Get Updates
Get notified of breaking news, exclusive insights, and must-see stories!

Bengaluru to Chikkamagalur tour guide: ಬೆಂಗಳೂರು-ಚಿಕ್ಕಮಗಳೂರು ಪ್ರವಾಸ; ಚಳಿಗಾಲಕ್ಕೆ ಸೂಕ್ತ ಪ್ರವಾಸಿ ತಾಣಗಳಿವು

Travel Guide: ಕಾಫಿನಾಡು ಅಂತಲೇ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಜಿಲ್ಲೆ ಅತ್ಯದ್ಭುತ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಇಲ್ಲಿನ ಒಂದೊಂದು ತಾಣಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ. ಚಳಿಗಾಲದಲ್ಲಂತೂ ಇಲ್ಲಿಗೆ ಭೇಟಿ ನೀಡಿದರೆ, ಸ್ವರ್ಗದಂತಹ ಅನುಭವ ಪಡೆಯುವುದಂತೂ ನಿಜ. ಹಾಗಾದರೆ ಈ ವೇಳೆ ನೋಡಬಹುದಾದ ಜಿಲ್ಲೆಯ ಸುಂದರ ತಾಣಗಳು ಹಾಗೂ ತಲುಪುವ ಮಾರ್ಗಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಚಳಿಗಾಲದಲ್ಲಿ ನೀವು ವಾರಾಂತ್ಯದ ಪ್ರವಾಸ ಕೈಗೊಳ್ಳು ಪ್ಲಾನ್‌ ಮಾಡಿಕೊಂಡಿದ್ದರೆ, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿವೆ ನಿಮಗೆ ಸೂಕ್ತವಾದ ಪ್ರವಾಸಿ ತಾಣಗಳು. ಚಳಿಗಾಲದಲ್ಲಿ ಇಲ್ಲಿ ಬೆಳಗ್ಗೆ 10 ಗಂಟೆಯಾದರೂ ರಸ್ತೆಗಳು ಕಾಣುವುದೇ ಇಲ್ಲ. ಅಷ್ಟರ ಮಟ್ಟಿಗೆ ಮಂಜು ಕವಿದಿರುತ್ತದೆ. ಇದರ ನೆಡುವೆಯೇ ಇಲ್ಲಿನ ಅಚ್ಚಹಸಿರಿಬ ಗಿರಿ-ಶಿಖರಗಳು, ಪರ್ವತಗಳು, ಕಾಡನ್ನು ನೋಡುತ್ತಾ ಪ್ರವಾಸ ಮಾಡಿದರೆ ಸ್ವರ್ಗನೇ ಕಣ್ಮುಂದೆ ಇದೆ ಎನ್ನುವ ರೀತಿಯಲ್ಲಿ ಭಾಸವಾಗುತ್ತದೆ.

Best Tourist places for Winter season in Chikkamagaluru District know details

ಇಲ್ಲಿನ ಪ್ರಕೃತಿ ಸೊಬಗನ್ನು ಸವಿಯಲು ಬರೀ ಜಿಲ್ಲೆ, ಹೊರರಾಜ್ಯದವರು ಅಷ್ಟೇ ಅಲ್ಲದೆ, ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ. ಹಾಗೆಯೇ ಪ್ರವಾಸಿಗರ ಅನೂಕೂಲಕ್ಕಾಗಿ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಇಲ್ಲಿ ವಿವರವನ್ನು ನೀಡಲಾಗಿದೆ.

ಕಾಫಿನಾಡಿನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳು

1. ಮುಳ್ಳಯ್ಯನಗಿರಿ
2. ಹಬ್ಬೆ ಫಾಲ್ಸ್
3. ಕುದುರೆಮುಖ
4. ಬಾಬಾ ಬುಡನ್‌ಗಿರಿ
5. ಕಳಸ
6. ಭದ್ರಾ ವನ್ಯಜೀವಿ ಅಭಯಾರಣ್ಯ
7. ಮುತ್ತೋಡಿ ವನ್ಯಜೀವಿ ಅಭಯಾರಣ್ಯ
8. ಕೆಮ್ಮನಗುಂಡಿ
9. ಅಮೃತೇಶ್ವರ ದೇವಸ್ಥಾನ
10. ದೇವರಮನೆ
11. ಅಯ್ಯನಕೆರೆ
12. ಮಾಣಿಕ್ಯಧಾರ
13. ಸಿರಿಮನೆ ಫಾಲ್ಸ್

* ಮುಳ್ಳಯ್ಯನಗರಿ ಶಿಖರ: ಚಿಕ್ಕಮಗಳೂರಿನಿಂದ 33 ಕಿ.ಮೀ. ದೂರದಲ್ಲಿರುವ ಮುಳ್ಳಯ್ಯನಗಿರಿ ಶಿಖರ ಸಮುದ್ರ ಮಟ್ಟಕ್ಕಿಂತ 1930 ಮೀಟರ್ ಎತ್ತರವಿದ್ದು, ಕರ್ನಾಟಕದ ಅತ್ಯುನ್ನತ ಶಿಖರ ಇದಾಗಿದೆ. ಇಲ್ಲಿಹೆ ರಸ್ತೆ ಮೂಲದ ಸಾಗಿದರೆ, ಬೆಂಗಳೂರಿನಿಂದ 247.9 ಕಿಲೋ ಮೀಟರ್‌ ಆಗುತ್ತದೆ. ಮುಳ್ಳಯ್ಯನಗಿರಿ ಪ್ರಕೃತಿ ಪ್ರೇಮಿಗಳ ಸ್ವರ್ಗವಾಗಿದ್ದು, ಮತ್ತು ದಕ್ಷಿಣ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದೆ.

Best Tourist places for Winter season in Chikkamagaluru District know details

ಚಾರಣದ ಅಗತ್ಯವಿಲ್ಲದೆ, ಮುಳ್ಳಯ್ಯನಗಿರಿ ಶಿಖರವನ್ನು ರಸ್ತೆ ಮೂಲಕ ತಲುಪಬಹುದು. ಮುಳ್ಳಯ್ಯನಗಿರಿ ಶಿಖರವು ಪಶ್ಚಿಮ ಘಟ್ಟಗಳ ಸುಂದರ ತಾಣಗಳಲ್ಲಿ ಒಂದಾಗಿದೆ. ತಂಪಾದ ಗಾಳಿ, ಮೈ ನವಿರೇಳಿಸುವ ಸೂರ್ಯಾಸ್ತ ಇಲ್ಲಿನ ಪ್ರಮುಖ ಆಕರ್ಷಣೆ ಆಗಿವೆ. ಇನ್ನು ಬೆಟ್ಟದ ತುದಿಯಲ್ಲಿ ಶಿವನಿಗೆ ಅರ್ಪಿತವಾದ ಸಣ್ಣ ದೇವಾಲಯವಿದೆ.

ಕಡೂರು ಜಂಕ್ಷನ್ ಇಲ್ಲಿಗೆ ತಲುಪಲು ಹತ್ತಿರದ ರೈಲ್ವೆ ನಿಲ್ದಾಣವಾಗಿದ್ದು, ಇಲ್ಲಿಂದ ಮುಳ್ಳಯ್ಯನಗಿರಿಗೆ ಕೇಲವ 51 ಕಿಲೋ ಮೀಟರ್‌ ಆಗುತ್ತದೆ ಅಷ್ಟೇ. ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿಗೆ 33 ಕಿಲೋ ಮೀಟರ್‌ ಆಗಲಿದ್ದು, ಇಲ್ಲಿಂದ ಬಸ್ಸುಗಳು ಸೌಲಭ್ಯವೂ ಇದೆ. ಚಿಕ್ಕಮಗಳೂರು, ಕಡೂರಿನಿಂದ ಟ್ಯಾಕ್ಸಿ ಮೂಲಕವೂ ಮುಳ್ಳಯ್ಯನಗಿರಿ ಶಿಖರವನ್ನು ತಲುಪಬಹುದು. ಕೆಲವು ಕಿಲೋ ಮೀಟರ್‌ಗಳಷ್ಟು ರಸ್ತೆ ಕಿರಿದಾಗಿದ್ದು, ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗುತ್ತದೆ.

