Get Updates
Get notified of breaking news, exclusive insights, and must-see stories!

ಸಂಗಾತಿಯೊಂದಿಗೆ ಸೆಪ್ಟೆಂಬರ್ ತಿಂಗಳಲ್ಲಿ ಭೇಟಿ ನೀಡಬಹುದಾದ ಕರ್ನಾಟದ ಅದ್ಬುತ ಸ್ಥಳಗಳಿವು...

ರಜಾ ದಿನಗಳು ಬಂದರೆ ಸಾಕು ಬಹುತೇಕ ಜನ ಹತ್ತಿರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಬಯಸುತ್ತಾರೆ. ಅದರಲ್ಲೂ ಸ್ನೇಹಿತರು, ಪ್ರೇಮಿಗಳು, ಹೊಸದಾಗಿ ಮದುವೆಯಾದವರು ಹತ್ತಿರದ ವೀಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಆಸೆ ಪಡುತ್ತಾರೆ. ಇಂತವರಿಗಾಗಿ ಕೆಲ ಸ್ಥಳಗಳು ಕರ್ನಾಟಕದಲ್ಲಿವೆ. ಈ ಸ್ಥಳಗಳು ನಿಮ್ಮ ಮನಸ್ಸಿಗೆ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ.

ಕರ್ನಾಟಕದಲ್ಲಿ ನೋಡಲೇಬೇಕಾದ ಕೆಲ ಸ್ಥಳಗಳು ಇವೆ. ಅವು ನಿಮ್ಮ ನಡುವಿನ ಸಂಬಂಧವನ್ನು ಗಟ್ಟಿಯಾಗಿಸಲು ಒಂದೊಳ್ಳೆ ಪರಿಸರವನ್ನು ಒದಗಿಸುತ್ತವೆ. ಹಾಗಾದರೆ ಆ ಸ್ಥಳಗಳು ಯಾವವು? ಎಲ್ಲಿವೆ? ಹೋಗುವ ಸಮಯ ಯಾವುದು ಇಂತೆಲ್ಲಾ ಬಗ್ಗೆ ಮಾಹಿತಿ ಇಲ್ಲಿದೆ.

amazing-places-in-karnataka-to-visit-in-september

ಮಡಿಕೇರಿ

ಮಡಿಕೇರಿ ಸಿಪಾಯಿ... ಈ ಹಾಡನ್ನು ನಿಮ್ಮ ಕಿವಿ ಬಿದ್ದರೆ ತಕ್ಷಣ ಕಣ್ಣೆದುರು ಬರುವುದು ಮಡಿಕೇರಿ. ಬ್ಯುಸಿ ಲೈಫ್‌ನಲ್ಲಿ ಮನಸ್ಸು ಬೇಸತ್ತು ಹೋಗಿದ್ದರೆ ಮಡಿಕೇರಿಗೆ ಭೇಟಿ ನೀಡಿ. ಮಡಿಕೇರಿ ಇದೊಂದು ಸಿಂದರ ಪಟ್ಟವಾಗಿದೆ. ಶಾಂತ ಮತ್ತು ಸುಂದರ ಮಾತ್ರವಲ್ಲದೆ ಮಾಲಿನ್ಯ ಮುಕ್ತ ಸ್ಥಳವಾಗಿದೆ. ಇಲ್ಲಿ ಕಾಫಿ ಸುವಾಸನೆ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. ಇದನ್ನು ಕರ್ನಾಟಕದ ರೋಮ್ಯಾಂಟಿ ಸ್ಥಳ ಅಂದರೂ ತಪ್ಪಾಗಲಾರದು.

ಇಲ್ಲಿಗೆ ನೀವು ಡಿಸೆಂಬರ್ ನಿಂದ ಫೆಬ್ರವರಿ ತಿಂಗಳಲ್ಲಿ ಭೇಟಿ ನೀಡಬಹುದು. ಇಲ್ಲಿ ನಿಮಗೆ ಓಕಾರೇಶ್ವರ ದೇವಸ್ಥಾನ, ಸೇಂಟ್ ಮೈಕೆಲ್ ಚರ್ಚ್, ಮಡಿಕೇರಿ ಕೋಟೆ, ಶಾಂತಿಯುತ ಪರಿಸರ ನೋಡಲು ಸಿಗುತ್ತದೆ.

