ಖಾಸಗಿ ಆಸ್ಪತ್ರೆ ನರಳಾಟಕ್ಕಿಂತ ಸರ್ಕಾರಿ ಆಸ್ಪತ್ರೆ ಸಾವು ಮೇಲು

ಮಂಗಳೂರು-ಉಡುಪಿಯಲ್ಲಿ ರಸ್ತೆ ಗೊಂದರಂತೆ ಖಾಸಗಿ ಆಸ್ಪತ್ರೆಗಳಿವೆ. ಇಲ್ಲಿ ಶ್ರೀಮಂತ ವರ್ಗದವರಿಗೆ ಬೇಕಾದ ಎಲ್ಲಾ ರೀತಿಯ ಐಶಾರಾಮಿ ಸೌಲಭ್ಯಗಳಿವೆ. ಆದರೆ ಬಡ ಮತ್ತು ಮಧ್ಯಮ ವರ್ಗದ ಜನರು ಇಲ್ಲಿ ಬದುಕಿದ್ದರೂ ಸತ್ತಂತೆಯೇ. ಒಂದು ವೇಳೆ ರೋಗಿ ಸತ್ತರೂ ಎರಡು-ಮೂರು ದಿನ ಹೆಣವನ್ನು ಐಸಿಯುನಲ್ಲಿಟ್ಟು ಬಿಲ್ ಭರ್ತಿ ಮಾಡಿ ಆಮೇಲೆ ಮನೆಮಂದಿಗೆ ಹೆಣ ಬಿಟ್ಟುಕೊಟ್ಟ ಅದೆಷ್ಟೋ ಉದಾಹರ ಣೆಗಳಿವೆ.
ಸರಕಾರ ಈ ಆಸ್ಪತ್ರೆಗಳ ಮೇಲೆ ಹಿಡಿತ ಹೊಂದಿಲ್ಲದಿರುವುದೇ ಇವುಗಳ ಆಟಾಟೋಪಕ್ಕೆ ಕಾರಣ. ಈ ಬಗ್ಗೆ ಆರೋಗ್ಯ ಸಚಿವರು ಅಗತ್ಯ ಗಮನ ಹರಿಸಬೇಕು. ಆಸ್ಪತ್ರೆಯಲ್ಲೇ ಇರುವ ಮೆಡಿಕಲ್‌ನಿಂದ ಖರೀದಿಸಿ ತಂದ ದುಬಾರಿ ಬೆಲೆಯ ಮಾತ್ರೆ, ಇಂಜೆಕ್ಷನ್ ಗಳು ಮತ್ತದೇ ಮೆಡಿಕಲ್ ಸ್ಟೋರ್ ಸೇರುತ್ತದೆ. ಇದು ಖಾಸಗಿ ಆಸ್ಪತ್ರೆಗಳ ಅನ್ಯಾಯವಲ್ಲವೇ? ಖಾಸಗಿ ಆಸ್ಪತ್ರೆಯಲ್ಲಿ ಬಡರೋಗಿಗಳನ್ನು ಸರಿಯಾಗಿ ವಿಚಾರಿಸುವುದಿಲ್ಲ.
ತಮ್ಮ ಆಸ್ಪತ್ರೆಯ ಎದುರುಗಡೆ ಅಪಘಾತವಾದರೂ ಗಾಯಾಳುವನ್ನು ತಕ್ಷಣ ಕರೆದೊಯ್ದು ಚಿಕಿತ್ಸೆ ಕೊಡುವ ಮಾನವೀಯತೆ ಇಲ್ಲಿನ ವೈದ್ಯರುಗಳಲ್ಲಿಲ್ಲ. ಸರಕಾರ ಇಂತಹ ಖಾಸಗಿ ಆಸ್ಪತ್ರೆಗಳ ಪರವಾನಿಗೆಯನ್ನು ರದ್ದು ಪಡಿಸಬೇಕು.











Click it and Unblock the Notifications