ಹುಬ್ಬಳ್ಳಿ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌: ಮೈಸೂರು - ದಾನಾಪುರ ಮಾರ್ಗದಲ್ಲಿ ವಿಶೇಷ ರೈಲು ಸೇವೆ

ಕ್ರಿಸ್ಮಸ್‌ ಹಾಗೂ ಹೊಸ ವರ್ಷ ಹಿನ್ನೆಲೆಯಲ್ಲಿ ಇದು ರಜೆ ಅವಧಿಯಾಗಿದೆ. ರಜೆ ಸಮಯದಲ್ಲಿ ಸಾವಿರಾರು ಜನ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ರೈಲುಗಳ ಸಂಖ್ಯೆಯನ್ನು ಹಾಗೂ ವಿಶೇಷ ರೈಲು ಸೇವೆಯನ್ನು ಸಹ ಪರಿಚಯಿಸಲಾಗಿದೆ. ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ ರೈಲ್ವೆ ಇಲಾಖೆಯು ಮೈಸೂರು ಮತ್ತು ದಾನಾಪುರ ನಿಲ್ದಾಣಗಳ ನಡುವೆ ಪ್ರತಿ ಮಾರ್ಗದಲ್ಲೂ ಮೂರು ಟ್ರಿಪ್‌ಗಳಿಗೆ ವಿಶೇಷ ರೈಲುಗಳನ್ನು ಹೆಚ್ಚುವರಿಯಾಗಿ ಓಡಿಸಲು ನಿರ್ಧರಿಸಿದೆ.

ಈ ಮೂಲಕ ಈ ಮಾರ್ಗದಲ್ಲಿ ಪ್ರಯಾಣ ಮಾಡುವ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಯಾವ ವಿಶೇಷ ರೈಲುಗಳನ್ನು ಬಿಡಲಾಗಿದೆ ಹಾಗೂ ಈ ವಿಶೇಷ ರೈಲು ಯಾವ ಮಾರ್ಗದ ಮೂಲಕ ಸಂಚರಿಸಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

Good news for Hubballi train passengers Special train service on Mysore - Danapur route

ದೇಶದಲ್ಲಿ ಹಬ್ಬದ ಸೀಸನ್ ಇರುವುದರಿಂದ ಹಾಗೂ ಶಾಲಾ ಮಕ್ಕಳಿಗೆ ಶಾಲೆಗಳಲ್ಲಿ ಕ್ರಿಸ್ಮಸ್‌ ರಜೆ ಇರುವ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳು ಇವೆ. ವರ್ಷಾಂತ್ಯವೂ ಆಗಿರುವುದರಿಂದ ಜನ ಪ್ರಯಾಣ ಮಾಡುವುದರಿಂದ ಹೆಚ್ಚು ವಿಶೇಷ ರೈಲುಗಳ ಸೇವೆಯನ್ನು ಪರಿಚಯಿಸಲಾಗುತ್ತಿದೆ.

06207 ಸಂಖ್ಯೆಯ ಮೈಸೂರು-ದಾನಾಪುರ ಎಕ್ಸ್‌ಪ್ರೆಸ್ ವಿಶೇಷ ರೈಲು 18.01.2025, 15.02.2025 ಹಾಗೂ 01.03.2025 (ಶನಿವಾರ) ರಂದು ಸಂಜೆ 4:30ಕ್ಕೆ ಮೈಸೂರಿನಿಂದ ಹೊರಟು ಮಂಗಳವಾರ ಬೆಳಿಗ್ಗೆ 10:00ಕ್ಕೆ ದಾನಾಪುರ ತಲುಪಲಿದೆ.

06208 ಸಂಖ್ಯೆಯ ದಾನಾಪುರ-ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು 22.01.2025, 19.02.2025 ಹಾಗೂ 05.03.2025 (ಬುಧವಾರ) ರಂದು ತಡರಾತ್ರಿ 1:45 ಕ್ಕೆ ದಾನಾಪುರದಿಂದ ಹೊರಟು ಶುಕ್ರವಾರ ಮಧ್ಯಾಹ್ನ 3:00 ಗಂಟೆಗೆ ಮೈಸೂರು ತಲುಪಲಿದೆ.

ಈ ರೈಲು ಎರಡೂ ಮಾರ್ಗದಲ್ಲಿ ಸಂಚರಿಸುವಾಗ ಈ ನಿಲ್ದಾಣಗಳಲ್ಲಿ ಸ್ಟಾಪ್ ಕೊಡಲಿದೆ: ರೈಲ್ವೆ ಇಲಾಖೆ ಪರಿಚಯಿಸಿರುವ ಈ ವಿಶೇಷ ರೈಲು ಹಲವು ಪ್ರಮುಖ ನಿಲ್ದಾಣಗಳಲ್ಲಿ ಸ್ಟಾಪ್‌ ಕೊಡಲಿದೆ. ಮಂಡ್ಯ, ಮದ್ದೂರು, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ (Cant), ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಬಾಗಲ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಮುಂದುವರಿದು ಕುರ್ದುವಾಡಿ, ದೌಂಡ್, ಅಹ್ಮದ್‌ನಗರ, ಕೋಪರ್‌ಗಾಂವ್, ಮನ್ಮಾಡ್, ಭೂಸಾವಲ್, ಖಂಡ್ವಾ, ಛನೇರಾ, ಖಿರ್ಕಿಯಾ, ಹರ್ದಾ, ಬಾನಪುರ, ಇಟಾರ್ಸಿ, ಪಿಪಾರಿಯಾ, ನರಸಿಂಗ್‌ಪುರ್, ಜಬಲ್‌ಪುರ್, ಕಟ್ನಿ, ಮೈಹರ್, ಸತ್ನಾ, ಮಾಣಿಕ್‌ಪುರ್, ಪ್ರಯಾಗ್ರಾಜ್ ಛೋಕಿ, ಚುನ್, ಮಿರ್ಜಾಪುರ್. ದೀನ್ ದಯಾಳ್‌ಉಪಾಧ್ಯಾಯ ಜಂಕ್ಷನ್, ಬಕ್ಸರ್ ಎನ್ನುವ ರೈಲು ನಿಲ್ದಾಣ ಸೇರಿದಂತೆ ಹಲವು ಪ್ರಮುಖ ರೈಲು ನಿಲ್ದಾಣಗಳಲ್ಲಿ ರೈಲು ನಿಲುಗಡೆ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.

ಇನ್ನು ಈ ವಿಶೇಷ ರೈಲುಗಳು 22 LHB ಬೋಗಿಗಳನ್ನು ಒಳಗೊಂಡಿರಲಿದೆ. ಇದರಲ್ಲಿ 12 AC- ತ್ರೀ ಟೈರ್ ಬೋಗಿಗಳು, 6 ಸೆಕೆಂಡ್‌ ಕ್ಲಾಸ್‌ ಸ್ಲೀಪರ್ ಬೋಗಿಗಳು, 2 ಸಾಮಾನ್ಯ ಸೆಕೆಂಡ್‌ ಕ್ಲಾಸ್‌ ಬೋಗಿಗಳು ಹಾಗೂ 2 ಲಗೇಜ್-ಕಮ್-ಗಾರ್ಡ್ ಬೋಗಿಗಳು ಇರಲಿವೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+