ಟಿವಿ ಜಾಹೀರಾತಿಗೂ ಸೆನ್ಸಾರ್ ಅಗತ್ಯ
ಟಿವಿಯಲ್ಲಿ
ಐಪಿಎಲ್ ಪಂದ್ಯ ವೀಕ್ಷಣೆಯ ಮಧ್ಯೆ ಒಂದು ಹೊಸ ಜಾಹೀರಾತನ್ನು ನೋಡಿದೆ. ಟಾಟಾ ಡೊಕೊಮೊ ಜಾಹೀರಾತಿನಲ್ಲಿ ತಾಯಿ ತರಕಾರಿ ಕತ್ತರಿಸುತ್ತಾ ವೆಂಕಟೇಶ್ವಸ್ವಾಮಿಯ ಸ್ತೋತ್ರವನ್ನು ಕೇಳುತ್ತಿರುತ್ತಾಳೆ. ಅಲ್ಲಿಗೆ ಮಗಳು ಬಂದು ನಿಂತುಕೊಳ್ಳುತ್ತಾಳೆ. ಮಗಳು ಹೇಳುತ್ತಾಳೆ'ಅಮ್ಮ ನಿನಗೇನೊ ತೋರಿಸಬೇಕು'. ಅದಕ್ಕೆ ತಾಯಿ 'ಏನದು' ಎನ್ನುತ್ತಾಳೆ. id="toptextpromo">ತಕ್ಷಣ
ಮಗಳು ತಾಯಿಯ ಕಡೆ ಬೆನ್ನು ತಿರುಗಿಸಿ, ಹಾಕಿಕೊಂಡಿರುವ ಚೂಡಿದಾರ್ ಮೇಲಕ್ಕೆ ಎತ್ತಿ ಅವಳು ಪೃಷ್ಠ ಭಾಗದ ಮೇಲೆ ಹಾಕಿಸಿಕೊಂಡಿರುವ ಹೊಸ ಹಚ್ಚೆ (Tatto) ತೋರಿಸುತ್ತಾಳೆ. ನಾನು ಹೇಳುವುದೇನೆಂದರೆ, ಜಾಹೀರಾತುಗಳಿಗೆ ಸಭ್ಯತೆ ಎನ್ನುವುದಿಲ್ಲವೇ, ಜಾಹೀರಾತುದಾರರು ಮೇಲಿನ ದೃಶ್ಯ ದಲ್ಲಿ ದೇವರ ಸ್ತೋತ್ರವನ್ನೇ ಏಕೆ ಹಾಕಿದ್ದಾರೆ? ಸಿನಿಮಾ ಹಾಡು ಸಾಕಾಗಿತ್ತಲ್ಲ id='are-slot-1' class='oiad oi-axt oiadv'> id='top-searched-articles'>ಜಾಹೀರಾತುದಾರರಿಗೆ
ಹಿಂದೂ ಭಾವನೆಗಳೊಂದಿಗೆ ಏನು ಬೇಕಾದರೂ ಮಾಡಬಹುದು.ಯಾರೂ ಕೇಳುವವರಿಲ್ಲ ಎಂಬ ತಾತ್ಸಾರ. ಭಾರತ ಸಂವಿಧಾನದ ಪ್ರಕಾರ ಎಲ್ಲ ಧರ್ಮಗಳನ್ನು ಸಮನಾಗಿ ಕಾಣಬೇಕು. ಇದು ಸಣ್ಣ ವಿಷಯವೆಂದುಸುಮ್ಮನಾದರೆ, ನಾಳೆ ಇನ್ನೂ ಹೆಚ್ಚು ಪ್ರಮಾಣದಲ್ಲಿ ಹಿಂದೂ ಧರ್ಮವನ್ನು ಹೀಯಾಳಿಸುತ್ತಾರೆ. ಸಿನಿಮಾ ಗಳಿಗೆ ಇರುವ ಹಾಗೆ ಜಾಹೀರಾತುಗಳಿಗೂ, ಸಭ್ಯತೆಮೀರದಂತೆ, ಯಾವ ಧರ್ಮಕ್ಕೂ ಧಕ್ಕೆಯಾಗದಂತೆ ಸೆನ್ಸಾರ್ ಮಂಡಳಿಯ ಅಗತ್ಯ ಖಂಡಿತ ಇದೆ.











Click it and Unblock the Notifications