ದೀಪಾವಳಿ: ತಿರುಪತಿಗೆ ಹೋಗುವವರಿಗೆ ಐಆರ್‌ಸಿಟಿಸಿ ವಿಶೇಷ ಪ್ಯಾಕೇಜ್‌

ಬೆಂಗಳೂರು, ಅಕ್ಟೋಬರ್ 20: ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಯಾತ್ರಾರ್ಥಿಗಳಿಗಾಗಿ ತಿರುಮಲ ಬಾಲಾಜಿ ದರ್ಶನಂನ ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ.

ಈ ಪ್ಯಾಕೇಜ್ ಕಾಣಿಪಾಕಂ, ತಿರುಚನೂರು, ತಿರುಮಲ ಮತ್ತು ಶ್ರೀಕಾಳಹಸ್ತಿಗೂ ದರ್ಶನ ಮಾಡುವ ಸೌಲಭ್ಯವನ್ನು ಒಳಗೊಂಡಿದೆ. ಈ ಪ್ಯಾಕೇಜ್‌ 3 ರಾತ್ರಿಗಳು ಮತ್ತು 4 ದಿನಗಳ ಪ್ರವಾಸವು ಅಕ್ಟೋಬರ್ 18 ರಂದು ಪ್ರಾರಂಭವಾಗುತ್ತದೆ.

ಕಾಕಿನಾಡ ಟೌನ್ (ಸಿಸಿಟಿ), ರಾಜಮಂಡ್ರಿ (ಆರ್‌ಜೆವೈ), ಭೀಮಾವರಂ ಟೌನ್ (ಬಿವಿಆರ್‌ಟಿ), ಗುಡಿವಾಡ ಜಂಕ್ಷನ್‌ (ಜಿಡಿವಿ), ವಿಜಯವಾಡ ಜಂಕ್ಷನ್ (ಬಿಝಡ್‌ಎ), ತೆನಾಲಿ (ಟಿಇಎಲ್‌) ಒಂಗೋಲ್ (ಒಜಿಎಲ್‌) ಸೇರಿದಂತೆ ಪ್ರಯಾಣಿಕರ ಅನುಕೂಲಕ್ಕಾಗಿ ಐಆರ್‌ಸಿಟಿಸಿ ವಿವಿಧ ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ಪಾಯಿಂಟ್‌ಗಳನ್ನು ಒಳಗೊಂಡಿದೆ.

ಈ ಹಿಂದೆ ಐಆರ್‌ಸಿಟಿಸಿ ಟ್ವಿಟ್ಟರ್‌ನಲ್ಲಿ ಜೀವಮಾನದಲ್ಲಿ ಒಮ್ಮೆ ತಿರುಪತಿಗೆ ಹೋಗಲು ಭಾವಿಸಿದ್ದರೆ ಇದಕ್ಕೆ ಅವಕಾಶವಿದೆ. ಐಆರ್‌ಸಿಟಿಸಿಯ ಅತ್ಯಾಕರ್ಷಕ 3 ರಾತ್ರಿಗಳು, 4 ದಿನಗಳ ಪ್ರವಾಸ ಪ್ಯಾಕೇಜ್‌ 6705 ದಿಂದ ದಕ್ಷಿಣದ ಲೇನ್‌ಗಳಿಗೆ ಪ್ರವಾಸ ಕೈಗೊಳ್ಳಿ ಎಂದು ತಿಳಿಸಿದೆ.

ಐಆರ್‌ಸಿಟಿಸಿಯ ತಿರುಮಲ ಬಾಲಾಜಿ ದರ್ಶನಂ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಂತಿದೆ. ಅಧಿಕೃತ ಐಆರ್‌ಸಿಟಿಸಿ ವೆಬ್‌ಸೈಟ್ ಪ್ರಕಾರ, ಪ್ರಯಾಣಿಕರು ಪರಿಶೀಲಿಸಬಹುದಾದ ಕೆಲವು ಪ್ರಮುಖ ವಿವರಗಳು ಇಲ್ಲಿವೆ.
ಪ್ಯಾಕೇಜ್ ಕೋಡ್ ಎಚ್‌ಎಚ್‌ಆರ್ 102,
ಭೇಟಿ ನೀಡುವ ಸ್ಥಳಗಳು: ತಿರುಮಲ, ತಿರುಚನೂರು, ಕಾಣಿಪಾಕಂ, ಶ್ರೀಕಾಳಹಸ್ತಿಯನ್ನು ಒಳಗೊಂಡಿದೆ.
ಪ್ರಯಾಣದ ದಿನಗಳು: ಮೂರು ರಾತ್ರಿ 4 ದಿನಗಳು.

ಪ್ರಯಾಣದ ದಿನಾಂಕ 18.11.2022,
ರೈಲಿನಲ್ಲಿ ಪ್ರಯಾಣ ವಿಧಾನ: ಸ್ಲೀಪರ್ ಕೋಚ್‌, ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಪಾಯಿಂಟ್ ಕಾಕಿನಾಡ ಟೌನ್ (ಸಿಸಿಟಿ), ರಾಜಮಂಡ್ರಿ (ಆರ್‌ಜೆವೈ), ಭೀಮಾವರಂ ಟೌನ್, ಗುಡಿವಾಡ, ವಿಜಯವಾಡ, ತೆನಾಲಿ, ಒಂಗೋಲ್,

ಒಬ್ಬರ ಪ್ರಯಾಣಕ್ಕೆ 8150 ರೂ.

ಒಬ್ಬರ ಪ್ರಯಾಣಕ್ಕೆ 8150 ರೂ.

