ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾರಿ ಯಾವುದಯ್ಯ ಮಂತ್ರಾಲಯಕ್ಕೆ

By * ರಘುನಂದನಾಚಾರ್ಯ, ಮಂತ್ರಾಲಯ
|
Google Oneindia Kannada News

ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 339 ನೇ ಆರಾಧನಾ ಮಹೋತ್ಸವ ವು ಆ.23 ರಿಂದ ಆ.27ರ ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಹಲವು ವಿಶೇಷ ಪೂಜಾ ಕೈಂಕರ್ಯಗಳು, ರಾಘವೇಂದ್ರ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಶ್ರೀಮಠ ಪ್ರಕಟಿಸಿದೆ.

ಆ.23ರಿಂದ ಮಂತ್ರಾಲಯದಲ್ಲಿ ರಾಯರ ಆರಾಧನೆಯ ಸಪ್ತರಾತ್ರೋತ್ಸವವು ಆರಂಭವಾಗಿದೆ. ಶ್ರೀಮಠದ ಪೀಠಾಧಿಪತಿ ಸುಯತೀಂದ್ರ ತೀರ್ಥರು ಗೋಪೂಜೆ, ಧಾನ್ಯ ಪೂಜೆ ಹಾಗೂ ಲಕ್ಷ್ಮಿ ಪೂಜೆ ನೆರವೇರಿಸುವ ಮೂಲಕ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ನಾಂದಿ ಹಾಡಿದರು.

ಎಲ್ಲೆಡೆ ಆರಾಧನೆಯ ದಿನಗಳ ಕಾರ್ಯಕ್ರಮವಾದರೆ ಮಂತ್ರಾಲಯದಲ್ಲಿ ಏಳುದಿನಗಳ ಹಬ್ಬ. ಆದರೂ ಸಾಮಾನ್ಯವಾಗಿ ಹೆಚ್ಚಿನ ಭಕ್ತಜನತೆ ಸ್ವಯಂಸೇವೆಗಾಗಿ ಮಂತ್ರಾಲಯಕ್ಕೆ ಭೇಟಿ ನೀಡುವುದು ಆರಾಧನೆಯ ಪ್ರಮುಖ ದಿನಗಳಾದ ಪೂರ್ವ, ಮಧ್ಯ ಹಾಗು ಉತ್ತರ ಆರಾಧನೆಯಂದು. ಮಂತ್ರಾಲಯಕ್ಕೆ ಬರುವವರು ಯಾರಾದರೂ ಇದ್ದರೆ ಅವರು ಈ ಲೇಖನವನ್ನು ನೋಡುವುದು ಉತ್ತಮ.

ಅಕ್ಟೋಬರ್ 2009 ರ ಪ್ರವಾಹದಿಂದಾಗಿ ಮಂತ್ರಾಲಯದ ಬಳಿಯ ಸೇತುವೆ ಕುಸಿದುಹೋಗಿದ್ದು ಬಹುತೇಕರಿಗೆಗೊತ್ತಿದೆ. ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆಯು ಸಹ ಕೊಚ್ಚಿ ಹೋಗ್ಬರುವುದು ಯೋಚಿಸಬೇಕಾದ ಸಂಗತಿ.

ಹೆಚ್ಚಿನ ಸ್ವಯಂಸೇವಕರು ಇಲ್ಲಿಗೆ ಬರುವುದು ವಿಜಾಪುರ, ಹುಬ್ಬಳ್ಳಿ ಪ್ರಾಂತ್ಯದಿಂದ ಬರುವುದು ರಾಯಚೂರಿನ ಮಾರ್ಗವಾಗಿ. ಆದರೆ ಎಲ್ಲ ಭಕ್ತವರ್ಗದವರು ನಿರೀಕ್ಷಿಸಿದಂತೆ ತುಂಗಭದ್ರೆಯಲ್ಲಿ ನೀರಿನ ಹರಿವು ಹೆಚ್ಚಾಗಿ, ರಾಯಚೂರು ಹಾಗು ಮಂತ್ರಾಲಯದ ಮಧ್ಯ ತುಂಗಭದ್ರೆಗೆ ನಿರ್ಮಿಸಲಾದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ.

ಕರ್ನಾಟಕದ ದಕ್ಷಿಣ ಪ್ರಾಂತ್ಯದಲ್ಲಿ ಮತ್ತೆ ವ್ಯಾಪಕ ಮಳೆಯಾಗುತ್ತಿದ್ದು ನದಿಯಲ್ಲಿ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಸಂಭವವಿದೆ. ಹಾಗಾಗಿ ಆರಾಧನೆಯ ಸಮಯದ ಒಳಗಾಗಿ ಈ ಸೇತುವೆಯನ್ನು ನಿರ್ಮಿಸುವುದಾಗಲಿ ಅಥವಾ ತಾತ್ಕಾಲಿಕವಾಗಿ ಪರ್ಯಾಯವ್ಯವಸ್ಥೆಯನ್ನಾಗಲಿ ಕಲ್ಪಿಸುವುದು ಅಸಾಧ್ಯ.

