Cost of living in America: ಅಮೇರಿಕಾದಲ್ಲಿ ಜೀವಿಸಲು ಬೇಕಾಗುವ ಹಣವೆಷ್ಟು? ಯುಎಸ್‌ನಲ್ಲಿ ಸಂಬಳ, ಖರ್ಚು, ಬಾಡಿಗೆ ಎಷ್ಟಿರುತ್ತೆ?
ಪ್ರತಿಯೊಬ್ಬರಿಗೂ ಅಮೆರಿಕಾ ಹೋಗಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಅಲ್ಲಿ ವಾಸ ಮಾಡಬೇಕು ಅಂತ ಕೆಲವರು ಕನಸು ಕೂಡ ಕಾಣುತ್ತಾರೆ. ಆದರೆ ಅಮೆರಿಕಾದಲ್ಲಿ ಜೀವನ ಮಾಡಬೇಕು ಅಂದರೆ ಎಷ್ಟು ಖರ್ಚಾಗುತ್ತದೆ? ಒಂದು ವೇಳೆ ಅಲ್ಲಿ ಕೆಲಸ ಸಿಕ್ಕರೆ ಆ ಸಂಬಳ ಎಷ್ಟು ಇರುತ್ತದೆ? ಬಾಡಿಗೆ ಊಟಕ್ಕೆ ಎಷ್ಟು ಖರ್ಚಾಗುತ್ತದೆ ಎನ್ನುವ ಮಾಹಿತಿ ಎಷ್ಟೋ ಜನರಿಗೆ ಇರುವುದಿಲ್ಲ. ನೀವೇನಾದ್ರೂ ಈ ಬಗ್ಗೆ ಮಾಹಿತಿ ಹುಡುಕುತ್ತಿದ್ದರೆ ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಸಾಮಾನ್ಯವಾಗಿ H-1B VISA ದಿಂದ ಅಮೆರಿಕಾಕ್ಕೆ ಹೋಗಿ ಕೆಲಸ ಮಾಡುವವರಿಗೆ ಒಂದು ವರ್ಷಕ್ಕೆ 75000-100000 ಡಾಲರ್ ವರೆಗೆ ಸಂಬಳ ಇರುತ್ತದೆ. ಇದರಲ್ಲಿ ತಿಂಗಳ ಟ್ಯಾಕ್ಸ್ ಎಲ್ಲವೂ ಕಟ್ ಆಗಿ ಕೈಗೆ ಸುಮಾರು 5000-6000 ಡಾಲರ್ ಸಂಬಳ ಬರುತ್ತದೆ.

ಅಂದರೆ ಒಂದು ತಿಂಗಳಿಗೆ 5000-6000 ಡಾಲರ್ ಸಂಬಳವನ್ನು ಬೇಸಿಕ್ ಆಗಿ ಇಟ್ಟುಕೊಂಡು ಇಲ್ಲಿನ ಖರ್ಚು ವೆಚ್ಚ ಹೇಗಿರುತ್ತದೆ ಎಂದು ತಿಳಿಯುತ್ತಾ ಹೋಗೋಣ. ಇಲ್ಲಿ ಗಮನಿಸಬೇಕಾದ ವಿಷಯ ಅಂದರೆ ಸಂಬಳ ಇದ್ದಷ್ಟು ಖರ್ಚು ಕೂಡ ಅಧಿಕವಾಗಿರುತ್ತದೆ. ಯುಎಸ್‌ನ ಕೆಲ ಸ್ಟೇಟ್‌ಗಳಲ್ಲಿ ಸಂಬಳ ಅಧಿಕ ಇರುತ್ತದೆ. ಆದರೆ ಅದಕ್ಕೆ ತಕ್ಕಂತೆ ಖರ್ಚು ಕೂಡ ಇರುತ್ತದೆ.
1.ಅಮೆರಿಕಾಯದಲ್ಲಿ ಮನೆ ಬಾಡಿಗೆ ಎಷ್ಟು?
