ಓಮಿಕ್ರಾನ್‌ ಏಕೆ ಕಡಿಮೆ ತೀವ್ರ?: ಸಂಶೋಧನಾ ವರದಿ ವಿವರ

ಪ್ರಯೋಗಾಲಯದ ಪ್ರಾಣಿಗಳು ಮತ್ತು ಮಾನವ ಅಂಗಾಂಶಗಳ ಮೇಲಿನ ಹೊಸ ಅಧ್ಯಯನಗಳು ಕೊರೊನಾ ವೈರಸ್‌ನ ಈ ಹಿಂದಿನ ರೂಪಾಂತರಗಳಿಗಿಂತ ಓಮಿಕ್ರಾನ್ ರೂಪಾಂತರವು ಸೌಮ್ಯವಾದ ರೋಗವನ್ನು ಏಕೆ ಉಂಟುಮಾಡುತ್ತದೆ ಎಂಬ ಬಗ್ಗೆ ವಿವರಣೆಯನ್ನು ನೀಡಿದೆ.

ಇಲಿಗಳು ಮೇಲಿನ ಅಧ್ಯಯನಗಳಲ್ಲಿ, ಓಮಿಕ್ರಾನ್ ಕಡಿಮೆ-ಹಾನಿಕಾರಕ ಸೋಂಕುಗಳನ್ನು ಉಂಟುಮಾಡುತ್ತದೆ. ಸಾಮಾನ್ಯವಾಗಿ ಮೇಲಿನ ಶ್ವಾಸನಾಳಕ್ಕೆ ಸೀಮಿತವಾಗಿದೆ. ಮೂಗು, ಗಂಟಲು ಮತ್ತು ಶ್ವಾಸನಾಳದಲ್ಲಿ ಈ ಸೋಂಕು ಹೆಚ್ಚಾಗಿ ಪರಿಣಾಮ ಉಂಟು ಮಾಡುತ್ತದೆ. ಈ ರೂಪಾಂತರವು ಶ್ವಾಸಕೋಶಗಳಿಗೆ ಕಡಿಮೆ ಹಾನಿಯನ್ನುಂಟುಮಾಡಿದೆ. ಹಿಂದಿನ ರೂಪಾಂತರಗಳು ಸಾಮಾನ್ಯವಾಗಿ ಶ್ವಾಸನಾಳಕ್ಕೆ ಅಧಿಕ ಮತ್ತು ಗಂಭೀರ ಪರಿಣಾಮವನ್ನು ಉಂಟು ಮಾಡಿತ್ತು. "ಪ್ರಾಥಮಿಕವಾಗಿ ಉಸಿರಾಟದ ವ್ಯವಸ್ಥೆಯಲ್ಲಿ ಕಾಣಿಸಿಕೊಳ್ಳುವ ಕಾಯಿಲೆ ಎಂದು ನಾವು ಹೇಳಬಹುದು," ಎಂದು ಬರ್ಲಿನ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಕಂಪ್ಯೂಟೇಶನಲ್ ಬಯಾಲಜಿಸ್ಟ್ ರೋಲ್ಯಾಂಡ್ ಐಲ್ಸ್ ಹೇಳುತ್ತಾರೆ. ಕೊರೊನಾ ವೈರಸ್‌ ಸೋಂಕು ಗಾಳಿಯಲ್ಲಿ ಹೇಗೆ ಹರಡುತ್ತದೆ ಎಂಬ ಬಗ್ಗೆ ರೋಲ್ಯಾಂಡ್ ಐಲ್ಸ್ ಅಧ್ಯಯನ ಮಾಡಿದ್ದಾರೆ.

ನವೆಂಬರ್‌ನಲ್ಲಿ ಓಮಿಕ್ರಾನ್‌ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಇದು 50 ಕ್ಕೂ ಹೆಚ್ಚು ಅನುವಂಶಿಕ ರೂಪಾಂತರಗಳನ್ನು ಹೊಂದಿದೆ ಎಂಬುವುದು ತಿಳಿದು ಬಂದಿದೆ. ಅದಾದ ಬಳಿಕ ಹಲವಾರು ಸಂಶೋಧನೆ, ಅಧ್ಯಯನಗಳು ನಡೆದಿದೆ. "ಕೇವಲ ರೂಪಾಂತರಗಳಿಂದ ನೀವು ವೈರಸ್‌ನ ನಡವಳಿಕೆಯನ್ನು ಊಹಿಸಲು ಸಾಧ್ಯವಿಲ್ಲ," ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವೈರಸ್ ತಜ್ಞ ರವೀಂದ್ರ ಗುಪ್ತಾ ಹೇಳಿದ್ದಾರೆ. ಕಳೆದ ಒಂದು ತಿಂಗಳಿನಿಂದ, ಗುಪ್ತಾ ಸೇರಿದಂತೆ ಒಂದು ಡಜನ್‌ಗಿಂತಲೂ ಹೆಚ್ಚು ಸಂಶೋಧನಾ ಗುಂಪುಗಳು ಪ್ರಯೋಗಾಲಯದಲ್ಲಿ ಹೊಸ ರೂಪಾಂತರದ ಬಗ್ಗೆ ಅಧ್ಯಯನ ನಡೆಸುತ್ತಿದೆ. ಆದರೆ ಈಗಾಗಲೇ ಓಮಿಕ್ರಾನ್‌ ವಿಶ್ವದೆಲ್ಲೆಡೆ ಹರಡಿದೆ.

