Get Updates
Get notified of breaking news, exclusive insights, and must-see stories!

ಸಿದ್ದರಾಮಯ್ಯ ಆಂಧ್ರಪ್ರದೇಶ ಸಿಎಂ ಆಗ್ಬಿಟ್ರು!

ಮಾಧ್ಯಮಗಳ ವರದಿಗಾರಿಕೆಯಲ್ಲಿ ಕೆಲ ಬಾರಿ ಅಚಾತುರ್ಯಗಳು ನಡೆಯುವುದು ಮಾಮೂಲಿ. ಆದರಲ್ಲೂ ಮುದ್ರಣ ಮಾಧ್ಯಮದಲ್ಲಿ ಮುದ್ರಾರಾಕ್ಷಸನ ಹಾವಳಿ ಇದ್ದಂತೆ, ವೆಬ್ ಮಾಧ್ಯಮದಲ್ಲೂ ತಪ್ಪುಗಳು ಸಹಜ. ಆದರೆ, ತಿದ್ದುಪಡಿ ಕ್ಷಣಾರ್ಧದಲ್ಲಿ ಮಾಡಿಕೊಳ್ಳುವ ಸೌಲಭ್ಯವಂತೂ ವೆಬ್ ಮೀಡಿಯಾಗೆ ಇದ್ದೇ ಇದೆ.

ಆದರೆ, ಜನಪ್ರಿಯ ಪತ್ರಿಕೆ ಟೈಮ್ ಆಫ್ ಇಂಡಿಯಾ ಇಂದು(ಜನವರಿ 8, 2.05ಕ್ಕೆ) ಮಧ್ಯಾಹ್ನ ಮಾಡಿರುವ ಒಂದು ಟ್ವೀಟ್ ಪ್ರಮಾದ ಇನ್ನೂ ಸರಿಪಡಿಸಿಲ್ಲ(ಸಮಯ 2.35). ಕೊಡಗಿನ ಮಡಿಕೇರಿಯಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನದ ವರದಿಯುಳ್ಳ ಲೇಖನದ ಕೊಂಡಿ ಸಹಿತ 'Only Kannada files get stamp, sign, says Andhra CM Siddaramaiah ' ಎಂದು ಟೈಟಲ್ ಹಾಕಿ ಟ್ವೀಟ್ ಮಾಡಲಾಗಿದೆ.

ಈ ಬಗ್ಗೆ ಕೂಡಲೇ ಅನೇಕ ಮಂದಿ ಎಚ್ಚರಿಸಿದ್ದಾರೆ. ಅದರೆ, ಟ್ವೀಟ್ ಬದಲಾಗಿಲ್ಲ. ಲೇಖನದ ಕೊಂಡಿ ಒಳಹೊಕ್ಕರೆ ಅಲ್ಲಿ ಎಲ್ಲೂ ಆಂಧ್ರ ಸಿಎಂ ಸಿದ್ದರಾಮಯ್ಯ ಎಂಬುದು ಕಾಣುವುದಿಲ್ಲ. ಟ್ವೀಟ್ ನಲ್ಲಿ ಮಾತ್ರ ಸಿದ್ದರಾಮಯ್ಯ ಅವರು ಆಂಧ್ರಪ್ರದೇಶದ ಸಿಎಂ ಆಗಿ ಮುಂದುವರೆದಿದ್ದಾರೆ.

'ತಪ್ಪು ಮಾಡೋದು ಸಹಜ ಕಣೋ ತಿದ್ದಿ ನಡೆಯೋನು ಮನುಜ ಕಣೋ' ಎನ್ನುವ ಹಂಸಲೇಖರ ವಾಕ್ಯ ನೆನಪಾಗುತ್ತದೆ. ಈ ರೀತಿ ಟ್ವೀಟ್ ಅಥವಾ ಫೇಸ್ ಬುಕ್ ಪೋಸ್ಟ್ ಗಳಿಂದ ಯಾವ ಕಂಪನಿಗಳು ಹೊರತಾಗಿಲ್ಲ. ಒನ್ ಇಂಡಿಯಾದಲ್ಲೂ ತಪ್ಪುಗಳನ್ನು ಓದಿರುತ್ತಿರುತ್ತೇನೆ. ಅದರೆ, ತಿದ್ದುಪಡಿ ಮಾಡಿ ಓದುಗರಿಗೆ ಪ್ರತಿಕ್ರಿಯೆ ನೀಡದಿದ್ದರೆ ಅದಕ್ಕಿಂತ ನಿರ್ಲಕ್ಷ್ಯತನ ಮತ್ತೊಂದಿಲ್ಲ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹತ್ತಾರು ಪ್ರತಿಕ್ರಿಯೆಗಳು ಟೈಮ್ಸ್ ಪತ್ರಿಕೆ ವಿರುದ್ಧ ಬಂದಿದೆ.

