ಕನಕಪುರ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಆಗ್ರಹ

ಕನಕಪುರ ಮಾರ್ಗದಿಂದ ಚಾಮರಾಜನಗರವರೆಗೂ ರೈಲು ಸಂಚಾರ ಮಾರ್ಗಕ್ಕೆ ಸರ್ವೆ ಕಾರ್ಯಮುಗಿದು ಹತ್ತಾರು ವರ್ಷ ಕಳೆದಿದೆ. ಆದರೂ ಕಾಯಕಲ್ಪವಾಗಿಲ್ಲ ಎಂದು ದೂರಿದರು. ಬೆಂಗಳೂರು ನಗರದಿಂದ ಕನಕಪುರ 55 ಕಿಲೋ ಮೀಟರ್ ಸಮೀಪದಲ್ಲಿದ್ದರೂ ತಾಲೂಕು ಅತ್ಯಂತ ಹಿಂದುಳಿದ ಸ್ಥಾನದಲ್ಲಿದೆ. ಇಲ್ಲಿಗೆ ರೈಲು ಸಂಚಾರವಿಲ್ಲದಿರು ವುದು ಇದಕ್ಕೆ ಮುಖ್ಯ ಕಾರಣವಾಗಿದೆ.
ಜನಜಾಗೃತಿ ಮೆರವಣಿಗೆ: ಕೇಂದ್ರ ಸರಕಾರವು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಬೆಂಗಳೂರು ಸತ್ಯಮಂಗಲ ಹೊಸ ರೈಲುಮಾರ್ಗ ಯೋಜನೆ ಮಂಜೂರಾತಿ ನೀಡುವಂತೆ ಒತ್ತಾಯಿಸಿ ಕನಕಪುರ ರೈಲ್ವೆ ಹೋರಾಟ ಸಮಿತಿ ಫೆ.14 ರಂದು ಬೆಳಗ್ಗೆ 11 ಗಂಟೆಗೆ ಬೃಹತ್ ಸಾರ್ವಜನಿಕ ಜನಜಾಗತಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರು, ಹಾಲಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಸೇರಿದಂತೆ ಸಂಘ ಸಂಸ್ಥೆಯ ಸಾರ್ವಜನಿಕರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಮೆರವಣಿಗೆಯನ್ನು ಯಶಸ್ವಿಗೊಳಿಸಬೇಕೆಂಬುದು ನಮ್ಮ ಮನವಿ .
ತಮ್ಮ ವಿಶ್ವಾಸಿಗಳು
ಆನಮಾನಹಳ್ಳಿ ನಾಗರಾಜ್, ಕನಕಪುರ ತಾಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಸಂಪತ್‌ಕುಮಾರ್, ಪುರದಯ್ಯ, ಗಜೇಂದ್ರ ಸಿಂಗ್, ರೈತಸಂಘ
ರಾಮಚಂದ್ರ, ಜಯಕರ್ನಾಟಕ
ಗೋವಿಂದಪ್ಪ,ವರ್ತಕರ ಸಂಘದ ಅಧ್ಯಕ್ಷ
ಕಬ್ಬಾಳೇಗೌಡ, ಡಿ.ಆರ್.ಸಂತೋಷ್, ಕುಮಾರ್, ಇಲ್ಯಾಸ್ ಷರೀಫ್ ಮುಂತಾದ ಗ್ರಾಮಸ್ಥರು.











Click it and Unblock the Notifications