ಹಂಪಿ ಪ್ರವಾಸಕ್ಕೆ ದಟ್ಸ್ ಕನ್ನಡದ ಸಲಹೆಗಳು

Boulders Resort Hampi
ವಿಶ್ವಪರಂಪರೆಗೆ ಸೇರಿದ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣ ಹಂಪಿ. ಶ್ರೀಕೃಷ್ಣದೇವರಾಯನ ಕಾಲದಲ್ಲಿ ಸಮೃದ್ಧವಾಗಿದ್ದ ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ಪಳೆಯುಳಿಕೆಯಾಗಿ ವಿಶ್ವಪ್ರವಾಸಿಗರ ಗಮನ ಸೆಳೆಯುತ್ತಿರುವ ಸ್ಥಳ. ಬೆಂಗಳೂರಿನಿಂದ ಹೊಸಪೇಟೆಗೆ ರೈಲಿನಲ್ಲಿ ಹೋಗಿ ಅಲ್ಲಿಂದ ಕಾರೋ ಬಸ್ಸೋ ಹತ್ತಿದರೆ ಅರ್ಧ ಗಂಟೆಯಲ್ಲಿ ತಲುಪಬಹುದಾದ ಹಂಪಿಯನ್ನು ನೀವು ಒಮ್ಮೆ,ಮತ್ತೊಮ್ಮೆ ನೋಡಬೇಕು. ವಿಶಾಲವಾದ ಹಾಳು ಹಂಪಿಯನ್ನು ಜತನವಾಗಿಟ್ಟಿರುವುದರಿಂದ ಅಲ್ಲಿ ಸುತ್ತಾಡುವುದೇ ಒಂದು ಖುಷಿ. ಗತಕಾಲದ ನೆನಪುಗಳನ್ನು ಕೆದಕುವ ಕ್ಷಣ. ಮರೆಯಲಾಗದ ಒಂದು ಅನುಭವ.

ಇಂಥ ತಾಣಗಳಿಗೆ ಪ್ರವಾಸ ಕೈಗೊಳ್ಳುವ ಆಸೆ ಅನೇಕರಿಗೆ ಇರುತ್ತದೆ. ಆದರೆ, ಇಳಿದುಕೊಳ್ಳುವುದಕ್ಕೆ, ಊಟೋಪಚಾರಗಳಿಗೆ ಶುಚಿರುಚಿಯಾದ ಜಾಗಕ್ಕೆ ಪರದಾಡಬೇಕಾಗುತ್ತದೆ. ತುಂಬಿ ಧುಮ್ಮಿಕ್ಕುತ್ತಿರುವ ಜೋಗ ಜಲಪಾತಕ್ಕೆ ಪ್ರವಾಸ ತೆರಳಬೇಕೆನ್ನುವವರಿಗೂ ಇದೇ ಫಜೀತಿ ಕಾಡುತ್ತದೆ. ಆದರೆ, ಹಂಪಿಯಲ್ಲಿರುವ ಒಂದು ರಮಣೀಯ ರೆಸಾರ್ಟ್ ನಿಮ್ಮ ಪ್ರವಾಸದ ನಾನಾ ಚಿಂತೆಗಳನ್ನು ದೂರವಾಡಿ ಅಚ್ಚುಕ್ಕಟ್ಟಾದ ಸೌಲಭ್ಯಗಳನ್ನು ಒದಗಿಸುತ್ತದೆ. ಅದರ ಹೆಸರು ನಾರಾಯಣ ಪೇಟೆಯ ಬೌಲ್ಡರ್ಸ್ ರೆಸಾರ್ಟ್.

Boulders Resort Hampi
ಹಂಪಿಯಿಂದ 7 ಕಿಮೀ ದೂರದಲ್ಲಿರುವ ನಾರಾಯಣಪೇಟೆಯಲ್ಲಿ ಈ ರೆಸಾರ್ಟ್ ಇದೆ. ಯಾಮಿನಿ ಬೆಟ್ಟದ ತಪ್ಪಲಿನಲ್ಲಿ, ತುಂಗಭದ್ರೆಯ ಜುಳುಜುಳು ನಿನಾದದ ಹಿನ್ನೆಲೆಯಲ್ಲಿ ನೆಲೆಗೊಂಡಿರುವ ಈ ರೆಸಾರ್ಟ್ನಲ್ಲಿ ತಂಗುವುದು ಸ್ಮರಣೀಯ ಅನುಭವ. ಸಾವಿರಾರು ವರ್ಷಗಳಿಂದ ನೀರಿನಲ್ಲಿ ನೆಂದೂ ನೆಂದೂ ನುಣುಪಾಗಿರುವ ದೊಡ್ಡದೊಡ್ಡ ಬಂಡೆಗಳ ಮಡಿಲಲ್ಲಿ ತಲೆ ಎತ್ತಿರುವುದರಿಂದಲೇ ಈ ಅತಿಥಿಗೃಹಕ್ಕೆ ಬೌಲ್ಡರ್ಸ್ ರೆಸಾರ್ಟ್ ಎಂಬ ಹೆಸರಿದೆ.

ಸುಸಜ್ಜಿತ 11 ಕಾಟೇಜ್ ಗಳನ್ನು ಒಳಗೊಂಡಿರುವ ರೆಸಾರ್ಟ್ನಲ್ಲಿ ಕಾಲು ಚಾಚಿ ಕುಳಿತುಕೊಂಡು ಬೆಟ್ಟದ ಸಾಲು, ತುಂಗಭದ್ರೆಯ ಹರಿವನ್ನು ನೋಡುವುದು ಮಹದಾನಂದ. ಇಲ್ಲಿ ತಂಗಿದ್ದು ಹಂಪಿ ಮತ್ತು ಸುತ್ತ ಮುತ್ತಲಿರುವ ತಾಣಗಳಿಗೆ ಹೋಗಿಬಂದು ಮಾಡಬಹುದೆಂದು ದಟ್ಸ್ ಕನ್ನಡ ಸಲಹೆ ಮಾಡುತ್ತದೆ. ಕ್ಯಾಂಪಿಂಗ್ ಸೌಕರ್ಯ, ಬ್ಯಾಕ್ ಪ್ಯಾಕ್ ಅನುಕೂಲಗಳನ್ನು ಇಲ್ಲಿ ಪೂರೈಸಲಾಗುತ್ತದೆ. ರೆಸಾರ್ಟ್ ಬುಕಿಂಗ್, ಸಾರಿಗೆ ವ್ಯವಸ್ಥೆಗಳನ್ನು ದಟ್ಸ್ ಕನ್ನಡದ ಪ್ರವಾಸ ವಿಭಾಗ ಹಾಲಿಡೇಮೇಕರ್ಸ್ ಡಾಟ್ ಕಾಂ ನಿರ್ವಹಿಸುತ್ತದೆ. ಇದರ ಪೂರ್ಣ ಪ್ರಯೋಜನ ಪಡೆಯಿರಿ. ನಿಮ್ಮ ಬಂಧು ಬಳಗಕ್ಕೂ ತಿಳಿಸಿರಿ. ಇವತ್ತಲ್ಲ ನಾಳೆ ಹೋಗಿಬರುವಂತಾಗಲಿ. ನಮಗೆ ಬರೆಯಿರಿ : ಪ್ರಿಯ ಅಟ್ ಗ್ರೇನಿಯಮ್ ಡಾಟ್ ಕಮ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+