5,00,00,000 ರೂಪಾಯಿ, ಕನ್ನಡ ನಾಡಿನ ಭಕ್ತರಿಗೆ ಭರ್ಜರಿ ಉಡುಗೊರೆ... Karnataka Budget 2026

ಕರ್ನಾಟಕ ಹಣಕಾಸು ಯೋಜನೆಗಳ ಬಗ್ಗೆ ಜನರಲ್ಲಿ ಮೂಡಿದ್ದ ಕುತೂಹಲ ಹಾಗೂ ಜಿಬಿಎ ಚುನಾವಣೆ ಹಿನ್ನೆಲೆ, 2026-27ನೇ ಸಾಲಿನ ಕರ್ನಾಟಕ ಬಜೆಟ್‌ ಗಮನ ಸೆಳೆದಿತ್ತು. ಹಿಂದಿನ ಹಣಕಾಸು ವರ್ಷಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾರಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದರು, 2024-2025ನೇ ಸಾಲಿನಲ್ಲಿ 3.71 ಲಕ್ಷ ಕೋಟಿ ರೂಪಾಯಿ ಮತ್ತು 2025-2026ನೇ ಆರ್ಥಿಕ ಸಾಲಿನಲ್ಲಿ ಸುಮಾರು 4.09 ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡನೆ ಆಗಿತ್ತು. ಈ ಬಾರಿಯು ಕೂಡ ಬರೋಬ್ಬರಿ 4,00,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಬಜೆಟ್ ಮಂಡಿಸಲಾಗಿದೆ. ಇನ್ನು ಇದೇ ಬಜೆಟ್‌ನಲ್ಲಿ ಕನ್ನಡ ನಾಡಿನ ಭಕ್ತರಿಗೆ ಭರ್ಜರಿ ಉಡುಗೊರೆಗಳು ಸಿಕ್ಕಿವೆ.

ಭಾರತದಲ್ಲಿ ಶ್ರೀಮಂತ ರಾಜ್ಯಗಳ ಪೈಕಿ ಕರ್ನಾಟಕ ಕೂಡ ಒಂದಾಗಿದ್ದು, ಕನ್ನಡ ನಾಡು ಐಟಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುವ ಜೊತೆಗೆ ಲಕ್ಷಾಂತರ ಕೋಟಿ ರೂಪಾಯಿ ಆದಾಯ ಸಂಗ್ರಹ ಮಾಡುತ್ತಿದೆ. ನಮ್ಮ ಭಾರತ ದೇಶದ ಅಭಿವೃದ್ಧಿ ವಿಚಾರದಲ್ಲಿ ಕೂಡ ಕನ್ನಡ ನಾಡಿನ ಕೊಡುಗೆ ದೊಡ್ಡದಾಗಿದ್ದು, ಸಾವಿರಾರು ಕಂಪನಿಗಳು ಇದೇ ನಮ್ಮ ಕರ್ನಾಟಕ ರಾಜ್ಯದಿಂದ ಜನ್ಮ ಪಡೆದು ಇಡೀ ಜಗತ್ತಿನಲ್ಲಿ ಮಿಂಚು ಹರಿಸುತ್ತಿವೆ. ಹೀಗಿದ್ದಾಗ ಬಹುನಿರೀಕ್ಷಿತ 2026-27ನೇ ಸಾಲಿನ ಕರ್ನಾಟಕ ಬಜೆಟ್‌ ಈಗ ಮಂಡನೆ ಆಗಿದೆ. ಅದರಲ್ಲೂ ಕರ್ನಾಟಕದ ಭಕ್ತರಿಗೆ ಅಂತಾನೇ ಈ ಬಾರಿ ರಾಜ್ಯ ಸರ್ಕಾರ ಭಾರಿ ದೊಡ್ಡ ದೊಡ್ಡ ಯೋಜನೆಗಳನ್ನ ಘೋಷಣೆ ಮಾಡಿದೆ.

Karnataka Budget 2026

ಕರ್ನಾಟಕದ ದೇಗುಲಗಳಿಗೆ ಭರ್ಜರಿ ಘೋಷಣೆ

2026-27ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಕುಕ್ಕೆ ಸುಬ್ರಹ್ಮಣ್ಯ & ಕೊಲ್ಲೂರು ಮೂಕಾಂಬಿಕಾ ದೇವಿಯ ದೇವಾಲಯ ಅಭಿವೃದ್ಧಿಗೆ ಮಹತ್ವದ ಘೋಷಣೆ ಹೊರಡಿಸಲಾಗಿದೆ. ಈ ದೇಗುಲಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ್ದು, ತಮ್ಮ 17ನೇ ಬಜೆಟ್ ಮಂಡನೆಯಲ್ಲಿ ದೊಡ್ಡ ಘೋಷಣೆ ಹೊರಡಿಸಿದ್ದಾರೆ. ಹಾಗೇ ಶ್ರೀ ವೈಷ್ಟೋದೇವಿ ಯಾತ್ರೆಗೆ ತೆರಳುವ ಪ್ರತಿ ಯಾತ್ರಾರ್ಥಿಗಳಿಗೆ ಇದೀಗ ಭರ್ಜರಿ 5,000 ರೂಪಾಯಿ ಸಹಾಯಧನ ಘೋಷಿಸಲಾಗಿದೆ. ಕರ್ನಾಟಕ ರಾಜ್ಯದಿಂದ ಸುಮಾರು 3000 ಕಿಲೋ ಮೀಟರ್ ದೂರ ಇರುವ ಶ್ರೀ ಮಾತಾ ವೈಷ್ಟೋದೇವಿಗೆ ಲಕ್ಷಾಂತರ ಭಕ್ತರು ನಮ್ಮ ರಾಜ್ಯದ ಮೂಲಕ ಯಾತ್ರೆಗೆ ತೆರಳುತ್ತಾರೆ. ಇದಕ್ಕಾಗಿ 5,00,00,000 ರೂಪಾಯಿ ಎಂದರೆ 5 ಕೋಟಿ ರೂಪಾಯಿ ಮೀಸಲು ಇಡಲಾಗಿದೆ. ಹಾಗೇ ಮುಜರಾಯಿ ಇಲಾಖೆಯ ದೇವಾಲಯಗಳ 259 ಕಲ್ಯಾಣಿಗಳನ್ನ ಅಭಿವೃದ್ಧಿ ಮಾಡಲು, ಜಲ ನಿಧಿ ಕಲ್ಯಾಣಿಗಳ ಪುನಃಶ್ಚೇತನ ಯೋಜನೆ ಜಾರಿ ಮಾಡಲು ನಿರ್ಧರಿಸಲಾಗಿದೆ. ಈ ಯೋಜನೆಗಾಗಿ ಬಜೆಟ್‌ನಲ್ಲಿ ಈಗ 5 ಕೋಟಿ ರೂಪಾಯಿ ಮೀಸಲು ಇಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+