂದಿದೆ. ಹಾಗೆಯೆ ಪ್ರಯಾಣಿಕರು ಕೂಡ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಬಸ್‌ಗಳಿಗಿಂತ ಈ ಬಸ್‌ನಲ್ಲೇ ಹೆಚ್ಚಾಗಿ ಪ್ರಯಾಣ ಮಾಡಲು ಇಷ್ಟಪಡುತ್ತಿದ್ದಾರೆ. ಹೀಗೆ ಪ್ರಯಾಣಿಕರ ಒಪ್ಪಿಗೆಯ ಮೇರೆಗೆ ಈ ಬಸ್‌ಗಳನ್ನು ಬೇರೆ ಮಾರ್ಗಗಳಿಗೂ ವಿಸ್ತರಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+