ಇನ್ನು ಬೈಕ್‌ನಲ್ಲಿ ಪ್ರಯಾಣ ಬೆಳೆಸುವವರಿಗೆ ಇನ್ನು ಸುಲಭ ಮಾರ್ಗ ಇದಾಗಿದೆ. ಮುಳ್ಳಯ್ಯನಗಿರಿಗೆ ಬಸ್‌, ಕಾರ್‌ಗಳಲ್ಲಿ ಬರುವವರಿಗಿಂತ ಬೈಕ್‌ಗಳಲ್ಲಿ ಜಾಲಿ ರೈಡ್‌ ಬರುವವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಇಲ್ಲಿನ ಅಚ್ಚ ಹಸಿರಿನ ಮನಮೋಹಕ ದೃಶ್ಯಗಳನ್ನು ನೋಡಲು ಕೇವಲ ಹೊರರಾಜ್ಯದವರು ಅಷ್ಟೇ ಅಲ್ಲದೇ, ವಿದೇಶಗಳಿಂದಲೂ ಪ್ರವಾಸಿಗರು ಲಗ್ಗೆ ಇಡುತ್ತಾರೆ.

Best Tourist places for Winter season in Chikkamagaluru District know details

ಕೈಗೆಟುಕುವ ದರದಲ್ಲಿ ಹೋಂ ಸ್ಟೇ ವ್ಯವಸ್ಥೆ: ಜಿಲ್ಲೆಯಲ್ಲಿ ಹಲವಾರು ಐಷಾರಾಮಿ ರೆಸಾರ್ಟ್‌ಗಳು ಮತ್ತು ಕೈಗೆಟುಕುವ ದರದಲ್ಲಿ ಹೋಂ ಸ್ಟೇಗಳು ಲಭ್ಯವಿದ್ದು, ಪ್ರವಾಸಿಗರಿಗೆ ತಂಗಲು ಯಾವುದೇ ಸಮಸ್ಯೆ ಇಲ್ಲದಂತಾಗಿದೆ. ಆದ್ದರಿಂದ ಇಲ್ಲಿಗೆ ಬಂದವರು ಕನಿಷ್ಠ ಮೂರು ದಿನವಂತೂ ತಂಗಿ ಪ್ರಕೃತಿ ಸೌಂದರ್ಯವನ್ನು ಸವಿದು ತಮ್ಮ ಊರುಗಳತ್ತ ಹಿಂದಿರುಗುತ್ತಾರೆ. ರಜೆ ದಿನಗಳಲಂತೂ ಪ್ರವಾಸಿಗರು ಈ ಸ್ಥಳಗಳಲ್ಲಿ ತುಂಬಿ ತುಳುಕುತ್ತಿರುತ್ತಾರೆ. ಎಷ್ಟು ಪ್ರವಾಸಿಗರು ಇಲ್ಲಿನ ಪ್ರಕೃತಿ ಸವಿದು ಹಿಂದಿರುಗುತ್ತಾರೋ ಮತ್ತೆ ಅದರ ಎರಡು ಪಟ್ಟು ಪ್ರವಾಸಿಗರು ಲಗ್ಗೆ ಇಡುತ್ತಲೇ ಇಡುತ್ತಾರೆ.

