Bengaluru Water Shutdown: ನಾಳೆ 12ಗಂಟೆಗಳ ಕಾಲ ಕಾವೇರಿ ನೀರು ವ್ಯತ್ಯಯ, ಎಲ್ಲಿ?

ಬೆಂಗಳೂರು: ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ತಿಳಿಸಿದೆ. ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತ 2ನೇ ಘಟ್ಟಗಳಿಗೆ ಒಳಪಡುವ ಪ್ರದೇಶಗಳಲ್ಲಿ ಇದೇ ಜುಲೈ 16ರಂದು ಗುರುವಾರ ನೀರು ಸರಬರಾಜು ಕೆಲ ಕಾಲ ಕಡಿತಗೊಳ್ಳಲಿದೆ ಎಂದು ತಿಳಿಸಲಾಗಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವತಿಯಿಂದ ಕಾವೇರಿ ನೀರು ಸರಬರಾಜು ಯೋಜನೆ 4ನೇ ಹಂತ 2ನೇ ಘಟ್ಟದಲ್ಲಿ 2700 ಮೀ.ಮೀ. ವ್ಯಾಸದ ಕೊಳವೆ ಮಾರ್ಗದಲ್ಲಿನ ಕಾಮಗಾರಿ ನಡೆಯಲಿದೆ. ಇಲ್ಲಿನ ಸ್ಕೌರ್‌ ವಾಲ್ವ್ (Scour Valve) ಸೋರಿಕೆಯನ್ನು ತಡೆಗಟ್ಟುವ ಸಲುವಾಗಿ ತುರ್ತು ನಿರ್ವಹಣೆ ಕೆಲಸ ಕೈಗೆತ್ತಿಕೊಳ್ಳಲಾಗಿದೆ.

Bengaluru Water Supply

ಈ ಕಾರಣದಿಂದ ಇದೇ ಜುಲೈ 16ರಂದು ಗುರುವಾರ ಬೆಳಗ್ಗೆ 06 ಗಂಟೆಯಿಂದ ಸಂಜೆ 06 ಗಂಟೆವರೆಗೆ ಒಟ್ಟು ಬರೋಬ್ಬರಿ 12 ಗಂಟೆಗಳ ಕಾಲ ಜಲರೇಚಕ ಯಂತ್ರಗಾರಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಈ ಜಲರೇಚಕ ಯಂತ್ರಾಗಾರಗಳ ಸ್ಥಗಿತತೆಯಿಂದ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ. ಆದ್ದರಿಂದ ಸಾರ್ವಜನಿಕರು ಮುಂಜಾಗ್ರತೆಯಾಗಿ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಹಾಗೂ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಬೆಂಗಳೂರು ಜಲಮಂಡಳಿ ಕೋರಿದೆ.

E-Bus: 'ಸೋಮಾರಿ-ಕಮಿಷನ್' ಕಾಂಗ್ರೆಸ್ ಸರ್ಕಾರದಿಂದ ಬೆಂಗಳೂರಿಗೆ 4,500 ಇ-ಬಸ್ ಕೈತಪ್ಪುವ ಸಾಧ್ಯತೆ! ಜೆಡಿಎಸ್
E-Bus: 'ಸೋಮಾರಿ-ಕಮಿಷನ್' ಕಾಂಗ್ರೆಸ್ ಸರ್ಕಾರದಿಂದ ಬೆಂಗಳೂರಿಗೆ 4,500 ಇ-ಬಸ್ ಕೈತಪ್ಪುವ ಸಾಧ್ಯತೆ! ಜೆಡಿಎಸ್

ಇನ್ನೂ ನೀರು ಕಡಿತವಾಗುವ ಪ್ರದೇಶಗಳ ಸಂಪೂರ್ಣ ಮಾಹಿತಿಯನ್ನು ಜಲಮಂಡಳಿ ತಿಳಿಸಬೇಕಿದೆ. ಯಾರೆಲ್ಲ ಜಲಮಂಡಳಿಯ ಕಾವೇರಿ ಯೋಜನೆ 4ನೇ ಹಂತ 2ನೇ ಘಟ್ಟದ ವ್ಯಾಪ್ತಿಯ ಬಡಾವಣೆಯಲ್ಲಿ ವಾಸಿಸುತ್ತೀದ್ದಿರೋ ಅವರು ಅಧಿಕ ನೀರು ಸಂಗ್ರಹ ಇಲ್ಲವೇ ಪರ್ಯಾಯ ಮಾರ್ಗ ಕಂಡುಕೊಳ್ಳಬಹುದು.

BWSSB: ನೇಮಕಾತಿ ಅಭ್ಯರ್ಥಿಗಳ ದಾಖಲೆ ಪರಿಶೀಲನೆ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನೇರ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳ ಪರಿಶೀಲನೆ ನಡೆಸಲು ಪ್ರಕ್ರಿಯೆ ಆರಂಭಿಸಿ ಜಲಮಂಡಳಿ ಅಧಿಸೂಚನೆ ಹೊರಡಿಸಲಾಗಿತ್ತು.

ನೇಮಕಾತಿ ಅಧಿಸೂಚನೆ ಸಂಖ್ಯೆ ಇಡಿ/ಕೆಇಎ/ಆಡಳಿತ/ಸಿ.ಆರ್.25/2025 (ಆರ್.ಪಿ.ಸಿ) 15 ನವೆಂಬರ್ 2025 ರನ್ವಯ ವಿವಿಧ ವೃಂದದ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ಪಟ್ಟಿಯನ್ನು ಸಿದ್ಧಪಡಿಸಿ, ಅಂತಹ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಹಾಜರಾಗುವಂತೆ ತಿಳಿಸಲಾಗಿತ್ತು.

ಕಿರಿಯ ಸಹಾಯಕ-ಮಿಕ್ಕುಳಿದ (ಆರ್.ಪಿ.ಸಿ) ವೃಂದದ ಹುದ್ದೆಗಳನ್ನು ತಾಂತ್ರಿಕ ಕಾರಣಗಳಿಂದ ಹಿಂಪಡೆದು ಪರಿಷ್ಕೃತ ಅಭ್ಯರ್ಥಿಗಳ ಪಟ್ಟಿಯನ್ನು ಮಂಡಳಿಯು ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ತಮಗೆ ನಿಗಧಿಪಡಿಸಿರುವ ದಿನದಂದು ಪೂರಕ ದಾಖಲೆಗಳೊಂದಿಗೆ ಹಾಜರಾಗಲು ಕೋರಿದೆ. ದಾಖಲೆ ಪರಿಶೀಲನೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿ, ದಿನಾಂಕ, ಸಮಯ, ಸ್ಥಳ ಮತ್ತಿತರ ಮಾಹಿತಿಗೆ ಮಂಡಳಿಯ ಅಧಿಕೃತ ವೆಬ್ ಸೈಟ್ www.bwssb.gov.in ನಲ್ಲಿ ವೀಕ್ಷಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+