ಸಮೀರಾಚಾರ್ಯ ಬಿಗ್ ಬಾಸ್ ಸ್ಪರ್ಧೆಗೆ ಓದುಗರ ಅಭಿಪ್ರಾಯವೇನು?

Posted By:
Subscribe to Oneindia Kannada

ಬಿಗ್ ಬಾಸ್ ಕನ್ನಡ ಸೀಸನ್ ಐದರಲ್ಲಿ ಸಮೀರಾಚಾರ್ಯ ಅವರು ಭಾಗವಹಿಸುತ್ತಿರುವ ಬಗ್ಗೆ, ಅದರಿಂದ ಬ್ರಾಹ್ಮಣರ ಆಚರಣೆಗೆ ತೊಂದರೆ ಆಗುವ ಬಗ್ಗೆ ಹಾಗೂ ಅದನ್ನು ಸ್ಪರ್ಧಿಯಾಗಿ ಹೇಗೆ ನಿಭಾಯಿಸುತ್ತಾರೆ ಎಂದು ಪ್ರಶ್ನಿಸುವ ಲೇಖನವೊಂದು 'ಬಿಗ್ ಬಾಸ್ ನಲ್ಲಿ ಸಮೀರಾಚಾರ್ಯ, ಬ್ರಾಹ್ಮಣ್ಯದ ಬಿಗ್ ಚರ್ಚೆ ಎಂಬ ಶೀರ್ಷಿಕೆಯಡಿ ಒನ್ಇಂಡಿಯಾ ಕನ್ನಡದಲ್ಲಿ ಪ್ರಕಟವಾಗಿತ್ತು.

ಬಿಗ್ ಬಾಸ್ ನಲ್ಲಿ ಸಮೀರಾಚಾರ್ಯ, ಬ್ರಾಹ್ಮಣ್ಯದ ಬಿಗ್ ಚರ್ಚೆ

ಆ ಲೇಖನಕ್ಕೆ ಓದುಗರಿಂದ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆಯ್ದ ಅಭಿಪ್ರಾಯವನ್ನು ಪ್ರಕಟಿಸಲಾಗುತ್ತಿದೆ.

ವಿಜಯ್
ಅವರು ಬರಬಾರದಾಗಿತ್ತು, ಈಗ ಬಂದಾಗಿದೆ. ಈ ಹಿಂದೆ ಬಿಗ್ ಬಾಸ್ ನಲ್ಲಿ ಪಾಲ್ಗೊಂಡ ಬ್ರಹ್ಮಾಂಡ ಗುರೂಜೀ ಮತ್ತು ಇನ್ನೊಬ್ಬ ಸನ್ಯಾಸಿ ವೇಷ ಧರಿಸಿದ ಗೃಹಸ್ಥ (ಹೆಸರು ಮರೆತಿದ್ದೇನೆ ಬಹುಶಃ ಶಿವಕುಮಾರ ಸ್ವಾಮೀಜಿ ಇರಬೇಕು ಅವರ ಹೆಸರು ) ಅವರಿಗೆ ಅವರ ಅನುಷ್ಠಾನ ಮಾಡುವ ಸಾಮಗ್ರಿಗಳನ್ನು ಒಳಗೆ ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದರು.

Oneinidia Kannada readers response to Sameeracharya Bigg Boss Kannada season 5 entry

ಹಾಗಾಗಿ ಇವರಿಗೂ ತಮ್ಮ ಧರ್ಮಾನುಷ್ಠಾನ ಮಾಡಲು ಅಗ್ಗಿಷ್ಟಿಕೆ ಮತ್ತು ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಬೇಕಿತ್ತು.

ಗುರುರಾಜ್
ತುಂಬಾ ಹಸಿವಾದರೆ ಹೋಟೆಲಲ್ಲಿ ಊಟ, ನೀರು, ಕೋಲ್ಡ್ ಕುಡಿಯೋದಿಲ್ಲವೋ ಬ್ರಾಹ್ಮಣರು? ಅವನ್ನೆಲ್ಲಾ ಬ್ರಾಹ್ಮಣರೇ ಮಾಡಿಕೊಡ್ತಾರಾ? ಅವರು ಹೋಗಿದ್ದರಲ್ಲಿ ಏನೂ ತಪ್ಪಿಲ್ಲ. ಅವರು ಸಹ ಒಬ್ಬ ಮನುಷ್ಯ ತಾನೇ. ಎಲ್ಲ ಜಾತಿಯವರ ಮನೆಯಲ್ಲಿ ದೇವರ ಫೋಟೋ ಇರುತ್ತದೆ. ಆದರೆ ಬಿಗ್ ಬಾಸ್ ಮನೇಲಿ ಒಬ್ಬ ಮನುಷ್ಯ ಪೂಜಾರಿ ಇರಬಾರದಾ?