ಒಬ್ಬ ವ್ಯಕ್ತಿಗೆ ತಿಂಗಳಿಗೆ 5000 ಡಾಲರ್ ಸಂಬಳ ಬರುತ್ತೆ ಅಂದರೆ ಇದನ್ನು ಇಂಡಿಯನ್ ರೂಪಾಯಿಗೆ ಕನ್ವರ್ಟ್ ಮಾಡಿದರೆ (ಒಂದು ಡಾಲರ್ ಅಂದರೆ 82 ರೂಪಾಯಿ) 4,20,000 ರೂಪಾಯಿ ಆಗುತ್ತದೆ. ಇಲ್ಲಿ ಮುಖ್ಯವಾಗಿ ಮನೆಯ ಬಾಡಿಗೆ ಎಷ್ಟು ಇರುತ್ತೆ ಅಂತ ನೋಡುವುದಾದರೆ-

ಸಾಮಾನ್ಯವಾಗಿ ಇಬ್ಬರಿದ್ದರೆ 1 BHK ತೆಗೆದುಕೊಳ್ಳಬಹುದು. ಒಂದು ವೇಳೆ ಗಂಡ-ಹೆಂಡತಿ ಒಂದು ಮಗು ಇದ್ದರೆ 2 BHK ಮನೆಯನ್ನೇ ತೆಗೆದುಕೊಳ್ಳಬೇಕು. ಯಾಕೆಂದರೆ ಮೂರು ಜನರಿಗೆ 1 BHK ಮನೆ ಬಾಡಿಗೆಯನ್ನು ಅಮೆರಿಕಾದಲ್ಲಿ ಕೊಡುವುದಿಲ್ಲ. ಅಮೆರಿಕಾಯದಲ್ಲಿ ಸಾಮಾನ್ಯವಾಗಿ ಎರಡು ಬೆಡ್ ರೂಂ ಮನೆ ಬಾಡಿಗೆ 1000-2000 ರೂಪಾಯಿ ಇರುತ್ತದೆ.
ಒಂದು ವೇಳೆ ಮನೆಯ ಪಕ್ಕ ಉತ್ತಮ ಶಾಲೆಗಳು ಹಾಗೂ ಕಚೇರಿಗಳು ಇದ್ದರೆ ಆ ಸ್ಥಳಗಳಲ್ಲಿ ಬಾಡಿಗೆ ತುಂಬಾ ಅಧಿಕವಾಗಿರುತ್ತದೆ. ಸಿಟಿಯಿಂದ ಹೊರಗಡೆ ಮನೆ ಇದ್ದರೆ ಅಥವಾ ಶಾಲೆ ಆಫೀಸ್ ಗಳ ಹತ್ತಿರದಲ್ಲಿ ಇರದೇ ಇದ್ದರೆ ಬಾಡಿಗೆ ಕಡಿಮೆ ಇರುತ್ತದೆ. ಇದರ ಆಧಾರ ಮೇಲೆ ಅತ್ಯಂತ ಕಡಿಮೆ ಮನೆ ಬಾಡಿಗೆ ಅಂದರೆ 1000-2000ರವರೆಗೆ ಇರುತ್ತದೆ. ಹೀಗಾಗಿ ಒಂದು ವರ್ಷಕ್ಕೆ ಬಾಡಿಗೆಗೆ ಒಂದರಿಂದ ಒಂದುವರೆ ಲಕ್ಷ ಹಣ ಬಾಡಿಗೆಗೆ ಖರ್ಚಾಗಿ ಹೋಗುತ್ತದೆ.
2. ಯುಎಸ್ ಅಲ್ಲಿ ಹೆಲ್ತ್ ಇನ್ಸುರೆನ್ಸ್ ಮಾಡಿಸಲು ಖರ್ಚಾಗುವ ಹಣವೆಷ್ಟು?
