ಶ್ರೀ ಮಾತಾ ವೈಷ್ಟೋದೇವಿ ಭಕ್ತರಿಗೆ ಕರ್ನಾಟಕ ಸರ್ಕಾರದ ವತಿಯಿಂದ ಭರ್ಜರಿ ಸುದ್ದಿ | Karnataka Budget 2026
ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಇಂದು 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದು, ರಾಜ್ಯದ ಜನತೆಗೆ ಹಲವು ಯೋಜನೆಗಳನ್ನು ನೀಡುವ ಮಾತು ಕೊಟ್ಟಿದ್ದಾರೆ. ಅದರಲ್ಲೂ ಧಾರ್ಮಿಕ ಇಲಾಖೆಗೆ ಕೂಡ ಈ ವರ್ಷ ಭರ್ಜರಿ ಯೋಜನೆಗಳು ಘೋಷಣೆ ಆಗಿದ್ದು, ಈ ಮೂಲಕ ಯಾತ್ರೆಗಳಿಗೆ ತೆರಳುವ ಕೋಟ್ಯಂತರ ಭಕ್ತರಿಗೂ ಸಹಾಯ ಆಗಲಿದೆ. ಪ್ರಮುಖವಾಗಿ ಕಣಿವೆ ರಾಜ್ಯ, ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವ ಶ್ರೀ ಮಾತಾ ವೈಷ್ಟೋದೇವಿ ದೇಗುಲಕ್ಕೆ ಯಾತ್ರೆಯ ಮೂಲಕ ತೆರಳುವ ಭಕ್ತರಿಗೆ ಭಾರಿ ದೊಡ್ಡ ಉಡುಗೊರೆ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಅವರು ಇಂದು ಮಂಡಿಸಿರುವ 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ದೊಡ್ಡ ಗಿಫ್ಟ್ ಘೋಷಣೆ ಆಗಿದೆ.
ಅಂದಹಾಗೆ ಆಧ್ಯಾತ್ಮಿಕ ಪ್ರವಾಸ ಕೈಗೊಳ್ಳುವ ರಾಜ್ಯದ ಜನತೆಗೆ ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರದಿಂದ ದೊಡ್ಡ ಅನುದಾನ ಘೋಷಣೆ ಆಗಿದೆ. ಈ ಪೈಕಿ ವೈಷ್ಟೋದೇವಿ ಯಾತ್ರೆಗೆ ತೆರಳುವ ಪ್ರತಿ ಯಾತ್ರಾರ್ಥಿಗೆ ಕೂಡ ಭರ್ಜರಿ 5,000 ರೂಪಾಯಿ ಸಹಾಯಧನ ಘೋಷಿಸಲಾಗಿದೆ. ಕರ್ನಾಟಕ ರಾಜ್ಯದಿಂದ ಸುಮಾರು 3000 ಕಿಲೋ ಮೀಟರ್ ದೂರ ಇರುವ ಶ್ರೀ ಮಾತಾ ವೈಷ್ಟೋದೇವಿಗೆ ಲಕ್ಷಾಂತರ ಭಕ್ತರು ನಮ್ಮ ರಾಜ್ಯದ ಮೂಲಕ ಯಾತ್ರೆಗೆ ತೆರಳುತ್ತಾರೆ. ಈ ಕಾರಣಕ್ಕೆ ಭಕ್ತರಿಗೆ ಅನುಕೂಲ ಆಗಬೇಕು ಎಂದು ಇದೀಗ ಹೊಸ ಘೋಷಣೆ ಹೊರಡಿಸಲಾಗಿದ್ದು, ಯಾತ್ರಿಕರಿಗೆ 5,000 ರೂಪಾಯಿ ಸಹಾಯಧನ ಘೋಷಿಸಲಾಗಿದೆ.

ಧಾರ್ಮಿಕ ಕ್ಷೇತ್ರಕ್ಕೆ ಬೇರೆ ಏನೇನು?
