ಬೇಬಿ ಶೋಭಕ್ಕ, ದ.ಕ ಜಿಲ್ಲೆ ಕಡೆ ವಸಿ ಬಾರಕ್ಕ

ಒಂದು ಕಾಲದಲ್ಲಿ ರಾಮಭಟ್ಟರು, ಸದಾನಂದ ಗೌಡ ಅವರಿಂದ ಏಳಿಗೆಯ ಪಾಠ ಕಲಿತ ಚಾರ್ವಕದ ಶೋಭಾ ಅವರು ಹೋರಾಟಗಾರ್ತಿಯಾಗಿ ಜನರಿಗೆ ಪರಿಚಿತರಾಗಿದ್ದರು.
ಆದರೆ, ಶೋಭಾ ಕರಂದ್ಲಾಜೆ ರಾಜಕೀಯದಲ್ಲಿ ಬೆಳೆಯುತ್ತಿದ್ದಂತೆ ಎಂದಿಗೂ ದಕ್ಷಿಣ ಕನ್ನಡ ಜಿಲ್ಲೆಯ ರಾಜಕಾರಣಿಯಾಗಿ ರೂಪುಗೊಳ್ಳಲೇಇಲ್ಲ , ಆಕೆ ಪುತ್ತೂರಿನ ಚಾರ್ವಾಕದವರಾಗಿದ್ದರೂ ಅಲ್ಲೂ ಅವರಿಗೆ ರಾಜಕೀಯ ನೆಲೆ ಇಲ್ಲ ಎಂದು ಮಾಜಿ ಶಾಸಕ, ಬಿಜೆಪಿ ಹಿರಿಯ ನಾಯಕ ರಾಮ ಭಟ್ ಅವರೇ ಹಲವು ಬಾರಿ ಹೇಳಿದ್ದಾರೆ.
'ಆಕೆ ಜಿಲ್ಲೆಗಿಂತ ಹೊರಗಿನ ರಾಜಕೀಯದ ಮೇಲೆಯೇ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಹಾಗಾಗಿ ಆಕೆಗೆ ರಾಜಕೀಯವಾಗಿ ದ.ಕ ಜಿಲ್ಲೆಯಲ್ಲಿ ಮಹತ್ವ ಇಲ್ಲ. ಅಲ್ಲದೆ ಆಕೆ ಜಿಲ್ಲೆಯ ಕಾರ್ಯಕ್ರಮಗಳಲ್ಲಿ ಜನರು ಗುರುತಿಸಿದ್ದೇ ಕಡಿಮೆ. ಆದರೆ, ಕರಂದ್ಲಾಜೆ ಇಂಧನ ಇಲಾಖೆಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ರಾಮ್ ಭಟ್ ಇತ್ತೀಚೆಗೆ ಹೇಳಿದ್ದರು.
ಈಗೆಲ್ಲಿ ಆ ಹೋರಾಟ: ಕನ್ನಡ ಜಿಲ್ಲೆಗಳಲಿ 'ಬೇಬಿ ಅಕ್ಕ' ಆಗಿದ್ದ ಶೋಭಾ ಕರಂದ್ಲಾಜೆ ಕುಮಾರಧಾರಾ ಹೋರಾಟ ಸಮಿತಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದರು. ಸುಮಾರು 15 ವರ್ಷಗಳ ಹಿಂದೆಯೇ ಶೋಭಾ ಮುಂದೊಂದು ದಿನ ನಮ್ಮ ಜಿಲ್ಲೆಯ ನಾಯಕಿಯಾಗಿ ಮೆರೆಯುತ್ತಾರೆ ಎಂದು ಜನ ಊಹಿಸಿದ್ದರು.
ಅಲಂಗಾರಿನಲ್ಲಿ ಕುಮಾರಧಾರಾ ನದಿಗೆ ಅಡ್ಡಲಾಗಿ ಅಣೆಕಟ್ಟು ವಿರೋಧ ವ್ಯಕ್ತಪಡಿಸಿದ್ದ ಶೋಭಾ ಅವರು ನಂತರ ಯಡಿಯೂರಪ್ಪ ಸರ್ಕಾರದ ಕಾಲದಲ್ಲಿ ಗುಂಡ್ಯ ವಿದ್ಯುತ್ ಯೋಜನೆಗೆ ಚಾಲನೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಸಹಿಸಲು ಕಷ್ಟವಾಗುತ್ತದೆ.
