Indian Railways: ₹170 ಕೋಟಿಗೂ ಹೆಚ್ಚು ದಂಡ ಸಂಗ್ರಹಿಸಿದ ಪಶ್ಚಿಮ ರೈಲ್ವೆ, ವಿಭಾಗವಾರು ವಿವರ ಇಲ್ಲಿದೆ

ನವದೆಹಲಿ, ಏಪ್ರಿಲ್‌, 08: ಪಶ್ಚಿಮ ರೈಲ್ವೆಯು ಟಿಕೆಟ್‌ ತಪಾಸಣೆಯ ವಿಭಾಗದಲ್ಲಿ ದಂಡ ಸಂಗ್ರಹದಲ್ಲಿ ದಾಖಲೆ ಬರೆದಿದೆ. 2022-2023ರ ಹಣಕಾಸು ವರ್ಷದಲ್ಲಿ ಪಶ್ಚಿಮ ರೈಲ್ವೆಯು ₹170.35 ಕೋಟಿ ರೂಪಾಯಿ ಮೊತ್ತವನ್ನು ದಂಡವಾಗಿ ಸಂಗ್ರಹಿಸಿದೆ ಎಂದು ಇಲಾಖೆಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಪಶ್ಚಿಮ ರೈಲ್ವೆಯಲ್ಲಿನ ಎಲ್ಲಾ ಪ್ರಯಾಣಿಕರಿಗೆ ತೊಂದರೆ ಮುಕ್ತ, ಆರಾಮದಾಯಕ ಪ್ರಯಾಣ ಮತ್ತು ಉತ್ತಮ ಸೇವೆಗಳನ್ನು ಖಚಿತಪಡಿಸಿಕೊಳ್ಳಲು, ಮುಂಬೈ ಉಪನಗರ ಸ್ಥಳೀಯ ಸೇವೆಗಳು, ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಮತ್ತು ರಜಾದಿನದ ವಿಶೇಷ ರೈಲುಗಳಲ್ಲಿ ಟಿಕೆಟ್ ತಪಾಸಣೆಯನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಟಿಕೆಟ್‌ರಹಿತವಾಗಿ ಪ್ರಯಾಣ ಮಾಡುವವರಿಗೆ ಬ್ರೇಕ್‌ ಹಾಕುವ ಮೂಲಕ ಇನ್ನಿತರ ಪ್ರಯಾಣಿಕರಿಗೆ ಅನುವು ಮಾಡಿಕೊಡಲು ಭಾರತೀಯ ರೈಲ್ವೆಯು ಈ ನಿರ್ಧಾರವನ್ನು ಕೈಗೊಂಡಿದೆ.

 Indian Railways: Western Railways collected over ₹170 crore fines in 2022-23

170.35 ಕೋಟಿ ರೂಪಾಯಿ ಸಂಗ್ರಹ
ಪಶ್ಚಿಮ ರೈಲ್ವೆಯ ಹಿರಿಯ ವಾಣಿಜ್ಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಏಪ್ರಿಲ್ 2022 ರಿಂದ ಮಾರ್ಚ್ 2023ರ ಅವಧಿಯಲ್ಲಿ ಹಲವಾರು ಟಿಕೆಟ್ ತಪಾಸಣೆಯ ವಿಭಾಗಗಳನ್ನು ಆಯೋಜಿಸಿದೆ. ಇದರಿಂದಾಗಿ 170.35 ಕೋಟಿ ರೂಪಾಯಿ ಮತ್ತು ಮುಂಬೈ ಉಪನಗರ ವಿಭಾಗದಿಂದ 43.07 ಕೋಟಿ ರೂಪಾಯಿ ದಂಡವನ್ನು ಸಂಗ್ರಹ ಮಾಡಲಾಗಿದೆ.

ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ನೀಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಮಾರ್ಚ್ 2023ರಲ್ಲಿ ಬುಕ್ ಮಾಡದ ಲಗೇಜ್ ಪ್ರಕರಣಗಳು ಸೇರಿದಂತೆ 1.94 ಲಕ್ಷ ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಲಾಗಿದೆ. ಈ ಮೂಲಕ 12.07 ಕೋಟಿ ರೂಪಾಯಿ ದಂಡದ ಮೊತ್ತವನ್ನು ವಸೂಲಿ ಮಾಡಲಾಗಿದೆ.

ಇನ್ನು ಏಪ್ರಿಲ್ 2022 ರಿಂದ ಮಾರ್ಚ್ 2023 ರ ಅವಧಿಯಲ್ಲಿ ಒಟ್ಟು 25.63 ಲಕ್ಷ ರೂಪಾಯಿಯನ್ನು ಟಿಕೆಟ್ ರಹಿತ ಪ್ರಯಾಣಿಕರು ಮತ್ತು ಕಾಯ್ದಿರಿಸದ ಲಗೇಜ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 18.88 ಲಕ್ಷ ಪ್ರಕರಣಗಳು ಪತ್ತೆಯಾಗಿದ್ದು, ಈ ಪ್ರಕರಣಗಳು ಇದೀಗ 35.75% ರಷ್ಟು ಹೆಚ್ಚಳವಾಗಿವೆ.

