IRCTC: ನೀವು ಕಾಶ್ಮೀರದ ಪ್ರಕೃತಿ ಸೌಂದರ್ಯ ಸವಿಯಲು ಇದು ಉತ್ತಮ ಪ್ಯಾಕೇಜ್‌, ದರ, ಸ್ಥಳ, ದಿನಾಂಕಗಳನ್ನು ತಿಳಿಯಿರಿ

ನವದೆಹಲಿ, ಮೇ, 08: ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯು ಕೈಗೆಟುಕುವ ದರದಲ್ಲಿ ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಿಸುತ್ತಲೇ ಬಂದಿದೆ. ಇದೀಗ ಮತ್ತೆ ಕಾಶ್ಮೀರ ಪ್ರವಾಸ ಕೈಗೊಳ್ಳುವವರಿಗೆ ಐಆರ್‌ಸಿಟಿಸಿಯು ಪ್ರವಾಸ ಪ್ಯಾಕೇಜ್‌ ಅನ್ನು ಘೋಷಣೆ ಮಾಡಿದೆ. ಹಾಗಾದರೆ ಈ ಪ್ರವಾಸ ಆರಂಭ ಆಗುವ ದಿನಾಕ, ಸ್ಥಳ ಮತ್ತು ಬೆಲೆಯ ವಿವರಗಳನ್ನು ತಿಳಿಯಿರಿ.

ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ IRCTCಯು ಕಾಶ್ಮೀರಕ್ಕೆ ಪ್ರವಾಸ ಕೈಗೊಳ್ಳುವವರಿಗೆ ವಿಶಿಷ್ಟವಾದ ಪ್ರವಾಸದ ಪ್ಯಾಕೇಜ್‌ ಅನ್ನು ಘೋಷಣೆ ಮಾಡಿದೆ. ಈ ಪ್ಯಾಕೇಜ್‌ನೊಂದಿಗೆ ನೀವು ಕಡಿಮೆ ವೆಚ್ಚದಲ್ಲಿ ಕಾಶ್ಮೀರದಲ್ಲಿರುವ ಸುಂದರ ದೃಶ್ಯಗಳು ಮತ್ತು ಸೌಂದರ್ಯವನ್ನು ಸವಿಯಬುದಾಗಿದೆ. ನೀವು "ಜ್ಯುವೆಲ್ಸ್ ಆಫ್ ಕಾಶ್ಮೀರ" ಎಂಬ ಹೆಸರಿನಲ್ಲಿರುವ ಟೂರ್ ಪ್ಯಾಕೇಜ್ ಕುರಿತು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ ಇಲ್ಲಿದೆ ಗಮನಿಸಿ.

Jewels of Kashmir tour Package announcement by IRCTC, know Places, Price and dates details

ಕಾಶ್ಮೀರಕ್ಕೆ ಭೇಟಿ ನೀಡಲು ನಿಮಗೆ ಇದು ಅವಕಾಶ ಆಗಿದೆ. ಇದರಲ್ಲಿ ನೀವು ಕಾಶ್ಮೀರದ ಹಲವಾರು ಅದ್ಭುತ ಸ್ಥಳಗಳಿಗೆ ಭೇಟಿ ನೀಡಬಹುದು. ಪ್ರಪಂಚದಾದ್ಯಂತದ ಲಕ್ಷಾಂತರ ಪ್ರವಾಸಿಗರು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಅದೇ ರೀತಿ ಇದೀಗ ನೀವು ಕೂಡ ಇಲ್ಲಿಗೆ ಪ್ರವಾಸ ಬೆಳೆಸಲು ಈ ಪ್ಯಾಕೇಜ್‌ ಉತ್ತಮವಾಗಿದೆ.

ಜೂನ್ 17 ರಂದು ಚಂಡೀಗಢದಿಂದ ಪ್ರಾರಂಭ ಆಗಲಿರುವ ಈ ಪ್ರವಾಸವು ಆರು ದಿನಗಳವರಗೆ ಇರಲಿದೆ. ನಿಮಗೆ ಕಾಶ್ಮೀರದಲ್ಲಿನ ಇನ್ನಿತರ ಸ್ಥಳಗಳ ಸೌಂದರ್ಯವನ್ನು ಸವಿಯಲು ಅವಕಾಶವನ್ನು ಕಲ್ಪಿಸಲಾಗಿದೆ. ಈ ಪ್ರವಾಸದ ಸಮಯದಲ್ಲಿ ಸಂದರ್ಶಕರು ಗುಲ್ಮಾರ್ಗ್, ಪಹಲ್ಗಾಮ್, ಶ್ರೀನಗರ ಮತ್ತು ಸೋನಾಮಾರ್ಗ್‌ನಂತಹ ಸ್ಥಳಗಳನ್ನು ಪರಿಚಯಿಸುವ ಮೂಲಕ, ಮಾಹಿತಿಯನ್ನು ನೀಡಲಿದ್ದಾರೆ.

