ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಸಾಧ್ಯವೇ?

By * ರಾಜು ದೇವಾಡಿಗ, ಕಾಪು-ಕೊಪ್ಪಲಂಗಡಿ
|
Google Oneindia Kannada News

Democracy in danger
ರಾಜ್ಯ ಹೈಕೋರ್ಟು 11 ಜನ ಬಿಜೆಪಿ ಶಾಸಕರ ಅನರ್ಹತೆಯನ್ನು ಸ್ಥಿರೀಕೃತಗೊಳಿಸಿದೆ. ಆದರೆ ಇಲ್ಲಿಗೆ ವಿವಾದ ಅಂತ್ಯವಾಗುವುದಿಲ್ಲ . ಇದು ಇನ್ನೊಂದು ವಿವಾದಕ್ಕೆ ನಾಂದಿ ಹಾಡುತ್ತಿದೆ. ತೀರ್ಪನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧರಿಸಲಾಗಿದೆ. ತೀರ್ಪಿಗೆ ತಡೆಯಾಜ್ಞೆ ನೀಡದೆ ಮೇಲ್ಮನವಿ ಸ್ವೀಕಾರವಾದರೆ ಸರಕಾರ 11 ಜನ ಶಾಸಕರ ಸ್ಥಾನಕ್ಕೆ ಮರು ಚುನಾವಣೆ ನಡೆಸಲು ರಾಜ್ಯ ಸರಕಾರ ತುದಿಗಾಲ ಮೇಲೆ ನಿಂತಿದೆ. ಮೇಲ್ಮನವಿ ತೀರ್ಪು ಹೊರಬರಲು ಬಹಳಷ್ಟು ಸಮಯ ಹಿಡಿಯುವುದು.

ಇಂದಿನ ತೀರ್ಪು ಮುಖ್ಯಮಂತ್ರಿಗಳ ಪರವಾಗಿದ್ದರೂ ಕಾನೂನಿನ ಜಟಿಲತೆ ಮತ್ತು ಸರ್ವೋಚ್ಛ ನ್ಯಾಯಾಲಯದ ವಿಚಾರಣೆಯಲ್ಲಿ ಬರಬಹುದಾದ ಹೊಸ ಹೊಸ ವಿಚಾರಗಳಿಂದಾಗಿ ಅಂತಿಮ ತೀರ್ಪು ಹೀಗೆಯೇ ಎಂದು ಹೇಳುವುದು ಕಷ್ಟ. ಸರಕಾರದಲ್ಲಿ, ರಾಜಕಾರಣಿಗಳಲ್ಲಿ ನೈತಿಕತೆ, ಸೇವಾ ಮನೋಭಾವ, ಪಾರದರ್ಶಕತೆ ಮತ್ತು ಸ್ವಚ್ಛ ಆಡಳಿತ ನೀಡುವ ಇಚ್ಛೆ ಇರದಿದರೆ ಮತ್ತೆ ಮತ್ತೆ ಇಂತಹ ಸಮಸ್ಯೆಗಳು ಹಾಗೂ ಸಂವಿಧಾನಿಕ ಬಿಕ್ಕಟ್ಟುಗಳು ಹುಟ್ಟುತ್ತಲೇ ಇರುತ್ತವೆ.

ಮೂಲಭೂತವಾಗಿ ಪಕ್ಷಾಂತರಕ್ಕೆ ಹಣ ಮತ್ತು ಅಧಿಕಾರದ ಹಪಾಹಪಿಯೇ ಕಾರಣ. ಆರೋಗ್ಯವಂತ ಪ್ರಜಾಪ್ರಭುತ್ವಕ್ಕೆ ಇವು ಮಾರಕ. ಪಕ್ಷಾಂತರ ಪಿಡುಗನ್ನು ತಪ್ಪಿಸಲು ಸಂವಿಧಾನದಲ್ಲಿ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿ ಮೂಲಭೂತ ಬದಲಾವಣೆಯಾಗಬೇಕು. ಲೋಕಸಭೆ ಮತ್ತು ವಿಧಾನಸಭೆಯ ಆಯುಷ್ಯವನ್ನು ಐದು ವರ್ಷ ಕಡ್ಡಾಯ ಮಾಡಬೇಕು.

ದೇಶದಲ್ಲಿ ದ್ವಿಪಕ್ಷೀಯ ಪದ್ಧತಿ ಜಾರಿಗೆ ತರಬೇಕು. ಪ್ರದಾನಿ, ಮುಖ್ಯಮಂತ್ರಿ ಮತ್ತು ರಾಷ್ಟ್ರಪತಿ ಹುದ್ದೆಗಳಿಗೆ ಎರಡು ಸಲ ಮಾತ್ರ ಚುನಾಯಿತರಾಗುವ ನಿರ್ಬಂಧ ಹಾಕಬೇಕು. ಚುನಾವಣಾ ವೆಚ್ಚ ಸರಕಾರವೇ ಭರಿಸಬೇಕು. ಅಂದಾಗ ಮಾತ್ರ ಪ್ರಜಾಪ್ರಭುತ್ವ ಉಳಿದೀತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X