* ಹೆಬ್ಬೆ ಫಾಲ್ಸ್‌: ಚಿಕ್ಕಮಗಳೂರಿನಿಂದ 65.1 ಕಿ.ಮೀ ದೂರದಲ್ಲಿರುವ ಹೆಬ್ಬೆ ಜಲಪಾತವು ಮತ್ತೊಂದು ಆಕರ್ಷಕ ತಾಣವಾಗಿದೆ. ಈ ಜಲಪಾತದ ಪ್ರವೇಶವು ಭದ್ರಾ ವನ್ಯಜೀವಿ ಅಭಯಾರಣ್ಯದಲ್ಲಿ ಬರುತ್ತದೆ. ದಟ್ಟವಾದ ಕಾಡುಗಳ ಮೂಲಕ ರೋಮಾಂಚಕ ಜೀಪ್ ಸವಾರಿಯನ್ನು ನೀವಿಲ್ಲಿ ಮಾಡಬಹುದು. ಜಲಪಾತವನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದೆ - ಬಿಗ್ ಫಾಲ್ಸ್ ಮತ್ತು ಸ್ಮಾಲ್ ಫಾಲ್ಸ್. ಈ ಎರಡೂ ಜಲಪಾತಗಳ ಸುತ್ತಮುತ್ತ ಬರುವ ಪ್ರದೇಶಗಳಲ್ಲಿ ಸೌಂದರ್ಯ ದೇವತೆ ಧರೆಗಿಳಿದು ಬಂದಿದ್ದಾಳೆ ಎಂದು ಹೇಳಲಾಗುತ್ತದೆ. ಇದು ಬೆಂಗಳೂರಿನಿಂದ 279.4 ಕಿ.ಮೀ ದೂರದಲ್ಲಿದೆ.

* ಸಿರಿಮನೆ ಫಾಲ್ಸ್: ಪ್ರವಾಸಿಗರ ಹಾಟ್‌ಸ್ಪಾರ್‌ ಶೃಂಗೇರಿ ಶಾರದಾಂಬೆ ಸನ್ನಿಧಿಯ ಹಸಿರು ಕಾನನದ ಮಧ್ಯೆ ಧುಮುಕುವ ಸಿರಿಮನೆ ಜಲಪಾತ, ಪ್ರವಾಸಿಗರ ಪ್ರಮುಖ ಆಕರ್ಷ ತಾಣವಾಗಿದೆ. ಇದು ಶೃಂಗೇರಿಯಿಂದ 20 ಕಿಲೋ ಮೀಟರ್‌ ದೂರದಲ್ಲಿದೆ. ಕಿಗ್ಗಾದಿಂದ 5 ಕಿಲೋ ಮೀಟರ್‌ ಸಾಗಬೇಕು. 40 ಅಡಿ ಎತ್ತರದ ಬಂಡೆಯ ಮೇಲಿನಿಂದ ನೀರು ಧುಮ್ಮಿಕ್ಕುವ ದೃಶ್ಯ ರಮಣೀಯವಾಗಿರುತ್ತದೆ.

* ಮಾಣಿಕ್ಯಧಾರ ಫಾಲ್ಸ್: ಮಾಣಿಕ್ಯಧಾರಾ ಜಲಪಾತವು ಚಿಕ್ಕಮಗಳೂರು ನಗರದಿಂದ 33 ಕಿಲೋ ಮೀಟರ್‌ ದೂರದಲ್ಲಿದೆ. ಮುಳ್ಳಯ್ಯನಗಿರಿ ಶೋಲಾ ಅರಣ್ಯದ ಮಧ್ಯಭಾಗದಲ್ಲಿ ಬೃಹತ್ ಕಲ್ಲುಬಂಡೆಯ ನಡುವಿನಿಂದ ಪ್ರಪಾತಕ್ಕೆ ಇಲ್ಲಿನ ನೀರು ಧುಮುಕುತ್ತದೆ. ಈ ಜಲಪಾತ ಧಾರ್ಮಿಕ ಶ್ರದ್ಧ ಭಕ್ತಿಯ ಕೇಂದ್ರವು ಆಗಿದೆ. ಇದು ಎಲ್ಲಾ ಋತುವಿನಲ್ಲೂ ಹರಿಯುವ ಜಲಪಾತವಾಗಿದೆ. ಇದು ಬೆಂಗಳೂರಿನಿಂದ 279.9 ಕಿ.ಮೀ ದೂರದಲ್ಲಿದೆ.

