Hubballi Bengaluru Superfast Express: ಬೆಂಗಳೂರು ಹುಬ್ಬಳ್ಳಿ ಪ್ರಯಾಣಿಕರಿಗೆ ಸಿಹಿ ಸುದ್ದಿ

ಬೆಂಗಳೂರು, ಜೂನ್. 16: ರಾಜ್ಯ ರಾಜಧಾನಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸುವವರ ಸಂಖ್ಯೆ ಬಹಳಷ್ಟಿದೆ. ಪ್ಯಾಸೆಂಜರ್ ಟ್ರೈನ್, ಎಕ್ಸ್‌ಪ್ರೆಸ್‌ ಜೊತೆಗೆ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳು ಇವೆ. ದಿನ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಮತ್ತಷ್ಟು ರೈಲುಗಳಿಗೆ ಬೇಡಿಕೆಯಿದೆ.

ಇದೇ ವೇಳೆ ನೈಋತ್ಯ ರೈಲ್ವೆಯು ಬೆಂಗಳೂರು ಮತ್ತು ಹುಬ್ಬಳ್ಳಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ವಿಸ್ತರಿಸಲು ಮುಂದಾಗಿದೆ. ನೈಋತ್ಯ ರೈಲ್ವೆ ರೈಲು ಸಂಖ್ಯೆ 07339/07340 ಹುಬ್ಬಳ್ಳಿ- ಕ್ರಾಂತಿವೀರಣ್ಣ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲು ನಿಲ್ದಾಣ- ಹುಬ್ಬಳ್ಳಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸೇವೆಗಳನ್ನು ವರ್ಷಾಂತ್ಯದವರೆಗೆ ವಿಸ್ತರಿಸಲು ನಿರ್ಧರಿಸಿದೆ.

Hubballi Bengaluru Superfast Express train Service extended

ರೈಲು ಸಂಖ್ಯೆ 07339 ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಕೆಎಸ್‌ಆರ್ ಬೆಂಗಳೂರು ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷವನ್ನು ಜುಲೈ 1 ರಿಂದ ಡಿಸೆಂಬರ್ 31, 2024 ರವರೆಗೆ ಹುಬ್ಬಳ್ಳಿ ಅಂತ್ಯದವರೆಗೆ ವಿಸ್ತರಿಸಲಾಗಿದೆ.

ಅದೇ ರೀತಿ, ಕ್ರಾಂತಿವೀರಣ್ಣ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಬೆಂಗಳೂರು ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು (07340) ಸೇವೆಯನ್ನು ಜುಲೈ 2 ರಿಂದ ಜನವರಿ 1, 2025 ರವರೆಗೆ ಬೆಂಗಳೂರಿನ ಅಂತ್ಯದಿಂದ ವಿಸ್ತರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ. ಹುಬ್ಬಳ್ಳಿ- ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಆರಂಭದಲ್ಲಿ ಜೂನ್ 30 ರವರೆಗೆ ಮಾತ್ರ ಓಡಿಸಲು ಸೂಚಿಸಲಾಗಿತ್ತು. ಬಳಿಕ ನೈರುತ್ಯ ರೈಲ್ವೆ ರೈಲನ್ನು ಮತ್ತಷ್ಟು ದಿನಕ್ಕೆ ವಿಸ್ತರಿಸಿದೆ.

Hubballi Bengaluru Superfast Express train Service extended

ರೈಲಿನ ವೇಳಾಪಟ್ಟಿ ಮತ್ತು ಇತರ ವಿವರಗಳು ಈ ಕೆಳಗಿನಂತಿದೆ

ರೈಲು ಸಂಖ್ಯೆ 07339 ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಕೆಎಸ್‌ಆರ್ ಬೆಂಗಳೂರು ಸೂಪರ್‌ಫಾಸ್ಟ್ ರೈಲು ಹುಬ್ಬಳ್ಳಿ ರೈಲು ನಿಲ್ದಾಣದಿಂದ ರಾತ್ರಿ 11:15 ಕ್ಕೆ ಹೊರಟು ಬೆಳಗ್ಗೆ 6:50 ಕ್ಕೆ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣವನ್ನು ತಲುಪುತ್ತದೆ. ಈ ಮಾರ್ಗದಲ್ಲಿ, ರೈಲು ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ ಮತ್ತು ಬೆಂಗಳೂರು ರೈಲು ನಿಲ್ದಾಣಗಳಲ್ಲಿ ನಿಲ್ಲುತ್ತದೆ.

ರೈಲು ಸಂಖ್ಯೆ 07340 ಬೆಂಗಳೂರು ಮೆಜೆಸ್ಟಿಕ್‌ನಿಂದ SSS ಹುಬ್ಬಳ್ಳಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ ರಾತ್ರಿ 11:55 ಕ್ಕೆ ಹೊರಟು ಮರುದಿನ ಬೆಳಗ್ಗೆ 7:30 ಕ್ಕೆ ಹುಬ್ಬಳ್ಳಿ ರೈಲು ನಿಲ್ದಾಣವನ್ನು ತಲುಪುತ್ತದೆ.

ರೈಲು 1 ಎಸಿ 2-ಟೈರ್ ಕೋಚ್, 1 ಎಸಿ 3-ಟೈರ್ ಕೋಚ್, 11 ಸ್ಲೀಪರ್ ಕೋಚ್‌ಗಳು, 5 ಸೆಕೆಂಡ್ ಕ್ಲಾಸ್ ಕೋಚ್‌ಗಳು ಮತ್ತು 2 ಲಗೇಜ್-ಕಮ್-ಬ್ರೇಕ್‌ವಾನ್ ಮತ್ತು ವಿಕಲಾಂಗ ಸ್ನೇಹಿ ಕಂಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿರುವ 20 ಕೋಚ್‌ಗಳ ಸಂಯೋಜನೆಯನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+