ರಿಷಿಕಾ ಸಿಂಗ್ ಪೋಸ್ಟರ್ ಗಲಾಟೆ - ಓದುಗರ ಪತ್ರ

ಡರ್ಟಿ ಪಿಕ್ಚರ್ಸ್ ನಲ್ಲಿ ವಿದ್ಯಾಬಾಲನ್ ಮತ್ತು ಇತ್ತೀಚೆಗೆ ಮಳೆಹುಡುಗಿ ಪೂಜಾಗಾಂಧಿ ದಂಡುಪಾಳ್ಯ ಚಿತ್ರದಲ್ಲಿ ಅರೆನಗ್ನವಾದ ವಿಚಾರ ಇಷ್ಟು ಚರ್ಚೆಗೆ ಒಳಗಾಗದೇ ಇದ್ದದ್ದು ಮತ್ತು ಈ ಚಿತ್ರ ಮಾತ್ರ ಯಾಕೆ ಇಷ್ಟು ಚರ್ಚೆಗೆ ಒಳಾಗಾಗುತ್ತಿದೆ ಎನ್ನುವುದು ನನ್ನ ಕುತೂಹಲ.
ಮಹಿಳಾ ಸಂಘಟನೆಗಳು ಈ ಸಿನಿಮಾದ ಪೋಸ್ಟರ್ ವಿಚಾರದಲ್ಲಿ ಇಷ್ಟು ಬೀದಿರಂಪ ಮಾಡುತ್ತಿವೆ ಅಲ್ವೇ ? ಹಾಗಾದ್ರೆ ಪೂಜಾಗಾಂಧಿ ಮತ್ತು ವಿದ್ಯಾಬಾಲನ್ ವಿಷಯದಲ್ಲಿ ಯಾಕೆ ಸಂಘಟನೆಗಳಿಗೆ ಕಾಳಜಿ ಇರಲಿಲ್ಲ. ವಿದ್ಯಾ ಬಾಲನ್ ಮತ್ತು ಪೂಜಾ ಗಾಂಧೀ ಕೂಡ ಮಹಿಳೆಯರು ತಾನೆ? ಅವರಿಬ್ಬರೂ ಅರೆನಗ್ನವಾದಾಗ ಎಲ್ಲರೂ ನೋಡಿದ್ದೇ ನೋಡಿದ್ದು ಹೊರತು ಯಾರೂ ತಕರಾರು ಎತ್ತಿರಲಿಲ್ಲ ಯಾಕಪ್ಪಾ?.
ಟಿವಿ ವಾಹಿನಿಯಲ್ಲಿ ಮಂಗಳವಾರ (ಜ 11) ನಡೆದ ಬಿಸಿಬಿಸಿ ಚರ್ಚಾಕೂಟದಲ್ಲಿ ಚಿತ್ರದ ನಿರ್ದೇಶಕರು ನಾನು ಮುಸ್ಲಿಂ ಕೋಮಿನವನಾದುದರಿಂದ ಚಿತ್ರಕ್ಕೆ ಇಷ್ಟು ತೊಂದರೆಯಾಗುತ್ತಿದೆ ಎಂದು ಅಲವತ್ತು ಕೊಂಡರು. ಈ ಮಾತಿನಲ್ಲಿ ಹುರುಳಿಲ್ಲ ಎಂದು ನನ್ನ ಭಾವನೆ.
ಜವಾಬ್ದಾರಿಯುತ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸುವ ಮುಂಚೆ ಚಿತ್ರತಂಡದ ಬಳಿ ಚಿತ್ರಕಥೆಯ ಬಗ್ಗೆ ಮಾತನಾಡಬಹುದಾಗಿತ್ತು. ಡರ್ಟಿ ಪಿಕ್ಚರ್ಸ್ ನಲ್ಲಿ ಸಿಲ್ಕ್ ಸ್ಮಿತಾ ಕಥೆಯಾಧಾರಿತ ಚಿತ್ರವಾಗಿದ್ದಿದ್ದರಿಂದ ಚಿತ್ರಕಥೆಗೆ ಪೂರಕವಾಗಿ ವಿದ್ಯಾಬಾಲನ್ ಅವರನ್ನು ಬಳಸಿಕೊಳ್ಳಲಾಗಿದೆ ಎಂದು ಒಪ್ಪಿಕೊಳ್ಳುವ ಸಂಘಟನೆಗಳು ಈ ಸಿನಿಮಾ ವಿಚಾರದಲ್ಲಿ ತಕರಾರು ಎತ್ತುತ್ತಿರುವುದು ಏಕೆ?
ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಈಗ ವಿವಾದದ ಕೇಂದ್ರಬಿಂದು ಆಗಿರುವ ರಿಷಿಕಾ, ನಗ್ನ ಚಿತ್ರದಲ್ಲಿ ನಟಿಸುವ ದರ್ದ್ ನನಗಿಲ್ಲ, ರಾಜೇಂದ್ರ ಸಿಂಗ್ ಬಾಬು ಅಂತಹ ಹಿರಿಯ ಮತ್ತು ಗೌರವಾನ್ವಿತ ಕುಟುಂದದಿಂದ ಬಂದವಳು ನಾನು. ಪೋಸ್ಟರ್ ನಲ್ಲಿ ತಾಂತ್ರಿಕತೆ ಬಳಸಿ ಆ ರೀತಿಯಲ್ಲಿ ತೋರಿಸಲಾಗಿದೆಯೇ ಹೊರತು ನಾನೇನು ನಗ್ನಳಾಗಿಲ್ಲ. ಚಿತ್ರಕಥೆಗೆ ಆ ದೃಶ್ಯದ ಅವಶ್ಯಕತೆ ಇತ್ತು ಎಂಬ ವಾದ ಮಂಡಿಸಿದರು.
ನಮ್ಮ ಚಿತ್ರರಂಗ ಬೆಳೆಯುತ್ತಿದ್ದಂತೆ ನಮ್ಮ ನಾಯಕಿಯರು ಧರಿಸುವ ಬಟ್ಟೆಗಳ ಅಳತೆಗಳು ದಿನದಿಂದ ದಿನಕ್ಕೆ ಇಂಚಿಂಚು ಕಡಿಮೆ ಆಗುತ್ತಿರುವುದಂತೂ ಸತ್ಯ. ಅದಕ್ಕೆ ಅವಕಾಶಗಳ ಕೊರತೆ ಇರಬಹುದು ಅಥವಾ ಚಿತ್ರರಂಗದಲ್ಲಿ ಭದ್ರವಾಗಿ ನೆಲೆವೂರುವ ಹಂಬಲ ಇರಬಹುದು. ಅಥವಾ ಪ್ರೇಕ್ಷಕ ಮಹಾಶಯನ ಬೆಂಬಲವಿರಲೂಬಹುದು!
ಒಟ್ಟಿನಲ್ಲಿ ಮಹಿಳಾ ಸಂಘಟನೆಗಳು ನಡೆಸುವ ಹೋರಾಟ ಮಹಿಳೆಯರ ಪರವಾಗಿರಲಿ. ನಿಮ್ಮ ಹೋರಾಟ ಪ್ರಚಾರಕ್ಕಾಗಿ ಮಾತ್ರ ಇರದಿರಲಿ. ಒಟ್ಟಿನಲ್ಲಿ ನಿಮ್ಮ ಹೋರಾಟದಲ್ಲಿ ಯಾವುದೇ ತಾರತಮ್ಯ ಇರದಿರಲಿ. ಸರ್ವೇ ಜನಃ ಸುಖಿನೋ ಭವಂತು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications