ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮಿ ಸದಾನಂದರೇ ಹೀಗೇಕೆ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದೀರಿ?

By * ಶಂಭೋ ಶಂಕರ, ಬಸವನಗುಡಿ
|
Google Oneindia Kannada News

dvs-disappointed-over-justice-hegde-but-why
ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತು 'ನಾಡಿನಲ್ಲಿ ನೂರಕ್ಕೆ ನೂರರಷ್ಟು ಯಾರೂ ಪರಿಪೂರ್ಣರಾಗಿರುವುದಿಲ್ಲ' ಎಂದು ಬಾಲಿಶವಾಗಿ ಹೇಳಿತ್ತಿದ್ದೀರಲ್ಲಾ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಿಂದ ಮೊನ್ನೆಯಷ್ಟೇ ಛೀಮಾರಿ ಹಾಕಿಸಿಕೊಂಡಿದ್ದ ನಾಡಿನ ದೊರೆ ಸದಾನಂದ ಗೌಡ ಈಗ ನ್ಯಾ. ಸಂತೋಷ್‌ ಹೆಗ್ಡೆ ಬಗ್ಗೆ ಸಲ್ಲದ ಮಾತನಾಡಿದ್ದಾರೆ.

ನಿವೃತ್ತ ಲೋಕಾಯುಕ್ತ ನ್ಯಾ ಹೆಗ್ಡೆ ಅವರು 'ಭ್ರಷ್ಟಾಚಾರವಿಲ್ಲದ ಸಂಸ್ಥೆಯೇ ಇಲ್ಲ' ಎಂದು ವಾಸ್ತವದ ಮೇಲೆ ಬೆಳಕು ಚೆಲ್ಲುತ್ತಿದ್ದಂತೆ ಪಾಪ ಸದಾನಂದರು ಎಲ್ಲಿ ಮುಟ್ಟಿ ನೋಡಿಕೊಂಡರೋ ನ್ಯಾ ಹೆಗ್ಡೆ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

'ನ್ಯಾ. ಸಂತೋಷ್‌ ಹೆಗ್ಡೆ ಅವರ ಬಗ್ಗೆ ಅಪಾರ ಗೌರವವಿದೆ. ಆದರೆ ಭ್ರಷ್ಟಾಚಾರವಿಲ್ಲದ ಸಂಸ್ಥೆಯೇ ಇಲ್ಲ ಎನ್ನುವ ಹೆಗ್ಡೆ ಹೇಳಿಕೆಯಿಂದ ತುಂಬಾ ಬೇಸರವಾಗಿದೆ. ಪ್ರಚಾರಕ್ಕಾಗಿ ಮಾಧ್ಯಮದ ಮುಂದೆ ಪದೇ ಪದೇ ಹೇಳಿಕೆ ನೀಡುವುದು ಸಂಪ್ರದಾಯವಲ್ಲ. ತಮ್ಮ ವಿರುದ್ಧದ ಟೀಕೆಗಳಿಗೆ ಈ ರೀತಿ ಆವೇಶಭರಿತವಾಗಿ ಮಾಧ್ಯಮದ ಮುಂದೆ ಬಂದು ಉತ್ತರಿಸುವುದು ಸರಿಯಲ್ಲ' ಎಂದೂ ಅಪ್ಪಣೆ ಕೊಡಿಸಿದ್ದಾರೆ.

ಸ್ವಾಮಿ ಸದಾನಂದರೇ ಯಾಕೆ ತದ್ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದೀರಿ? ನ್ಯಾ. ಸಂತೋಷ್‌ ಹೆಗ್ಡೆ ಅವರು ಲೋಕಾಯುಕ್ತ ಹುದ್ದಯಿಂದ ಎದ್ದು ಹೋದ ಮೇಲೆ ಆ ಸ್ಥಾನವನ್ನು ಅರ್ಹರಿಗೆ ನೀಡಲು ನೀವು ಹೇಗೆ ವಿಫಲರಾಗುತ್ತಿದ್ದೀರಿ ಎಂಬುದು ನಾಡಿನ ಜನತೆಗೆ ಗೊತ್ತಿದೆ. ಒಂದು ಹಂತದಲ್ಲಿ ಹತಾರಾಶರಾಗಿ 'ನೂರಕ್ಕೆ ನೂರರಷ್ಟು ಯಾರೂ ಪರಿಪೂರ್ಣರಾಗಿರುವುದಿಲ್ಲ' ಎಂದು ನೀವೇ ಹೇಳಿದ್ದನ್ನು ಮರೆತುಹೋದಿರಾ.

ವ್ಯಕ್ತಿಯಾದರೇನೂ, ಸಂಸ್ಥೆಯಾದರೇನೂ? ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿರುವ ವ್ಯಕ್ತಿಯೇ ನಿಮಗೆ ಸಿಗೊಲ್ಲ ಅಂತಾದರೆ ಇನ್ನು ಸಂಸ್ಥೆಗಳು ಎಲ್ಲಿಂದ ಸಿಗಬೇಕು? ಅದನ್ನೇ ನ್ಯಾ ಸಂತೋಷ್‌ ಹೆಗ್ಡೆ ಅವರು ಹೇಳಿದ್ದು 'ಭ್ರಷ್ಟಾಚಾರ ಇಲ್ಲದ ಸಂಸ್ಥೆಯೇ ಇಲ್ಲ' ಎಂದು. ಅದಕ್ಕೆ ನೀವೂ ಆವೇಶಭರಿತವಾಗಿ ಮಾಧ್ಯಮದ ಮುಂದೆ ಬಂದು ಉತ್ತರಿಸುವ ಅಗತ್ಯವಿಲ್ಲ.

ಅಷ್ಟಕ್ಕೂ ಯಾರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನೀವು ಇಂತಹ ಅಪ್ಪಣೆ ಕೊಡಿಸಿದಿರಿ? ಸ್ವಲ್ಪ ಯೋಚಿಸಿ ನೋಡಿ. ನ್ಯಾಯ-ಅನ್ಯಾಯದ ಮತ್ತೊಂದು ಮುಖ ನಿಮಗೇ ಪರಿಚಯವಾದೀತು.

English summary
It seems Chief Minister D V Sadananda Gowda is disappointed over the comments made by Justice Santosh Hegde regarding the corruption that is prevailing every nook and corner. “It is not befitting the post Hegde held. He approaches the media on every issue, which is not right,” Gowda said. But why questions Shambo Shankara from Basavabgudi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X