ಅಮೆರಿಕಾದಲ್ಲಿ ಹೆಲ್ತ್ ಇನ್ಸುರೆನ್ಸ್ ಇಲ್ಲ ಅಂತಾದರೆ ಆಸ್ಪತ್ರೆಗೆ ಕಾಲಿಡಲು ಆಗುವುದಿಲ್ಲ. ಯಾಕೆಂದರೆ ಹೆಲ್ತ್ ಇನ್ಸುರೆನ್ಸ್ ಅಮೆರಿಕಾದಲ್ಲಿ ಇರಲೇಬೇಕು. ಇದಕ್ಕಾಗಿ ತಿಂಗಳಿಗೆ 300 ಡಾಲರ್(ಇಂಡಿಯನ್ ರೂಪಾಯಿಯಲ್ಲಿ 24-25000 ರೂಪಾಯಿ) ಖರ್ಚು ಮಾಡಬೇಕಾಗುತ್ತದೆ.
3. ಗ್ರಾಸರಿಗೆ ಎಷ್ಟು ಖರ್ಚಾಗುತ್ತದೆ?
ನಾಲ್ಕು ಜನ ಇರುವ ಕುಟುಂಬಕ್ಕೆ ಅಮೆರಿಕಾದಲ್ಲಿ ಗ್ರಾಸರಿಗೆ ತಿಂಗಳಿಗೆ 800-1000 ಡಾಲರ್ (ಇಂಡಿಯನ್ ರೂಪಾಯಿಯಲ್ಲಿ 60000-80000) ಬೇಕಾಗುತ್ತದೆ. ಇದು ಕೆಲವರಿಗೆ ಅಧಿಕ ಕೂಡ ಆಗಬಹುದು. ಇದು ಮನೆಯಲ್ಲಿ ಇರುವ ಜನರನ್ನು ಅವಲಂಭಿಸಿರುತ್ತದೆ. ಮನೆಯಲ್ಲಿ ಕಡಿಮೆ ಜನ ಇದ್ದರೆ ಇದರ ಖರ್ಚು ಕಡಿಮೆ ಆಗಬಹುದು. ಒಂದು ವೇಳೆ ಅಧಿಕ ಇದ್ದರೆ ಇದಕ್ಕಿಂತಲೂ ಜಾಸ್ತಿ ಕೂಡ ಖರ್ಚು ಆಗಬಹುದು.

4. ಪವರ್ ಬಿಲ್
ಅಮೆರಿಕಾದಲ್ಲಿ ವಿದ್ಯುತ್ ಬಿಲ್ ಜಾಸ್ತಿ ಬರುತ್ತದೆ. ಯಾಕೆಂದರೆ ಹೀಟರ್ ಹಾಗೂ ಎಸಿ ಎರಡನ್ನೂ ಯ್ಯೂಸ್ ಮಾಡುವುದರಿಂದ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತದೆ. ನಾಲ್ಕು ಜನರು ಇರುವ ಮನೆಯಲ್ಲಿ 150 ಡಾಲರ್ (ಇಂಡಿಯನ್ ರೂಪಾಯಿಯಲ್ಲಿ ಸುಮಾರು 12,000) ವಿದ್ಯುತ್ ಬಿಲ್ ಬರಬಹುದು. ಅಮೆರಿಕಾದಲ್ಲಿ ಒಂದು ತಿಂಗಳು ಕಟ್ಟುವ ವಿದ್ಯುತ್ ಬಿಲ್ ಅನ್ನು ಭಾರತದಲ್ಲಿ ಒಂದು ವರ್ಷದಲ್ಲಿ ನಾವು ಕಟ್ಟುತ್ತೇವೆ. ಹೀಗಾಗಿ ಇಲ್ಲಿ ವಿದ್ಯುತ್ ಬಿಲ್ ಅಧಿಕ.
5. ಯುಟಿಲಿಟಿ ಚಾರ್ಜ್
ಅಮೆರಿಕಾದಲ್ಲಿ ಯುಟಿಲಿಟಿ ಚಾರ್ಜ್ ಹೇಗಿರುತ್ತೆ ಅಂದರೆ- ವಾಟರ್ ಬಿಲ್, ಇಂಟರ್‌ನೆಟ್ ಚಾರ್ಜ್ ಇದೆಲ್ಲದಕ್ಕೆ ಅಮೆರಿಕಾದಲ್ಲಿ ತಿಂಗಳಿಗೆ 200-250 ಡಾಲರ್ (ಇಂಡಿಯನ್ ರೂಪಾಯಿಯಲ್ಲಿ ಸುಮಾರು 16000-20000) ಆಗುತ್ತದೆ.
