• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓಲೆ : ಎಲ್ಲಾರ್ನೂ ತಲಾ 3 ದಿನ ಮುಮಂ ಮಾಡಿಬಿಡಿ!

By Prasad
|
Readers' solution for BJP crisis
ಬಿಜೆಪಿಯಲ್ಲಿ ಬಿಕ್ಕಟ್ಟು ಶಮನ ಮಾಡಲು ಇರುವ ಉಪಾಯ ಅಂದರೆ, ಪ್ರತಿಯೊಬ್ಬ ಬಿಜೆಪಿ ಶಾಸಕರಿಗೂ ಇನ್ನೂ ಇರುವ 10 ತಿಂಗಳಲ್ಲಿ ತಲಾ ಮೂರು ದಿನಗಳಂತೆ ಕರ್ನಾಟಕ ಮುಖ್ಯಮಂತ್ರಿ ಪದವಿ ನೀಡಿದಲ್ಲಿ ಬಿಜೆಪಿಯಲ್ಲಿ ಹುಟ್ಟಿಕೊಂಡಿರುವ ಬಿಕ್ಕಟ್ಟು ಶಮನವಾಗಬಹುದು ಮಾತ್ರವಲ್ಲ ಪೂರ್ಣ ಕಾಲಾವಧಿ ಪೂರೈಸುವುದರಲ್ಲಿ ಯಾವುದೇ ಅನುಮಾನವಿಲ್ಲ. [ಉ-ಕ ಹೆಮ್ಮೆಯ ಪುತ್ರ]
* ಅಶೋಕ ಜೆಎಮ್

***
ಅನುಮಾನಾಸ್ಪದ 'ಭವಿಷ್ಯ ವಾಣಿ'ಗಿಂತಾ ಹೆಚ್ಚಾಗಿ ನಮಗೆ 'ವರ್ತಮಾನ'ದ ಸ್ಪಷ್ಟ, ವಿವರ, ಸತ್ಯ ಚಿತ್ರಣದ ಅಗತ್ಯವಿದೆ. ಅಸಂಖ್ಯಾತ ಮಾಧ್ಯಮಗಳೇನೋ ಇವೆ, ನಿಜ. ಆದರೆ ಅವೆಲ್ಲಾ ಪೂರ್ವಗ್ರಹ, ಬದ್ಧನೀತಿ, ವೀಕ್ಷಕರ ಸಂಖ್ಯೆ ಕೊಚ್ಚಿಕೊಳ್ಳುವ ವ್ಯವಹಾರ ನೀತಿ ಮತ್ತು ಅತ್ಯಂತ ಅಪಾಯಕಾರಿಯಾಗಿ ರಾಜಕೀಯ ದುರುದ್ದೇಶದಿಂದ ರೋಗಗ್ರಸ್ಥವಾಗಿರುವಂಥವು. ಇಂಥಾ ಬುರುಡೆ ಭವಿಷ್ಯವಾಣಿಗಳು ಸಹ ಈ ಯಾವುದೇ ಅವಗುಣಗಳಿಂದ ಮುಕ್ತವಾಗಿರುವುದು ಸಾಧ್ಯವಿಲ್ಲ. [ಕೋಡಿಶ್ರೀ ಭವಿಷ್ಯವಾಣಿ]
* ಆರ್.ಕೆ. ದಿವಾಕರ

***
ಉಡುಪಿಯಲ್ಲಿ ಜಯಪ್ರಕಾಶ್ ಹೆಗ್ಡೆ ಗೆದ್ದದ್ದೇ ತಡ, ಕಾಂಗ್ರೆಸ್ ಎದ್ದು ನಿಲ್ಲಲ್ಲು ಪ್ರಯತ್ನ ಪಡುತ್ತಿದೆ. ಆದರೆ ಅದು ಅಸಾದ್ಯ. ಗೆದ್ದ ಹೆಗ್ಡೆ ಇನ್ನೂ ಕೂಡ ಸನ್ಮಾನ ಸ್ವಿಕರಿಸುವುದರಲ್ಲೇ ಕಾಲ ದೂಡುತ್ತಿದ್ದಾರೆ. ಪದ್ಮಪ್ರಿಯ ವಿಚಾರದಲ್ಲಿ ಭಟ್ರು ಧರ್ಮಸ್ಥಳ ದೇವರ ಆಣೆ ಹಾಕಿದ ಮೇಲೆ ಆ ವಿಚಾರ ಎತ್ತಲು ಕಾಂಗ್ರೆಸ್ ಹೆದರುತ್ತಿದೆ. ಅದಕ್ಕೆ ಈ ಹೊಸ ಆರೋಪ. ಜಯಪ್ರಕಾಶ್ ಹೆಗ್ಡೆ ಮತ್ತು ಆಸ್ಕರ್ ಕರಾವಳಿ ಪ್ರದೇಶದಲ್ಲಿ ಎಷ್ಟು ಭೂಮಿ ಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಗೊತ್ತಿಲವೇ? ಅದು ಯಾವ್ಯಾವ ರೀತಿಯಲ್ಲಿ ಕೊಳ್ಳಲಾಯಿತು ಎಂಬ ಬಗ್ಗೆ ಕೂಡ ಅವರಿಗೆ ತಿಳಿದಿದೆ. [ರಘುಪತಿ ಭಟ್ ಮೇಲೆ ಆರೋಪ]
* ರಾಕೇಶ್ ಶೆಟ್ಟಿ

