Demu & Memu train: ರೈಲ್ವೇ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್-ಏನದು?
South Western Railway: ರೈಲ್ವೆ ಮಂಡಳಿಯು ಮಹಾಮಾರಿ ಕೊರೊನಾ ಸಮಯದಲ್ಲಿ ಮೆಮು/ಡೆಮು ಮತ್ತು ಪ್ಯಾಸೆಂಜರ್ ರೈಲು ಪ್ರಯಾಣ ದರವನ್ನು ಹೆಚ್ಚಳ ಮಾಡಿದ್ದು, ಇದೀಗ ಕಡಿಮೆ ಮಾಡದೆ. ಹಾಗಾದರೆ ಎಷ್ಟು ಕಡಿಮೆ ಮಾಡಿದೆ ಹಾಗೂ ಈ ನಿಯಮ ಜಾರಿಯಾಗಲು ಕಾರಣ ಏನು ಎಂದು ಇಲ್ಲಿ ತಿಳಿಯಿರಿ.
ನೈಋುತ್ಯ ರೈಲ್ವೆಯ ಬೆಂಗಳೂರು ವಲಯದ 20(ಹೋಗುವ-ಬರುವ) ಜೋಡಿ ಸ್ಥಳೀಯ ರೈಲು ಪ್ರಯಾಣ ದರವನ್ನು ಇಳಿಕೆ ಮಾಡಿದೆ. ನೈಋುತ್ಯ ರೈಲ್ವೆಯ ಬೆಂಗಳೂರು ವಲಯದ ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಮೆಮು)/ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಡೆಮು) ಮತ್ತು ಪ್ಯಾಸೆಂಜರ್ ರೈಲುಗಳ 108 ಸೇವೆಗಳ ದರವನ್ನು ಕಡಿಮೆ ಮಾಡಲಾಗಿದೆ. ರೈಲ್ವೆ ಮಂಡಳಿಯ ಈ ನಿರ್ಣಯ ಲಕ್ಷಾಂತರ ಪ್ರಯಾಣಿಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ರಸ್ತೆ ಸಾರಿಗೆ ವಾಹನಗಳಲ್ಲಿ ಪ್ರಯಾಣ ದರ ಹೆಚ್ಚಾಗಿರುತ್ತದೆ. ಈ ಕಾರಣದಿಂದ ರೈಲಿನಲ್ಲೆಯೇ ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ಪ್ಯಾಸೆಂಜರ್ ರೈಲುಗಳಲ್ಲಿ ಪ್ರಯಾಣ ಮಾಡುತ್ತಾರೆ. ಇನ್ನು ಕೋವಿಡ್ ಪೂರ್ವದಲ್ಲಿ ಕನಿಷ್ಠ ದರ 10 ರೂಪಾಯಿ ಇತ್ತು. ಕೋವಿಡ್ ಸಂದರ್ಭದಲ್ಲಿ ಜನಸಂದಣೆ ತಡೆಯುವ ಉದ್ದೇಶದಿಂದ ರೈಲ್ವೆ ಮಂಡಳಿಯು ಕನಿಷ್ಠ ದರವನ್ನು 30 ರೂಪಾಯಿಗೆ ಏರಿಸಿತ್ತು.
ರೈಲ್ವೆ ಮೂಲಗಳ ಪ್ರಕಾರ, ಮುಖ್ಯ ಬುಕಿಂಗ್ ಮೀಸಲಾತಿ ಮೇಲ್ವಿಚಾರಕರಿಗೆ ಮಂಗಳವಾರ ಮುಂಜಾನೆಯಿಂದ ಜಾರಿಗೆ ಬರುವಂತೆ ಎರಡನೇ ದರ್ಜೆಯ ಸಾಮಾನ್ಯ ರೈಲುಗಳಲ್ಲಿ ಕನಿಷ್ಠ ಪ್ರಯಾಣ ದರವನ್ನು ವ್ಯತಿರಿಕ್ತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ವಿಚಾರವಾಗಿ ಸೋಮವಾರ ರೈಲ್ವೆ ಮಂಡಳಿಯು ಪರಿಶೀಲನಾ ಸಭೆಯನ್ನು ಕರೆದಿದ್ದು, ನೆಟ್‌ವರ್ಕ್‌ನಾದ್ಯಂತ ಎಲ್ಲಾ ವಲಯ ರೈಲ್ವೆಗಳಿಗೆ ಹಳೆಯ ದರಗಳನ್ನು ಅನುಸರಿಸಬೇಕೆನ್ನುವ ಸಂದೇಶವನ್ನು ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.
'ಪ್ಯಾಸೆಂಜರ್ ರೈಲುಗಳ' ಯುಗವು ಹೇಗೆ ಕೊನೆಗೊಂಡಿತು ಮತ್ತು ಪ್ರಯಾಣಿಕರು, ವಿಶೇಷವಾಗಿ ಸಣ್ಣ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು ಮತ್ತು ಇತರ ಬಡ ಪ್ರಯಾಣಿಕರು ಪ್ರಯಾಣಕ್ಕಾಗಿ ದುಪ್ಪಟ್ಟು ಶುಲ್ಕವನ್ನು ಪಾವತಿಸುತ್ತಿದ್ದಾರೆ. ಆದ್ದರಿಂದ ಇದೀಗ ರೈಲು ಪ್ರಯಾಣ ದರದಲ್ಲು ಇಳಿಕೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜನರಲ್ ಮ್ಯಾನೇಜರ್‌ಗಳ ಸೂಚನೆಗಳ ಮೇರೆಗೆ, ವಲಯ ರೈಲ್ವೇಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರು 'ಸಾಮಾನ್ಯ ವರ್ಗ' ದರಗಳನ್ನು ಪರಿಷ್ಕರಿಸಲು ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಲು ಆದೇಶಿಸಿದರು.
ಶೇಕಡಾ 50ರಷ್ಟು ದರ ಕಡಿತ: ಮಂಗಳವಾರ (ಫೆಬ್ರವರಿ 27)ದಿಂದಲೇ ಜಾರಿಗೆ ಬರುವಂತೆ, ರೈಲ್ವೇಯು ಎಲ್ಲಾ ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (MEMU) ಮತ್ತು ಡೆಮು ರೈಲುಗಳಲ್ಲಿ ಸಾಮಾನ್ಯ ವರ್ಗದ ದರಗಳನ್ನು ಸುಮಾರು ಶೇಕಡಾ 50%ರಷ್ಟು ಕಡಿತಗೊಳಿಸಿದೆ. ಇನ್ನು ಕಾಯ್ದಿರಿಸದ ಟಿಕೆಟ್ ದರವನ್ನು ಅಪ್ಲಿಕೇಶನ್‌ನಲ್ಲಿ ಪರಿಷ್ಕರಿಸಲಾಗಿದೆ.
ಈ ಹಿಂದೆ ಪ್ಯಾಸೆಂಜರ್ ರೈಲುಗಳಾಗಿ ಮತ್ತು ಈಗ ದೇಶಾದ್ಯಂತ 'ಎಕ್ಸ್‌ಪ್ರೆಸ್ ಸ್ಪೆಷಲ್' ಅಥವಾ ಮೆಮು ಆಗಿ ಓಡುತ್ತಿರುವ ಎಲ್ಲಾ ರೈಲುಗಳಿಗೆ ದರಗಳಲ್ಲಿನ ಈ ಕಡಿತ ಅನ್ವಯಿಸುತ್ತದೆ ಎಂದು ಮೂಲಗಳು ತಿಳಿದುಬಂದಿದೆ.












Click it and Unblock the Notifications