ಎಂಥ ಜನರು ನೀವು, ದೇವರಿಗಿಂತ ಒಬ್ಬ ಬ್ರಾಹ್ಮಣನೇ ಮೇಲಾ? ಅವರಿಗೇ ಏನೂ ಸಂಕೋಚ ಇಲ್ಲ. ಮತ್ತೆ ನಿಂಗೇನು ತೊಂದರೆ? ಅವರಿಗೆ ಸಹ ಸ್ವಲ್ಪ ಲೈಫ್ ನ ಅನುಭವ ಆಗುತ್ತೆ ಬಿಡಿ, ಪಾಪ.

ಶಾಮಸುಂದರ ಪಿ ಗೋಕರ್ಣ
ಬ್ರಾಹ್ಮಣ ಆಚಾರ ಬಿಟ್ಟು ಕೆಟ್ಟ, ಶೂದ್ರ ಆಚಾರ ಕಟ್ಟಿಕೊಂಡು (ನಡವಳಿಕೆ, ಸಂಪ್ರಾದಾಯ ನಡೆ) ಕೆಟ್ಟ. -ಗಾದೆ ಮಾತು ಸಮೀರಾಚಾರ್ಯ ಅವರಿಗೆ ನಿಜವಾದ ಮಾತು ಆಗುತ್ತದೆ.

ಗೀತಾ
ವಿಷ್ಣುವಿನ ಪ್ರೇರೇಪಣೆ ಇರಬಹುದು, ನೋಡೋಣ ಏನಾಗತ್ತೋ?

ಜಗನ್ನಾಥ ಕೆ.
ಆತನಿಗೆ ಅವಕಾಶ ಸಿಕ್ಕಿದೆ. ಉಪಯೋಗಿಸಿಕೊಳ್ಳಲು ಬಿಡಿ. ಧರ್ಮ ಪ್ರಚಾರ ಮಾಡಲು ಅಲ್ಲಿ ಬೇರೆಯವರು ಬಿಡುತ್ತಾರೆಯೇ? ಅಲ್ಲಿರುವವರೆಲ್ಲ ಘಟಾನುಘಟಿಗಳು, ಪ್ರಚಂಡರು. ಅಲ್ಲಿ ಇರಲು ಬಿಡುತ್ತಾರೆಯೇ?

ವಿಜಯಕುಮಾರ್
ಹೋಗಲಿ ಬಿಡ್ರಯ್ಯ ಅವನೇನು ದೇವರಲ್ಲ, ಹೆಂಗೋ ಬದುಕೋತಾನೆ. ಏಕೆ ಜಾತಿ ಧರ್ಮ ಅಂತ ಸಾಯಿತೀರಾ, ಈಗ 1 % ಇರೋ ಬ್ರಾಹ್ಮಣರು ಎಲ್ಲರನ್ನೂ ಸಣ್ಣ ಸಣ್ಣ ವಿಷಯಕ್ಕೆ ಹೊರಗೆ ಹಾಕಿ 0.1 % ಆಗಿಹೋಗಿಬಿಟ್ಟರೆ....

ವಿದ್ಯಾಶಂಕರ್ ಕೌಶಿಕ್
ಧರ್ಮ, ಜ್ಞಾನ ಮನಸ್ಸಿನ ಒಳಗಿರಬೇಕು. ಅದನ್ನು ಹೊರಗೆ ತೋರಿಸಬಾರದು. ಇವರು ಇಲ್ಲಿಗೆ ಬಂದದ್ದು ಅತ್ಯಂತ ನೋವಿನ ವಿಚಾರ. ಧರ್ಮ ಪ್ರಚಾರ ಮಾಡಲು ಅನೇಕ ವಿಧಾನಗಳಿವೆ. ಉದಾಹರಣೆಗೆ: ಶ್ರೀ ವಿದ್ವಾನ್ ಪುಷ್ಕರಾಚಾರ್ , ಶ್ರೀ ಸುವಿದ್ಯೇಂದ್ರ ತೀರ್ಥ , ವಿಠ್ಠಲದಾಸ್ ಮಹಾರಾಜ್ ಇವರನ್ನು ಅನುಕರಣೆ ಮಾಡಬಹುದಿತ್ತು. ಈಗಲೂ ಪ್ರಯತ್ನ ಮಾಡಿ. ಇವರು ಕೊಚ್ಚೆಗೆ ಕಲ್ಲು ಎಸೆದು ಮೈಲಿಗೆ ಆಯಿತು ಅನ್ನುವವರ ತರಹ ಮಾಡಿಕೊಂಡಿದ್ದಾರೆ.