***
ಬೇರೆಯವರ ಮನೆಯ ಹೆಣ್ಣು ಮಕ್ಕಳನ್ನು, ಸುಖ ಸಂಸಾರ ಹಾಗು ನೆಮ್ಮದಿಯ ಬದುಕು ನೀಡುವ ಕುರಿತು ವಾಗ್ಧನ ನೀಡಿ ಮದುವೆಯಾಗಿ, ವರದಕ್ಷಿಣೆಗಾಗಿ ಕಿರುಕುಳ ನೀಡಿ, ಹೆಂಡತಿಯನ್ನು ಸಂರಕ್ಷಿಸುವ ಬದಲು ಅವಳನ್ನು ಕೊಲೆಮಾಡಿ ಅಟ್ಟಹಾಸಗೈದು ಮೆರೆಯುತ್ತಿರುವ ಪುರುಷರೇ ಹುಷಾರ್ ಕಾಲ ಬದಲಾಗಿದ್ದು ಮುಂದೊಂದು ದಿನ ಮಹಿಳೆಯರೇ ಪುರುಷರಿಗೆ ಉಲ್ಟಾ ಹೊಡೆಯಬಹುದು. [ಬಾಗೇಪಲ್ಲಿಯಲ್ಲಿ ನವವಿವಾಹಿತೆ ಹತ್ಯೆ]
* ಪಲ್ಲು

***
ಸುದೀಪ್ ಒಬ್ಬ ಅದ್ಭುತ ನಟ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಬ್ಬ ಕನ್ನಡಿಗ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತಿರುವುದು ನಮಗೆ ಹೆಮ್ಮೆಯ ವಿಷಯ. ಆದರೆ ಇನ್ನು ಮುಂದೆ ಉತ್ತಮ ಕಥೆಗಳನ್ನು ಆಯ್ಕೆ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ. ತಮ್ಮ ಈಗಿರುವ ಇಮೇಜ್ ಅನ್ನು ಉಳಿಸಿಕೊಳ್ಳುವುದು ತುಂಬಾ ಮುಖ್ಯ.. all the best kicha... ಎಲ್ಲೇ ಏರು ಹೇಗೆ ಏರು ಎಂದೆಂದಿಗೂ ನೀ ಕನ್ನಡವಾಗಿರು. [ಈಗ ಕುರಿತು ಸುದೀಪ್ ಉವಾಚ]
* ಕನ್ನಡಿಗ

***
ಕನ್ನಡ ಡಬ್ಬಿ0ಗ್ ವಿರೋಧಿಸುತ್ತಿರುವ ಕನ್ನಡ ಚಲನಚಿತ್ರ ವಾಣಿಜ್ಯ ಮ0ಡಳಿ ಬೇರೆ ರಾಜ್ಯ ಅಲ್ಲ, ಬೇರೆ ಭಾಷೆ ಅಲ್ಲ. ಬೇರೆ ಶತ್ರು ದೇಶ ಪಾಕಿಸ್ತಾನದಿ0ದ ಬ0ದಿರುವ ನಟಿ ವೀಣಾ ಮಲಿಕ್ ಗೆ ಕನ್ನಡದಲ್ಲಿ ನಟಿಸಲು ಅವಕಾಶ ಕೊಡುತ್ತಿರುವುದು ನೈತಿಕವಾಗಿ ಸರಿಯೇ? [ಕನ್ನಡದಲ್ಲಿ 'ಡರ್ಟಿ' ವೀಣಾ ಮಲಿಕ್]
* ರಾಘವೇಂದ್ರ ನಾವಡ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಸಂಪಾದಕರಿಗೆ ಪತ್ರ ಸುದ್ದಿಗಳುView All

English summary
Letters to the editor. Readers' solution for BJP crisis in Karnataka. Make all the MLAs chief minister for 3 days in the next 10 months.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more