ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೊದಲ ಗಾಜಿನ ಇಗ್ಲೂ ರೆಸ್ಟೋರೆಂಟ್ ಕಾರ್ಯಾರಂಭ, ಇಲ್ಲಿದೆ ಮಾಹಿತಿ

ಜಮ್ಮು ಕಾಶ್ಮೀರದಲ್ಲಿ ವಿಶಿಷ್ಟವಾದ ಗಾಜಿನ ಇಗ್ಲೂ ರೆಸ್ಟೋರೆಂಟ್ ಅನ್ನು ಗುಲ್ಮಾರ್ಗ್‌ನಲ್ಲಿರುವ ಕೊಲಾಹೊಯ್ ಗ್ರೀನ್ ಹೈಟ್ಸ್ ಎಂಬ ಹೋಟೆಲ್ ಅಭಿವೃದ್ಧಿಪಡಿಸಿದೆ.

|
Google Oneindia Kannada News

ಶ್ರೀನಗರ, ಜನವರಿ 30: ಜಮ್ಮು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಹಿಮದಿಂದ ಆವೃತವಾದ ಪರ್ವತಗಳ ಮಧ್ಯದಲ್ಲಿರುವ ಗಾಜಿನ ಇಗ್ಲೂ ರೆಸ್ಟೋರೆಂಟ್ ಕಾಶ್ಮೀರದ ಗಿರಿಧಾಮದಲ್ಲಿ ಈಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

ಈ ಗಾಜಿನ ಗೋಡೆಯ ರೆಸ್ಟೋರೆಂಟ್‌ನಲ್ಲಿ ಪ್ರವಾಸಿಗರು ತಮ್ಮ ಊಟವನ್ನು ಸವಿಯುವುದು ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಳ್ಳುವುದನ್ನು ಈಗ ಕಾಣಬಹುದು.

ವೆಜ್ ಬಿರಿಯಾನಿಯಲ್ಲಿ ಮೂಳೆ: ಸಸ್ಯಾಹಾರಿಗೆ ಮಾಂಸಾಹಾರ ಬಡಿಸಿದ ಆರೋಪ, ಹೋಟೆಲ್ ಮಾಲೀಕನ ಮೇಲೆ ಕೇಸ್ವೆಜ್ ಬಿರಿಯಾನಿಯಲ್ಲಿ ಮೂಳೆ: ಸಸ್ಯಾಹಾರಿಗೆ ಮಾಂಸಾಹಾರ ಬಡಿಸಿದ ಆರೋಪ, ಹೋಟೆಲ್ ಮಾಲೀಕನ ಮೇಲೆ ಕೇಸ್

ಈ ವಿಶಿಷ್ಟವಾದ ಗಾಜಿನ ಇಗ್ಲೂ ರೆಸ್ಟೋರೆಂಟ್ ಅನ್ನು ಗುಲ್ಮಾರ್ಗ್‌ನಲ್ಲಿರುವ ಕೊಲಾಹೊಯ್ ಗ್ರೀನ್ ಹೈಟ್ಸ್ ಎಂಬ ಹೋಟೆಲ್ ಅಭಿವೃದ್ಧಿಪಡಿಸಿದೆ. ಕಣಿವೆಯಲ್ಲಿ ಇದು ಮೊದಲ ಗಾಜಿನ ಇಗ್ಲೂ ರೆಸ್ಟೋರೆಂಟ್ ಎಂದು ಹೋಟೆಲ್ ಹೇಳಿಕೊಂಡಿದೆ. ಮೊದಲು ಅವರು ಕಾಶ್ಮೀರ ಕಣಿವೆಯ ಮೊದಲ ಹಿಮದಿಂದ ಆವೃತವಾದ ರೆಸ್ಟೋರೆಂಟ್ ಅನ್ನು ನಿರ್ಮಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ.

Indias first glass igloo restaurant opens in Jammu and Kashmir

ಹೋಟೆಲ್ ಮ್ಯಾನೇಜರ್ ಹಮೀದ್ ಮಸೌದಿ ಅವರ ಪ್ರಕಾರ, ಗುಲ್ಮಾರ್ಗ್ ಅನ್ನು ಪ್ರವಾಸಿಗರಿಗೆ ಆಕರ್ಷಕವಾಗಿಸಲು ಇದು ಯಾವಾಗಲೂ ವಿಶಿಷ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. 2020ರಲ್ಲಿ ಹೋಟೆಲ್ ಏಷ್ಯಾದ ಅತಿದೊಡ್ಡ ಇಗ್ಲೂ ಅನ್ನು ತಯಾರಿಸಿದರೆ, 2021ರಲ್ಲಿ ಅವರು ವಿಶ್ವದ ಅತಿದೊಡ್ಡ ಇಗ್ಲೂ ರೆಸ್ಟೋರೆಂಟ್‌ನ್ನು ತಯಾರಿಸಿದರು. ಈ ವರ್ಷ ಗಾಜಿನ ಇಗ್ಲೂ ರೆಸ್ಟೋರೆಂಟ್‌ ಅನ್ನು ತಯಾರಿಸಿದರು. ಇದು ಕಾಶ್ಮೀರದಲ್ಲಿ ಮೊದಲ ಇಗ್ಲೂ ಆಗಿದೆ ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳದ ಜಲ್ಪೈಗುರಿ ನಿಲ್ದಾಣದಲ್ಲಿ 'ಕೋಚ್ ರೆಸ್ಟೋರೆಂಟ್' ಆರಂಭಪಶ್ಚಿಮ ಬಂಗಾಳದ ಜಲ್ಪೈಗುರಿ ನಿಲ್ದಾಣದಲ್ಲಿ 'ಕೋಚ್ ರೆಸ್ಟೋರೆಂಟ್' ಆರಂಭ