 ಪ್ರಕರಣ ಏರಿಕೆಯಾದರೂ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ

ಪ್ರಕರಣ ಏರಿಕೆಯಾದರೂ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ

ಓಮಿಕ್ರಾನ್‌ ರೂಪಾಂತರದ ಪ್ರಕರಣವು ಏರಿಕೆ ಕಂಡರೂ ಕೂಡಾ ಈ ರೂಪಾಂತರ ತಗುಲಿದವರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣವು ಕಡಿಮೆ ಇದೆ. ಸಾಧಾರಣವಾಗಿ ಮಾತ್ರ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಅಧಿಕವಾಗಿದೆ. ರೋಗಿಗಳ ಆರಂಭಿಕ ಅಧ್ಯಯನಗಳು ಇತರ ರೂಪಾಂತರಗಳಿಗಿಂತ ವಿಶೇಷವಾಗಿ ಲಸಿಕೆ ಹಾಕಿದ ಜನರಲ್ಲಿ ಓಮಿಕ್ರಾನ್ ತೀವ್ರ ಅನಾರೋಗ್ಯವನ್ನು ಉಂಟುಮಾಡುವ ಸಾಧ್ಯತೆ ಕಡಿಮೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಆದರೂ, ಆ ಸಂಶೋಧನೆಗಳು ಬಹಳಷ್ಟು ಎಚ್ಚರಿಕೆಯನ್ನು ನೀಡಿದೆ. ಆರಂಭದಲ್ಲಿ ಓಮಿಕ್ರಾನ್‌ ಪ್ರಕರಣಗಳು ಬಹುಪಾಲು ಯುವಜನರಲ್ಲಿ ಕಂಡು ಬಂದಿತ್ತು. ಆದರೆ ಯುವಜನರು ಕೊರೊನಾ ವೈರಸ್‌ನಿಂದ ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ. ಇನ್ನು ಈ ನಡುವೆ ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಳ್ಳದ ವಯಸ್ಸಾದ ವ್ಯಕ್ತಿಗಳಲ್ಲಿ ಓಮಿಕ್ರಾನ್ ಕಡಿಮೆ ತೀವ್ರತೆಯನ್ನು ಉಂಟು ಮಾಡುತ್ತದೆಯೇ ಎಂಬುವುದು ಸ್ಪಷ್ಟವಾಗಿಲ್ಲ.

 ಪ್ರಕರಣ ಏರಿಕೆಯಾದರೂ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ

ಪ್ರಕರಣ ಏರಿಕೆಯಾದರೂ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ

ಪ್ರಾಣಿಗಳ ಮೇಲಿನ ಪ್ರಯೋಗಗಳು ಈ ಅಸ್ಪಷ್ಟತೆಯನ್ನು ನಿವಾರಿಸಲು ಸಹಾಯ ಮಾಡಿದೆ. ವಿಜ್ಞಾನಿಗಳು ಒಂದೇ ರೀತಿಯ ಪರಿಸ್ಥಿತಿಗಳಲ್ಲಿ ವಾಸಿಸುವ ಒಂದೇ ಪ್ರಾಣಿಗಳ ಮೇಲೆ ಓಮಿಕ್ರಾನ್ ಅನ್ನು ಪರೀಕ್ಷೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆಸಿದ ಅರ್ಧ-ಡಜನ್‌ಗಿಂತಲೂ ಹೆಚ್ಚು ಪ್ರಯೋಗಗಳು ಒಂದೇ ತೀರ್ಮಾನವನ್ನು ಹೊರಹಾಕಿದೆ. ಓಮಿಕ್ರಾನ್ ಡೆಲ್ಟಾ ಮತ್ತು ವೈರಸ್‌ನ ಇತರ ಹಿಂದಿನ ಆವೃತ್ತಿಗಳಿಗಿಂತ ಸೌಮ್ಯವಾಗಿದೆ ಎಂಬುವುದು ತಿಳಿದುಬಂದಿದೆ.

