ದೀಪಾವಳಿ; ಉಧಾನ್-ಮಂಗಳೂರು ವಿಶೇಷ ರೈಲು, ವೇಳಾಪಟ್ಟಿ
ಮಂಗಳೂರು, ನವೆಂಬರ್ 02: ದೀಪಾವಳಿ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಭಾರತೀಯ ರೈಲ್ವೆ ಉಧಾನ್ ಮತ್ತು ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲು ಓಡಿಸುತ್ತಿದೆ. ವಿಶೇಷ ರೈಲು ಸೇವೆ ಆದ ಕಾರಣ ದರಗಳು ಸಹ ಹೆಚ್ಚಿರುತ್ತದೆ.
ಗುಜರಾತ್‌ನ ಉಧಾನ್ ಮತ್ತು ಮಂಗಳೂರು ಜಂಕ್ಷನ್ ನಡುವೆ ವಾರಕ್ಕೆ ಎರಡು ಬಾರಿ ಸಂಚಾರ ನಡೆಸುವ ವಿಶೇಷ ದರದ ರೈಲು ಓಡಿಸಲಾಗುತ್ತಿದೆ. ರೈಲು ನಂಬರ್ 09057/ 09058 ಉಧಾನ್ ಜಂಕ್ಷನ್-ಮಂಗಳೂರು ಜಂಕ್ಷನ್-ಉಧಾನ್ ಜಂಕ್ಷನ್ ನಡುವೆ ಸಂಚಾರ ನಡೆಸಲಿದೆ.

ವಿಶೇಷ ರೈಲಿನ ವೇಳಾಪಟ್ಟಿ; ರೈಲು ನಂಬರ್ 09057 ಉಧಾನ್ ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ರೈಲು ಉಧಾನ್ ಜಂಕ್ಷನ್‌ನಿಂದ 19.45ಕ್ಕೆ ಶುಕ್ರವಾರ ಮತ್ತು ಭಾನುವಾರ ಹೊರಡಲಿದೆ. ನವೆಂಬರ್ 3, 5, 10, 12, 17, 19, 24, 26ರಂದು ಸಂಚಾರ ನಡೆಸಲಿದೆ.
ಡಿಸೆಂಬರ್ ತಿಂಗಳಿನಲ್ಲಿ 1, 3, 8, 10, 15, 17, 22, 24, 29 ಮತ್ತು 31 ರಂದು ಸಂಚಾರ ನಡೆಸಲಿದೆ. ಉಧಾನ್ ಜಂಕ್ಷನ್‌ನಿಂದ ಹೊರಡುವ ರೈಲು ಮರುದಿನ 19:10ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ.
ರೈಲು ನಂಬರ್ 09058 ಮಂಗಳೂರು ಜಂಕ್ಷನ್ ಉಧಾನ್ ಜಂಕ್ಷನ್ ವಿಶೇಷ ದರದ ರೈಲು ಮಂಗಳೂರು ಜಂಕ್ಷನ್‌ನಿಂದ 21:10ಕ್ಕೆ ಶನಿವಾರ ಮತ್ತು ಸೋಮವಾರ ಹೊರಡಲಿದೆ. ನವೆಂಬರ್ 4, 6, 11, 13, 18, 20, 25 ಮತ್ತು 27ರಂದು ಸಂಚಾರ ನಡೆಸಲಿದೆ.
ಡಿಸೆಂಬರ್ ತಿಂಗಳಿನಲ್ಲಿ 2, 4, 9, 11, 16, 18, 23, 25, 30 ಮತ್ತು ಜನವರಿ 1ರಂದು ಸಂಚಾರ ನಡೆಸಲಿದೆ. ಮಂಗಳೂರಿನಿಂದ ಹೊರಡುವ ರೈಲು ಮರುದಿನ 21:30ಕ್ಕೆ ಉಧಾನ್ ಜಂಕ್ಷನ್ ತಲುಪಲಿದೆ.
ಉಧಾನ್ ಜಂಕ್ಷನ್-ಮಂಗಳೂರು ಜಂಕ್ಷನ್ ರೈಲು ಮಾರ್ಗದಲ್ಲಿ ವಾಪಿ, ಪಾಲ್ಗರ್, ವಾಸಿ ರೋಡ್, ಬಿವಂಡಿ ರೋಡ್, ರೋಹ್, ರತ್ನಗಿರಿ, ರಾಜಾಪುರ ರೋಡ್, ವೈಭವವಾಡಿ ರೋಡ್, ಮಡಗಾಂವ್ ಜಂಕ್ಷನ್, ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ ಮತ್ತು ಸುರತ್ಕಲ್ ನಿಲ್ದಾಣದ ಮೂಲಕ ಸಂಚಾರ ನಡೆಸಲಿದೆ.
ಈ ವಿಶೇಷ ದರದ ರೈಲು 22 ಬೋಗಿಗಳನ್ನು ಒಳಗೊಂಡಿದೆ. 2 ಟೈರ್ ಎಸಿ 1, 3 ಟೈರ್ ಎಸಿ 3, ಸ್ಲೀಪರ್ ಕೋಚ್ 12, 4 ಸಾಮಾನ್ಯ ಬೋಗಿಯನ್ನು ಒಳಗೊಂಡಿದೆ. ಭಾರತೀಯ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.












Click it and Unblock the Notifications