 Indian Railways: Western Railways collected over ₹170 crore fines in 2022-23

ದಂಡ ಸಂಗ್ರಹದ ವಿವರ ಇಲ್ಲಿದೆ
ಕಳೆದ ವರ್ಷದ ಇದೇ ಅವಧಿಯಲ್ಲಿ ಶೇಕಡಾ 50ರಷ್ಟು ಹೆಚ್ಚಳವಾಗಿದ್ದು, 113.57 ಕೋಟಿ ರೂಪಾಯಿ ದಂಡವನ್ನು ಸಂಗ್ರಹ ಮಾಡಲಾಗಿತ್ತು. ಮಾರ್ಚ್ 2023ರಲ್ಲಿ ಪಶ್ಚಿಮ ರೈಲ್ವೆಯ ಮುಂಬೈ ಉಪನಗರ ವಿಭಾಗದಿಂದ 3.08 ಕೋಟಿ ರೂಪಾಯಿ ಮೊತ್ತದ ದಂಡವನ್ನು ಸಂಗ್ರಹಿಸಲಾಗಿತ್ತು. ಎಸಿ ಸ್ಥಳೀಯ ರೈಲುಗಳಲ್ಲಿ ಅನಧಿಕೃತ ಪ್ರವೇಶವನ್ನು ತಡೆಗಟ್ಟಲು, ಆಗಾಗ್ಗೆ ಟಿಕೆಟ್ ತಪಾಸಣೆಯನ್ನು ಮಾಡಲಾಗುತ್ತದೆ. ಇನ್ನು ಏಪ್ರಿಲ್ 2022ರಿಂದ 48,691ಕ್ಕೂ ಹೆಚ್ಚು ಟಿಕೆಟ್‌ ರಹಿತ ಪ್ರಯಾಣಿಕರಿಗೆ ದಂಡವನ್ನು ವಿಧಿಸಲಾಗಿದೆ ಎಂದು ತಿಳಿಸಿದೆ.

₹1 ಕೋಟಿಗೂ ಅಧಿಕ ದಂಡ ವಸೂಲಿ
ಭಾರತೀಯ ರೈಲ್ವೆಯು ಒಂದಲ್ಲ ಒಂದು ರೀತಿ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿ ಇದ್ದೇ ಇರುತ್ತದೆ. ಅದು ಧನಾತ್ಮಕತೆಯುಳ್ಳ ಸುದ್ದಿಯಾಗಿರುತ್ತದೆ. ಇದೀಗ ದಕ್ಷಿಣ ರೈಲ್ವೇ ಮುಖ್ಯ ಟಿಕೆಟ್‌ ಪರಿವೀಕ್ಷಕಿ ರೋಸಲಿನ್‌ ಅರೋಕಿಯಾ ಮೇರಿ ಅವರು ಇತ್ತೀಚೆಗಷ್ಟೇ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಳಿ 1.03 ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಿ ಸಾಧನೆ ಮಾಡಿದ್ದಾರೆ. ಮೇರಿ ಅವರ ಈ ಸಾಧನೆಯು ರೈಲ್ವೇ ಸಚಿವಾಲಯದ ಪ್ರಶಂಸೆಗೂ ಪಾತ್ರವಾಗಿದೆ.

ರೈಲ್ವೆ ಸಚಿವಾಲಯವು ಅಧಿಕೃತ ಟ್ವಿಟರ್‌ನಲ್ಲಿ ಮೇರಿ ಅವರ ಸಾಧನೆಯನ್ನು ಕೊಂಡಾಡಿದೆ. ರೈಲ್ವೆಯ ಟಿಕೆಟ್‌ ಪರಿವೀಕ್ಷಕಿ ಆಗಿರುವ ರೋಸಲಿನ್‌ "ತಮ್ಮ ಕರ್ತವ್ಯಕ್ಕೆ ಬದ್ಧತೆಯನ್ನು ತೋರಿಸುತ್ತಾ ಬಂದಿದ್ದಾರೆ. ಟಿಕೆಟ್‌ ತಪಾಸಣೆ ವೇಳೆ ಟಿಕೆಟ್‌ರಹಿತವಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರ ಬಳಿ 1.03 ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಿದ್ದಾರೆ.

ಈ ಮೂಲಕ ಅವರು ಇಷ್ಟು ದೊಡ್ಡ ಮೊತ್ತದ ದಂಡವನ್ನು ಸಂಗ್ರಹಿಸಿದ ಭಾರತೀಯ ರೈಲ್ವೆಯ ಮೊದಲ ಮಹಿಳೆ ಸಿಬ್ಬಂದಿ ಎನ್ನುವ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+