ಬ್ರಹ್ಮಾಂಡ ಭ್ರಷ್ಟರಿಗೆ ಕಾರಾಗೃಹ ಕತ್ತಲ ಕೋಣೆಯಲ್ಲ; ನೆಮ್ಮದಿಯ ಕೇಂದ್ರ

ಸುಧಾರಣೆಯ ತಾಣಗಳಾಗಿರಬೇಕೆಂಬ ಅರ್ಥಕ್ಕೆ ಅನ್ವಯವಾಗಿಯೇ ರೂಪುಗೊಳ್ಳುತ್ತಿವೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹವಾಗಲೀ, ದೆಹಲಿಯ ತಿಹಾರ್ ಜೈಲಾಗಲೀ, ಹೈದರಾಬಾದಿನ ಚಂಚಲಗೂಡ ಅಥವಾ ದೇಶದ ಯಾವುದೇ ಭಾಗದ ಮತ್ಯಾವುದೇ ಕೇಂದ್ರ ಕಾರಾಗೃಹಗಳಾಗಲೀ ಇವತ್ತು ಬ್ರಿಟಿಷರ ಕಾಲದ ಜೈಲುಗಳಂತೆ ಇಲ್ಲ ಎನ್ನುವುದು ನಿರ್ವಿವಾದ. ಇವುಗಳನ್ನೆಲ್ಲಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನಿಯಮಾನುಸಾರವೇ ಈಗ ಅತ್ಯಂತ ಸುವ್ಯವಸ್ಥಿತವಾಗಿ ರೂಪಿಸಲಾಗಿದೆ.
ಅಕ್ಷರಶಃ ಇವುಗಳನ್ನು ಸುಧಾರಣೆಯ ಕೇಂದ್ರಗಳನ್ನಾಗಿಸಲಾಗಿದೆ. ಜೈಲಿನೊಳಗೆ ಆಸ್ಪತ್ರೆ, ಕ್ಯಾಂಟೀನ್, ಲೈಬ್ರರಿ, ಟಿವಿ, ಕಾಲ ಕಾಲಕ್ಕೆ ತಿಂಡಿ, ಊಟ, ಚಹಾ, ವಾರಕ್ಕೊಮ್ಮೆ ಸಿಹಿ, ಮಾಂಸ, (ಎಣ್ಣೆ ಮಜ್ಜನ ಅಂಗಮರ್ದನಗಳೂ ಉಂಟು!!) ಹೀಗೆಯೇ ನಿತ್ಯದ ದಿನಚರಿಯು ಬೆಳಿಗ್ಗೆ ಎದ್ದಾಕ್ಷಣ ರಾಷ್ಟ್ರಗೀತೆ ಹಾಡುವುದರಿಂದ ಹಿಡಿದು ಸಂಜೆ ಸೆಲ್‌ಗಳ ಬಾಗಿಲು ಮುಚ್ಚುವ ತನಕ ಎಲ್ಲವೂ ಅಚ್ಚುಕಟ್ಟಾಗಿಯೇ ಸಾಗುತ್ತದೆ.
ಇಂತಹ ವಾತಾವರಣದಲ್ಲಿ ಬದುಕುವುದು ಪ್ರತಿಷ್ಠಿತ ಆರೋಪಿಗಳಿಗೆ ಅಪಮಾನ ಎನಿಸಲೇಬಾರದು. ಉಣ್ಣುವಾಗ ಜಾಸ್ತಿ ಉಪ್ಪು ಸೇವಿಸಬಾರದೆಂಬ ವಿವೇಕ ಇರಬೇಕು. ಉಪ್ಪು ತಿಂದರೆ ನೀರು ಕುಡಿಯಲೇಬೇಕು. ಅದು ಪ್ರಕೃತಿ ನಿಯಮ.
ಪ್ರತಿಷ್ಠಿತರು ಜೈಲು ವಾಸ ತಪ್ಪಿಸಿಕೊಳ್ಳಲು ಕಳ್ಳಾಟ ಆಡುವುದನ್ನು ರಾಜ್ಯ ಮಾನವ ಹಕ್ಕುಗಳ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರವು ಕೂಡಲೇ ಜೈಲಿನೊಳಗಿನ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಕ್ರಮ ಕೈಗೊಳ್ಳಬೇಕು. ಇದರಿಂದ ಬಡ ಕೈದಿಗಳಿಗೂ ಉಪಯೋಗವಾಗುತ್ತದೆ.












Click it and Unblock the Notifications