ಗುರು ಎಲೆಕ್ಟ್ರಾ
ನನ್ನ ಪ್ರಕಾರ ಇದೊಂದು ಸುವರ್ಣಾವಕಾಶ. ಒಬ್ಬ ಬ್ರಾಹ್ಮಣ ಅಂದ್ರೆ ನನ್ನ ಪ್ರಕಾರ ಬ್ರಾಹ್ಮಣ್ಯ ಪಾಲಿಸೋರು ಮಾತ್ರ ಅಲ್ಲ. ಯಾರ ದರುಶನದಿಂದ ಭಕ್ತಿ -ಭಾವ ಮೂಡುತ್ತದೋ ಅವನೇ ಬ್ರಾಹ್ಮಣ.

ಬಿಗ್ ಬಾಸ್ ನಂತಹ ಕಾರ್ಯಕ್ರಮದಲ್ಲಿ ಇವರ ಆಗಮನದಿಂದ ವೀಕ್ಷಕರು ಲೌಕಿಕದಿಂದ ಅಧ್ಯಾತ್ಮಕ್ಕೆ ವಾಲಿದರೆ ಬಿಗ್ ಬಾಸ್ ಗೋತಾ!

ಬಿಂದುಮಾಧವ
ಅವರು ಬರಬಾರದಿತ್ತು. ಮುಂದಿನ ಆಗು ಹೋಗುಗಳಿಗೆ ಅವರನ್ನಷ್ಟೇ ಜವಾಬ್ದಾರರನ್ನಾಗಿ ಮಾಡಬೇಕು. ಸುದೀಪ್ ನನ್ನು ದೇವರ ರೀತಿ ಸ್ತುತಿಸಿದ್ದು ಮಾತ್ರ ಅಕ್ಷಮ್ಯ ಅಪರಾಧ.

ಪಾಷ ಹೆಗ್ಲು
"ಬ್ರಾಹ್ಮಣರ ಬುದ್ಧಿಯೇ ಇಷ್ಟು. ತಮಗೆ ಅನ್ವಯ ಆಗುವ ಶಾಸ್ತ್ರವೇ ಬೇರೆ. ಇನ್ನೊಬ್ಬರಿಗೆ ಹೇಳುವಾಗಿನ ಕಟ್ಟುಪಾಡೇ ಬೇರೆ" ಎಂದು ಮಾತನಾಡಿಕೊಳ್ಳಲು ಸಮೀರಾಚಾರ್ಯರೇ ಅವಕಾಶ ಮಾಡಿಕೊಟ್ಟಂತಾಗಿದೆ. ಅಂತ ಹೇಳ್ತೀರಲ್ಲ, ನಿಮ್ಮ ಹತ್ತಿರ ಅದನ್ನೆಲ್ಲ ಪಾಲನೆ ಮಾಡು ಅಂತ ಬ್ರಾಹ್ಮಣರು ಫೋರ್ಸ್ ಮಾಡಿದ್ದಾರಾ? ನಿಮ್ಮಿಷ್ಟ ಅಲ್ವ ? ಸಂವಿಧಾನ ಇದೆ ತಾನೇ?

ಸಮೀರಾಚಾರ್ಯ ಬ್ರಾಹ್ಮಣ್ಯ ಪಾಲನೆ ಮಾಡೋದು ಬಿಡೋದು ಅವರಿಷ್ಟ ನೀವೀ ಆರ್ಟಿಕಲ್ ಯಾಕೆ ಬರೀಬೇಕು? ನಿಮಗೆ ಬೇರೆ ಕೆಲಸ ಇಲ್ವಾ ಇನ್ನೊಬ್ಬರ ಬಗ್ಗೆ ಬರೆಯೋದು ಬಿಟ್ಟು... ನಿಮ್ಮಷ್ಟಕ್ಕೆ ನೀವು ಇರಿ ..ಸುಮ್ನೆ ಇನ್ನೊಬ್ಬರ ಬಗ್ಗೆ ಕಾಮೆಂಟ್ ಮಾಡಬೇಡಿ.

ಅನಾಮಿಕ
ಇದು ನಿಮ್ಮ ನೀಚ ಮನಸ್ಸನ್ನು ತೋರಿಸುತ್ತದೆ. ಪ್ರತಿ ಒಂದರಲ್ಲೂ ತಪ್ಪನ್ನು ಹುಡುಕುವ ನಿನ್ನಿಂದಲೇ ಬ್ರಾಹ್ಮಣರಿಗೆ ಕೆಟ್ಟ ಹೆಸರು. ಥೂ ನಿನ್ನ ಜನ್ಮಕ್ಕೆ ಇಷ್ಟು. ಈ ಕಾಮೆಂಟ್ ಪಬ್ಲಿಶ್ ಆಗೂದಿಲ್ಲವೆಂದು ಗೊತ್ತು. ನೀವು ಓದಿದರೆ ಅಷ್ಟು ಸಾಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is the response of Oneinidia Kannada readers for the article about Sameeracharya Bigg Boss Kannada season 5 entry.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