ಶ್ರೀ ವೈಷ್ಟೋದೇವಿ ಯಾತ್ರಿಕರಿಗೆ ವಿಶೇಷ ಅನುದಾನ ಒದಗಿಸುವ ಜೊತೆಗೆ, ಕರ್ನಾಟಕದ ಭಕ್ತರಿಗೆ ಈ ಬಾರಿ ಹಲವು ಯೋಜನೆಗಳನ್ನ ಜಾರಿಗೆ ತರಲು ಸಿದ್ದರಾಮಯ್ಯ ಅವರ ರಾಜ್ಯ ಸರ್ಕಾರ ಮುಂದಾಗಿದೆ. 2026-27ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಕುಕ್ಕೆ ಸುಬ್ರಹ್ಮಣ್ಯ & ಕೊಲ್ಲೂರು ಮೂಕಾಂಬಿಕಾ ದೇವಿಯ ದೇವಾಲಯ ಅಭಿವೃದ್ಧಿಗೆ ಮಹತ್ವದ ಘೋಷಣೆ ಹೊರಡಿಸಲಾಗಿದೆ. ಈ ದೇಗುಲಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ್ದು, ತಮ್ಮ 17ನೇ ಬಜೆಟ್ ಮಂಡನೆಯಲ್ಲಿ ದೊಡ್ಡ ಘೋಷಣೆ ಹೊರಡಿಸಿದ್ದಾರೆ. ಹೀಗೆ ಮುಜರಾಯಿ ಇಲಾಖೆ ದೇವಾಲಯಗಳ 259 ಕಲ್ಯಾಣಿಗಳನ್ನ ಅಭಿವೃದ್ಧಿ ಮಾಡಲು, ಜಲ ನಿಧಿ ಕಲ್ಯಾಣಿಗಳ ಪುನಃಶ್ಚೇತನ ಯೋಜನೆ ಜಾರಿ ಮಾಡಲು ನಿರ್ಧರಿಸಲಾಗಿದೆ.
ವಿರೋಧ ಪಕ್ಷಗಳ ನಾಯಕರ ಟೀಕೆ
ವಿಪಕ್ಷ ನಾಯಕರು 2026-27ನೇ ಸಾಲಿನ ಕರ್ನಾಟಕ ಬಜೆಟ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಬರೀ ಸಾಲದಿಂದ ಕೂಡಿರುವ ಬಜೆಟ್ ಎಂದು ಆರೋಪ ಮಾಡಿದ್ದಾರೆ. ಅಲ್ಲದೆ ಇದೇ ರೀತಿ ಸಾಲ ಮಾಡುತ್ತಾ ಹೋದರೆ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ, ಹೀಗಾಗಿ ಈ ಬಜೆಟ್ ಕರ್ನಾಟಕದ ಪಾಲಿಗೆ ದೊಡ್ಡ ಹಿನ್ನಡೆ ಎಂದು ಆರೋಪ ಮಾಡಿದ್ದಾರೆ. ಹಾಗೇ ಬಿಜೆಪಿ ಸರ್ಕಾರ ಇದ್ದಾಗ ಉತ್ತಮ ಹಾಗೂ ಆರ್ಥಿಕ ಶಿಸ್ತು ಇರುವ ಬಜೆಟ್ ಮಂಡನೆ ಮಾಡಲಾಗಿತ್ತು ಎಂದು ಬಿಜೆಪಿ ರಾಜ್ಯ ನಾಯಕರು ಪ್ರತಿಪಾದನೆ ಮಾಡಿದ್ದಾರೆ. ಜೆಡಿಎಸ್ ನಾಯಕರು ಕೂಡ ರಾಜ್ಯ ಬಜೆಟ್ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
ಬಜೆಟ್ ಗಾತ್ರ ಎಷ್ಟು ಕೋಟಿ?
ಕರ್ನಾಟಕ ಹಣಕಾಸು ಯೋಜನೆಗಳ ಬಗ್ಗೆ ಜನರಲ್ಲಿ ಮೂಡಿದ್ದ ಕುತೂಹಲ ಹಾಗೂ ಜಿಬಿಎ ಚುನಾವಣೆ ಹಿನ್ನೆಲೆ, 2026-27ನೇ ಸಾಲಿನ ಕರ್ನಾಟಕ ಬಜೆಟ್ ಗಮನ ಸೆಳೆದಿತ್ತು. ಹಿಂದಿನ ಹಣಕಾಸು ವರ್ಷಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾರಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದರು, 2024-2025ನೇ ಸಾಲಿನಲ್ಲಿ 3.71 ಲಕ್ಷ ಕೋಟಿ ರೂಪಾಯಿ ಮತ್ತು 2025-2026ನೇ ಆರ್ಥಿಕ ಸಾಲಿನಲ್ಲಿ ಸುಮಾರು 4.09 ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡನೆ ಆಗಿತ್ತು. ಈ ಬಾರಿಯು ಕೂಡ ಬರೋಬ್ಬರಿ 4,00,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಬಜೆಟ್ ಮಂಡಿಸಲಾಗಿದೆ. ಹಾಗೇ ಕರ್ನಾಟಕ ರಾಜ್ಯದ ಒಟ್ಟು ಸಾಲ 8.24 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ












Click it and Unblock the Notifications