BMTC: ಈ ಎರಡು ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸೇವೆ, ಮಾರ್ಗಗಳು, ಸಮಯಗಳ ವಿವರ ತಿಳಿಯಿರಿ
ಬೆಂಗಳೂರು, ನವೆಂಬರ್, 22: ಬಿಎಂಟಿಸಿಯು ಬೆಂಗಳೂರಿಗರ ಜೀವನಾಡಿ ಅಂತಲೇ ಹೆಸರುವಾಸಿಯಾಗಿದೆ. ಎಷ್ಟೋ ಸಾವಿರ ಜನ ಪ್ರತಿನಿತ್ಯ ಬೆಳಗಾದರೆ ಸಾಕು ತಮ್ಮ ತಮ್ಮ ಕೆಲಸಗಳಿಗೆ ತೆರಳಲು ಮತ್ತೆ ಸಂಜೆ ಆಗುತ್ತಿದ್ದಂತೆ ಹಿಂತಿರುಗಲು ಬಿಎಂಟಿಸಿ ಬಸ್‌ಗಳನ್ನೇ ಆಶ್ರಯಿಸಿದ್ದಾರೆ. ಆದ್ದರಿಂದ ಈ ಸಾರಿಗೆ ನಗರದ ಜನರ ಜೀವನಾಡಿಯಾಗಿದೆ. ಹಾಗೆಯೇ ಇನ್ಮುಂದೆ ನೈಸ್ ರಸ್ತೆಯ ಮೂಲಕವೂ BMTC ಸಂಚಾರ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವೆಲ್ಲ ಮಾರ್ಗಗಗಳ ಪ್ರಯಾಣಿಕರಿಗೆ ಇದು ಸಹಾಯಕವಾಗಲಿದೆ ಎಂದು ತಿಳಿಯಿರಿ.
ಪ್ರಯಾಣಿಕರ ಬೇಡಿಕೆಯನ್ನಾಧರಿಸಿ ನೈಸ್ ರಸ್ತೆಯಲ್ಲೂ BMTC ಬಸ್ಗಳನ್ನು ಓಡಿಸಲು ಸಾರಿಗೆ ಇಲಾಖೆ ನಿರ್ಧಾರ ಮಾಡಿದೆ. ಎಲೆಕ್ಟ್ರಾನಿಕ್ ಸಿಟಿ-ಮಾದವಾರ ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್‌ಗಳ ಸೇವೆ ಆರಂಭ ಆಗಿದೆ. ಈ ಎರಡು ಸ್ಥಳಗಳಿಗೆ ನೈಸ್ ರಸ್ತೆ ಮೂಲಕ ಬಿಎಂಟಿಸಿ ಬಸ್‌ಗಳು ಸಂಚಾರ ಮಾಡಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹೆಚ್ಚುವರಿ ಮಾರ್ಗಗಳಿಗೆ ಬಸ್ಗಳನ್ನು ಓಡಿಸಲು ಪ್ಲಾನ್
ಇನ್ನು ದೂರದ ಊರುಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸುತ್ತಿದ್ದವರು ಮೆಜೆಸ್ಟಿಕ್‌ಗೆ ಬಂದು ಅಲ್ಲಿಂದ ಎಲೆಕ್ಟ್ರಾನಿಕ್ ಸಿಟಿ ಬಸ್ ಮೂಲಕ ಸಂಚಾರ ಮಾಡಬೇಕಿತ್ತು. ಇದಕ್ಕೆ ಕನಿಷ್ಠ 2 ಗಂಟೆಯಂತೂ ಬೇಕಾಗುತ್ತಿತ್ತು. ಸದ್ಯ ಇದೀಗ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚವರಿ ಮಾರ್ಗಗಳಿಗೆ ಬಸ್ಗಳನ್ನು ಓಡಿಸಲು ಯೋಜಿಸಲಾಗಿದೆ.
ಯಾವೆಲ್ಲಾ ಮಾರ್ಗಗಳ ಪ್ರಯಾಣಿಕರಿಗೆ ಅನುಕೂಲ?