* ಬಾಬಾಬುಡನ್ ಗಿರಿ: ಮುಳ್ಳಯ್ಯನಗಿರಿಗೆ ಸಾಗುವ ರಸ್ತೆಯಲ್ಲಿಯೇ ಮುಂದೆ ಸಾಗಿದರೆ ಇನಾಂ ದತ್ತತ್ರೇಯ ಬಾಬಾಬುಡನ್ ಗಿರಿ ಸಿಗುತ್ತದೆ. ಈ ಗಿರಿಪ್ರದೇಶ ಅನಾದಿ ಕಾಲದಿಂದಲ್ಲೂ ಪ್ರಸಿದ್ಧಿ ಹೊಂದಿದೆ. ಎತ್ತರದ ಶಿಖರವನ್ನು ಹೊಂದಿದ್ದು, ನೂರಾರು ವರ್ಷಗಳ ಹಿಂದೆ ಬಾಬಾ ಬುಡನ್ ಇಲ್ಲಿದ್ದರೆಂದು ನಂಬಿಕೆ ಇದೆ. ಮುಸ್ಲಿಮರು, ಗುರು ದತ್ತಾತ್ರೇಯ ಸ್ವಾಮಿ ಇಲ್ಲಿ ಇದ್ದರೆಂದು ಹಿಂದೂಗಳ ನಂಬಿಕೆ ಆಗಿದೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದವರ ಯಾತ್ರ ಸ್ಥಳವಾಗಿದೆ. ಇಲ್ಲಿನ ಸುತ್ತಲಿನ ಪರ್ವತಶ್ರೇಣಿ ಕಡಿದಾದ ಪ್ರಪಾತ ಕಣ್ಣಿಗೆ ಹಬ್ಬನ್ನುಂಟು ಮಾಡುತ್ತದೆ.

* ಕುದುರೆಮುಖ: ಇಲ್ಲಿನ ಪರ್ವತ ಕುದುರೆಮುಖವನ್ನು ಹೋಲುವುದರಿಂದ, ಇದಕ್ಕೆ ಕುದುರೆಮುಖ ಎಂಬ ಹೆಸರು ಬಂದಿದೆ. ಇದು ಕಬ್ಬಿಣದ ನಿಕ್ಷೇಪಗಳನ್ನು ಹೊಂದಿರುವ ಪರ್ವತ ಆಗಿದ್ದು, ಈ ಹಿಂದೆ ಇಲ್ಲಿಂದ ಕಬ್ಬಿಣದ ಅದಿರು ಹೊರತೆಗೆಯಲಾಗುತ್ತಿತ್ತು. ಟೌನ್‌ಶಿಫ್ ನಿರ್ಮಿಸಿ ಜನವಸತಿಯನ್ನು ಕಲ್ಪಿಸಲಾಗಿತ್ತು. ಇದೀಗ ಅಲ್ಲಿ ಕಬ್ಬಿಣ ಅದಿರು ಹೊರ ತೆಗೆಯುವುದನ್ನು ನಿಷೇಧಿಸಲಾಗಿದೆ. ಜನವಸತಿ ಪ್ರದೇಶವು ಪಾಳುಬಿದಿದ್ದು, ಅಂದಿನ ಕುರುಹುಗಳು ಮಾತ್ರ ಉಳಿದುಕೊಂಡಿದೆ. ಇಲ್ಲಿಯ ಸುತ್ತಲ ಪರ್ವತಶ್ರೇಣಿ, ಕಡಿದಾದ ಕಣಿವೆಗಳು, ಪ್ರಪಾತಗಳನ್ನು ಒಳಗೊಂಡಿದ್ದು, ನೋಡಲು ರಮಣೀಯವಾಗಿದೆ.

