Karnataka election 2023: ಟ್ರೈನ್‌ ಟಿಕೆಟ್‌ ಕೊರತೆ: ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಪಾಡು ಅಧೋಗತಿ

ಬೆಂಗಳೂರು, ಮೇ, 09: ರಾಜ್ಯ ವಿಧಾನಸಭೆ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದ್ದು, ಈ ಹಿನ್ನೆಲೆ ನಗರ ಪ್ರದೇಶಗಳಿಂದ ತಮ್ಮ ಊರುಗಳಿಗೆ ಹೊರಡಲು ಮತದಾರರು ತುದಿಗಾಲಲ್ಲಿ ನಿಂತಿದ್ದಾರೆ. ಅದೇ ರೀತಿ ನಾಳೆ ಮತನಾದ ಮಾಡಲು ಬೆಂಗಳೂರಿನಲ್ಲಿ ನೆಲೆಸಿರುವ ಸಾವಿರಾರು ಜನರು ತಮ್ಮ ಊರಿಗೆ ಹೋಗಲು ನಾಡಪ್ರಭು ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಕಿಕ್ಕಿರಿದು ಸೇರಿದ್ದಾರೆ. ಅಲ್ಲದೆ ಮತ್ತೊಂದೆಡೆ ಟಿಕೆಟ್‌ ಸಿಗದೇ ರೈಲ್ವೆ ನಿಲ್ದಾಣದಲ್ಲಿ ಪರದಾಡುವಂತಹ ಪರಿಸ್ಥಿತಿಯೂ ನಿರ್ಮಾಣವಾಗಿದೆ.

ನಗರ ಪ್ರದೇಶಗಳಿಂದ ತಮ್ಮ ಊರುಗಳಿಗೆ ಆಗಮಿಸುವ ಮತದಾರರಿಗೆ ಈಗಾಗಲೇ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟಾರೆಯಾಗಿ ಚುನಾವಣೆ ಕಾರ್ಯಕ್ಕಾಗಿ 10,000ಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಆದ್ದರಿಂದ ಬೆಂಗಳೂರಿನಲ್ಲಿ ಬಸ್‌ಗಳ ಅಭಾವ ಎದುರಾಗಿದ್ದು, ಪ್ರಯಾಣಿಕರು ಪರದಾಡುವಂತೆ ಆಗಿದೆ.

Karnataka election 2023: Train tickets Shortage: Passengers worried in Bengalurus Majestic

ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳಲು ಜನರು ಕೆಂಪೇಗೌಡ ಬಸ್‌ ನಿಲ್ದಾಣದತ್ತ ಆಗಮಿಸಿದ್ದರು. ಮತ್ತೊಂದೆಡೆ ಇದೀಗ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಜನರು ತಮ್ಮ ಊರುಗಳಿಗೆ ಹೋಗಲು ರೈಲು ಟಿಕೆಟ್‌ ಬುಕ್‌ ಮಾಡಲು ಮುಂದಾಗಿದ್ದಾರೆ. ಆದರೆ ಇಲ್ಲಿಯೂ ಟಿಕೆಟ್‌ ಸಿಗದೆ ಪ್ರಯಾಣಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ರೈಲುಗಳು ಇದ್ದರೂ ಕೂಡ ಜನರಿಗೆ ಟಿಕೆಟ್‌ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಚುನಾವಣೆ ಹಿನ್ನೆಲೆ ಒಂದು ವಾರದ ಮುಂಚೆಯೇ ರೈಲು ಟಿಕೆಟ್‌ ಬುಕ್‌ ಮಾಡಿರುವವರು ಇರುತ್ತಾರೆ. ಆದರೆ ಇಂದು ದಿಢೀರ್‌ ಊರಿಗೆ ಹೊರಡಲು ಸಿದ್ಧರಾದವರು ಮಾತ್ರ ಟಿಕೆಟ್‌ ಸಿಗದೇ ರೈಲ್ವೆ ನಿಲ್ದಾಣದಲ್ಲಿಯೇ ಬೀಡುಬಿಟ್ಟಿದ್ದಾರೆ. ವಿಧಾನಸಭೆ ಚುನಾವಣೆಯ ಪರಿಣಾಮ ಹೀಗೆ ಜನರ ಮೇಲೆ ಬೀರಿದೆ.

ಚುನಾವಣೆ ನಿಮಿತ್ತ ಹೆಚ್ಚುವರಿಯಾಗಿ ಸಾರಿಗೆ ವ್ಯವಸ್ಥೆ, ರೈಲುಗಳನ್ನು ಬಿಡಲಾಗಿದೆ. ಆದರೂ ಕೂಡ ಇಂದು ಊರಿಗೆ ಹೋಗುವವರ ಸಂಖ್ಯೆ ಹೆಚ್ಚಿರುವುದರಿಂದ ರೈಲು ಟಿಕೆಟ್‌ ಸಿಗದಂತಹ ವಾತಾವರಣ ನಿರ್ಮಾಣವಾಗಿದೆ. ಹೀಗೆ ಜನರು ಪರದಾಡುತ್ತಿದ್ದು, ಈ ಸಮಸ್ಯೆಯನ್ನು ರೈಲ್ವೆ, ಸಾರಿಗೆ ಅಧಿಕಾರಿಗಳು ಹೇಗೆ ನಿಭಾಯಿಸುತ್ತಾರೆಯೋ ಅನ್ನುವುದನ್ನು ಕಾದುನೋಡಬೇಕಿದೆ.

ಒಂದು ಕಡೆ ಸರ್ಕಾರಿ ಬಸ್‌ಗಳು ಇಲ್ಲ, ಮತ್ತೊಂದೆಡೆ ಖಾಸಗಿ ಬಸ್‌ಗಳು ಇಲ್ಲದಂತಾಗಿದೆ. ಅದರಲ್ಲೂ ಖಾಸಗಿ ಬಸ್‌ಗಳ ಟಿಕೆಟ್ ದರ ಮಾತ್ರ ಗಗನಕ್ಕೇರಿವೆ. ಮುಂಜಾನೆಯಿಂದಲೂ ಊಟ ತಿಂಡಿ ಇಲ್ಲದೆ ಬಸ್‌ಗಾಗಿ ಜನರು ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+