ಸಿದ್ದರಾಮಯ್ಯ ಆಂಧ್ರಪ್ರದೇಶ ಸಿಎಂ ಆಗ್ಬಿಟ್ರು!

ಸಿದ್ದರಾಮಯ್ಯ ಆಂಧ್ರಪ್ರದೇಶ ಸಿಎಂ ಆಗ್ಬಿಟ್ರು!

ಜನಪ್ರಿಯ ಪತ್ರಿಕೆ ಟೈಮ್ ಆಫ್ ಇಂಡಿಯಾ ಇಂದು(ಜನವರಿ 8, 2.05ಕ್ಕೆ) ಮಧ್ಯಾಹ್ನ ಮಾಡಿರುವ ಒಂದು ಟ್ವೀಟ್ ಪ್ರಮಾದ

ಸಿದ್ದರಾಮಯ್ಯ ಆಂಧ್ರಪ್ರದೇಶ ಸಿಎಂ ಆಗ್ಬಿಟ್ರು!

ಜನಪ್ರಿಯ ಪತ್ರಿಕೆ ಟೈಮ್ ಆಫ್ ಇಂಡಿಯಾ ಇಂದು(ಜನವರಿ 8, 2.05ಕ್ಕೆ) ಮಧ್ಯಾಹ್ನ ಮಾಡಿರುವ ಒಂದು ಟ್ವೀಟ್ ಪ್ರಮಾದಕ್ಕೆ ಅಚ್ಚರಿ

ಆಂಧ್ರ ಸಿಎಂ ಆಗಲು ಹೇಗೆ ಸಾಧ್ಯ?

ಜನಪ್ರಿಯ ಪತ್ರಿಕೆ ಟೈಮ್ ಆಫ್ ಇಂಡಿಯಾ ಇಂದು(ಜನವರಿ 8, 2.05ಕ್ಕೆ) ಮಧ್ಯಾಹ್ನ ಮಾಡಿರುವ ಒಂದು ಟ್ವೀಟ್ ಪ್ರಮಾದಕ್ಕೆ ಪ್ರತಿಕ್ರಿಯೆ

ಟೈಮ್ಸ್ ಗೇ ಎಲ್ಲಾ ಗೊತ್ತಿದೆ ಅನ್ಸುತ್ತೆ

ಹೌದೇ ಇದು ನಿಜವೇ? ನಾನೇನೋ ಸಿದ್ದರಾಮಯ್ಯ ಅವರು ಕರ್ನಾಟಕ ಸಿಎಂ ಅಂದುಕೊಂಡಿದ್ದೆ

ತಿದ್ದುಪಡಿ, ಬದಲಾವಣೆ ಮಾಡಿ ಮೊದಲು

ತಿದ್ದುಪಡಿ, ಬದಲಾವಣೆ ಮಾಡಿ ಮೊದಲು ಅಥವಾ ಟ್ವೀಟ್ ಮಾಡುವ ಮೊದಲು ಒಮ್ಮೆ ಓದಿ

ನಿಮಗೆಲ್ಲೋ ಹುಚ್ಚು ಅನ್ಸುತ್ತೆ!

ಜನಪ್ರಿಯ ಪತ್ರಿಕೆ ಟೈಮ್ ಆಫ್ ಇಂಡಿಯಾ ಇಂದು(ಜನವರಿ 8, 2.05ಕ್ಕೆ) ಮಧ್ಯಾಹ್ನ ಮಾಡಿರುವ ಒಂದು ಟ್ವೀಟ್ ಪ್ರಮಾದಕ್ಕೆ ನಿಮಗೆಲ್ಲೋ ಹುಚ್ಚು ಅನ್ಸುತ್ತೆ!ಎಂಬ ಪ್ರತಿಕ್ರಿಯೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+