* ಕೆಮ್ಮಣ್ಣುಗುಂಡಿ: ಕೆಮ್ಮಣ್ಣುಗುಂಡಿಗೆ ತರೀಕೆರೆ ತಾಲೂಕು ಲಿಂಗದಹಳ್ಳಿ ಮಾರ್ಗವಾಗಿ ಸಾಗಬೇಕು. ಪವರ್ತಗಳ ಸಾಲು, ಕಾಡಿನ ರಸ್ತೆಯಲ್ಲಿ ಸಾಗಿದರೆ ಈ ಗಿರಿಧಾಮ ಸಿಗುತ್ತದೆ. ತರೀಕೆರೆ ಪಟ್ಟಣದಿಂದ ಈ ಪ್ರವಾಸಿ ತಾಣ 32.2 ಕಿಲೋ ಮೀಟರ್‌ ದೂರದಲ್ಲಿದೆ. ಮೈಸೂರು ಮಹಾರಾಜ ಕೃಷ್ಣರಾಜ ಒಡೆಯರ್ ಇದನ್ನು ತಮ್ಮ ಬೇಸಿಗೆ ಧಾಮವನ್ನಾಗಿ ಮಾಡಿಕೊಂಡಿದ್ದರಿಂದ ಇದನ್ನು ಕೆ.ಆರ್.ಗಿರಿಧಾಮ ಅಂತಲೂ ಕರೆಯಲಾಗುತ್ತದೆ. ಇಲ್ಲಿ ವರ್ಷವಿಡೀ ತಂಪಾದ ಹವಾಗುಣ, ಸುತ್ತಲೂ ಚಂದ್ರದ್ರೊಣ ಪರ್ವತ ಸಾಲುಗಳನ್ನು ಕಾಣಬುದಾಗಿದೆ.

ಇನ್ನು ತರೀಕೆರೆ ತಾಲೂಕು ಲಿಂಗದಹಳ್ಳಿ ಹೋಬಳಿಯ ಕಲ್ಲತ್ತಗಿರಿ ಜಲಪಾತ ಚಂದ್ರದ್ರೋಣ ಪವರ್ತ ತಪ್ಪಲಿನಲ್ಲಿದೆ. ಈ ಜಲಪಾತ ಆನೆ ಸೊಂಡಲಿನ ಆಕಾರದಲ್ಲಿ ಹರಿಯುತ್ತದೆ. ಕಲ್ಲತ್ತಗಿರಿ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಎರಡು ಕವಲುಗಳಾಗಿ ಧುಮ್ಮಿಕ್ಕುತ್ತದೆ. ಮಳೆಗಾಲದಲ್ಲಿ ಭಾರಿ ಪ್ರಮಾಣದ ನೀರು ಹರಿಯಲಿದ್ದು, ಇಲ್ಲಿನ ಜಲಧಾರೆ ಸೊಬಗನ್ನು ನೋಡಲು ಜನಸಾಗರವೇ ನೆರೆಯುತ್ತದೆ.

* ದೇವಮನೆ: ಮೂಡಿಗೆರೆ ತಾಲೂಕಿನಲ್ಲಿರುವ ದೇವಮನೆ ಇತ್ತೀಚೆಗೆ ಪ್ರವಾಸಿ ಕ್ಷೇತ್ರ ಮತ್ತು ಧಾರ್ಮಿಕ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ. ಇಲ್ಲಿಯ ಪರಿಸರ, ಬೆಟ್ಟಗುಡ್ಡಗಳ ಸಾಲು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇದು ಮೂಡಿಗೆರೆಯಿಂದ 22.1 ಕಿಲೋ ಮೀಟರ್‌ ದೂರದಲ್ಲಿದೆ. ಇನ್ನು ದೇವರಮನೆಗೆ ಹತ್ತಿರದಲ್ಲಿರುವ ನಾಣ್ಯ ಭೈರವೇಶ್ವರ ದೇವಸ್ಥಾನ ಸುಮಾರು 950 ವರ್ಷಗಳ ಇತಿಹಾಸವನ್ನು ಹೊಂದಿದ್ದು, ವಾರಾಂತ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

