Great News: ಪ್ರೇಯಸ್ಸಿಯೊಂದಿಗೆ ಥೈಲ್ಯಾಂಡ್‌ಗೆ ಹೋಗ್ಬೇಕೆ? ಈ ದಿನಾಂಕದೊಳಗೆ ಪ್ರಯಾಣಿಸಿ.. ಮತ್ತೆ ಇಂತಹ ಅವಕಾಶ ಸಿಗೋದು ಡೌಟ್
Thailand Tour: ಥೈಲ್ಯಾಂಡ್ ಪ್ರವಾಸ ಬೆಳೆಸಬೇಕೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇಲ್ಲಿನ ಪ್ರವಾಸಿ ತಾಣಗಳು ಸ್ವರ್ಗಕ್ಕೇ ಬಂದಿದ್ದೇವೆ ಅನ್ನುವಂತಹ ಅನುಭವವನ್ನು ನೀಡುತ್ತವೆ. ಇನ್ನು ಇದೀಗ ಭಾರತದಿಂದ ಪ್ರಯಾಣ ಮಾಡುವವರಿಗೆ ಮಾತ್ರ ವೀಸಾ ಇಲ್ಲದೆ ಥೈಲ್ಯಾಂಡ್ ಪ್ರವಾಸ ಬೆಳೆಸಲು ಅವಕಾಶ ಕಲ್ಪಿಸಲಾಗಿದೆ. ಹಾಗಾದರೆ ಎಲ್ಲಿಯವರೆಗೂ ಈ ಬಿಗ್ ಆಫರ್ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಥೈಲ್ಯಾಂಟ್ ಪ್ರೇಮಿಗಳ ಭೇಟಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಅದರಲ್ಲೂ ಇದೀಗ ಚಳಿಗಾಲ ಆದ್ದರಿಂದ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಮಿಗಳು ಭೇಟಿ ನೀಡುತ್ತಾರೆ. ಆದ್ದರಿಂದ ವೀಸಾದ ತೊಂದರೆ ಆಗಬಾರದೆಂದು ಥೈಲ್ಯಾಂಡ್ ಸರ್ಕಾರ ಭಾರತೀಯರಿಗೆ ವೀಸಾ ಮುಕ್ತ ಅವಕಾಶವನ್ನು ಕಲ್ಪಿಲಿಸಿದೆ. ಇನ್ನೂ ಈ ಅವಕಾಶವನ್ನು ಕಳೆದುಕೊಂಡರೆ ಮತ್ತೆ ಸಿಗುವುದು ಡೌಟ್ ಎನ್ನಲಾಗುತ್ತಿದೆ.

ಭಾರತೀಯರಿಗೆ ಮಾತ್ರ ಥೈಲ್ಯಾಂಡ್ ವೀಸಾ ಮುಕ್ತ ಪ್ರವೇಶದ ಅವಧಿಯನ್ನು ವಿಸ್ತರಿಸಿದೆ. 2024 ನವೆಂಬರ್ 11ರಂದು ಈ ಅವಕಾಶ ಕೊನೆಯಾಗಲಿದೆ. ಈ ನೀತಿಯ ಅನ್ವಯ ಭಾರತೀಯ ಸಂದರ್ಶಕರು ವೀಸಾ ಇಲ್ಲದೆ, 60 ದಿನಗಳವರೆಗೆ ಥೈಲ್ಯಾಂಡ್‌ನಲ್ಲಿ ಪ್ರವಾಸ ಮಾಡಬಹುದಾಗಿದೆ. ಜೊತೆಗೆ ಸ್ಥಳೀಯ ವಲಸೆ ಕಚೇರಿಯ ಒಪ್ಪಿಗೆ ಪಡೆದು ಹೆಚ್ಚುವರಿ 30 ದಿನಗಳವರೆಗೆ ಉಳಿಯಬಹುದಾಗಿದೆ. ಈ ಮೂಲಕ ಭಾರತೀಯ ಪ್ರವಾಸಿಗರಿಗೆ ಥೈಲ್ಯಾಂಡ್‌ನಲ್ಲಿ ಪ್ರಯಾಣವನ್ನು ಹೆಚ್ಚು ಸುಲಭವಾಗಿಸಲಿದೆ.
ವೀಸಾ ಅರ್ಜಿಯ ಅಗತ್ಯ ಇಲ್ಲದೆ, ಥೈಲ್ಯಾಂಡ್‌ನಲ್ಲಿನ ಸ್ವರ್ಗದಂತಿರುವ ಅತ್ಯದ್ಭುತ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಲು ಭಾರತೀಯರಿಗೆ ಇಲ್ಲಿನ ಪ್ರವಾಸೋದ್ಯಮ ಇಲಾಖೆ ಅವಕಾಶ ಕಲ್ಪಿಸಿದೆ. ದೆಹಲಿಯ ರಾಯಲ್ ಥಾಯ್ ರಾಯಭಾರ ಕಚೇರಿಯ ಅಧಿಕಾರಿಗಳು ಥಾಯ್ ಪ್ರವಾಸೋದ್ಯಮ ಮತ್ತು ಭಾರತೀಯ ಪ್ರವಾಸಿಗರಿಗೆ ಸುಲಭ ಪ್ರಯಾಣಕ್ಕೆ ವೀಸಾ ಮುಕ್ತ ಪ್ರವೇಶ ಅನಿರ್ಧಿಷ್ಟ ವಿಸ್ತರಣೆ ಬಗ್ಗೆ ಥೈಲ್ಯಾಂಡ್ ಸರ್ಕಾರ ಮಾಹಿತಿಯನ್ನು ಹಂಚಿಕೊಂಡಿದೆ.
