Expressways: ದೇಶದಲ್ಲಿ ಈ 10 ರಾಷ್ಟ್ರೀಯ ಹೆದ್ದಾರಿಗಳು ಉದ್ಘಾಟನೆಯಾದ್ರೆ ಏನೆಲ್ಲ ಪ್ರಯೋಜನೆಗಳಾಗಲಿವೆ?-ಇಲ್ಲಿದೆ ಮಾಹಿತಿ
Expressways: ಭಾರತದಲ್ಲಿ ಸಾರಿಗೆ ವಿಭಾಗದಲ್ಲಿ ದೊಡ್ಡ ಅಬೀವೃದ್ಧಿ ಕಾರ್ಯಗಳೇ ಆಗುತ್ತಿವೆ. ಹೆದ್ದಾರಿಗಳ ಅಭಿವೃದ್ಧಿ, ಹೊಸ ಹೆದ್ದಾರಿಗಳ ನಿರ್ಮಾಣ ಹಾಗೂ ವಿಸ್ತರಣೆ ಆಗುತ್ತಲೇ ಇದೆ. ಹಾಗೆಯೇ ಮುಂಬರುವ ವರ್ಷಗಳಲ್ಲಿ ಭಾರತಮಾಲಾ ಪರಿಯೋಜನಾ ಅಡಿಯಲ್ಲಿ 25 ಗ್ರೀನ್‌ಫೀಲ್ಡ್ ಹೈಸ್ಪೀಡ್ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಇಲ್ಲಿ ಪ್ರಮುಖ 10 ಎಕ್ಸ್‌ಪ್ರೆಸ್‌ವೇಗಳು ಬರುತ್ತವೆ. ಹಾಗಾದರೆ ಈ ಹೆದ್ದಾರಿಗಳಿಂದ ಏನೆಲ್ಲ ಪ್ರಯೋಜನೆಗಳಾಗಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
1. ನವದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ: ನವದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಹಂತದಲ್ಲಿದ್ದು, 1,386-ಕಿಲೋಮೀಟರ್ ಉದ್ದದ ಎಕ್ಸ್‌ಪ್ರೆಸ್‌ವೇ ಇದಾಗಿದೆ. ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕೇವಲ 12 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಇದು ನವದೆಹಲಿ, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ದಾದ್ರಾ, ಹವೇಲಿ ಮತ್ತು ಮಹಾರಾಷ್ಟ್ರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ.

2. ವಾರಣಾಸಿ-ರಾಂಚಿ-ಕೋಲ್ಕತ್ತಾ ಎಕ್ಸ್‌ಪ್ರೆಸ್‌ವೇ: ವಾರಣಾಸಿಯಿಂದ ರಾಂಚಿ ಮೂಲಕ ಕೋಲ್ಕತ್ತಾಕ್ಕೆ ಈ ಎಕ್ಸ್‌ಪ್ರೆಸ್‌ವೇ ಪ್ರವೇಶ ನಿಯಂತ್ರಿತ ಕಾರಿಡಾರ್ ಆಗಿದ್ದು, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳವನ್ನು ದಾಟಿ 612 ಕಿಲೋ ಮೀಟರ್‌ಗಳನ್ನು ಒಳಗೊಂಡಿದೆ. ಇದು ಪ್ರಯಾಣದ ಸಮಯವನ್ನು 15 ಗಂಟೆಗಳಿಂದ ಕೇವಲ 9 ಗಂಟೆಗಳಿಗೆ ಕಡಿತಗೊಳಿಸುತ್ತದೆ.