ಈ ಪ್ರವಾಸದ ಸಾರಿಗೆ ವಿಮಾನ ಆಗಿದ್ದು, ವಿಮಾನದ ಮೂಲಕ ಚಂಡೀಗಢದಿಂದ ಶ್ರೀನಗರಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ನಂತರ ನಿಮ್ಮನ್ನು ಹೋಟೆಲ್‌ಗೆ ಕರೆದೊಯ್ಯಲಾಗುತ್ತದೆ. ಸಂಜೆ ಇಲ್ಲಿಂದ ಚಾರ್ ಚಿನಾರ್ ದಾಲ್ ಸರೋವರಕ್ಕೆ ಹೋಗಲಾಗುತ್ತದೆ. ನಂತರ ರಾತ್ರಿ ಹೋಟೆಲ್‌ಗೆ ಹಿಂತಿರುಗಿದಂತೆ ಇಲ್ಲಿಯೆ ಭೋಜನದ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಬಳಿಕ ನೀವು ಸೋನಾಮಾರ್ಗ್‌ಗೆ ಭೇಟಿ ನೀಡಲು ಮರುದಿನ ಶ್ರೀನಗರದಿಂದ ಹೊರಟು, ಥಜ್ವಾಸ್ ಗ್ಲೇಸಿಯರ್‌ ಸಮೀಪದಲ್ಲಿರುವ ತಾಣಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಹಾಗೆಯೆ ಮೂರನೇ ದಿನ, ನಿಮ್ಮನ್ನು ಗುಲ್ಮಾರ್ಗ್‌ಗೆ ಮತ್ತು ನಾಲ್ಕನೇ ದಿನ ಪಹಲ್ಗಾಮ್‌ಗೆ ಕರೆದುಕೊಂಡು ಹೋಗಲಾಗುತ್ತದೆ.

ಪಹಲ್ಗಾಮ್‌ನಲ್ಲಿ ಒಂದು ರಾತ್ರಿ ವಸತಿ ವ್ಯವಸ್ಥೆ ಮಾಡಲಾಗುವುದು. ಇನ್ನು ಐದನೇ ದಿನ ಪಹಲ್ಗಾಮ್ನಿಂದ ಶ್ರೀನಗರಕ್ಕೆ ಪ್ರಯಾಣ ಬೆಳೆಸಲಾಗುತ್ತಿದ್ದು, ಇಲ್ಲಿನ ಶಂಕರಾಚಾರ್ಯ ದೇವಸ್ಥಾನ ಮತ್ತು ಶ್ರೀನಗರದ ಪ್ರಸಿದ್ಧ ಹಜರತ್‌ಬಾಲ್ ದರ್ಗಾಕ್ಕೆ ಭೇಟಿ ನೀಡಲಾಗುತ್ತದೆ. ಇವೆರಡೂ ದಾಲ್ ಸರೋವರದ ತೀರದಲ್ಲಿದೆ. ಹಾಗೆಯೆ ಹೌಸ್‌ಬೋಟ್‌ನಲ್ಲಿ ರಾತ್ರಿ ಊಟವನ್ನು ಆಯೋಜಿಸಲಾಗುತ್ತದೆ. ಅಲ್ಲದೆ ಕೊನೆಯ ಆರನೇ ದಿನದ ಉಪಹಾರದ ನಂತರ, ಶ್ರೀನಗರ ವಿಮಾನ ನಿಲ್ದಾಣದಿಂದ ಚಂಡೀಗಢಕ್ಕೆ ಹಿಂದಿರುಗಲಾಗುತ್ತದೆ.

ಈ ಪ್ರವಾಸ ಕೈಗೊಳ್ಳಬಯಸುವವರು ಒಬ್ಬರಿಗೆ 34,670 ರೂಪಾಯಿ, ಇಬ್ಬರು ಪ್ರಯಾಣ ಮಾಡಲು ಇಚ್ಚಿಸಿದರೆ ಪ್ರತಿ ವ್ಯಕ್ತಿಗೆ 29,970 ರೂಪಾಯಿ ಪಾವತಿಸಬೇಕಾಗುತ್ತದೆ. ಇನ್ನು ಈ ಪ್ಯಾಕೇಜ್‌ನ ಲಾಭ ಪಡೆಯಲು ಮೂರು ಜನರಿಗೆ ಪ್ರತಿ ವ್ಯಕ್ತಿಗೆ 28,610 ರೂಪಾಯಿ ಪಾವತಿಸಬೇಕಾಗುತ್ತದೆ. ಹಾಗೆಯೇ ನೀವು ಮಗುವಿನೊಂದಿಗೆ ಹಾಸಿಗೆಯನ್ನು ತೆಗೆದುಕೊಳ್ಳಲು ಬಯಸಿದರೆ 20,190 ರೂಪಾಯಿ ಪಾವತಿಸಬೇಕಾಗುತ್ತದೆ. ಇನ್ನು ಪ್ರವಾಸ ಪ್ಯಾಕೇಜ್‌ನ ಹೆಚ್ಚಿನ ಮಾಹಿತಿಗಾಗಿ ಅಧಿಕೃತ IRCTC ವೆಬ್‌ಸೈಟ್‌ಗೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+