ಓದುಗರ ಪತ್ರ: ಅಧಿಕಾರದ ಆಸೆಗೆ ಮಹಿಳೆಯ ತೇಜೋವಧೆ ಮಾಡಿದ ಎಚ್ಡಿಕೆ

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರೆ, ನಿನ್ನೆ(ಏಪ್ರಿಲ್ 10) ನಡೆದ ಕುಮಾರಪರ್ವ ಕಾರ್ಯಕ್ರಮದಲ್ಲಿ ಅಧಿಕಾರದ ಆಸೆಗೆ ತಮ್ಮ ನಾಲಿಗೆಯನ್ನು ಹರಿಬಿಟ್ಟುರುವುದು ನಿಮ್ಮ ಘನತೆಯನ್ನು ತೋರಿಸುತ್ತದೆ.

ತಮ್ಮ ಸ್ವಾರ್ಥದ ರಾಜಕೀಯ ಮತಗಳಿಗಾಗಿ ಚುನಾವಣಾ ಪ್ರಚಾರದ ಮಧ್ಯೆ ದಿವಂಗತ ಕಲ್ಲಪ್ಪ ಹಂಡಿಭಾಗ ಅವರ ಕುಟುಂಬದ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದೀರಿ. ಇಡೀ ಹೆಣ್ಣು ಸಮುದಾಯಕ್ಕೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದೀರಿ.

ನೀವು ರಾಜಕೀಯ ಮಾಡಲು ಹೋದವರು, ರಾಜಕೀಯ ಮಾಡಿ, ವೋಟ್ ಕೇಳಿ ಬರಬೇಕು. ಅದನ್ನು ಬಿಟ್ಟು 'ಕಲ್ಲಪ್ಪ ಹಂಡಿಬಾಗ್ ಧರ್ಮಪತ್ನಿಯವರಿಗೆ ನಾನು ಕೆಲಸ ಕೊಡಿಸಿದೆ, ನಾನು ಕೆಲಸ ಕೊಡಿಸದಿದ್ದರೆ, ಅವರು ಮೈಮಾರಿಕೊಂಡು ಬದುಕಬೇಕಿತ್ತು' ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು ಏಕೆ?

Readers letter on HD Kumaraswamys controversial statement

ಮಾಜಿ ಮುಖ್ಯಮಂತ್ರಿ ಎಂದು ನಿಮ್ಮ ಮೇಲಿದ್ದ ಗೌರವವನ್ನು ನೀವೇ ಕಳೆದುಕೊಳ್ಳುತ್ತಿದ್ದೀರಿ. ಕುಮಾರಸ್ವಾಮಿಯವರೇ ಇನ್ನಾದರೂ ನಿಮ್ಮ ಘನತೆಗೆ ತಕ್ಕ ಹಾಗೆ ಮಾತನಾಡಿ. ಯಾರೊನ್ನೋ ಮೆಚ್ಚಿಸಲು ತಮ್ಮತನವನ್ನು ಬಿಟ್ಟು ಕೀಳು ರಾಜಕೀಯ ಮಾಡಬೇಡಿ. ಈ ಎಲ್ಲಾ ಘಟನೆಗಳು ಕರ್ನಾಟಕ ಪ್ರಜ್ಞಾವಂತ ಮತದಾರರ ಮೇಲೆ ಪ್ರಭಾವ ಬೀರುವುದು ನಿಶ್ಚಿತ.

ಕಳೆದ ಸುಮಾರು ವರ್ಷಗಳಿಂದಲೂ ಕುರುಬರ ಮೇಲೆ ದ್ವೇಷದ ರಾಜಕಾರಣ ಮಾಡುತ್ತ ಬರಲಾಗಿದೆ. ಕುರುಬ ಸಮುದಾಯಕ್ಕೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಬೆರಳಣಿಕೆಯಷ್ಟೇ ಟಿಕೆಟ್ ನೀಡಿ ಅವಮಾನ ಮಾಡಲಾಗಿದೆ. ಕುರುಬರು ಕರ್ನಾಟಕದ ದೊಡ್ಡ ಸಮುದಾಯಗಳಲ್ಲಿ 3ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಅವರಿಗೆ ರಾಜಕೀಯ ವಾಗಿಯೂ ತಕ್ಕುದಾದ ಸ್ಥಾನಮಾನ ನೀಡಿಲ್ಲ. ಅಲ್ಲದೆ ಕೆಂಪಯ್ಯ ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಅವರನ್ನು ಕೂಡ ಇಕ್ಕಟ್ಟಿನಲ್ಲಿ ಸಿಕ್ಕಿಸಲು ಸಂಚು ಮಾಆಡಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಮಾನ್ಯ ಕುಮಾರಸ್ವಾಮಿಯವರೇ, ಹೀಗೆ ಕುರುಬ ಸಮಾಜದ ಬಗ್ಗೆ ತೋಜೋವಧೆ, ಮಲತಾಯಿ ಧೋರಣೆ ಮುಂದುವರಿಸಿದರೆ, ಇಡೀ ಕುರುಬ ಸಮಾಜ ತಕ್ಕ ಪಾಠ ಕಲಿಸಲಿದೆ ಎಚ್ಚರ!

(ಲೇಖಕರು ಅಖಿಲ ಕರ್ನಾಟಕ ಯುವ ಕುರುಬರ ಒಕ್ಕೂಟ (ರಿ)ದ ರಾಜ್ಯ ಸಂಘಟನಾ ಕಾರ್ಯದರ್ಶಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+