3. ಹೈದರಾಬಾದ್-ವಿಶಾಖಪಟ್ಟಣಂ ಎಕ್ಸ್‌ಪ್ರೆಸ್‌ವೇ: ತೆಲಂಗಾಣ ಮತ್ತು ಆಂಧ್ರಪ್ರದೇಶದ ಮೂಲಕ ಹಾದು ಹೋಗುವ ಹೈದರಾಬಾದ್- ವಿಶಾಖಪಟ್ಟಣಂ ಎಕ್ಸ್‌ಪ್ರೆಸ್‌ವೇ 222 ಕಿಲೋಮೀಟರ್‌ಗಳಷ್ಟು ಉದ್ದ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
4. ನವದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ: ನವದೆಹಲಿಯಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ಸಹರಾನ್‌ಪುರದ ಮೂಲಕ ನವದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡವನ್ನು ಒಳಗೊಂಡ ಪ್ರವೇಶ ನಿಯಂತ್ರಿತ ಕಾರಿಡಾರ್ ಆಗಿರುತ್ತದೆ. 239 ಕಿಲೋಮೀಟರ್ ಉದ್ದದ ಈ ಎಕ್ಸ್‌ಪ್ರೆಸ್‌ವೇ ಪ್ರಯಾಣದ ಸಮಯವನ್ನು 2.5 ಗಂಟೆಗಳವರೆಗೆ ಕಡಿಮೆ ಮಾಡಲಿದೆ.
5. ಸೂರತ್-ನಾಸಿಕ್-ಸೋಲಾಪುರ ಎಕ್ಸ್‌ಪ್ರೆಸ್‌ವೇ: ಸೂರತ್-ನಾಸಿಕ್-ಅಹಮದ್‌ನಗರ-ಸೋಲಾಪುರ್ ಎಕ್ಸ್‌ಪ್ರೆಸ್‌ವೇ ಪ್ರವೇಶ-ನಿಯಂತ್ರಿತವಾಗಿದ್ದು, ಗುಜರಾತ್ ಮತ್ತು ಮಹಾರಾಷ್ಟ್ರದ ಮೂಲಕ 730 ಕಿಲೋಮೀಟರ್ ಉದ್ದ ಇದೆ ಎನ್ನಲಾಗಿದೆ.
6. ನವದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ: 669 ಕಿಲೋ ಮೀಟರ್‌ಗಳಷ್ಟು ಉದ್ದಿವಿರುವ ನವದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ ದೆಹಲಿ ಮತ್ತು ಕತ್ರಾ ನಡುವಿನ ಪ್ರಯಾಣದ ಸಮಯವನ್ನು ಕೇವಲ 6 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಇದು ನವದೆಹಲಿ, ಹರಿಯಾಣ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸಲಿದೆ.
7. ಇಂದೋರ್-ಹೈದರಾಬಾದ್ ಎಕ್ಸ್‌ಪ್ರೆಸ್‌ವೇ: ಇಂದೋರ್-ಹೈದರಾಬಾದ್ ಎಕ್ಸ್‌ಪ್ರೆಸ್‌ವೇ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸಿದ್ದು, ಇದು 525 ಕಿಲೋ ಮೀಟರ್ ಉದ್ದ ಇದೆ ಎನ್ನಲಾಗಿದೆ.
8. ಕಾನ್ಪುರ-ಲಖನೌ ಎಕ್ಸ್‌ಪ್ರೆಸ್‌ವೇ: ಕಾನ್ಪುರ-ಲಕ್ನೋ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದಲ್ಲಿ 63 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಇನ್ನು ಇದು ಈ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕೇವಲ 30 ನಿಮಿಷಗಳವರೆಗೆ ಕಡಿಮೆ ಮಾಡಲಿದೆ.
9. ಅಮೃತಸರ-ಭಟಿಂಡಾ-ಜಾಮ್‌ನಗರ ಎಕ್ಸ್‌ಪ್ರೆಸ್‌ವೇ: ಅಮೃತಸರದಿಂದ ಭಟಿಂಡಾ ಮೂಲಕ ಜಾಮ್‌ನಗರಕ್ಕೆ ಈ ಎಕ್ಸ್‌ಪ್ರೆಸ್‌ವೇ 917 ಕಿಲೋ ಮೀಟರ್‌ಗಳಷ್ಟು ದೂರವನ್ನು ಕ್ರಮಿಸುತ್ತದೆ. ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ ಮೂಲಕ ಹಾದು ಹೋಗಲಿದೆ.
10. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ: ಇನ್ನು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ 262 ಕಿಲೋಮೀಟರ್ ದೂರವನ್ನು ಕ್ರಮಿಸಲಿದ್ದು, ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕೇವಲ 2 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ. ಇದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹಾದುಹೋಗಲಿದೆ.












Click it and Unblock the Notifications