ಈ ಯೋಜನೆಯಿಂದ ಥೈಲ್ಯಾಂಡ್ ಸರ್ಕಾರ ದೇಶದ ಆದಾಯ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಈ ಮೂಲಕ ಪ್ರವಾಸಿಗರಿಂದ ವಸತಿ, ಊಟ, ಪ್ರವಾಸ, ಸಾರಿಗೆ ಸೇವೆಗಳಿಗೆ ಬೇಡಿಕೆ ಹೆಚ್ಚಿದಂತಾಗಲಿದೆ. ಅಲ್ಲದೆ, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಬೆಳವಣಿಗೆಯನ್ನು ಕಾಣಬಹುದಾಗಿದೆ. ಜೊತೆಗೆ ಉದ್ಯೋಗ ಅವಕಾಶ ಸೃಷ್ಟಿ, ಸ್ಥಳೀಯ ವ್ಯವಹಾರಗಳಿಗೆ ಬೆಂಬಲ ಸೇರಿದಂತೆ ಇಲ್ಲಿನ ಸಮುದಾಯಗಳಿಗೆ ತುಂಬಾ ಸಹಕಾರಿ ಆದಂತಾಗುತ್ತದೆ.
ಇಲ್ಲಿ ರಮಣೀಯವಾದ ದ್ವೀಪಗಳಿದ್ದು, ಇವುಗಳನ್ನು ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತಲೇ ಇರುತ್ತವೆ. ಇನ್ನು ಮೂಲಗಳ ಪ್ರಕಾರ, ಥೈಲ್ಯಾಂಡ್ ಕ್ಯಾಸಿನೋಗಳನ್ನು ಕಾನೂನುಬದ್ಧಗೊಳಿಸಲು ಡೈಲ್ಯಾಂಡ್ ಪ್ರವಾಸೋದ್ಯಮ ಇಲಾಖೆ ಪ್ಲಾನ್ ಮಾಡಿಕೊಂಡಿದೆ. ಈ ಮೂಲಕ ಕ್ಯಾಸಿನೊಗಳಲ್ಲಿ ಆಸಕ್ತಿ ಹೊಂದಿರುವವರು ಥೈಲ್ಯಾಂಡ್ ಪ್ರವಾಸ ಮಾಡಲು ಹೆಚ್ಚು ಬಯಸುತ್ತಾರೆ. ಅದರಲ್ಲೂ ಚಳಿಗಾಲದಲ್ಲಿ ಇಲ್ಲಿಗೆ ಎಲ್ಲಾ ರೀತಿಯ ವಯೋಮಾನದವರು ಭೇಟಿ ನೀಡುತ್ತಾರೆ.
ಹಾಗಾದರೆ ಚಳಿಗಾಲಕ್ಕೆ ನಿಮ್ಮ ಪ್ರೇಯಸ್ಸಿಯೊಂದಿಗೆ ಕಾಲ ಕಳೆಯರು ಇಲ್ಲಿನ ಯಾವ ತಾಣಗಳು ಸೂಕ್ತ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಅಷ್ಟೇ ಅಲ್ಲದೆ ಕುಟುಂಬ ಸಹಿತ ಇಲ್ಲಿಗೆ ಪ್ರವಾಸ ಬೆಳೆಸಲು ಇದು ಉತ್ತಮ ಸಮಯವಾಗಿದೆ.
ಪ್ರಮುಖ ಪ್ರವಾಸಿ ತಾಣಗಳು
* ಪಟ್ಟಾಯ ಫ್ಲೋಟಿಂಗ್ ಮಾರ್ಕೆಟ್
* ಚಾವೊ ಫ್ರಾಯಾ ನದಿ
* ಸೈಮನ್ ಕ್ಯಾಬರೆ ಶೋ
* ಡ್ರೀಮ್ ವರ್ಲ್ಡ್ ಅಮ್ಯೂಸ್‌ಮೆಂಟ್ ಪಾರ್ಕ್
* ಆರ್ಟ್ ಇನ್ ಪ್ಯಾರಡೈಸ್
* ಚಿಯಾಂಗ್ ಮಾಯ್
ಅತ್ಯದ್ಭುತ ಬೀಚ್‌ಗಳು
* ಪಟಾಂಗ್ ಬೀಚ್
* ಕಟಾ ಬೀಚ್
* ಕರೋನ್ ಬೀಚ್
* ಕೊಹ್ ಸಮೆಟ್ ಬೀಚ್
* ಸಾಯಿ ಕೇವ್ ಬೀಚ್












Click it and Unblock the Notifications