ಅಲ್ಲದೆ ಸಾರಿಗೆ ಇಲಾಖೆಯ ಈ ನಿರ್ಧಾರದಿಂದ ಬೆಂಗಳೂರು ನಗರಕ್ಕೆ ತುಮಕೂರು, ಹಾಸನ ಭಾಗಗಳಿಂದ ಬೆಂಗಳೂರಿಗೆ ಆಗಮಿಸುವವರು ಮಾದವಾರದಿಂದಲೇ ನೇರವಾಗಿ ಎಲೆಕ್ಟ್ರಾನಿಕ್ ಸಿಟಿಗೆ ಬರಲು ತುಂಬಾ ಅನುಕೂಲ ಆಗಲಿದೆ. ಇನ್ನು ಈ ಮಾರ್ಗದಲ್ಲಿ ಬಸ್ ಬಿಡುವಂತೆ ಪ್ರಯಾಣಿಕರು ಹಲವಾರು ಬಾರಿ ಮನವಿ ಪತ್ರ ಬರೆದಿದ್ದರು.
ಇಷ್ಟು ದಿನ ಈ ಮಾರ್ಗದಲ್ಲಿ ಬಿಎಂಟಿಸಿ ಬಸ್ಗಳಿಲ್ಲದೇ ಪ್ರಯಾಣಿಕರು ಟೆಂಪೋ, ಆಟೋ, ಲಾರಿಗಳಲ್ಲಿ ಕಷ್ಟಪಟ್ಟಾದರೂ ಸಂಚಾರ ಮಾಡುತ್ತಿದ್ದರು. ಸದ್ಯ ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಆಗಿದ್ದರಿಂದ ತೊಂದರೆ ಅನುಭವಿಸುತ್ತಿದ್ದ ಜನರಿಗೆ ಶುಭ ಸುದ್ದಿ ಸಿಕ್ಕಂತಾಗಿದೆ. ಎಲೆಕ್ಟ್ರಾನಿಕ್ ಸಿಟಿ- ಮಾದವಾರ ಮಾರ್ಗಕ್ಕೆ ಬಿಎಂಟಿಸಿ ಬಸ್ ಸೇವೆ ಆರಂಭ ಆಗಿದೆ.
ಎಲೆಕ್ಟ್ರಾನಿಕ್ ಸಿಟಿ- ಮಾದವಾರ ಮಾರ್ಗದಲ್ಲೆ ಬೆಳಗ್ಗೆ 6:40 ರಿಂದ ರಾತ್ರಿ 8 ಗಂಟೆವರೆಗೆ ಬಿಎಂಟಿಸಿ ಬಸ್‌ಗಳ ಸೇವೆ ಇರಲಿದೆ. ನವೆಂಬರ್ 20 ರಿಂದಲೇ ಈ ಬಸ್ ಸೌಲಭ್ಯ ಆರಂಭ ಆಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಮಾದವಾರದಿಂದ ಬಿಎಂಟಿಸಿ ಬಸ್ ಹೊರಡುವ ಸಮಯ
ಬೆಳಗ್ಗೆ 6.40, 7.10, 7.40, 8.00, 8.30, 8.50, 9.20, 9.50, 10.20, 10.50, 11.40, ಮಧ್ಯಾಹ್ನ 12.10, 12.40, 1.10, 1.50, 2.30, 3.00, 3.40, ಸಂಜೆ 4.25, 4.50, 5.20, 6.00, 6.30, 7.00, 7.30, ರಾತ್ರಿ 8.00, 9.30.
ಎಲೆಕ್ಟ್ರಾನಿಕ್ ಸಿಟಿಯಿಂದ ಬಸ್ ಹೊರಡುವ ಸಮಯ
ಬೆಳಗ್ಗೆ 7.10, 7.40, 8.10, 8.40, 9.10, 9.40, 10.10, 10.40, 11.10, 11.40, 12.15, 12.55, ಮಧ್ಯಾಹ್ನ 1.35, 2.05, 2.45, ಸಂಜೆ 4.00, 4.30, 5.00, 5.30, 6.00, 6.15, 6.30, 7.00, 7.30, ರಾತ್ರಿ 8.00.












Click it and Unblock the Notifications