ಮಂಗಳೂರು ವಿವಿ ಸೆನೆಟ್ ಸದಸ್ಯೆಯಾಗಿದ್ದರೂ ಅವರು ಜಿಲ್ಲೆಯಲ್ಲಿ ಯಾವತ್ತೂ ಸ್ಥಳೀಯ ಮಂಡಳಿಯ ಸದಸ್ಯರಾಗಿರಲಿಲ್ಲ. ಆಕೆ ಬಿಜೆಪಿ ಕಾರ್ಯಕರ್ತೆಯಾಗಿದ್ದಾಗಲೂ ಸಭೆಗಳಲ್ಲಿ ಹಾಜರಾಗದೆ ದೂರು ಉಳಿಯುತ್ತಿದ್ದರು ಎಂದು ದಕ ಜಿಲ್ಲಾ ಬಿಜೆಪಿ ಘಟಕದ ಹಿರಿಯರು ಹೇಳಿದ್ದಾರೆ.
ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿಯ ಗೌಡ ಸಮುದಾಯದಲ್ಲೂ ನಾಯಕಿಯಾಗಿ ಕೂಡಾ ಗುರುತಿಸಿಕೊಂಡಿಲ್ಲ. 2001ರಲ್ಲಿ ಅಡಕೆ ಬೆಲೆ ತೀರಾ ಕುಸಿದಾಗಲೂ ಆಕೆ ಅಡಕೆ ಬೆಳೆಗಾರರ ಪರವಾಗಿ ಹೋರಾಟ ನಡೆಸಿಲ್ಲ. ಅವರು ಬಿಜೆಪಿ ಅಥವಾ ಯಡಿಯೂರಪ್ಪರ ಜೊತೆ ಗುರುತಿಸಿಕೊಂಡ ಬಳಿಕ ಬೆಂಗಳೂರು ರಾಜಕೀಯ ಕೇಂದ್ರೀಕರಿಸಿ ಕೆಲಸ ಮಾಡಿದ್ದಾರೆ. ಜಿಲ್ಲೆಗಾಗಿ ಅವರ ಕೆಲಸ ಶೂನ್ಯ ಎಂದು ಆ ವಿಶ್ಲೇಷಿಸಲಾಗಿದೆ.
ಎಂಡೋಸಲ್ಫಾನ್ ಪೀಡಿತರಿಗೆ ಸರ್ಕಾರದಿಂದ ಪರಿಹಾರ ಮತ್ತು ಪುನರ ವಸತಿ ಕಲ್ಪಿಸುವ ವಿಷಯದಲ್ಲಿ ಶೋಭಾ ಅವರು ಉತ್ಸಾಹದಿಂದ ಹೋರಾಟ ನಡೆಸಿದ್ದು ನಿಜ. ಆದರೆ, ಅದರ ಫಲ ಅಲ್ವ ಸ್ವಲ್ಪ ಜನರಿಗೆ ತಲುಪುವಷ್ಟರಲ್ಲಿ ಶೋಭಾ ಅವರು ಕೂಡಾ ಈ ವಿಷಯವನ್ನು ಮರೆತು ಬಿಟ್ಟರು.
ಆದರೆ, ಈಗಲೂ ದ.ಕ. ಜಿಲ್ಲೆ ಜನ, ಶೋಭಾ ಅವರಿಗೆ ಉತ್ತಮ ಭವಿಷ್ಯ ಸಿಗಲಿ ಎಂದು ಹಾರೈಸುತ್ತದೆ. ರಾಜಕೀಯವಾಗಿ ಶೋಭಾ ಇಡುತ್ತಿರುವ ಹೆಜ್ಜೆ ಮುಗ್ಗರಿಸುವಂತಾಗದಿರಲಿ ಎಂದು ಆಶಿಸುತ್ತಾರೆ.












Click it and Unblock the Notifications