* ಭದ್ರಾ ವನ್ಯಜೀವಿ ಅಭಯಾರಣ್ಯ: ಭದ್ರಾ ವನ್ಯಜೀವಿ ಅಭಯಾರಣ್ಯದ ನೋಟವಂತೂ ಚಲನಚಿತ್ರದ ಒಂದು ದೃಶ್ಯ ಕಂಡತೆಯೇ ಭಾಸವಾಗುತ್ತದೆ. ಕರ್ನಾಟಕದ ಅತ್ಯಂತ ಜನಪ್ರಿಯ ವನ್ಯಜೀವಿ ಅಭಯಾರಣ್ಯಗಳಲ್ಲಿ ಇದು ಒಂದಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣಗಳಲ್ಲಿ ಇದು ಕೂಡ ಒಂದಾಗಿದೆ. ಪ್ರಾಣಿ ಪ್ರೇಮಿಗಳಿಗೆ ಭದ್ರಾ ವನ್ಯಜೀವಿ ಅಭಯಾರಣ್ಯವು ಹೇಳಿ ಮಾಡಿಸಿದ ಜಾಗವಾಗಿದೆ. ಮಕ್ಕಳಿಗೂ ಕೂಡ ವನ್ಯಜೀವಿಗಳ ಪರಿಚಯ ಮಾಡಿಸಲು ಇದು ಅತ್ಯುತ್ತಮವಾದುದ್ದಾಗಿದೆ.

ಭದ್ರಾ ವನ್ಯಜೀವಿ ಅಭಯಾರಣ್ಯ ಬೆಂಗಳೂರಿನಿಂದ 265 ಕಿಲೋ ಮೀಟರ್‌ ಇದ್ದರೆ, ಶಿವಮೊಗ್ಗದಿಂದ 32 ಕಿಲೋ ಮೀಟರ್‌ ಆಗುತ್ತದೆ. ಭದ್ರಾವತಿ ರೈಲು ನಿಲ್ದಾಣದಿಂದ 25 ಕಿಲೋ ಮೀಟರ್‌ ದೂರದಲ್ಲಿದೆ. ಭದ್ರಾವತಿ ಪಟ್ಟಣಕ್ಕೆ ಸರ್ಕಾರಿ ಮತ್ತು ಖಾಸಗಿ ಬಸ್ ಸೇವೆ ಲಭ್ಯವಿದೆ. ಆದ್ದರಿಂದ ಭದ್ರಾ ಅಣೆಕಟ್ಟು, ವನ್ಯಜೀವಿ ಅಭಯಾರಣ್ಯವನ್ನು ತಲುಪಲು ಟ್ಯಾಕ್ಸಿಗಳನ್ನು ಭದ್ರಾವತಿ, ಚಿಕ್ಕಮಗಳೂರು, ಶಿವಮೊಗ್ಗದಿಂದ ಬಾಡಿಗೆಗೆ ಪಡೆದು ತೆರಳಬಹುದಾಗಿದೆ.

ಭದ್ರಾ ಹಿನ್ನೀರಿನ ಪ್ರದೇಶದಲ್ಲಿ ಜಂಗಲ್ ಲಾಡ್ಜ್‌ ಮತ್ತು ರೆಸಾರ್ಟ್‌ಗಳನ್ನು ಲಭ್ಯವಿರುತ್ತದೆ. ಇಲ್ಲಿ ಭದ್ರಾ ಹಿನ್ನೀರಿನ ವೀಕ್ಷಣೆ ಮಾಡಬಹುದಾದ ಕುಟೀರಗಳಿವೆ. ಪ್ರವಾಸಿಗರಿಗೆ ಭದ್ರಾದಿಂದ ಹತ್ತಿರದ 25-30 ಕಿಲೋ ಮೀಟರ್‌ ದೂರವಿರುವ ಭದ್ರಾವತಿ ಮತ್ತು ಶಿವಮೊಗ್ಗ ನಗರಗಳಲ್ಲಿ ಉಳಿದುಕೊಳ್ಳಲು ಇನ್ನು ಹೆಚ್ಚಿನದಾಗಿ ಸೌಲಭ್ಯಗಳ ವ್ಯವಸ್ಥೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+