6. ಕಾರ್ ಗ್ಯಾಸ್ ಬಿಲ್
ಇನ್ನೂ ಅಮೆರಿಕಾಯದಲ್ಲಿ ಕಾಲಿಲ್ಲ ಅಂದರೂ ಪರವಾಗಿಲ್ಲ ಕಾರು ಇರಲೇಬೇಕು. ಯಾಕೆಂದರೆ ಇಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಡಿಮೆ ಇರುವುದರಿಂದ ಇಲ್ಲಿ ಕಾರ್ ಅವಶ್ಯತೆ ಇದ್ದೇ ಇದೆ. ಕಾರ್ ಗ್ಯಾಸ್ ಬಿಲ್ ಅಂದರೆ ಹೊರಗಡೆ ಓಡಾಡಲು 150-200 ಡಾಲರ್ (ಇಂಡಿಯನ್ ರೂಪಾಯಿಯಲ್ಲಿ ಸುಮಾರು12000-16000) ಬೇಕಾಗುತ್ತದೆ. ಲಾಂಗ್ ಡ್ರೈವ್ ಅಥವಾ ತುಂಬಾ ಜಾಸ್ತಿ ದೂರ ಓಡಾಡುತ್ತೇವೆ ಅಂದರೆ ಇದಕ್ಕಿಂತ ಹೆಚ್ಚು ಹಣ ಖರ್ಚಾಗಬಹುದು.
7. ವೀಕೆಂಡ್ ಖರ್ಚು
ಸಾಮಾನ್ಯವಾಗಿ ವೀಕೆಂಡ್‌ಗಳಲ್ಲಿ ಮಕ್ಕಳು ಇರುವ ಮನೆಯಲ್ಲಿ ಹೊರಗಡೆ ಹೋಗುವುದು, ಅಲ್ಲಿ ಏನಾದರೂ ಕೊಂಡುಕೊಳ್ಳುವುದು ಇದೆಲ್ಲವೂ ಮಾಡುವುದರಿಂದ ಇದಕ್ಕಾಗಿ 200 ಡಾಲರ್ ಅಂದರೆ 16000 ಆಗುತ್ತದೆ.
8. ಮಕ್ಕಳ ಖರ್ಚು
ಮಕ್ಕಳು ಇರುವ ಮನೆಯಲ್ಲಿ ಖರ್ಚುಗಳು ಜಾಸ್ತಿ. ಇನ್ನೂ ಯುಎಸ್ ಅಲ್ಲಿ ಇದ್ರಂತೂ ಮುಗಿದೇ ಹೋಯ್ತು. ಅವರಿಗೆ ಬುಕ್ಸ, ಫೀಸ್, ಬಟ್ಟೆ, ತಿಂಡಿ ತಿನಿಸು ಇಂತೆಲ್ಲದಕ್ಕೆ ಖರ್ಚಾಗುವ ಹಣ 200 ಡಾಲರ್ ಆಗುತ್ತದೆ. ಅಮೆರಿಕಾದಲ್ಲಿ ಸಂಬಳ ಹೆಚ್ಚಾಗುತ್ತದೆ ಎಲ್ಲರು ಭಾವಿಸುತ್ತಾರೆ. ಆದರೆ ಸಂಬಳ ಹೆಚ್ಚಾಗಿ ಇರುವಷ್ಟೇ ಅವರ ಖರ್ಚು ವೆಚ್ಚಗಳು ಇಲ್ಲಿ ಇರುತ್ತವೆ ಎನ್ನುವುದನ್ನು ಮರೆಯಬಾರದು. ಇದನ್ನೆಲ್ಲಾ ತಿಳಿದುಕೊಂಡ ಮೇಲೆ ನೀಮಗೆ ಏನು ಅನಿಸಿತು ಎಂದು ಕಾಮೆಂಟ್ ಮಾಡಿ.












Click it and Unblock the Notifications