Hubballi-Bengaluru Express Train: ನಾಳೆಯಿಂದಲೇ ಸೂಪರ್‌ ಫಾಸ್ಟ್‌ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ ಪುನಾರಾರಂಭ-ಮಾಹಿತಿ

ಹುಬ್ಬಳ್ಳಿ, ನವೆಂಬರ್, 29: ಕೆಲವು ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿ-ಬೆಂಗಳೂರು ನಡುವೆ ಸೂಪರ್‌ ಫಾಸ್ಟ್‌ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ರದ್ದು ಮಾಡಲಾಗಿತ್ತು. ನೈರುತ್ಯ ರೈಲ್ವೆಯ ಈ ನಿರ್ಧಾರಕ್ಕೆ ಜನಾಕ್ರೋಶ ಭುಗಿಲೆದ್ದಿತ್ತು. ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ವಿಶೇಷ ಎಕ್ಸ್ ಪ್ರೆಸ್ ರೈಲು (07339/07340) ಸಂಚಾರವನ್ನು ಮತ್ತೆ ನಾಳೆಯಿಂದ (ನವೆಂಬರ್ 30) ಪುನಾರಾರಂಭಿಸಲು ನಿರ್ಧರಿಸಿದ್ದು, ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತಹ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ವಿಶೇಷ ರೈಲು ಸಂಚಾರ ಸೇವೆ ನವೆಂಬರ್ 30ರಿಂದ ಮಾರ್ಚ್ 1ರವರೆಗೆ ಪುನರಾರಂಭಿಸಲಾಗುವುದು. ರೈಲು ಹೊರಡುವ ಸಮಯ, ನಿಲುಗಡೆ ಹಾಗೂ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.

Hubballi-Bengaluru Express: Super fast special express train service restart from november 30

ಪ್ರಯಾಣಿಕರ ಕೊರತೆ ಕಾರಣಕ್ಕೆ ನವೆಂಬರ್ 20ರಿಂದ ಈ ರೈಲನ್ನು ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ ಬೆಂಗಳೂರು ವಿಭಾಗಿಯ ವ್ಯವಸ್ಥಾಪಕರು ಹೊಸದುರ್ಗ ಯಾರ್ಡ್ ಕಾಮಾಗಿರಿ ಹಿನ್ನೆಲೆ ಈ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ ಎಂದಿದ್ದರು.

ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಜನರ ಆಗ್ರಹದ ಮೇರೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ನೈರುತ್ಯ ರೈಲ್ವೆ ಮಹಾ ಪ್ರಬಂಧಕ ಸಂಜೀವ ಕಿಶೋರ್ ಅವರೊಂದಿಗೆ ಮಾತುಕತೆ ನಡೆಸಿ, ರೈಲು ಪುನಾರಂಭದ ಅಗತ್ಯತೆ ಮನವರಿಕೆ ಮಾಡಲಾಯಿತು. ಇದಕ್ಕೆ ಸ್ಪಂದಿಸಿ, ಈ ರೈಲು ಸೇವೆಯನ್ನು ಮುಂದುವರೆಸಿ ಆದೇಶ ಮಾಡಿದ್ದಾರೆ ಎಂದಿದ್ದಾರೆ.

452 ಕಿ.ಮೀ.ವಿಸ್ತರಣೆ ಉಪನಗರ ರೈಲು ಯೋಜನೆಯ ತಿರಸ್ಕಾರ

ಸ್ಯಾಟಲೈಟ್ ಪಟ್ಟಣಗಳನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸುವ ಪ್ರಯತ್ನಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಬೆಂಗಳೂರು ಉಪನಗರ ರೈಲು ಯೋಜನೆಯ 452 ಕಿ.ಮೀ.ಗೆ ಚಾಲನೆ ನೀಡುವ 2ನೇ ಹಂತದ ಪೂರ್ವ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸುವಲ್ಲಿ ನೈರುತ್ಯ ರೈಲ್ವೆ (South Western Railway) ವಲಯ ತಿರಸ್ಕರಿಸಿದೆ.

ರೈಲ್ವೆ ಇಲಾಖೆಯ ಒಪ್ಪಿಗೆ ಪಡೆಯಲು ಬಿಎಸ್ಆರ್‌ಪಿಯನ್ನು ಅನುಷ್ಠಾನಗೊಳಿಸುವ ನೋಡಲ್ ಏಜೆನ್ಸಿಯಾದ ಕೆ-ರೈಡ್‌ನಿಂದ ಕೆಲವು ತಿಂಗಳ ಹಿಂದೆ ನೈರುತ್ಯ ರೈಲ್ವೆ (South Western Railway) ವಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಅಸ್ತಿತ್ವದಲ್ಲಿರುವ ರೈಲು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಗಮನಹರಿಸುವಂತೆ ನೈರುತ್ಯ ರೈಲ್ವೆ ವಲಯ ಕೇಳಿದೆ.