amazing-places-in-karnataka-to-visit-in-september

ಕೂರ್ಗ್

ಕೂರ್ಗ್ ... ಸಾಮಾನ್ಯವಾಗಿ ಕೂರ್ಗ್‌ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಆದರೆ ಅದೆಷ್ಟೋ ಜನರಿಗೆ ಇಲ್ಲಿಗೆ ಹೋಗಲು ಸಾಧ್ಯವಾಗಿರುವುದಿಲ್ಲ. ಆದರೆ ಈ ಬಾರಿ ವೀಕೆಂಡ್‌ ನಲ್ಲಿ ಕೂರ್ಗ್‌ ಗೆ ಪ್ರಯಾಣ ಮಾಡುವುದನ್ನು ಮಿಸ್ ಮಾಡಬೇಡಿ. ಯಾಕೆಂದರೆ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಕೂರ್ಗ್‌ ಕೂಡ ಒಂದು. ಇಲ್ಲಿ ನೀವು ನಿಮ್ಮ ಪ್ರೀತಿ ಪಾತ್ರರೊಡನೆ ಕೆಲವು ಸ್ಮರಣೀಯ ಸಮಯವನ್ನು ಕಳೆಯಬಹುದು.

ಹಸುರಿನ ಕಾನನ, ಕಾಫಿ ತೋಟಗಳು, ದಂಪತಿಗಳಿಗೆ ಹೇಳಿ ಮಾಡಿಸಿದ ಸ್ಥಳ. ಮಾತ್ರವಲ್ಲದೆ ಇಲ್ಲಿ ನೀವು ಟ್ರಕ್ಕಿಂಗ್ ಕೂಡ ಮಾಡಬಹುದು. ಇಲ್ಲಿ ಉಳಿಯಲು ಉತ್ತಮ ಸೌಕರ್ಯಗಳನ್ನು ಹೊಂದಿರುವ ರೆಸಾರ್ಟ್‌ ಅಥವಾ ಹೋಂ ಸ್ಟೇಗಳು ಕೂಡ ಲಭ್ಯವಿದೆ. ಇಲ್ಲಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಯಾಣ ಮಾಡಬಹುದು. ಇದರೊಂದಿಗೆ ಅಬ್ಬೆ ಜಲಪಾತ, ರಾತ್ರಿ ಕ್ಯಾಂಪಿಂಗ್ ಸೌಲಭ್ಯಗಳು ಇಲ್ಲಿವೆ.

amazing-places-in-karnataka-to-visit-in-september

ಗೋಕರ್ಣ

ಕರ್ನಾಟಕದಲ್ಲಿ ಸಮುದ್ರವಿರುವ ಅದ್ಬುತ ಸ್ಥಳ ಅಂದರೆ ಅದು ಗೋಕರ್ಣ. ಇಲ್ಲಿ ಒಂದು ಬದಿಯಲ್ಲಿ ಪಶ್ಚಿಮ ಘಟ್ಟಗಳಿದ್ದರೆ, ಇನ್ನೊಂದು ಬದಿಯಲ್ಲಿ ಅರಬ್ಬಿ ಸಮುದ್ರವಿದೆ. ಜಲಮೂಗಳನ್ನು ಇಷ್ಟಪಡುವ ದಂಪತಿಗಳಿಗೆ ಈ ಸ್ಥಳವು ಸೂಕ್ತವಾಗಿದೆ. ಇಲ್ಲಿಗೆ ಹೋಗಿ ನೀವು ರೆಸಾರ್ಟ್ ನಲ್ಲಿ ವಿಶ್ರಾಂತಿ ಪಡೆಯಬಹುದು.

ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳು ಈ ಸ್ಥಳಕ್ಕೆ ನೀವು ಭೇಟಿ ನೀಡಬಹುದು. ಇಲ್ಲಿ ನೀವು ನಿರ್ವಾಣ ಬೀಚ್ ನೋಡಬಹುದು. ಟ್ರಿಹೌಸ್‌ನಲ್ಲಿ ವಾಸ್ತವ್ಯ ಹೂಡಬಹುದು. ಜೊತೆಗೆ ದೋಣಿ ಸವಾರಿ ಮಾಡಬಹುದು.

amazing-places-in-karnataka-to-visit-in-september

ಮಂಗಳೂರು

ಮಂಗಳೂರು ಬೆರೆಲ್ಲಾ ನಗರಗಳಿಗಿಂತ ವಿಭಿನ್ನವಾಗಿದೆ. ಶಾಂತವಾದ ವಾತಾವರಣವನ್ನು ಹೊಂದಿದೆ. ಇಲ್ಲಿನ ವಾಸ್ತುಶಿಲ್ಪದ ದೇವಾಲಯಗಳನ್ನು ಕಂಡು ನೀವು ಪ್ರಶಂಸಿಸಬಹುದು ಮತ್ತು ಸುಂದರವಾದ ಕಲಡತೀರಗಳಿಗೆ ಭೇಟಿ ನೀಡಬಹುದು. ಸಂಗಾತಿ ಹಾಗೂ ಸ್ನೇಹಿತರೊಂದಿಗೆ ಕಳೆಯಲು ಇದೊಂದು ಉತ್ತಮವಾದ ಸ್ಥಳವಾಗಿದೆ. ಇದೊಂದು ಹನಿಮೂನ್ ಸ್ಪಾಟ್ ಅಂತ ಹೇಳಬಹುದು.

ಸೆಪ್ಟೆಂಬರ್ ನಿಂದ ಏಪ್ರಿಲ್‌ ತಿಂಗಳ ವರೆಗೆಗೂ ಈ ಸ್ಥಳಕ್ಕೆ ಭೇಟಿ ನೀಡಬಹುದು. ನೇತ್ರಾವತಿ ಸೇತುವೆಯ ಬಳಿ ಸೂರ್ಯಾಸ್ತದ ದೃಶ್ಯವನ್ನು ನೀವು ಇಲ್ಲಿ ಆನಂದಿಸಬಹುದು. ಚಂದ್ರಗಿರಿ ಕೋಟೆ, ಪಿಲಿಕುಳ ಬೋಟಾನಿಕಲ್ ಗಾರ್ಡನ್, ಸೇಂಟ್ ಲಾರೆನ್ಸ್ ಚರ್ಚ್, ಅಡ್ಯಾರ್ ಜಲಪಾತಕ್ಕೆ ಭೇಟಿ ನೀಡಬಹುದು.

amazing-places-in-karnataka-to-visit-in-september

ಚಿಕ್ಕಮಗಳೂರು

ಈ ವೀಕೆಂಡ್‌ಗೆ ನೀವು ಚಿಕ್ಕಮಗಳೂರಿಗೆ ಭೇಟಿ ನೀಡಬಹುದು. ಬಹುತೇಕರು ಚಿಕ್ಕಮಗಳೂರು ಪ್ರವಾಸವನ್ನು ಎಷ್ಟು ಬಾರಿ ಕೈಗೊಂಡರು ಬೇಸರಗೊಳ್ಳುವುದಿಲ್ಲ. ಅಷ್ಟೊಂದು ಅದ್ಬುತವಾಗಿದೆ ಈ ಸ್ಥಳ. ನಿಸರ್ಗದ ಸೌಂದರ್ಯ, ಆಹ್ಲಾದಕರ ತಂಗಾಳಿ ಇಲ್ಲಿ ಆನಂದಿಸಬಹುದು. ಸಂಗಾತಿಯೊಂದಿಗೆ ಅಥವಾ ಸ್ನೇಹಿತರೊಂದಿಗೆ ಬಂದು ಹೆಚ್ಚಿನ ಸಮಯವನ್ನು ಕಳೆಯಲು ಚಿಕ್ಕಮಗಳೂರು ಅದ್ಬುತವಾದ ಸ್ಥಳ.

ಸೆಪ್ಟೆಂಬರ್ ನಿಂದ ಮೇ ತಿಂಗಳುಗಳಲ್ಲಿ ಇಲ್ಲಿ ಪ್ರವಾಸ ಕೈಗೊಳ್ಳಬಹುದು. ಟ್ರೆಕ್ಕಿಂಗ್, ರಾಫ್ಟಿಂಗ್, ಕಾಫಿ ತೋಟ, ಹೆಬ್ಬೆ ಜಲಪಾತ, ಝರಿ ಜಲಪಾತಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+