"ನಾವು ಈ ಪರಿಕಲ್ಪನೆಯನ್ನು ಫಿನ್‌ಲ್ಯಾಂಡ್‌ನಿಂದ ತೆಗೆದುಕೊಂಡಿದ್ದೇವೆ. ನಮ್ಮ ಹೋಟೆಲ್‌ನ ಅಂಗಳದಲ್ಲಿ ಮೂರು ಇಗ್ಲೂಗಳನ್ನು ನಿರ್ಮಿಸಿದ್ದೇವೆ, ಅದು ಹಿಂದೆ ಎಲ್ಲಿಯೂ ನೋಡಿಲ್ಲ. ನಂತರ ನಾವು ಗುಲ್ಮಾರ್ಗ್‌ನ ಮೊದಲ ಹಂತದಲ್ಲಿ ಮೂರು ಇಗ್ಲೂಗಳನ್ನು ನಿರ್ಮಿಸಿದ್ದೇವೆ. ಇದು ಇಲ್ಲಿಗೆ ಭೇಟಿ ನೀಡುವವರಿಂದ ತುಂಬಾ ಮೆಚ್ಚುಗೆ ಪಡೆದಿದೆ ಎಂದು ಮಸೌದಿ ಹೇಳಿದರು.

Indias first glass igloo restaurant opens in Jammu and Kashmir

ಈ ವಿಶಿಷ್ಟ ಇಗ್ಲೂ ರೆಸ್ಟೋರೆಂಟ್‌ಗೆ ಆಮದು ಮಾಡಿದ ಫ್ಯಾಬ್ರಿಕೇಟೆಡ್ ವಸ್ತುಗಳನ್ನು ಬಳಸಲಾಗಿದೆ. ಈ ವಿಶಿಷ್ಟವಾದ ಗಾಜಿನ ಮುಂಭಾಗದ ರೆಸ್ಟೋರೆಂಟ್ ಆಂತರಿಕ ಶಾಖವನ್ನು ಕಾಯ್ದುಕೊಳ್ಳುತ್ತದೆ ಮತ್ತು ಉತ್ತಮ ವೀಕ್ಷಣೆಗಳನ್ನು ನೀಡುತ್ತದೆ. ಈ ಪ್ರತಿಯೊಂದು ಗಾಜಿನ ಇಗ್ಲೂಗಳಲ್ಲಿ ಒಮ್ಮೆಗೆ ಎಂಟು ಜನರು ಅದರಲ್ಲಿ ಕುಳಿತುಕೊಳ್ಳಬಹುದು. ನಾವು ಪ್ರವಾಸಿಗರಿಗೆ ವಿಭಿನ್ನ ರೀತಿಯ ಅನುಭವವನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದು ಮಸೌದಿ ಹೇಳಿದರು.

ಈ ವಿಶಿಷ್ಟ ಗಾಜಿನ ಮುಂಭಾಗದ ರೆಸ್ಟೋರೆಂಟ್‌ಗಳನ್ನು ಸ್ಥಳೀಯರು ಮಾತ್ರವಲ್ಲದೆ ಹೊರಗಿನ ಜನರು ಹೆಚ್ಚಾಗಿ ಇಷ್ಟಪಡುತ್ತಾರೆ. ಪ್ರವಾಸಿಗರಾದ ಸಯಾಖ್ ಅವರು ಕಾಶ್ಮೀರ ಕಣಿವೆಗೆ ಬಂದು ಗುಲ್ಮಾರ್ಗ್‌ನಲ್ಲಿ ಸಮಯ ಕಳೆಯಲು ಬಂದಿದ್ದು, ಈ ರೆಸ್ಟೋರೆಂಟ್‌ಗೆ ಬಂದು ತನಗೆ ವಿಭಿನ್ನ ಅನುಭವವಾಯಿತು ಎಂದು ಹೇಳಿದರು.

ಅದರಲ್ಲಿ ಕುಳಿತಾಗ ಸ್ವರ್ಗದ ಕಿಟಕಿಯಿಂದ ಇಣುಕಿ ನೋಡುತ್ತಿರುವಂತೆ ಭಾಸವಾಯಿತು. ಈ ಗಾಜಿನಿಂದ ಸುತ್ತುವರಿದ ರೆಸ್ಟೋರೆಂಟ್‌ನಲ್ಲಿ ಚಳಿ ಇಲ್ಲ. ಒಂದು ಕಪ್ ಕಾಫಿಯೊಂದಿಗೆ ಹೊರಗಿನ ನೋಟ ಮತ್ತು ಈ ಅನನ್ಯ ಅನುಭವ, ನಾನು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇನೆ ಸಯಾಖ್ ಹೇಳಿದರು.

English summary
A glass igloo restaurant nestled amidst snow-capped mountains in Gulmarg, Jammu Kashmir is a tourist attraction in the hill station of Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X