• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ರಾಜ್ ಲೀಲಾ ವಿನೋದ': ಒನ್ಇಂಡಿಯಾ ಓದುಗರ ಪ್ರತಿಕ್ರಿಯೆ

By ಒನ್ಇಂಡಿಯಾ ಕನ್ನಡ
|

ಬೆಂಗಳೂರು, ಡಿಸೆಂಬರ್ 24: ಪತ್ರಕರ್ತ-ಲೇಖಕ ರವಿ ಬೆಳಗೆರೆ ಅವರು ಬರೆದಿರುವ ನಟಿ ಲೀಲಾವತಿಯವರ ಆತ್ಮಕಥೆ 'ರಾಜ್ ಲೀಲಾ ವಿನೋದ' ಪುಸ್ತಕ ಬಿಡುಗಡೆ ಕಾರ್ಯಕ್ರಮ ಭಾನುವಾರ (ಡಿಸೆಂಬರ್ 25) ಪದ್ಮನಾಭನಗರ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ನಡೆಯಲಿದೆ.

ಇದರ ಜೊತೆಗೆ ಕಾಳಿಂಗ ಕಾಳಗ, ಖಾಸ್ ಬಾತ್, ಬಾಟಮ್ ಐಟಮ್, ಅತ್ಮ ಪುಸ್ತಕಗಳು ಕೂಡ ಬಿಡುಗಡೆಯಾಗುತ್ತವೆ ಎಂದು ರವಿ ಬೆಳಗೆರೆ ಅವರು ತಿಳಿಸಿದ್ದಾರೆ. ಈ ಎಲ್ಲ ಪುಸ್ತಕಗಳ ಪೈಕಿ ತೀರಾ ಕುತೂಹಲ ಹುಟ್ಟಿಸಿದಂಥದ್ದು ರಾಜ್ ಲೀಲಾ ವಿನೋದ. ಅದರ ಆಯ್ದ ಒಂದು ಭಾಗವನ್ನು ಪ್ರಕಾಶಕರ ಅನುಮತಿ ಪಡೆದು ಒನ್ಇಂಡಿಯಾ ಕನ್ನಡದಲ್ಲಿ ಪ್ರಕಟಿಸಲಾಗಿತ್ತು.

ಅದಕ್ಕೆ ಓದುಗರಿಂದ ಹಲವಾರು ಹಾಗೂ ವಿವಿಧ ರೀತಿಯ ಪ್ರತಿಕಿಯೆಗಳು ಬಂದಿವೆ. ಇದರ ಜೊತೆಗೆ ಆ ಪುಸ್ತಕದ ಬಗ್ಗೆ ಒಂದು ಪೋಲಿಂಗ್ ಕೂಡ ಹಾಕಲಾಗಿತ್ತು. ಅದರಲ್ಲೂ ಕೂಡ ಹಲವರು ಭಾಗಿಯಾಗಿದ್ದಾರೆ. ಒಟ್ಟಾರೆ ಓದುಗರ ಅಭಿಪ್ರಾಯ ಹಾಗೂ ಪೋಲಿಂಗ್ ಒಟ್ಟು ಸೇರಿಸಿ ಇಲ್ಲಿ ಕೊಡಲಾಗುತ್ತಿದೆ.[ನನ್ನ ಸ್ಥಿತೀಲಿ ಬೇರೆ ಹೆಂಗಸಿದ್ದಿದ್ದರೆ ಎಷ್ಟು ರಾದ್ಧಾಂತ ಆಗ್ತಿತ್ತು?]

ರಾಜ್ ಲೀಲಾ ವಿನೋದ ಪುಸ್ತಕದ ಬಗ್ಗೆ ನಿಮ್ಮ ನಿರೀಕ್ಷೆ ಏನು? ಎಂದು ಕೇಳಲಾಗಿತ್ತು. ಅದಕ್ಕೆ ಮೂರು ಅಯ್ಕೆಯನ್ನು ಸಹ ಕೊಡಲಾಗಿತ್ತು. ಈ ಪೋಲಿಂಗ್ ನಲ್ಲಿ ಒಟ್ಟು 4,764 ಮತಗಳ ಮೂಲಕ ಅಭಿಪ್ರಾಯಗಳ ತಿಳಿಸಿದ್ದಾರೆ. ಈ ಪುಸ್ತಕ ಬಿಡುಗಡೆಯಾಗಬಾರದು ಎಂದು ಶೇ 8.25 (393), ಗೊತ್ತಿಲ್ಲದ ಸತ್ಯಗಳ ಬಗ್ಗೆ ಕುತೂಹಲವಿದೆ ಶೇ 67.51 (3,216), ನಿರೀಕ್ಷೆ ಅಂತ ಏನಿಲ್ಲ, ಪುಸ್ತಕ ಬರ್ಲಿ ನೋಡೋಣ ಅಂತ ಶೇ 24.24 (1,155) ಮತಗಳು ಬಂದಿವೆ.

