ರೈಲಿಗೆ ಕಾಯುತ್ತಿದ್ದೆ, ಬರ್ತೀಯಾ ಅಂದ ನಂಗೆ ಅಳು ಬಂತು

ಉದ್ಯೋಗಸ್ಥ ಮಹಿಳೆ, ಕಾಲೇಜು ವಿದ್ಯಾರ್ಥಿನಿಯರು, ಗೃಹಿಣಿಯರು ಒಂಟಿಯಾಗಿ ರೈಲಿನಲ್ಲಿ ಅಡ್ಡಾಡಲು ಕಷ್ಟವಾಗುತ್ತಿದೆ. ಒಂಟಿಯಾಗಿ ರೈಲಿಗಾಗಿ ಕಾಯುತ್ತಾ ನಿಂತಿದ್ದರೆ ವೇಶ್ಯೆ ಎಂದು ತಿಳಿದು ವ್ಯವಹಾರ ಕುದುರಿಸಲು ಮುಂದಾಗುತ್ತಾರೆ. ರಕ್ಷಣೆಗಾಗಿ ಕರೆಯೋಣ ಎಂದರೆ ಸೆಕ್ಯುರಿಟಿ ಗಾರ್ಡ್ ಎಲ್ಲೂ ಕಾಣಿಸುವುದಿಲ್ಲ ಎಂದು ಖಾಸಗಿ ಕಂಪನಿಯೊಂದರ ಉದ್ಯೋಗಿ ರಮ್ಯಾ ಹೇಳುತ್ತಾರೆ.
ಎಂಎಂಟಿಸ್ ಅಧಿಕಾರಿಗಳು ಏನು ಹೇಳುತ್ತಾರೆ: 198 ಹೋಮ್ ಗಾರ್ಡ್ ಗಳನ್ನು ನೇಮಕ ಮಾಡಿಕೊಂಡಿದ್ದೇವೆ. ಹಲವರು ಇನ್ನೂ ತರಬೇತಿ ಹಂತದಲ್ಲಿದ್ದಾರೆ. ಮಹಿಳಾ ಬೋಗಿಗಳಿಗೆ 3 ಜನ ಹೋಮ್ ಗಾರ್ಡ್ ಹಾಗೂ ಒಬ್ಬರನ್ನು ಉಸ್ತುವಾರಿಗಾಗಿ ಬಿಡಲಾಗುವುದು ಎಂದು ರೈಲ್ವೇ ಪೊಲೀಸ್ ಪಡೆ ಹೆಚ್ಚುವರಿ ಆಯುಕ್ತೆ ಅರುಣಾ ಜ್ಯೋತಿ ಹೇಳಿದ್ದಾರೆ.
ಪರಿಹಾರ ಸಿಕ್ಕಿದೆ: ರೈಲಿನಲ್ಲಿ ಮಹಿಳೆಯರ ಸುರಕ್ಷತೆ ಕುಂದು ಉಂಟಾಗಿತ್ತಿರುವುದನ್ನು ಗಮನಿಸಿ, ಎಸ್ ಎಂಎಸ್ ಆಧಾರಿತ ದೂರು ದಾಖಲು ಸೇವೆ ಆರಂಭಿಸಲಾಗಿದೆ. 8121281212 ಗೆ ನಿಮ್ಮ ಸಮಸ್ಯೆಯನ್ನು ಕಳಿಸಿದರೆ ತಕ್ಷಣವೇ ಪ್ರತಿಕ್ರಿಯೆ ಸಿಗುತ್ತದೆ. ದಕ್ಷಿಣ ಕೇಂದ್ರ ರೈಲ್ವೇ ಇಲಾಖೆ ಯಲ್ಲಿ ಕ್ಲಿಕ್ ಆಗಿರುವ ಈ ವ್ಯವಸ್ಥೆ ಬೆಂಗಳೂರಿನ ನೈರುತ್ಯ ರೈಲ್ವೇ ಇಲಾಖೆ ಕೂಡಾ ಅಳವಡಿಸಬೇಕಾದ ತುರ್ತು ಅಗತ್ಯವಿದೆ. ಎಸ್ಎಂಎಸ್ ಸೌಲಭ್ಯದ ಅನುಕೂಲದಿಂದ ಸುಮಾರು ಐದಾರು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಸುಮಾರು 50 ಲಕ್ಷ ಮಹಿಳೆಯರು ಎಂಎಂಟಿಸ್ ಮೂಲಕ ಪ್ರಯಾಣಿಸುತ್ತಿದ್ದಾರೆ.












Click it and Unblock the Notifications