2ನೇ ಹಂತದ ಎಲ್ಲಾ ದಿಕ್ಕುಗಳಲ್ಲಿ 4 ಕಾರಿಡಾರ್‌ಗಳಿಗೆ ಸಾಗುವ 148.17 ಕಿಲೋ ಮೀಟರ್‌ ಹಂತ-1 ಉಪನಗರ ರೈಲು ಜಾಲದ ವಿಸ್ತರಣೆ ಆಗಿತ್ತು. ಕೆ-ರೈಡ್ ಮೂಲವು ಇದನ್ನು ಉದ್ದೇಶಿತ 452-ಕಿ.ಮೀಟರ್‌ ಮಾರ್ಗವೆಂದು ನಿರ್ದಿಷ್ಟಪಡಿಸಿದೆ. ಕಾರಿಡಾರ್ 1: ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರ: 22 ಕಿಲೋ ಮೀಟರ್‌ ಮತ್ತು ಚಿಕ್ಕಬಳ್ಳಾಪುರದಿಂದ ಕೋಲಾರ - 85 ಕಿಲೋ ಮೀಟರ್‌ ಎಂದು ಕಳುಹಿಸಲಾಗಿದೆ.

ಕಾರಿಡಾರ್-2 - ಚಿಕ್ಕಬಾಣಾವರದಿಂದ ತುಮಕೂರಿನವರೆಗೆ ದಾಬಸ್‌ಪೇಟೆ 35 ಕಿಲೋ ಮೀಟರ್‌ ಹೊಸ ಕಾರಿಡಾರ್ 2ಎ: ಚಿಕ್ಕಬಾಣಾವರದಿಂದ ಮಾಗಡಿ: 45 ಕಿ.ಮೀ; ಕಾರಿಡಾರ್ 3- ರಾಮನಗರ ಮತ್ತು ಮಂಡ್ಯ ಮೂಲಕ ಕೆಂಗೇರಿಯಿಂದ ಮೈಸೂರಿಗೆ-125 ಕಿ.ಮೀ, ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ- 45 ಕಿ.ಮೀ ಮತ್ತು ಹೆಲ್ಲಳಿಗೆ ಹೊಸೂರಿಗೆ: 23 ಕಿ.ಮೀ; ಕಾರಿಡಾರ್ 4: ರಾಜನಕುಂಟೆಯಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಗೌರಿಬಿದನೂರಿಗೆ: 52 ಕಿ.ಮೀ ಎಂದು ಕಳುಹಿಸಲಾಗಿತ್ತು.

SWR ಪರವಾಗಿ, (ಜಿಎಂ, ಎಸ್‌ಡಬ್ಲ್ಯೂಆರ್ ಅವರ ಒಪ್ಪಿಗೆಯೊಂದಿಗೆ) ಮುಖ್ಯ ಎಂಜಿನಿಯರ್, ಟ್ರ್ಯಾಕ್ ಪ್ರೊಕ್ಯೂರ್‌ಮೆಂಟ್, ಎಸ್‌ಡಬ್ಲ್ಯೂಆರ್‌ನ ಲಕ್ಷ್ಮಣ್ ಸಿಂಗ್ ಅವರು ಸಹಿ ಹಾಕಿರುವ ಪತ್ರವನ್ನು ನವೆಂಬರ್‌ 13ರಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮೂಲಸೌಕರ್ಯ, ಕರಂಟಕ ಮತ್ತು ಎಂಡಿ, ಕೆ-ರೈಡ್ ಅವರಿಗೆ ಕಳುಹಿಸಲಾಗಿದೆ. ಸ್ಯಾಟಲೈಟ್ ಟೌನ್ ನ್ನು ಬೆಂಗಳೂರು ನಗರಕ್ಕೆ ಸಂಪರ್ಕಿಸಲು ರೈಲ್ವೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳುತ್ತದೆ.

ರೈಲ್ವೆಯು ಈಗಾಗಲೇ ಸಾಕಷ್ಟು ಯೋಜನೆಯನ್ನು ಮಾಡಿರುವುದರಿಂದ ಸ್ಯಾಟಲೈಟ್ ಟೌಟ್‌ಗೆ ಯೋಜಿತ 4 ಬಿಎಸ್‌ಆರ್‌ಪಿ ಕಾರಿಡಾರ್‌ಗಳನ್ನು ವಿಸ್ತರಿಸಲು ಪೂರ್ವ-ಕಾರ್ಯಸಾಧ್ಯತೆಯ ಅಧ್ಯಯನವನ್ನು ಕೈಗೊಳ್ಳುವಲ್ಲಿ ಯಾವುದೇ ಸಮರ್ಥನೆ ಇಲ್ಲವೆದು ಪತ್ರದಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+