ಇನ್ನು ಓದುಗರ ಆಯ್ದ ಪ್ರತಿಕ್ರಿಯೆಗಳು ಇಂತಿವೆ

ವಿಜಯಕುಮಾರ್ : ನಿಜವಾಗಿಯೂ ಅನ್ಯಾಯ ಆಗಿರೋದು ಪಾರ್ವತಮ್ಮ ಅವರಿಗೆ. ಒಬ್ಬ ವ್ಯಕ್ತಿಗೆ ಮದುವೆ ಆಗಿದೆ ಎಂದು ತಿಳಿದೂ ಅವರ ಜತೆ ಸಂಬಂಧ ಬೆಳೆಸಿದ್ದು ಲೀಲಮ್ಮ ತಪ್ಪು. ಈ ಸಂಬಂಧಕ್ಕೆ ಅವರೇನಾದರೂ ಒತ್ತಡ ಹಾಕಿದ್ರಾ? ಹಾಗೊಂದು ವೇಳೆ ಮಾಡಿದ್ದರೆ ಸಾಕ್ಷಿ ಕೊಡಲಿ

ಪ್ರಕಾಶ್ : ಯಾರಿಂದಲೂ ಹುಲಿವಂಶ/ರಾಜ್ ವಂಶವನ್ನು ಅಲುಗಾಡಿಸಲು ಆಗಲ್ಲ. ಯಾರು ಏನಾದ್ರೂ ಹೇಳಬಹುದು. ಸಾಕ್ಷಿ ಎಲ್ಲಿದೆ? ಯಾವುದೇ ಸಂಬಂಧ ಇದೆ ಅಂತ ಹೇಳೋಕೆ ಪ್ರಯತ್ನಿಸಬೇಡಿ ಮತ್ತು ಅಭಿಮಾನಿ ದೇವರುಗಳನ್ನು ಕೆಣಕಬೇಡಿ.

ಜಯಾ : ಮೂರನೇ ಕ್ಲಾಸ್ ಮಾತ್ರ ರಾಜ್ ಕುಮಾರ್ ಪತ್ರ ಬರೆದದ್ದು ಹೇಗೆ? ಮತ್ತು ಮಾನಕ್ಕಂಜುವ ಲೀಲಾವತಿಯವರು ಲಾಯರ್ ಕೈಗೆ ಕೊಟ್ಟಿದ್ದೇಕೆ?['ರಾಜ್ ಲೀಲಾ ವಿನೋದ' ಪುಸ್ತಕದ ಬಗ್ಗೆ ನಿಮ್ಮ ನಿರೀಕ್ಷೆ ಏನು?]

ಮಂಗಳೂರಿಯನ್: ವಿವಾಹಿತ ಪುರುಷನ ಹಿಂದೆ ಹೋಗುವ ಹೆಣ್ಣುಮಕ್ಕಳಿಗೆ ಲೀಲಾವತಿಯವರ ಜೀವನ ಪಾಠ ಕಲಿಸಲಿ. ರಾಜಕುಮಾರ್ ಚಿತ್ರರಂಗಕ್ಕೆ ಬರುವಾಗಲೇ ವಿವಾಹಿತರಾಗಿದ್ದರು. ಪಾರ್ವತಮ್ಮನವರಿಗೆ ಲೀಲಾವತಿಯವರಿಗೆ ಅನ್ಯಾಯವಾಗಿದೆ ಹೊರತು ಬೇರೆ ಯಾರಿಗೂ ಅಲ್ಲ. ರವಿಯವರು ಹಣ ಮಾಡಲು ಈ ವಿಷಯ ಬಳಸುತ್ತಿರುವುದು ನೋವಿನ ವಿಷಯ.

