• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿಕ್ಷಣ ಮಾಧ್ಯಮ ಕನ್ನಡದಲ್ಲೇ ಇರ್ಲಿ, ಇಂಗ್ಲೀಷ್ ಹೇರಿಕೆ ಏಕೆ?

By * ಅಮರನಾಥ್ ಶಿವಶಂಕರ್ , ಬೆಂಗಳೂರು
|

ಇತ್ತೀಚಿಗೆ ನಮ್ಮ ಶಿಕ್ಷಣ ಮಂತ್ರಿಗಳು 6ನೇ ತರಗತಿಯಿಂದ ಇಂಗ್ಲಿಶ್ ಮಾಧ್ಯಮ ಶಾಲೆಗಳನ್ನು ತೆಗೆಯುವುದರ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಅಂತ ಹೇಳಿಕೆ ಕೊಟ್ಟರು. ಜಾಗತಿಕ ಮಟ್ಟದಲ್ಲಿ ಇಂಗ್ಲಿಶ್ ಭಾಷೆ ಕಲಿಯುವುದರಿಂದ ಉಪಯೋಗವಾಗುತ್ತದೆ ಅನ್ನುವುದು ಸತ್ಯ. ಅದಕ್ಕಾಗಿ ಭಾಷಾ ಮಧ್ಯಮವನ್ನೇ ಬದಲಿಸುವ ಅವಶ್ಯಕತೆ ಇಲ್ಲ.

ಇಂಗ್ಲಿಶ್ ಅನ್ನು ಒಂದು ಭಾಷೆಯಾಗಿ ಕಲಿಸಬಹುದು. ಫ್ರಾನ್ಸ್, ಜರ್ಮನಿ, ಜಪಾನು, ಇಸ್ರೇಲ್ ದೇಶಗಳಲ್ಲಿ ಶಾಲಾ ಮಟ್ಟದ ಶಿಕ್ಷಣ ಮಾಧ್ಯಮ ತಮ್ಮದೇ ಭಾಷೆಗಳಲ್ಲಿ ಇದ್ದು ಆ ದೇಶಗಳು ಪ್ರಗತಿ ಹೊಂದಿರುವುದು ನಮ್ಮ ಸರ್ಕಾರದ ಕಣ್ಣಿಗೆ ಬಿದ್ದಂತಿಲ್ಲ. ಕನ್ನಡ ಶಾಲೆಗಳ ಗುಣ ಮಟ್ಟ ಹೆಚ್ಚಿಸಿ, ಒಳ್ಳೆಯ ಶಿಕ್ಷಕರನ್ನು ನೇಮಿಸಿ, ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟು ಕನ್ನಡ ಜನಾಂಗವನ್ನು ಏಳಿಗೆಯ ಪಥದಲಿ ಕರೆದೊಯ್ಯುವ ಛಲ ನಮ್ಮನಾಳುವ ದೊರೆಗಳಿಗೆ ಇಲ್ಲದಿರುವುದು ವಿಪರ್ಯಾಸ.

ಭಾಷಾ ಮಾಧ್ಯಮದ ಬಗ್ಗೆ ವಿಶ್ವ ಸಂಸ್ಥೆ ಮಾಡಿರುವ ಸಂಶೋಧನೆಯಲ್ಲಿ ಆಫ್ರಿಕಾ ಖಂಡದ ಬುರ್ಕಿನೋ ಫಾಸೋ ಎಂಬ ದೇಶದಲ್ಲಿ ಮೂರ್ ಎಂಬ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ಫ್ರೆಂಚ್ ಭಾಷೆಯಲ್ಲಿ ಶಿಕ್ಷಣ ಪಡೆದ ಮಕ್ಕಳಿಗಿಂತ ಪ್ರಬುದ್ಧವಾಗಿ ಫ್ರೆಂಚ್ ಭಾಷೆಯನ್ನೂ ಮತ್ತು ಗಣಿತವನ್ನು ಕಲಿತವರಾಗಿದ್ದರೆ ಅಂತ ತಿಳಿದುಬಂದಿದೆ.

ಇದೊಂದು ಉದಾಹರಣೆ ಅಷ್ಟೇ. ಪ್ರಪಂಚದ ನಾನಾ ದೇಶಗಳಲ್ಲಿ ಬಹಳಷ್ಟು ವಿಜ್ಞಾನಿಗಳು ಸ್ಥಳೀಯ ಭಾಷೆ/ಮಾತೃ ಭಾಷೆಯ ಶಿಕ್ಷಣ ಮಾಧ್ಯಮವೇ ಅತ್ಯಂತ ಪರಿಣಾಮಕಾರಿ ಅಂತ ಸಾಬೀತು ಮಾಡಿದ್ದಾರೆ.ನಮ್ಮ ಸರ್ಕಾರ ತಮ್ಮ ಚಿಂತನೆಯನ್ನು ಕೈ ಬಿಟ್ಟು ೧೦ನೆ ತರಗತಿಯ ವರೆಗೆ ಕನ್ನಡ ಮಾಧ್ಯಮವನ್ನು ಮುಂದುವರೆಸಿ ಉನ್ನತ ಶಿಕ್ಷಣವನ್ನು ಸಹ ಕನ್ನಡದಲ್ಲಿ ತರುವತ್ತ ಪ್ರಯತ್ನಿಸಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Minister for Primary and Secondary Education Vishweshwara Hegde Kageri said govt is keen on implementing English medium of instruction from 6th Class in Government Schools. But this is not good move Learning English has a language is acceptable but as a medium is not tolerable it is unscientific move.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more