ಐಆರ್‌ಸಿಟಿಸಿ ತಿರುಮಲ ಬಾಲಾಜಿ ದರ್ಶನಂ: ಪ್ಯಾಕೇಜ್ ದರಗಳು ಇಂತಿವೆ. ತಿರುಮಲ ಬಾಲಾಜಿ ದರ್ಶನಂ ಪ್ಯಾಕೇಜ್‌ನ ಮೂವರ ಪ್ರಯಾಣಕ್ಕೆ 6705 ರೂ.ಗಳು. ಇಬ್ಬರ ಪ್ರಯಾಣಕ್ಕೆ 6920 ರೂ.ಗಳಾಗಿದ್ದರೆ, ಒಬ್ಬರ ಪ್ರಯಾಣಕ್ಕೆ 8150 ರೂ. ಆಗಿದೆ. 5-11 ವರ್ಷದ ಮಕ್ಕಳಿಗೆ ಹಾಸಿಗೆಯೊಂದಿಗೆ 6295 ರೂ, 5ರಿಂದ11 ವರ್ಷದ ಮಕ್ಕಳಿಗೆ ಹಾಸಿಗೆ ರಹಿತವಾಗಿ 5985 ರೂ. ಆಗಿರುತ್ತದೆ.

ಪುರುಷರು: ಧೋತಿ (ಬಿಳಿ) ಮತ್ತು ಶರ್ಟ್ ಕಡ್ಡಾಯ

ಪುರುಷರು: ಧೋತಿ (ಬಿಳಿ) ಮತ್ತು ಶರ್ಟ್ ಕಡ್ಡಾಯ

ಐಆರ್‌ಸಿಟಿಸಿ ತಿರುಮಲ ಬಾಲಾಜಿ ದರ್ಶನಂ ಯಾತ್ರಾರ್ಥಿಗಳಿಗೆ ಕಡ್ಡಾಯ ಧರಿಸಬೇಕಾದ ಬಟ್ಟೆಗಳು ಇಂತಿದೆ. ಪುರುಷರು: ಧೋತಿ (ಬಿಳಿ) ಮತ್ತು ಶರ್ಟ್ ಅಥವಾ ಕುರ್ತಾ ಮತ್ತು ಪೈಜಾಮ. ಹೆಂಗಸರು: ಸೀರೆ ಅಥವಾ ಸಲ್ವಾರ್ ಕಮೀಜ್ (ಪಲ್ಲು ಕಡ್ಡಾಯ). ಎಲ್ಲಾ ಯಾತ್ರಾರ್ಥಿಗಳು ಟೀ-ಶರ್ಟ್, ಜೀನ್ಸ್ ಮುಂತಾದ ಬಟ್ಟೆಗಳನ್ನು ಧರಿಸದಂತೆ ವಿನಂತಿಸಲಾಗಿದೆ ಏಕೆಂದರೆ ಯಾವುದೇ ವಯಸ್ಸಿನ ವರ್ಗವನ್ನು ಲೆಕ್ಕಿಸದೆ ಕಟ್ಟುನಿಟ್ಟಾಗಿ ಇದನ್ನು ನಿಷೇಧಿಸಲಾಗಿದೆ.

ಐದು ದಿನಗಳ ಮೊದಲು ಬದಲಾವಣೆ ಮಾಡಿ

ಐದು ದಿನಗಳ ಮೊದಲು ಬದಲಾವಣೆ ಮಾಡಿ

ಹೆಸರು/ವಯಸ್ಸು/ಲಿಂಗ ಇತ್ಯಾದಿಗಳಿಗೆ ಸಂಬಂಧಿಸಿದ ಯಾವುದೇ ಬದಲಾವಣೆಗಳನ್ನು ಒಮ್ಮೆ ಮಾತ್ರ ಅನುಮತಿಸಲಾಗುತ್ತದೆ ಮತ್ತು ಪ್ರಯಾಣಕ್ಕೆ 5 ದಿನಗಳ ಮೊದಲು ಮಾತ್ರ ಅನುಮತಿಸಲಾಗುತ್ತದೆ. ಟಿಕೆಟ್‌ಗಳನ್ನು ಬುಕ್ ಮಾಡಿದ ನಂತರ ಯಾವುದೇ ಬದಲಾವಣೆಗಳನ್ನು ಅನುಮತಿಸಲಾಗುವುದಿಲ್ಲ.

ಸ್ಲೀಪರ್ ವಿಧಾನದಲ್ಲಿ ಪ್ರಯಾಣ

ಸ್ಲೀಪರ್ ವಿಧಾನದಲ್ಲಿ ಪ್ರಯಾಣ

ತಿರುಮಲ ಬಾಲಾಜಿ ದರ್ಶನಂ: ಟಿಕೆಟ್ ಬುಕ್ ಮಾಡುವುದು ಹೇಗೆಂದರೆ, ನೀವು ಪ್ರಯಾಣಿಸಲು ಆಸಕ್ತಿ ಹೊಂದಿದ್ದರೆ ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್ irctctourism.com ಗೆ ಭೇಟಿ ನೀಡುವ ಮೂಲಕ ಟಿಕೆಟ್ ಬುಕ್ ಮಾಡಬಹುದು. ಪ್ರಯಾಣಿಕರು ರೈಲಿನಲ್ಲಿ (ಸ್ಲೀಪರ್) ಪ್ರಯಾಣಿಸಬೇಕಾಗುತ್ತದೆ ಮತ್ತು ಇದು ವಸತಿ, ಊಟ, ಪ್ರವಾಸದ ಬೆಂಗಾವಲು, ರೈಲಿನಲ್ಲಿ ಭದ್ರತೆ, ಪ್ರಯಾಣ ವಿಮೆ ಮತ್ತು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+