ಮಗಧೀರ: ಲೀಲಾವತಿಯವರು ರಾಜಕುಮಾರ್ ಕುಟುಂಬದ ವಿರುದ್ಧ ಕಾನೂನು ಹೋರಾಟ ಮಾಡಲು ಲೇಖಕರು ಸಹಾಯ ಮಾಡಲಿ. ಯಾವುದೇ ಸಾಕ್ಷ್ಯ ಇಲ್ಲದ ಈ ಪುಸ್ತಕದಿಂದ ಏನು ಪ್ರಯೋಜನ?

ಕುಮಾರ್ : ಈ ಎಲ್ಲ ಮಾತುಗಳನ್ನು ರಾಜ್ ಬದುಕಿರುವಾಗಲೇ ಹೇಳಬಹುದಿತ್ತು. ಇವೆಲ್ಲವನ್ನೂ ಕನ್ನಡಿಗರು ನಂಬಲ್ಲ. ರಾಜ್ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಅಜರಾಮರ. ಇವೆಲ್ಲ ಪಬ್ಲಿಸಿಟಿ ಗಿಮಿಕ್.[ಡಿಸೆಂಬರ್ 25ಕ್ಕೆ ರಾಜ್ ಲೀಲಾ ವಿನೋದ ಪುಸ್ತಕ ಬಿಡುಗಡೆ]

ಮಂಜುನಾಥ್ : ರಾಜಕುಮಾರ್ ಅವರಿಗೆ ಮದುವೆ ಆಗಿದ್ರೂ ನೀವು ಹೇಗೆ ಅವ್ರನ್ನ ಒಪ್ಪಿಕೊಂಡ್ರಿ? ಅವರಿಗೂ ಸಂಸಾರ ಇತ್ತು ತಾನೇ? ನಿಮ್ಮದು ತಪ್ಪು ತಾನೇ?

ಆಚಾರ್ಯ : ದೊಡ್ಡವರು ಮಾಡುವ ತಪ್ಪುಗಳು ಬಹಿರಂಗಗೊಳ್ಳುವುದು ಬಲು ಅಪರೂಪ. ಹಲವರು ತಮ್ಮ ತಪ್ಪಿನ ಅರಿವಾಗಿ ಅವರಿಗೆ ಜೀವನಾಂಶ ನೀಡಿ ಸಲಹುತ್ತಾರೆ. ಸಮಾಜದಲ್ಲಿ ಎಲ್ಲರಂತೆ ಬಾಳುವ ಹಕ್ಕನ್ನು ಮೊಟಕುಗೊಳಿಸಿ, ಜೀವನ ಪರ್ಯಂತ ನರಕ ಯಾತನೆ ಅನುಭವಿಸುವಂತೆ ಮಾಡುವುದು ವ್ಯಕ್ತಿಯ ಘನತೆಗೆ ಕಪ್ಪು ಚುಕ್ಕೆ. ಸತ್ಯ ಬಹಿರಂಗವಾಗ ವ್ಯಕ್ತಿ ಬದುಕಿರಲಿ, ಇಲ್ಲದಿರಲಿ ಜನರ ಮನ ದುಃಖಗೊಳ್ಳುವುದು ಯಾತನೆ ಅನುಬವಿಸುತ್ತಿರುವ ಜೀವಗಳ ಮೇಲೇ.

ಗುಂಡ : ಈ ವಿಷಯ ಎಲ್ಲರಿಗೂ ಗೊತ್ತಿದೆ. ಪಾಪ ಬಹಳ ಅನ್ಯಾಯ ಆಗಿದೆ ಅವರಿಗೆ. ವಿನೋದ್ ರಾಜ್ ಮೇಲೆ ಬರಬಾರದು ಅಂತ ಮಾಡಿದ್ದೂ ಗೊತ್ತಿದೆ. ಅವರ ಫ್ಯಾಮಿಲಿ ಈಗಲಾದರೂ ಸಹಾಯ ಮಾಡಬೇಕು ಇವರಿಗೆ.