ಆದರೆ ಆರಾಧನೆಗೆ ಹಾಜರಿರಲು ಆಗದು ಎನ್ನುವ ದುಃಖಕ್ಕೆ ಅವಕಾಶವಿಲ್ಲ. ಇಲ್ಲಿ ಮಾರ್ಗೋಪಾಯಗಳಿವೆ. ನಿಮ್ಮ ಅನುಕೂಲಕ್ಕೆ ಸರಿಯಾಗಿ ಬಳಸಿಕೊಳ್ಳಬಹುದು.ಬೆಳಗಾವಿ ಹಾಗು ಹುಬ್ಬಳ್ಳಿ ಭಾಗದ ಜನತೆ ಲಿಂಗಸೂಗೂರು ಹಾಗು ರಾಯಚೂರು ಮಾರ್ಗದ ಮುಖಾಂತರ ಪ್ರಯಾಣಿಸದೆ ಕೊಪ್ಪಳ, ಹೊಸಪೇಟೆ, ಬಳ್ಳಾರಿ ಹಾಗು ಆದವಾನಿಯ ಮುಖಾಂತರ ಪ್ರಯಾಣಿಸಬೇಕು.

ಬಿಜಾಪುರ ಭಾಗದ ಭಕ್ತರು ಲಿಂಗಸೂಗೂರು, ಸಿಂಧನೂರು, ಧಡೇಸೂಗೂರು, ಶಿರುಗುಪ್ಪ, ಹಚ್ಚೊಳ್ಳಿ, ಕೌತಾಳಂ ಹಾಗು ಮಾಧವರದ ಮುಖಾಂತರ ಮಂತ್ರಾಲಯಕ್ಕೆ ಬಂದು ಸೇರಬಹುದು. ಮಾರ್ಗಕ್ರಮಣದ ಸಮಯ ಕೂಡ ಹೆಚ್ಚು ಕಮ್ಮಿ ರಾಯಚೂರಿನ ಮುಖಾಂತರ ಬಂದಷ್ಟೇ ಆಗುವುದು. ಆದರೆ ಈ ಮಾರ್ಗವಾಗಿ ಸರ್ಕಾರಿ ಬಸ್ಸುಗಳು ಸಂಚಾರ ಮಾಡುವುದಿಲ್ಲ ಆದ ಕಾರಣ ಸಮಾನಮನಸ್ಕರೊಂದಿಗೆ ಸ್ವಂತ ವಾಹನದಲ್ಲಿ ಬರುವುದು ಉತ್ತಮ. ಕೇಯೆಸ್ಸಾರ್ಟಿಸಿಯವರು ಈ ಮಾರ್ಗವನ್ನು ಬಳಸಿ ಬಸ್ಸುಗಳನ್ನು ಓಡಿಸಿದರೆ ಅತ್ಯುತ್ತಮ ಪಕ್ಷ.

ಗುಲ್ಬರ್ಗ, ಸೊಲ್ಲಾಪುರ ಹಾಗು ಹೈದರಾಬಾದ್ ಭಾಗದ ಜನತೆ ಅಲ್ಲಿಂದ ಹೊರಡುವ ರೈಲುಗಳನ್ನು ಅವಲಂಬಿಸಬಹುದು. ಇದು ಸರ್ವಶ್ರೇಷ್ಠ ಉಪಾಯ. ರೈಲು ಸಿಗದಿದ್ದ ಪಕ್ಷದಲ್ಲಿ ಬಸ್ಸಿನಲ್ಲಿ ರಾಯಚೂರಿನವರೆಗೆ ಪ್ರಯಾಣಿಸಿ, ರಾಯಚೂರಿನಿಂದ ಯರಗೇರಿ, ಐಜಿ, ಶಾಂತಿನಗರ ಹಾಗು ರಾಜೋಳ್ಳಿಗೆ ಬಂದು ಅಲ್ಲಿ ತುಂಗಭದ್ರೆಯ ಆಣೇಕಟ್ಟಿನ ಸೇತುವೆಯ ಮೇಲೆ ಹಾಯ್ದು ಪುನಃ ಸಮಾನಾಂತರ ರಸ್ತೆಯಲ್ಲಿ ವಾಪಸ್ಸು ಮಂತ್ರಾಲಯದ ಕಡೆ ಪ್ರಯಾಣ ಬೆಳೆಸ ಬಹುದು. ಇದು 120 ಕಿ.ಮೀ ಕ್ರಮಣದ ಪ್ರಯಾಣ. ಆದರೆ ದಾರಿಯುದ್ದಕ್ಕೂ ಹರಿದಾಸರುಗಳ ಕ್ಷೇತ್ರಗಳನ್ನು ದರ್ಶಿಸಬಹುದಾದ ಅವಕಾಶ ದೊರೆಯುವುದು. ಹೈದರಾಬಾದಿನಿಂದ ನೇರವಾಗಿ ಕರ್ನೂಲು ಮುಖಾಂತರವೂ ಬಂದು ಮಂತ್ರಾಲಯಕ್ಕೆ ಸೇರಬಹುದು.

ಗಮನಿಸಿ:
ರಾಯಚೂರಿನ ನಂತರ ಬರುವ ಪಂಚಮುಖಿ, ಮಾಧವರ ಅಥವಾ ಇನ್ನಿತರ ಸ್ಥಳಗಳಲ್ಲಿ ತುಂಗಭದ್ರಾನದಿಯನ್ನು ತೆಪ್ಪದ ಮುಖಾಂತರ ದಾಟಿ, ಮಂತ್ರಾಲಯವನ್ನು ಸುಲಭವಾಗಿ ಸೇರಬಹುದಾದರೂ ಆಪಾಯದ ಸಂಭವ ಇದ್ದೇ ಇದೆ.

ಗ್ಯಾಲರಿ: ಮಂತ್ರಾಲಯ ರಾಯರ 339ನೇ ಆರಾಧನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X