 ಓಮಿಕ್ರಾನ್‌ ಕಡಿಮೆ ತೀವ್ರತೆ

ಓಮಿಕ್ರಾನ್‌ ಕಡಿಮೆ ತೀವ್ರತೆ

ಜಪಾನೀಸ್ ಮತ್ತು ಅಮೇರಿಕನ್ ವಿಜ್ಞಾನಿಗಳ ದೊಡ್ಡ ಒಕ್ಕೂಟವು ಈ ಅಧ್ಯಯನವನ್ನು ಮಾಡಿದೆ. ಓಮಿಕ್ರಾನ್ ಸೋಂಕಿಗೆ ಒಳಗಾದವರು ಕಡಿಮೆ ಶ್ವಾಸಕೋಶದ ಹಾನಿಯನ್ನು ಹೊಂದಿದ್ದರು, ಕಡಿಮೆ ತೂಕವನ್ನು ಕಳೆದುಕೊಂಡರು ಮತ್ತು ಸಾಯುವ ಸಾಧ್ಯತೆ ಕಡಿಮೆ ಎಂದು ಅಧ್ಯಯನವು ಕಂಡುಹಿಡಿದಿದೆ. ಓಮಿಕ್ರಾನ್ ಸೋಂಕಿಗೆ ಒಳಗಾದ ಪ್ರಾಣಿಗಳು ಸರಾಸರಿ ಹೆಚ್ಚು ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದ್ದರೂ ವಿಜ್ಞಾನಿಗಳು ನಿರ್ದಿಷ್ಟವಾಗಿ ಸಿರಿಯನ್ ಹ್ಯಾಮ್ಸ್ಟರ್‌ಗಳ ಮೇಲೆ ನಡೆಸಿದ ಪ್ರಯೋಗದಿಂದ ಆಘಾತಕ್ಕೆ ಒಳಗಾಗಿದ್ದಾರೆ. ಈ ಹಿಂದಿನ ಕೋವಿಡ್‌ ರೂಪಾಂತರದಿಂದ ಸಿರಿಯನ್ ಹ್ಯಾಮ್ಸ್ಟರ್‌ಗಳು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದವು, ಆದರೆ ಓಮಿಕ್ರಾನ್‌ನಿಂದ ಕಡಿಮೆ ರೋಗಕ್ಕೆ ಒಳಗಾಗಿದೆ.

Recommended Video

    Team Indiaಗೆ Champion ಆಗಲು 2022ರಲ್ಲಿ ದೊಡ್ಡ ಅವಕಾಶ | Oneindia Kannada
     ಕಡಿಮೆ ತೀವ್ರತೆಗೆ ಕಾರಣವೇನು?

    ಕಡಿಮೆ ತೀವ್ರತೆಗೆ ಕಾರಣವೇನು?

    ಓಮಿಕ್ರಾನ್‌ ರೂಪಾಂತರವು ಸೌಮ್ಯವಾಗಿರಲು ಕಾರಣ ಅಂಗರಚನಾಶಾಸ್ತ್ರದ ವಿಷಯವಾಗಿರಬಹುದು ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ವೈರಸ್ ತಜ್ಞ ಮತ್ತು ಅಧ್ಯಯನದ ಸಹ-ಲೇಖಕ ಡಾ. ಮೈಕೆಲ್ ಡೈಮಂಡ್ ಹೇಳಿದ್ದಾರೆ. ಡೈಮಂಡ್ ಮತ್ತು ಅವರ ಸಹೋದ್ಯೋಗಿಗಳು ಇಲಿಗಳ ಮೂಗುಗಳಲ್ಲಿನ ಓಮಿಕ್ರಾನ್ ಮಟ್ಟವು ಕೊರೊನಾ ವೈರಸ್‌ನ ಹಿಂದಿನ ರೂಪದಿಂದ ಸೋಂಕಿಗೆ ಒಳಗಾದ ಪ್ರಾಣಿಗಳಂತೆಯೇ ಇರುತ್ತದೆ ಎಂದು ಕಂಡುಹಿಡಿದಿದೆ. ಆದರೆ ಶ್ವಾಸಕೋಶದಲ್ಲಿನ ಓಮಿಕ್ರಾನ್ ಮಟ್ಟಗಳು ಇತರ ರೂಪಾಂತರಗಳ ಮಟ್ಟಕ್ಕಿಂತ ಕಡಿಮೆ ಇದೆ ಎಂದು ತಿಳಿದು ಬಂದಿದೆ. 12 ಶ್ವಾಸಕೋಶದ ಮಾದರಿಗಳಲ್ಲಿ, ಡೆಲ್ಟಾ ಮತ್ತು ಇತರ ರೂಪಾಂತರಗಳಿಗಿಂತ ಓಮಿಕ್ರಾನ್ ನಿಧಾನವಾಗಿ ಬೆಳೆಯುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+