ಡಿಂಜ್ : ರಾಜಕುಮಾರ್ ಅವರಿಗೆ ಇಂದು ಕೊಡುತ್ತಿರುವ ಮರ್ಯಾದೆ ಪ್ರೀತಿ ಎಲ್ಲವೂ ನಿಜ ಅಂತ ಆದ್ರೆ ಅದರಲ್ಲಿ ಲೀಲಾವತಿ ಅಮ್ಮನ ಕೊಡುಗೆ ಬಹಳ ಮಹತ್ವದ ಪಾತ್ರ. ಒಂದು ವೇಳೆ ಲೀಲಾವತಿ ಅವರು ರಂಪ- ರಾಮಾಯಣ ಮಾಡಿದ್ದರೆ ಅಣ್ಣಾವರ ಘನತೆ ಏನಾಗಿರ್ತಿತ್ತು? ಯೋಚನೆ ಮಾಡಿ.. ಒಂದೇ ಒಂದು ಬಾರಿ ಅಣ್ಣಾವರು ತಮ್ಮ ತಪ್ಪನ್ನ ಕ್ಷಮಿಸಿ, ಅಂದು ಅವರನ್ನ ಗುರುತಿಸಿದ್ರೆ ಮಹಾತ್ಮನಂತೆ ನೋಡುತಿದ್ರು ಜನ. ಎಲ್ಲವೂ ಮುಗಿದ ಮೇಲೆ ಏನು ಮಾಡುವುದು? ಈಗ ಮಾತಾಡಿ, ನೀವೇ ಸಹಕರಿಸಿ ಕೊಟ್ಟಂಥ ಘನತೆ ಗೆ ಪೆಟ್ಟು ಕೊಟ್ಟಂತೆ. ಅಷ್ಟಕ್ಕೂ ನಿಮ್ಮ ಮೇಲೊಂದು ಸಹಾನುಭೂತಿ ಹಾಗೇನೇ ಚಿಕ್ಕ ಕೋಪ ಮತ್ತು ಗೌರವ ನಿಮ್ಮ ಸಾಹಸಕ್ಕೆ.[ಮದುವೆ ಕೊಲ್ಲುವ ಪ್ಯಾರಲಲ್ ಲೈಫ್ ಎಂಬ ಕಾಯಿಲೆ!]

ದೀಪಕ್ ಡಿ.ಎಸ್. : ಒಬ್ಬ ವ್ಯಕ್ತಿ ಜೀವಂತವಾಗಿಲ್ಲದ ವೇಳೆ ಇಂತಹ ಹೇಳಿಕೆಗಳನ್ನು ನೀಡುವುದು ಸಭ್ಯಸ್ತರ ಲಕ್ಷಣವಲ್ಲ. ರಾಜ್‌ಗೆ ಮದುವೆಯಾಗಿರುವ ವಿಚಾರ ತಿಳಿದೂ ನೀವು ಮೊದಲು ಪಾರ್ವತಮ್ಮನವರಿಗೆ ದ್ರೋಹ ಮಾಡಿದ್ದೀರಿ. ಈಗ ಏಕೆ ಈ ವಿಷಯದ ಬಗ್ಗೆ ತಗಾದೆ ಎತ್ತಿದ್ದೀರಿ. ಇನ್ನು ಸರಿತಾ ಹಾಗೂ ಗೀತಾ ಅವರ ಬಗ್ಗೆ ನೀವು ನೀಡಿರುವ ಹೇಳಿಕೆ ನಿಮಗೆ ಸಮಂಜಸವಲ್ಲ. ಅದು ಬೇರೆ ಇಬ್ಬರ ವಿಚಾರ. ಇದರಲ್ಲಿ ನೀವು ಮೂಗು ತೂರಿಸುವ ಅವಶ್ಯಕತೆ ಇಲ್ಲ. ಕಾನೂನು ರೀತಿಯ ಹೋರಾಟ ಮಾಡಿ. ಇನ್ನೊಬ್ಬರ ತೇಜೋವಧೆ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿರುವ ಲೇಖಕನೊಬ್ಬ ನಿಮ್ಮನ್ನು ಈ ಇಳಿ ವಯಸ್ಸಿನಲ್ಲಿ ಬಳಸಿಕೊಂಡಿರುವುದು ನಿಜಕ್ಕೂ ಅಮಾನವೀಯ. ಈ ವ್ಯಕ್ತಿಗೆ ನಿಮ್ಮ ಬಗ್ಗೆ ನಿಜವಾಗಿಯೂ ಗೌರವ ಇದ್ದರೆ ನಿಮ್ಮ ಪರವಾಗಿ ನಿಂತು ಕಾನೂನು ಹೋರಾಟ ಮಾಡಿ ನ್ಯಾಯ ಸಿಗುವಂತೆ ಮಾಡಲಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Oneindia Kannada readers response to Leelavathi's autobiography Raj Leela Vinoda Written by Ravi belagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more