ಬನ್ನೇರುಘಟ್ಟದಲ್ಲಿ ಬೇಸಿಗೆಯ ವನ ಶಿಬಿರ

ಬೆಂಗಳೂರು, ಏ. 17 : ಜಂಗಲ್ ಲಾಡ್ಜ್ ಅಂಡ್ ರಿಸಾರ್ಟ್ ಲಿಮಿಟೆಡ್ ವತಿಯಿಂದ ಮಕ್ಕಳಿಗಾಗಿ ಎರಡು ದಿನಗಳ ಬೇಸಿಗೆಯ ವನ ಶಿಬಿರವನ್ನು ಏಪ್ರಿಲ್ 22 ರಂದು ನಗರದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಆಯೋಜಿಸಲಾಗಿದೆ.

ಎರಡು ದಿನಗಳ ಈ ಬೇಸಿಗೆಯ ವನ ಶಿಬಿರದಲ್ಲಿ 10 ರಿಂದ 15 ವರ್ಷದ ಮಕ್ಕಳು ಭಾಗವಹಿಸಬಹುದು. ಈ ಶಿಬಿರದಲ್ಲಿ ವನ ರಕ್ಷಣೆ, ಟ್ರಕ್ಕಿಂಗ್, ಕ್ಯಾಂಪ್ ಫೈರ್, ಪ್ರಕೃತಿ ಹಾಗೂ ಸಂರಕ್ಷಣೆ ಮತ್ತಿತರ ವಿಷಯಗಳ ಬಗ್ಗೆ ಉಪನ್ಯಾಸ ನಡೆಯಲಿದೆ. ಎರಡು ದಿನಗಳ ಶಿಬಿರಕ್ಕೆ 1000 ರುಪಾಯಿ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಶಿಬಿರದ ಸಮಯದಲ್ಲಿ ಮಕ್ಕಳಿಗೆ ವಸತಿ, ಊಟ ಹಾಗೂ ಉಪಹಾರವನ್ನು ಆಯೋಜಕರೆ ಭರಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ 94495 99794 ಅಥವಾ [email protected] ಸಂಪರ್ಕಿಸಬಹುದು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+